Parijatha Flower: ರಾತ್ರಿ ಹೊತ್ತು ಅರಳುವ ಪಾರಿಜಾತ ಹೂವಿನ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು!

ಪಾರಿಜಾತವು ಆಯುರ್ವೇದದಲ್ಲಿಯೂ ಸ್ಥಾನ ಪಡೆದುಕೊಂಡಿದೆ. ಪಾರಿಜಾತ ಹೂವು ಪೂಜೆ, ಸಮೃದ್ಧಿ ಮಾತ್ರವಲ್ಲದೆ ಆರೋಗ್ಯಕ್ಕೂ ಉಪಯುಕ್ತವಾಗಿದೆ. ಆಯುರ್ವೇದದ ಪ್ರಕಾರ ಪಾರಿಜಾತ ರಸವು ಹೃದಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುತ್ತದೆ. 

Parijatha Flower: ರಾತ್ರಿ ಹೊತ್ತು ಅರಳುವ ಪಾರಿಜಾತ ಹೂವಿನ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು!
ಪಾರಿಜಾತ ಹೂವು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Oct 22, 2022 | 8:15 PM

ನಮ್ಮ ಪ್ರಕೃತಿಯಲ್ಲಿ ಹಲವಾರು ರೀತಿಯ ಹೂವುಗಳಿವೆ. ಅದರಲ್ಲಿ ಕೆಲವೊಂದನ್ನು ಪೂಜೆಗೆಂದು ಬಳಸಲಾಗುತ್ತದೆ. ಅಂತಹ ಹೂವುಗಳಲ್ಲಿ ಪಾರಿಜಾತ ಹೂವು (Parijatha Flower) ಒಂದು. ಅನೇಕ ಜನರು ಇದನ್ನು ವಿಶೇಷವಾಗಿ ದೇವರ ಆರಾಧನೆಗಾಗಿ ಬೆಳೆಯುತ್ತಾರೆ. ಈ ಹೂವನ್ನು ರಾತ್ರಿ ಮಲ್ಲಿಗೆ ಎಂದೂ ಕರೆಯುತ್ತಾರೆ. ಈ ಹೂವುಗಳು ನೋಡಲು ತುಂಬಾ ಸುಂದರವಾಗಿದ್ದು, ಪರಿಮಳಯುಕ್ತವಾಗಿದೆ. ಈ ಹೂವುಗಳು ರಾತ್ರಿಯಲ್ಲಿ ಅರಳುತ್ತವೆ ಮತ್ತು ಬೆಳಗಿನ ತನಕ ಕೆಳ ಬೀಳುತ್ತವೆ. ಇದು ಅದರ ವಿಶೇಷತೆ. ಉದುರಿದ ಹೂಗಳನ್ನು ಪೂಜೆಗೆ ಬಳಸಲಾಗುತ್ತದೆ. ಆದರೆ, ಈ ಪಾರಿಜಾತವು ಆಯುರ್ವೇದದಲ್ಲಿಯೂ ಸ್ಥಾನ ಪಡೆದುಕೊಂಡಿದೆ. ಪಾರಿಜಾತ ಹೂವು ಪೂಜೆ, ಸಮೃದ್ಧಿ ಮಾತ್ರವಲ್ಲದೆ ಆರೋಗ್ಯಕ್ಕೂ ಉಪಯುಕ್ತವಾಗಿದೆ. ಆಯುರ್ವೇದದ ಪ್ರಕಾರ ಪಾರಿಜಾತ ರಸವು ಹೃದಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದರ ಎಲೆಗಳು ಮತ್ತು ಮೊಗ್ಗುಗಳು ವಿಶೇಷ ಗುಣಗಳನ್ನು ಹೊಂದಿವೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.

ಪಾರಿಜಾತ ಹೂವುಗಳಲ್ಲಿ ಹಲವಾರು ಔಷಧೀಯ ಗುಣಗಳಿವೆ. ವೈದ್ಯಕೀಯದಲ್ಲಿ ಇದರ ಸಸ್ಯ, ಎಲೆಗಳು, ಬೀಜಗಳು, ಹೂವುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ ಎಂದು ತೋರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ ತಜ್ಞರು. ಈ ಸಸ್ಯದ ಔಷಧೀಯ ಗುಣಗಳು ವಿವಿಧ ರೋಗಗಳನ್ನು ಗುಣಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಪಾರಿಜಾತ ಗಿಡವನ್ನು ಬೆಳೆಸುವುದು ಅತ್ಯಂತ ಮಂಗಳಕರವೆಂದು ಹೇಳಲಾಗುತ್ತದೆ. ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಮನೆಯ ಸುತ್ತಲೂ ಪಾರಿಜಾತ ಗಿಡವನ್ನು ನೆಟ್ಟರೆ ಮನೆಯಿಂದ ವಾಸ್ತು ದೋಷಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ಅಷ್ಟೇ ಅಲ್ಲ, ಪಾರಿಜಾತವು ಸೌಂದರ್ಯ ಮತ್ತು ಆರೋಗ್ಯಕ್ಕೂ ಒಳ್ಳೆಯದು.

