AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೂಕ ಇಳಿಸಿಕೊಳ್ಳಲು ಜೀರಿಗೆ ನೀರನ್ನು ಈ ರೀತಿ ಬಳಸಬಹುದು

ತೂಕ ಇಳಿಕೆ ಮಾಡಿಕೊಂಡು ಆರೋಗ್ಯ ಕಾಪಾಡಿಕೊಂಡರೆ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಹಾಗಾದರೆ ಅದಕ್ಕೆ ಯಾವ ರೀತಿಯ ಆಹಾರ ಕ್ರಮಗಳನ್ನು ರೂಢಿಸಿಕೊಳ್ಳಬೇಕು. ತೂಕ ಅಗತ್ಯಕ್ಕಿಂತ ಹೆಚ್ಚಾಗದಿರಲು ಜೀರಿಗೆ ನೀರು ಉತ್ತಮ ಆಯ್ಕೆ ಎಂದು ತಜ್ಞರು ಹೇಳುತ್ತಾರೆ. ಆದರೆ ಪ್ರತಿನಿತ್ಯ ಜೀರಾ ನೀರನ್ನು ಕುಡಿಯಲು ಇಚ್ಛಿಸದವರು ಅದರಲ್ಲಿಯೇ ವಿವಿಧ ರೀತಿಯ ಪಾಕವಿಧಾನಗಳನ್ನು ಟ್ರೈ ಮಾಡಬಹುದು. ಹಾಗಾದರೆ ಈ ನೀರನ್ನು ಯಾಕೆ ಕುಡಿಯಬೇಕು? ಯಾವ ರೀತಿ ಕುಡಿಯುವುದು ಒಳ್ಳೆಯದು? ಇಲ್ಲಿದೆ ಸಂಪೂರ್ಣ ಮಾಹಿತಿ.

ತೂಕ ಇಳಿಸಿಕೊಳ್ಳಲು ಜೀರಿಗೆ ನೀರನ್ನು ಈ ರೀತಿ ಬಳಸಬಹುದು
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Dec 09, 2024 | 2:31 PM

Share

ಇತ್ತೀಚಿನ ದಿನಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಂಡು ಬೇರೆ ಬೇರೆ ರೀತಿಯ ಕಾಯಿಲೆಗಳಿಂದ ದೂರವಿರುವುದು ಸವಾಲಿನ ಕೆಲಸ. ಹಾಗಾಗಿ ಕೆಲವು ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಂಡು ಅದರ ಪೂರ್ತಿ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು. ಸಾಮಾನ್ಯವಾಗಿ ಇತ್ತೀಚಿನ ವರ್ಷಗಳಲ್ಲಿ ಅನಾರೋಗ್ಯಕರ ತೂಕ ಹೆಚ್ಚಳ ನಾನಾ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ. ಆದ ಕಾರಣ ಮೊದಲು ತೂಕ ಇಳಿಕೆ ಮಾಡಿಕೊಂಡು ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಿಕೊಳ್ಳಬೇಕು. ಹಾಗಾದರೆ ಅದಕ್ಕೆ ಯಾವ ರೀತಿಯ ಆಹಾರ ಕ್ರಮಗಳನ್ನು ರೂಢಿಸಿಕೊಳ್ಳಬೇಕು. ತೂಕ ಅಗತ್ಯಕ್ಕಿಂತ ಹೆಚ್ಚಾಗದಿರಲು ಜೀರಿಗೆ ನೀರು ಉತ್ತಮ ಆಯ್ಕೆ ಎಂದು ತಜ್ಞರು ಹೇಳುತ್ತಾರೆ. ಆದರೆ ಪ್ರತಿನಿತ್ಯ ಜೀರಾ ನೀರನ್ನು ಕುಡಿಯಲು ಇಚ್ಛಿಸದವರು ಅದರಲ್ಲಿಯೇ ವಿವಿಧ ರೀತಿಯ ಪಾಕವಿಧಾನಗಳನ್ನು ಟ್ರೈ ಮಾಡಬಹುದು. ಹಾಗಾದರೆ ಈ ನೀರನ್ನು ಯಾಕೆ ಕುಡಿಯಬೇಕು? ಯಾವ ರೀತಿ ಕುಡಿಯುವುದು ಒಳ್ಳೆಯದು? ಇಲ್ಲಿದೆ ಸಂಪೂರ್ಣ ಮಾಹಿತಿ.

