Heart Health: ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಹಾಯಕ ಈ ಪಾನೀಯ

ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಅವರು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗುವ ಪಾನೀಯ ಮತ್ತು ಅದರ ಪ್ರಯೋಜನಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

Heart Health: ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಹಾಯಕ ಈ ಪಾನೀಯ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 20, 2023 | 12:20 PM

ಇತ್ತೀಚಿನ ದಿನಗಳಲ್ಲಿ ಹೃದಯಾಘಾತವು ಆರೋಗ್ಯದ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ಬದಲಾಗುತ್ತಿರುವ ಹಾಗೂ ಕಳಪೆ ಮಟ್ಟದ ಜೀವನಶೈಲಿ ಸೇರಿದಂತೆ ಯುವ ಜನರಲ್ಲಿ ಹೃದಯಾಘಾತಕ್ಕೆ ಕಾರಣವಾಗುವ ಹಲವು ಅಂಶಗಳಿವೆ. ಹೃದಯವನ್ನು ಆರೊಗ್ಯಕರವಾಗಿಡಲು ಆರೋಗ್ಯಕರ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಹೆಚ್ಚಾಗಿ ತಜ್ಞರು ಶಿಫಾರಸ್ಸು ಮಾಡುತ್ತಾರೆ. ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಅವರು ಹೃದಯಕ್ಕೆ ಪ್ರಯೋಜನಕಾರಿಯಾದ ಪರಿಣಾಮಕಾರಿ ಪಾನೀಯದ ಕುರಿತು ಇನ್ಸ್ಟಾಗ್ರಮ್​​ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯಲ್ಲಿ ಭಾತರವು ಅಕ್ಷರಶಃ ಹೃದ್ರೋಗದ ಜಾಗತಿಕ ರಾಜಧಾನಿಯಾಗಿದೆ. ಹೆಚ್ಚಿದ ಧೂಮಪಾನ, ಆಲ್ಕೋಹಾಲ್ ಸೇವನೆ, ಜಡ ಜೀವನಶೈಲಿ, ಒತ್ತಡ, ಕಳಪೆ ಮಟ್ಟದ ಆಹಾರಗಳು ಹೃದಯಾಘಾತಕ್ಕೆ ಕಾರಣವಾಗುತ್ತದೆ. ಹೃದಯಾಘಾತವನ್ನು ಆಂಜಿನಾ ಅಂತಲೂ ಕರೆಯುತ್ತಾರೆ ಎಂದು ಬರೆದುಕೊಂಡಿದ್ದಾರೆ.

ರಕ್ತದ ಸ್ನಿಗ್ಧತೆ, ಅದರ ಜಿಗುಟುತನ ಮತ್ತು ಹೆಪ್ಪುಗಟ್ಟುವಿಕೆಯನ್ನು ರೂಪಿಸುವ ಪ್ರವೃತ್ತಿ ಇವುಗಳ ವಿರುದ್ಧ ನೀವು ಕಾಳಜಿ ವಹಿಸಬೇಕು. ಕೆಲವೊಂದು ಆಹಾರಗಳು ಹೃದ್ರೋಗದ ಮೇಲೆ ಚಿಕಿತ್ಸಕ ಪರಿಣಾಮವನ್ನು ಬೀರುತ್ತದೆ. ಮತ್ತು ಇವುಗಳು ರಕ್ತವನ್ನು ತೆಳುಗೊಳಿಸುವ ಗುಣಗಳನ್ನು ಹೊಂದಿವೆ. ಹೃದಯದ ಆರೋಗ್ಯವನ್ನು ಕಾಪಾಡಲು ನಮ್ಮಲ್ಲಿ ಹೃದಯ ಸ್ನೇಹಿ ಪಾನೀಯವೊಂದಿದೆ ಎಂದು ಅಂಜಲಿ ಹೇಳುತ್ತಾರೆ. ಅದುವೆ ಆಂಟಿ- ಆಂಜಿನಾ ಜ್ಯೂಸ್.

ಆಂಟಿ-ಆಂಜಿನಾ ಜ್ಯೂಸ್ ಮಾಡಲು ಬೇಕಾಗುವ ಪದಾರ್ಥಗಳು:

ಕತ್ತರಿಸಿದ ತಾಜಾ ಅನಾನಸ್, 250ಗ್ರಾಂ, ಅಗಸೆ ಬೀಜದ ಪುಡಿ- 1 ಟೀಸ್ಪೂನ್, ನಿಂಬೆ ರಸ- 1 ಟೀಸ್ಪೂನ್, ತಾಜಾ ಶುಂಠಿ- 1ಟೀಸ್ಪೂನ್, ರುಚಿಗೆ ತಕ್ಕಷ್ಟು ಕಲ್ಲುಪ್ಪು.