ಪಾರಿಜಾತ ಗಿಡದ ಪ್ರಯೋಜನಗಳು:

ಚರ್ಮ ಸಮಸ್ಯೆ:

ಪಾರಿಜಾತ ಗಿಡದ ಎಲೆಗಳನ್ನು ಅರೆದು ತ್ವಚೆಯ ಮೇಲೆ ಹಚ್ಚಿದರೆ ತ್ವಚೆಯ ಸಮಸ್ಯೆ ನಿವಾರಣೆಯಾಗುತ್ತದೆ. ಇದರ ಹೂಗಳ ಪೇಸ್ಟ್​ನ್ನು ಮುಖಕ್ಕೆ ಹಚ್ಚುವುದರಿಂದ ಮುಖ ಕಾಂತಿಯುತವಾಗುತ್ತದೆ.

ಈ ಸಮಸ್ಯೆಗಳಿಗೆ ಔಷಧ:

ಸಂಧಿವಾತ, ಸಯಾಟಿಕಾ, ಮೂಳೆ ಮುರಿತ, ಚರ್ಮ ರೋಗಗಳು, ಪೈಲ್ಸ್, ಜ್ವರ, ಡೆಂಗ್ಯೂ, ಮಲೇರಿಯಾ, ಒಣ ಕೆಮ್ಮು, ಮಧುಮೇಹ ಮುಂತಾದ ವಿವಿಧ ಕಾಯಿಲೆಗಳಿಗೆ ಪಾರಿಜಾತ ಔಷಧವಾಗಿದೆ.

ಮಹಿಳೆಯರಿಗೆ ಒಳ್ಳೆಯದು:

ಪಾರಿಜಾತ ಮಹಿಳೆಯರ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಒತ್ತಡವನ್ನು ಕಡಿಮೆ ಮಾಡುವುದರೊಂದಿಗೆ ಆರೋಗ್ಯಕರ ಮತ್ತು ಸಂತೋಷದ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ. ಪಾರಿಜಾತ ಮರದ ಕಾಳುಗಳನ್ನು ಒಣಗಿಸಿ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳುವುದರಿಂದ ನೆತ್ತಿಯಲ್ಲಿನ ಹುಣ್ಣು ಕಡಿಮೆಯಾಗುತ್ತದೆ. ರುಬ್ಬಿದ ಕಾಳುಗಳಿಗೆ ತೆಂಗಿನೆಣ್ಣೆ ಬೆರೆಸಿ ತಲೆಗೆ ಹಚ್ಚಿ ಒಂದು ಗಂಟೆಯ ನಂತರ ಸ್ನಾನ ಮಾಡಿದರೆ ತಲೆಹೊಟ್ಟು ಸಮಸ್ಯೆ ಕಡಿಮೆಯಾಗುತ್ತದೆ.

ಪಾರಿಜಾತದ ಎಲೆಗಳನ್ನು ಸಣ್ಣಗೆ ರುಬ್ಬಿಕೊಳ್ಳಿ, ಎಣ್ಣೆಗೆ ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಈ ಮಿಶ್ರಣವನ್ನು ವಾತ ನೋವುಗಳ ಮೇಲೆ ಹಚ್ಚಿ ಕಟ್ಟಿದರೆ ನೋವು ಕಡಿಮೆಯಾಗುತ್ತದೆ. ಪಾರಿಜಾತ ಮರದ ಬೀಜಗಳನ್ನು ಮಣ್ಣಿನ ಪಾತ್ರೆಯಲ್ಲಿ ಹಾಕಿ ಅದು ಕಪ್ಪಾಗುವವರೆಗೆ ಬಿಸಿ ಮಾಡಬೇಕು. ನಂತರ ಈ ಬೀಜಗಳನ್ನು ಒಣಗಿಸಿ ಮತ್ತು ಹರತಿ ಕರ್ಪೂರದ ಪುಡಿ ಮತ್ತು ತೆಂಗಿನ ಎಣ್ಣೆಯನ್ನು ಪೇಸ್ಟ್ ಮಾಡಲು ಮಿಶ್ರಣ ಮಾಡಿ. ಈ ಪೇಸ್ಟ್​ನ್ನು ಲೇಪವಾಗಿ ಹಚ್ಚುವುದರಿಂದ ತುರಿಕೆ, ಎಸ್ಜಿಮಾ ಮುಂತಾದ ಚರ್ಮ ರೋಗಗಳು ಕಡಿಮೆಯಾಗುತ್ತವೆ.