ಜೀರಿಗೆ ನೀರು ಕುಡಿಯುವುದರಿಂದ ಸಿಗುವ ಪ್ರಯೋಜನಗಳು

ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಜೀರಿಗೆ ನೀರನ್ನು ಕುಡಿಯುವುದರಿಂದ ನಾನಾ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ: ಜೀರಿಗೆ ನೀರನ್ನು ನೀವು ಎದ್ದ ತಕ್ಷಣ ಸೇವಿಸಬಹುದು. ತೂಕ ಇಳಿಕೆಗೆ ಇದೊಂದು ಪರಿಪೂರ್ಣ ಆಯ್ಕೆಯಾಗಿದೆ. ಏಕೆಂದರೆ ಇದು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ, ಅನಗತ್ಯ ಕೊಬ್ಬನ್ನು ಕರಗಿಸುತ್ತದೆ. ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ: ಎಂದಾದರೂ ಊಟ ಹೆಚ್ಚಾಗಿ ಹೊಟ್ಟೆ ಬಿಗಿಯಾದರೆ ಈ ನೀರು ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತದೆ. ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆಯನ್ನು ತಡೆಯಲು ಪ್ರತಿನಿತ್ಯ ಒಂದು ಕಪ್ ಜೀರಿಗೆ ನೀರನ್ನು ಕುಡಿಯಲು ಪ್ರಯತ್ನಿಸಿ.

ದೇಹವನ್ನು ನಿರ್ವಿಷಗೊಳಿಸುತ್ತದೆ: ನೀವು ಸುಲಭ ಮತ್ತು ಪರಿಣಾಮಕಾರಿಯಾದ ಡಿಟಾಕ್ಸ್ ಪಾನೀಯವನ್ನು ಹುಡುಕುತ್ತಿದ್ದರೆ, ಜೀರಾ ನೀರನ್ನು ಪ್ರಯತ್ನಿಸಿ, ಅದು ವಿಷವನ್ನು ಪರಿಣಾಮಕಾರಿಯಾಗಿ ಹೊರಹಾಕುತ್ತದೆ, ತೂಕ ನಷ್ಟವನ್ನು ಹೆಚ್ಚಿಸುತ್ತದೆ.

ಉರಿಯೂತವನ್ನು ಕಡಿಮೆ ಮಾಡುತ್ತದೆ: ಜೀರಿಗೆ ನೀರು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತೂಕ ಇಳಿಸಿಕೊಳ್ಳಲು ಜೀರಾ ನೀರಿನ ಈ ಪಾಕವಿಧಾನಗಳನ್ನು ಟ್ರೈ ಮಾಡಿ:

1.ಸರಳವಾಗಿ ಮಾಡಬಹುದಾದ ಜೀರಿಗೆ ನೀರು

1 ಚಮಚ ಜೀರಿಗೆಗೆ 1 ಲೋಟ ನೀರನ್ನು ಹಾಕಿ ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಸೋಸಿ ಬಳಿಕ ಕುಡಿಯಿರಿ.

2. ನಿಂಬೆಯೊಂದಿಗೆ ಜೀರಿಗೆ ನೀರು:

ನಿಂಬೆ ವಿಟಮಿನ್ ಸಿ ಅನ್ನು ಹೊಂದಿದ್ದು ಕೊಬ್ಬನ್ನು ಕರಗಿಸುವ ಗುಣಗಳನ್ನು ಹೆಚ್ಚಿಸುತ್ತದೆ. ಮೊದಲು ಮೇಲೆ ಹೇಳಿರುವಂತೆ ಜೀರಿಗೆ ನೀರನ್ನು ತಯಾರಿಸಿ. ಕುಡಿಯುವ ಮೊದಲು ಅರ್ಧ ನಿಂಬೆಹಣ್ಣನ್ನು ಹಿಂಡಿ ಬಳಿಕ ಕುಡಿಯಿರಿ. ಈ ರೀತಿ ಮಾಡುವುದರಿಂದ ಅನಗತ್ಯ ತೂಕ ಕಡಿಮೆಯಾಗುತ್ತದೆ.

