ಆಹಾರ ಸೇವಿಸಿದ ನಂತರ ಈ ತಪ್ಪುಗಳನ್ನು ಮಾಡಬೇಡಿ, ಅನಾರೋಗ್ಯಕ್ಕೆ ದಾರಿಯಾಗಬಹುದು
ನಾವು ನಿತ್ಯವೂ ಮೂರರಿಂದ ನಾಲ್ಕು ಬಾರಿ ಆಹಾರ ಸೇವನೆ ಮಾಡುತ್ತೇವೆ, ನೀವು ಸೇವಿಸುವ ಆಹಾರವು ಉತ್ತಮವಾಗಿಯೂ ಇರಬಹುದು. ಆದರೆ ನೀವು ಮಾಡುವ ತಪ್ಪಿನಿಂದಾಗಿ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ.
ದೇಹವನ್ನು ಸುವ್ಯವಸ್ಥೆಯಲ್ಲಿಡಲು ಆಹಾರವು ಬಹಳ ಮುಖ್ಯವಾದಂಥದ್ದು, ಯಾವ ರೀತಿಯ ಆಹಾರ ಸೇವಿಸುತ್ತೇವೆ, ಹೇಗೆ ಸೇವಿಸುತ್ತೇವೆ ಎಂಬುದರ ಮೇಲೆ ನಿಮ್ಮ ಆರೋಗ್ಯ ನಿರ್ಧಾರವಾಗುತ್ತೆ. ನಾವು ನಿತ್ಯವೂ ಮೂರರಿಂದ ನಾಲ್ಕು ಬಾರಿ ಆಹಾರ ಸೇವನೆ ಮಾಡುತ್ತೇವೆ, ನೀವು ಸೇವಿಸುವ ಆಹಾರವು ಉತ್ತಮವಾಗಿಯೂ ಇರಬಹುದು.
ಆದರೆ ನೀವು ಮಾಡುವ ತಪ್ಪಿನಿಂದಾಗಿ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಊಟ ಮಾಡಿದ ತಕ್ಷಣ ಮೊಬೈಲ್ ಹಿಡಿದು ಹಾಸಿಗೆ ಮೇಲೆ ಮಲಗಬೇಡಿ ಕೆಲವರು ಊಟ ಆಗುವುದೇ ಕಾಯುತ್ತಿರುತ್ತಾರೆ, ಊಟವಾದ ತಕ್ಷಣವೇ ಮೊಬೈಲ್ ಹಿಡಿದು, ಗೇಮ್ ಆಡುತ್ತಲೋ ಅಥವಾ ಇನ್ನೇನೋ ನೋಡುತ್ತಲೋ ಹೋಗಿ ಹಾಸಿಗೆ ಮೇಲೆ ಮಲಗಿಬಿಡುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಫಾಸ್ಟ್ ಆಗಿ ವಾಕ್ ಮಾಡಬೇಡಿ ಊಟ ಮಾಡಿದ ಬಳಿಕ ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಉತ್ತಮ, ಆದರೆ ತುಂಬಾ ವೇಗವಾಗಿ ನಡೆಯಬೇಡಿ, ಇದರಿಂದ ಹೊಟ್ಟೆನೋವು ಸೇರಿದಂತೆ ಅನೇಕ ಸಮಸ್ಯೆಗಳು ಕಂಡುಬರುತ್ತವೆ. ಊಟದ ಬಳಿಕ ಕೇವಲ 100 ಹೆಜ್ಜೆ ವಾಕ್ ಮಾಡಬಹುದು.
ಚಹಾ ಕುಡಿಯುವುದನ್ನು ತಪ್ಪಿಸಿ ಬಹಳಷ್ಟು ಮಂದಿ ಊಟ ಮಾಡಿದ ತಕ್ಷಣ ಚಹಾ ಅಥವಾ ಕಾಫಿ ಕುಡಿಯಲು ಇಷ್ಟಪಡುತ್ತಾರೆ. ನಮ್ಮ ಈ ಅಭ್ಯಾಸವನ್ನು ಆದಷ್ಟು ಬೇಗ ಬದಲಾಯಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಆಸಿಡಿಟಿ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳು ಕೂಡ ಉಂಟಾಗುತ್ತವೆ. ಊಟ ಮಾಡಿದ 2 ಗಂಟೆಗಳ ನಂತರ ಮಾತ್ರ ಚಹಾ ಅಥವಾ ಕಾಫಿ ಕುಡಿಯಿರಿ.
-ಊಟ ಮಾಡಿದ ತಕ್ಷಣ ಸ್ನಾನ ಮಾಡಬೇಡಿ -ಊಟ ಮಾಡಿದ ನಂತರ ಸ್ನಾನ ಮಾಡುವವರು ಬಹಳ ಮಂದಿ ಇದ್ದಾರೆ. ಹೀಗೆ ಮಾಡುವುದರಿಂದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರಲಿದೆ. ನೀವು ಆಹಾರ ಸೇವಿಸಿದ ನಂತರ ಸ್ನಾನ ಮಾಡಬೇಕಾದರೆ, ನೀವು 2 ಗಂಟೆಗಳ ವಿರಾಮವನ್ನು ತೆಗೆದುಕೊಳ್ಳಬೇಕು. -ಊಟ ಮಾಡಿದ ತಕ್ಷಣ ನೀರು ಕುಡಿಯಬೇಡಿ -ಆಹಾರ ಸೇವಿಸಿದ ನಂತರ ಹೆಚ್ಚು ಹೊತ್ತು ನಡೆಯಬೇಡಿ. -ಆಹಾರವನ್ನು ತಿಂದ ತಕ್ಷಣ ತುಂಬಾ ಕೋಲ್ಡ್ ಚೀಸ್ ಅನ್ನು ಸೇವಿಸಬೇಡಿ. -ಆಹಾರ ಸೇವಿಸಿದ ತಕ್ಷಣ ಧೂಮಪಾನ ಮಾಡಬೇಡಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