(ಗಮನಿಸಿ: ವಿಷಯಗಳು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಇದನ್ನು ಆರೋಗ್ಯ ವೃತ್ತಿಪರರ ಸಲಹೆಯ ಮೇರೆಗೆ ಒದಗಿಸಲಾಗಿದೆ. ನಿಮಗೆ ಯಾವುದೇ ಸಂದೇಹಗಳಿದ್ದರೆ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸಿ.)

ಮತ್ತಷ್ಟು ಆರೋಗ್ಯ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:09 pm, Sat, 22 October 22

ಜಾಮೀನು ಸಿಕ್ಕ 6 ದಿನದ ಬಳಿಕ ಶಿವಮೊಗ್ಗ ಜೈಲಿನಿಂದ ಆರೋಪಿ ಜಗದೀಶ್ ರಿಲೀಸ್​
ಜಾಮೀನು ಸಿಕ್ಕ 6 ದಿನದ ಬಳಿಕ ಶಿವಮೊಗ್ಗ ಜೈಲಿನಿಂದ ಆರೋಪಿ ಜಗದೀಶ್ ರಿಲೀಸ್​
ಮುಖ್ಯಮಂತ್ರಿ ಮಾತಾಡುತ್ತಿದ್ದರೂ ಹೊರಗೆ ಹೋದ ವಿರೋಧಪಕ್ಷಗಳ ಶಾಸಕರು
ಮುಖ್ಯಮಂತ್ರಿ ಮಾತಾಡುತ್ತಿದ್ದರೂ ಹೊರಗೆ ಹೋದ ವಿರೋಧಪಕ್ಷಗಳ ಶಾಸಕರು
ಜಮೀರ್ ಉತ್ತರದಿಂದ ಬಿಜೆಪಿ ಸಮಾಧಾನವಾಗದಿದ್ದಾಗ ಮುಖ್ಯಮಂತ್ರಿ ಉತ್ತರ
ಜಮೀರ್ ಉತ್ತರದಿಂದ ಬಿಜೆಪಿ ಸಮಾಧಾನವಾಗದಿದ್ದಾಗ ಮುಖ್ಯಮಂತ್ರಿ ಉತ್ತರ
ಪ್ರಿನ್ಸಿಪಾಲ್​ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ
ಪ್ರಿನ್ಸಿಪಾಲ್​ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ
ಚೈತ್ರಾ ಮೋಸದಾಟ; ಮನ ಒಲಿಸಲು ಹೊಸ ಉಪಾಯ ಕಂಡುಹಿಡಿದ ರಜತ್
ಚೈತ್ರಾ ಮೋಸದಾಟ; ಮನ ಒಲಿಸಲು ಹೊಸ ಉಪಾಯ ಕಂಡುಹಿಡಿದ ರಜತ್
ಸದನದಲ್ಲಿ ಸಚಿವ ಜಮೀರ್ ಅಹ್ಮದ್ ನೆರವಿಗೆ ಧಾವಿಸಿದ ಸಿದ್ದರಾಮಯ್ಯ
ಸದನದಲ್ಲಿ ಸಚಿವ ಜಮೀರ್ ಅಹ್ಮದ್ ನೆರವಿಗೆ ಧಾವಿಸಿದ ಸಿದ್ದರಾಮಯ್ಯ
ಹೊರಡುವ ಮುನ್ನ ಸುದೀಪ್, ಉಪೇಂದ್ರಗೆ ಶುಭ ಹಾರೈಸಿದ ಶಿವಣ್ಣ
ಹೊರಡುವ ಮುನ್ನ ಸುದೀಪ್, ಉಪೇಂದ್ರಗೆ ಶುಭ ಹಾರೈಸಿದ ಶಿವಣ್ಣ
ವಿರೋಧಪಕ್ಷದವರು ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸಬೇಕು: ಮುಖ್ಯಮಂತ್ರಿ
ವಿರೋಧಪಕ್ಷದವರು ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸಬೇಕು: ಮುಖ್ಯಮಂತ್ರಿ
Amit Shah Press Meet Live:ಅಮಿತ್​ ಶಾ ತುರ್ತು ಸುದ್ದಿಗೋಷ್ಠಿ ನೇರಪ್ರಸಾರ
Amit Shah Press Meet Live:ಅಮಿತ್​ ಶಾ ತುರ್ತು ಸುದ್ದಿಗೋಷ್ಠಿ ನೇರಪ್ರಸಾರ
ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ ಚೈತ್ರಾ ಕುಂದಾಪುರ
ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ ಚೈತ್ರಾ ಕುಂದಾಪುರ