3. ಜೇನುತುಪ್ಪದೊಂದಿಗೆ ಜೀರಿಗೆ ನೀರು:

ಜೇನುತುಪ್ಪವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಸಿಹಿ ತಿನ್ನಬೇಕು ಎನ್ನುವ ಬಯಕೆಯನ್ನು ನಿಗ್ರಹಿಸುತ್ತದೆ. ಇದನ್ನು ತಯಾರಿಸುವುದು ಬಹಳ ಸುಲಭ. ಮೊದಲು ಬೆಚ್ಚಗಿನ ಜೀರಿಗೆ ನೀರಿಗೆ 1 ಟೀಸ್ಪೂನ್ ಜೇನುತುಪ್ಪವನ್ನು ಸೇರಿಸಿ. ಚೆನ್ನಾಗಿ ಕಲಕಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

4. ಜೀರಿಗೆ ಮತ್ತು ಶುಂಠಿ ನೀರು: ಶುಂಠಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಹಸಿವನ್ನು ಕಡಿಮೆ ಮಾಡುತ್ತದೆ. 1 ಟೀ ಸ್ಪೂನ್ ಜೀರಿಗೆ ಮತ್ತು ಒಂದು ಸಣ್ಣ ತುಂಡು ಜಜ್ಜಿದ ಶುಂಠಿಯನ್ನು ನೀರಿನಲ್ಲಿ ಕುದಿಸಿ. ಸೋಸಿ ಬೆಚ್ಚಗೆ ಕುಡಿಯಿರಿ. ಇದು ತೂಕ ಇಳಿಕೆಗೆ ಉತ್ತಮ ಆಯ್ಕೆ.

5. ತೂಕ ಇಳಿಸಿಕೊಳ್ಳಲು ಜೀರಾ ಚಹಾ: ಜೀರಿಗೆಯನ್ನು ಚಹಾ ಮಸಾಲೆಗಳೊಂದಿಗೆ ಸೇರಿಸಿ ಕುಡಿಯಬಹುದು. ಮೊದಲು ಕುದಿಯುವ ನೀರಿಗೆ ಜೀರಿಗೆ, ಚಿಟಿಕೆ ದಾಲ್ಚಿನ್ನಿ ಮತ್ತು ಸೋಂಪನ್ನು ಸೇರಿಸಿ. ಸೋಸಿ ಗಿಡಮೂಲಿಕೆ ಚಹಾದಂತೆ ಆನಂದಿಸಿ.

ಇದನ್ನೂ ಓದಿ: ಮೊಮೊಸ್, ಪಿಜ್ಜಾ, ಬರ್ಗರ್ ಸೇವನೆ ಕ್ಯಾನ್ಸರ್​​ಗೆ ಕಾರಣವಾಗಬಹುದು; ಸಂಶೋಧನೆಯಲ್ಲಿ ಬಹಿರಂಗ

ಜೀರಾ ನೀರನ್ನು ಯಾವಾಗ ಕುಡಿಯಬೇಕು?

ನೀವು ತ್ವರಿತವಾಗಿ ತೂಕ ಇಳಿಸಿಕೊಳ್ಳಲು ಬಯಸಿದರೆ ಈ ಪಾನೀಯವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದು ಹಸಿವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ ಹಾಗಾಗಿ ಊಟಕ್ಕೆ ಮೊದಲು ಕೂಡ ಜೀರಾ ನೀರನ್ನು ಕುಡಿಯಬಹುದು. ಜೀರ್ಣಕ್ರಿಯೆಗೆ ಸಹಾಯ ಮಾಡಲು ಊಟದ ನಂತರ ಜೀರಿಗೆ ನೀರನ್ನು ಸೇವಿಸಿ. ಉತ್ತಮ ಫಲಿತಾಂಶಗಳನ್ನು ಪಡೆಯಲು ಜೀರಾ ನೀರಿನ ಜೊತೆಗೆ ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮ ಮಾಡುವುದು ಅವಶ್ಯಕ. ಜೊತೆಗೆ ನಿಮ್ಮ ಆಹಾರದಲ್ಲಿ ಸಕ್ಕರೆ ಸೇರಿಸುವುದನ್ನು ಕೂಡ ತಪ್ಪಿಸಿ. ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಪ್ರತಿದಿನ ತಾಜಾ ಜೀರಿಗೆ ನೀರನ್ನು ಕುಡಿಯಲು ಪ್ರಯತ್ನಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