ತಯಾರಿಸುವ ವಿಧಾನ: ಅನಾನಸ್ ತುಂಡುಗಳು ಮತ್ತು ಶುಂಠಿಯನ್ನು ಮಿಕ್ಸಿಜಾರ್ ಗೆ ಹಾಕಿ ಚೆನ್ನಾಗಿ ರುಬ್ಬಿ ಜ್ಯೂಸ್ ಮಾಡಿ. ನಂತರ ಆ ರಸಕ್ಕೆ ಉಪ್ಪು, ನಿಂಬೆ ರಸ ಮತ್ತು ಅಗಸೆಬೀಜದ ಪುಡಿ ಸೇರಿಸಿ. ಜೊತೆಗೆ ಐಸ್ ಕ್ಯೂಬ್​​​ಗಳನ್ನು ಜ್ಯೂಸ್ ಗೆ ಹಾಕಿಕೊಂಡು ಸೇವನೆ ಮಾಡಿ.

ಇದನ್ನೂ ಓದಿ: Myths About Heart Attack: ಮಹಿಳೆಯರ ಹೃದಯಾಘಾತದ ಕುರಿತ ಸತ್ಯ ಮತ್ತು ಮಿಥ್ಯ ಯಾವುವು?

ಈ ಹೃದಯ ಸ್ನೇಹಿ ಪಾನೀಯವನ್ನು ತಯಾರಿಸಲು ಬಳಸುವ ಎಲ್ಲಾ ಮುಖ್ಯ ಪದಾರ್ಥಗಳ ಪ್ರಾಮುಖ್ಯತೆಯನ್ನು ಕೂಡಾ ಅಂಜಲಿ ವಿವರಿಸುತ್ತಾರೆ:

ಅನಾನಸ್: ಈ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಬ್ರೊಮೆಲಿನ್ ಇದೆ ಎಂದು ಅಂಜಲಿ ಹೇಳುತ್ತಾರೆ. ಇದು ಅತ್ಯಂತ ಶಕ್ತಿಯುತ ಪ್ರೋಟೀನ್-ಜೀರ್ಣಕಾರಿ ಕಿಣ್ವಗಳಲ್ಲಿ ಒಂದಾಗಿದೆ. ಬ್ರೋಮೆಲಿನ್ ಪ್ರಮುಖ ರಕ್ತನಾಳಗಳನ್ನು ಸುತ್ತುವರೆದಿರುವ ಸ್ನಾಯುಗಳನ್ನು ಹಿಗ್ಗಿಸುವ ಮೂಲಕ ಹೃದಯದ ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅನಾನಸ್ ರಕ್ತ ಹೆಪ್ಪುಗಟ್ಟುವಿಕೆ ವಿರೋಧಿ ಗುಣವನ್ನು ಹೊಂದಿದೆ. ಇದು ಪಾರ್ಶ್ವವಾಯು ಮತ್ತು ಹೃದಯಾಘಾತವನ್ನು ತಡೆಯಲು ಸಹಾಯ ಮಾಡುತ್ತದೆ.

ಅಗಸೆ ಬೀಜಗಳು: ಅಗಸೆ ಬೀಜಗಳು ದೇಹದಲ್ಲಿ ಒಮೆಗಾ 3 ಆಗಿ ಪರಿವರ್ತನೆಗೊಳ್ಳುವ ಎಣ್ಣೆಗಳಿಂದ ತುಂಬಿವೆ. ಇವುಗಳು ರಕ್ತ ಹೆಪ್ಪುಗಟ್ಟುವಿಕೆಯ ರಚನೆಯನ್ನು ಕಡಿಮೆ ಮಾಡಲು ಮತ್ತು ರಕ್ತವನ್ನು ತೆಳುವಾಗಿಡಲು ಸಹಾಯ ಮಾಡುತ್ತದೆ. ಅಗಸೆ ಬೀಜಗಳು ಹೃದಯ ಸ್ನೇಹಿ ಮತ್ತು ಅವುಗಳು ಅಗತ್ಯವಾದ ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ.

ಶುಂಠಿ: ಶುಂಠಿಯು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಇದು ನಿಮ್ಮ ರಕ್ತವನ್ನು ತೆಳುಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮತ್ತು ಇದು ಕೊಲೆಸ್ಟ್ರಾಲ್ ಕಡಿಮೆಗೊಳಿಸುವ ಗುಣಲಕ್ಷಣಗಳನ್ನು ಹೊಂದಿದೆ. ಹೀಗಾಗಿ ಶುಂಠಿಯು ಹೃದ್ರೋಗಗಳ ಚಿಕಿತ್ಸೆಯಲ್ಲಿ ಬಹಳ ಪರಿಣಾಮಕಾರಿಯಾಗಿದೆ.

ನಿಂಬೆ: ಇದು ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದೆ. ಇದು ಅತ್ಯಂತ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಲ್ಲಿ ಒಂದಾಗಿದೆ ಮತ್ತು ವಿಶಿಷ್ಟವಾದ ಫೈಟೋನ್ಯೂಟ್ರಿಯೆಂಟ್ ಗಳನ್ನು ಹೊಂದಿದೆ. ವಿಟಮಿನ್ ಸಿ ಅಪಧಮನಿಕಾಠಿಣ್ಯದ ಬೆಳವಣಿಗೆಯನ್ನು ತಡೆಯುತ್ತದೆ ಹೀಗಾಗಿ ಇದು ಹೃದಯಾಘಾತವನ್ನು ತಡೆಯಲು ಸಹಾಯವಾಗಿದೆ ಎಂದು ಅಂಜಲಿ ಹೇಳುತ್ತಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 12:20 pm, Thu, 20 April 23

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?