AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇರುವವರು ಈ ಜ್ಯೂಸ್​​​ಗಳನ್ನು ಕುಡಿಯಲೇಬೇಕು

ಕಬ್ಬಿಣದ ಕೊರತೆ ಅಥವಾ ರಕ್ತಹೀನತೆ ಜನರಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ನೀವು ಈ ನೈಸರ್ಗಿಕ ಪಾನೀಯಗಳ ಮೊರೆ ಹೋಗಬಹುದು. ನಿಮ್ಮ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆಯನ್ನು ಸರಿದೂಗಿಸಲು ಅಗತ್ಯ ಪೂರಕಗಳನ್ನು ಅವಲಂಬಿಸುವುದರ ಹೊರತಾಗಿ, ನೀವು ಋತುಮಾನದ ಹಣ್ಣು ಮತ್ತು ತರಕಾರಿಗಳ ರಸಗಳನ್ನು ಬಳಸಬಹುದು. ಪೌಷ್ಟಿಕತಜ್ಞ ಅವನಿ ಕೌಲ್ ಅವರು ಈ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇರುವವರು ಈ ಜ್ಯೂಸ್​​​ಗಳನ್ನು ಕುಡಿಯಲೇಬೇಕು
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Nov 27, 2023 | 5:06 PM

Share

ರಕ್ತದಲ್ಲಿ ಹಿಮೋಗ್ಲೋಬಿನ್  ( haemoglobin) ಪ್ರಮಾಣ ಕಡಿಮೆ ಆಗಿದೆ ಎಂದು ವೈದ್ಯರು ಹೇಳುವುದನ್ನು ಕೇಳಿದ್ದೀರಾ? ನಿಮಗೂ ಆ ಸಮಸ್ಯೆ ಕಾಡುತ್ತಿದೆಯಾ? ನಿಮಗೆ ತಿಳಿದಿರಬಹುದು ಕಬ್ಬಿಣ ಅಂಶದ ಕೊರತೆಯು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದರೆ ಕಬ್ಬಿಣ ಅಂಶದ ಕೊರತೆಯ ಕೆಲವು ಸಾಮಾನ್ಯ ಲಕ್ಷಣಗಳಿಗೆ ಕಾರಣವಾಗುತ್ತದೆ ಅದೇನೆಂದರೆ ನಿರಂತರ ಆಯಾಸ, ಉಸಿರಾಟದ ತೊಂದರೆ, ಎದೆಯಲ್ಲಿ ನೋವು ಕಾಣಿಸಿಕೊಳ್ಳುವುದು ಮತ್ತು ಮಸುಕಾದ ಚರ್ಮ ಕ್ಕೆ ಕಾರಣವಾಗುತ್ತದೆ. ನಿಮ್ಮ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆಯನ್ನು ಸರಿದೂಗಿಸಲು ಅಗತ್ಯ ಪೂರಕಗಳನ್ನು ಅವಲಂಬಿಸುವುದರ ಹೊರತಾಗಿ, ನೀವು ಋತುಮಾನದ ಹಣ್ಣು ಮತ್ತು ತರಕಾರಿಗಳ ರಸಗಳನ್ನು ಬಳಸಬಹುದು. ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಕೆಲವು ಪಾನೀಯಗಳ ಬಗ್ಗೆ ತಿಳಿದುಕೊಳ್ಳಲು ಹೆಲ್ತ್ ಶಾಟ್ಸ್ ಪೌಷ್ಟಿಕತಜ್ಞ ಅವನಿ ಕೌಲ್ ಅವರನ್ನು ಸಂಪರ್ಕಿಸಿತು. ಅವರು ಈ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಆರೋಗ್ಯಕರ ಪಾನೀಯಗಳು ಯಾವವು? ಹಿಮೋಗ್ಲೋಬಿನ್ ಮಟ್ಟ ಸೇರಿದಂತೆ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಹಣ್ಣು ಮತ್ತು ತರಕಾರಿಗಳು ನಿಮಗೆ ಸಹಕಾರಿಯಾತ್ತದೆ. ಪೌಷ್ಟಿಕಾಂಶ ತಜ್ಞರು ಸೂಚಿಸಿದ ಕೆಲವು ಸಾಂಪ್ರದಾಯಿಕ ಭಾರತೀಯ ಪಾನೀಯಗಳು ಇಲ್ಲಿವೆ.

1. ನೆಲ್ಲಿಕಾಯಿ ರಸ: ನೆಲ್ಲಿಕಾಯಿ ವಿಟಮಿನ್ ಸಿ ಯ ಶಕ್ತಿ ಕೇಂದ್ರವಾಗಿದೆ. ಆಮ್ಲಾ ರಸದ ದೈನಂದಿನ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಕಬ್ಬಿಣ ಅಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ, ಆ ಮೂಲಕ ಹಿಮೋಗ್ಲೋಬಿನ್ ರಚನೆಗೆ ಸಹಾಯ ಮಾಡುತ್ತದೆ. ಇದರ ಮೃದುವಾದ ಪರಿಮಳದ ಜೊತೆಗೆ ಆರೋಗ್ಯಕ್ಕೆ ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ.

