ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣು ತಿನ್ನದೆ ಇರುವವರು ಸಾಮಾನ್ಯವಾಗಿ ಯಾರೂ ಇಲ್ಲ. ಮಾವಿನ ಹೆಸರು ಕೇಳಿದರೆ ಬಾಯಲ್ಲಿ ನೀರೂರುತ್ತದೆ. ಮಾವಿನಹಣ್ಣಿನ ಹುಚ್ಚು ಹೇಗೆಂದರೆ ಹಲವು ಏಕಕಾಲದಲ್ಲಿ ಮೂರ್ನಾಲ್ಕು ಕೆಜಿಗಟ್ಟಲೆ ಹಣ್ಣನ್ನು ಖರೀದಿಸಿ ವಾರವಿಡೀ ತಿನ್ನುತ್ತಿರುತ್ತಾರೆ.
ಮಾವಿನ ಹಣ್ಣನ್ನು ಹೀಗೆ ತಿನ್ನುವುದಷ್ಟೇ ಅಲ್ಲ, ರೆಸಿಪಿ ತಯಾರಿಸಿ ತಿನ್ನಲು ಇಷ್ಟಪಡುವವರೇ ಹೆಚ್ಚು. ಆದರೆ ಮಾವಿನ ಹಣ್ಣನ್ನು ತಿನ್ನುವ ಬಗ್ಗೆ ಆಯುರ್ವೇದ ಏನು ಹೇಳುತ್ತದೆ? ಎಂಬುದರ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.
ಹೆಚ್ಚು ಮಾವಿನ ಹಣ್ಣು ತಿಂದರೆ ಗ್ಯಾಸ್ಟ್ರಿಕ್ ಸಮಸ್ಯೆ
ಹೆಚ್ಚು ಮಾವಿನಹಣ್ಣು ತಿಂದರೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ, ಹಾಗಾಗಿ ಯಾರಿಗಾದರೂ ಈಗಾಗಲೇ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೆ, ಅವರು ಮಾವಿನಹಣ್ಣು ತಿನ್ನಬೇಡಿ. ಹಾಗೆಯೇ ಇದೆಲ್ಲದರ ಹೊರತಾಗಿ ಮಾವು ಜೀರ್ಣವಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ, ಆದ್ದರಿಂದ ಮಾವಿನಹಣ್ಣು ತಿಂದ ನಂತರ ಬೇರೆ ಏನನ್ನೂ ತಿನ್ನಬೇಡಿ.
ಕಲ್ಲುಪ್ಪು ಬಳಕೆ
ಆಯುರ್ವೇದದಲ್ಲಿ ಕಲ್ಲು ಉಪ್ಪಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಆಯುರ್ವೇದದ ಪ್ರಕಾರ ಸಲಾಡ್, ಉದ್ದಿನಬೇಳೆ, ಗಂಜಿ ಮುಂತಾದ ಅನೇಕ ಪದಾರ್ಥಗಳಿಗೆ ಕೇವಲ ಕಲ್ಲು ಉಪ್ಪನ್ನು ಸೇರಿಸಿ ಸೇವಿಸಬೇಕು. ಏಕೆಂದರೆ ಇದು ಜೀರ್ಣಾಂಗ ವ್ಯವಸ್ಥೆಯನ್ನು ಸಹ ಸರಿಯಾಗಿ ಇಡುತ್ತದೆ.
ಮಾವಿನ ಹಣ್ಣಿನ ಮೇಲೆ ಕಲ್ಲು ಉಪ್ಪನ್ನು ಸಿಂಪಡಿಸುವ ಮೂಲಕ ಅದನ್ನು ಸೇವಿಸುವ ಬಗ್ಗೆ ಸಲಹೆ ನೀಡುತ್ತಾರೆ. ಅವರ ಪ್ರಕಾರ ಮಾವಿನ ಹಣ್ಣಿನ ಮೇಲೆ ಕರಿಮೆಣಸಿನ ಪುಡಿಯನ್ನು ಹಾಕಿಯೂ ತಿನ್ನಬಹುದು.
ಮಾವಿನ ಹಣ್ಣನ್ನು ಸ್ವಲ್ಪಹೊತ್ತು ನೀರಿನಲ್ಲಿ ಹಾಕಿಡಿ
ಲಿಚಿಯನ್ನು ತಿನ್ನುವ ಮೊದಲು, ಅನೇಕ ಜನರು ಅವುಗಳನ್ನು ಸುಮಾರು 30 ನಿಮಿಷದಿಂದ 1 ಗಂಟೆಯವರೆಗೆ ನೀರಿನಲ್ಲಿ ಮುಳುಗಿಸಿ, ನಂತರ ಅವರು ಲಿಚಿ ತಿನ್ನಲು ಇಷ್ಟಪಡುತ್ತಾರೆ ಹಾಗೆಯೇ ನೀವು ಮಾವಿನ ಹಣ್ಣನ್ನು ಕೂಡ ಅದೇ ರೀತಿ ಮಾಡಬೇಕು.
ನೀವು ಮಾರುಕಟ್ಟೆಯಿಂದ ಮಾವಿನ ಹಣ್ಣು ಖರೀದಿಸಿ ಮನೆಗೆ ತಂದಾಗ, ಅದನ್ನು ಸೇವಿಸುವ ಸುಮಾರು 1 ಗಂಟೆಗಳ ಕಾಲ ನೀರಿನಲ್ಲಿ ಮುಳುಗಿಸಿಡಿ. ಇದು ಹೊಟ್ಟೆಯಲ್ಲಿ ಅನಿಲ ರಚನೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಮಾವಿನ ಹಣ್ಣಿನ ಜತೆ ಯಾವ ಆಹಾರದ ಬೆರೆಸಿ ತಿನ್ನಬೇಡಿ
ಮಾವಿನ ಹಣ್ಣಿನ ಜತೆ ಬೇರೆ ಯಾವ ಆಹಾರವನ್ನು ಬೆರೆಸಿ ತಿನ್ನಬೇಡಿ. ಒಂದೊಮ್ಮೆ ಆಸಿಡ್ ಆಮ್ಲ ಭರಿತ ಹಣ್ಣನ್ನು ಮಾವಿನಕಾಯಿಯೊಂದಿಗೆ ಬೆರೆಸಿ ಸೇವಿಸಿದರೆ ಹೊಟ್ಟೆ ನೋವು ಮತ್ತು ಗ್ಯಾಸ್ ಇತ್ಯಾದಿ ಸಮಸ್ಯೆಗಳು ಹೆಚ್ಚಾಗುತ್ತದೆ.
Published On - 1:08 pm, Sat, 25 June 22