2. ಬೀಟ್ರೂಟ್ ಜ್ಯೂಸ್ ಅಥವಾ ಬೀಟ್ರೂಟ್ ಕಾಂಜಿ: ಬೀಟ್ರೂಟ್ ಜ್ಯೂಸ್ ಅಥವಾ ಕಾಂಜಿ ಸಾಸಿವೆ ಬೀಜಗಳು ಮತ್ತು ಬೀಟ್ರೂಟ್ಗಳನ್ನು ಸೇರಿಸುವ ಮೂಲಕ ರೂಪುಗೊಳ್ಳುವ ಹುದುಗಿಸಿದ ಪಾನೀಯವಾಗಿದೆ. ಬೀಟ್ರೂಟ್ ಮಿಶ್ರಣದಲ್ಲಿ ಕಬ್ಬಿಣ ಅಂಶ ಹೇರಳವಾಗಿರುತ್ತದೆ. ಇನ್ನು ಹುದುಗುವಿಕೆ ವಿಧಾನವು ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸುತ್ತದೆ. ಈ ಸಾಂಪ್ರದಾಯಿಕ ಪಾನೀಯವು ವಿಶಿಷ್ಟ ಪರಿಮಳ ಮತ್ತು ದೇಹಕ್ಕೆ ಪೌಷ್ಠಿಕಾಂಶವನ್ನು ಸರಿಯಾಗಿ ಒದಗಿಸುವಲ್ಲಿ ನೆರವಾಗುತ್ತದೆ.

3. ಕಬ್ಬಿನ ರಸ ಅಥವಾ ಕಬ್ಬಿನ ಹಾಲು: ಭಾರತದ ಜನಪ್ರಿಯ ಪಾನೀಯಗಳಲ್ಲಿ ಕಬ್ಬಿನ ರಸವು ಒಂದು. ಸಿಹಿ ರುಚಿ ಮಾತ್ರವಲ್ಲದೆ ಕಬ್ಬಿಣ ಮತ್ತು ಇತರ ಅಗತ್ಯ ಖನಿಜಗಳ ಉತ್ತಮ ಮೂಲವಾಗಿದೆ. ಇದರ ನೈಸರ್ಗಿಕ ಸಿಹಿಯು ಕಬ್ಬಿಣ ಅಂಶದ ಸೇವನೆಯನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ, ಜೊತೆಗೆ ಇದರಲ್ಲಿ ಪೌಷ್ಟಿಕಾಂಶ ಹೇರಳವಾಗಿರುವುದರಿಂದ ಆರೋಗ್ಯದ ಉತ್ತೇಜನಕ್ಕೆ ಉತ್ತಮ ಆಯ್ಕೆಯಾಗಿದೆ.

4. ದಾಳಿಂಬೆ ರಸ: ದಾಳಿಂಬೆ ರಸವು ರುಚಿಕರ ಮತ್ತು ಪೋಷಕಾಂಶಯುಕ್ತವಾಗಿದೆ. ಈ ಹಣ್ಣಿನಲ್ಲಿ ಕಬ್ಬಿಣ ಮತ್ತು ವಿಟಮಿನ್ ಸಿ ಅಧಿಕವಾಗಿದೆ, ಇದು ಹಿಮೋಗ್ಲೋಬಿನ್ ಹೆಚ್ಚಿಸಲು ಉತ್ತಮ ಸಂಯೋಜನೆಯಾಗಿದೆ. ಜೊತೆಗೆ ಈ ರಸದ ಬಣ್ಣವು ಅದರ ಹೇರಳವಾದ ಪೌಷ್ಠಿಕಾಂಶದ ಅಂಶವನ್ನು ಪ್ರತಿಬಿಂಬಿಸುತ್ತದೆ.

ಇದನ್ನೂ ಓದಿ: ದೇಹದಲ್ಲಿ ಹಿಮೋಗ್ಲೋಬಿನ್ ​​​​​ಅಂಶ ಹೆಚ್ಚಿಸುವ ಆಹಾರಗಳು

5. ಹುರಿದ ಕಡಲೆ ಶರ್ಬತ್ತ್: “ಈ ಸಾಂಪ್ರದಾಯಿಕ ಉತ್ತರ ಭಾರತದ ಪಾನೀಯದ ಬಗ್ಗೆ ನೀವು ಕೇಳಿರಬಹುದು, ಹುರಿದ ಕಡಲೆಕಾಯಿಯಾ ಪೌಡರ್ ಅದಕ್ಕೆ ಸ್ವಲ್ಪ ನೀರು, ನಿಂಬೆ ರಸ ಮತ್ತು ಮಸಾಲೆಗಳೊಂದಿಗೆ ಬೆರೆಸಿದಾಗ ಈ ಶರ್ಬತ್ತ್ ಅಥವಾ ಸಟ್ಟು ಶೆರ್ಬೆಟ್ ತಯಾರಾಗುತ್ತದೆ. ಇದು ಪ್ರೋಟೀನ್, ಕಬ್ಬಿಣದ ಅಂಶ ಮತ್ತು ಹಲವಾರು ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆರೋಗ್ಯಕರ ಪಾನೀಯವಾಗಿದೆ. ಇದರ ವಿಶಿಷ್ಟ ರುಚಿ ಮತ್ತು ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸಲು ಉತ್ತಮ ಆಯ್ಕೆಯಾಗಿದೆ” ಎಂದು ತಜ್ಞರು ಹೇಳುತ್ತಾರೆ.

ಈ ಸಾಂಪ್ರದಾಯಿಕ ಭಾರತೀಯ ಪಾನೀಯಗಳು ಪಾಕಪದ್ಧತಿಯಲ್ಲಿ ರುಚಿಗಳ ವೈವಿಧ್ಯತೆಯ ಜೊತೆಗೆ ಪೌಷ್ಠಿಕಾಂಶವನ್ನು ಸೇರಿಸುತ್ತವೆ. ಸಮತೋಲಿತ ಆಹಾರದ ಭಾಗವಾಗಿ, ಈ ಪಾನೀಯಗಳು ಆರೋಗ್ಯಕರ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸಬಹುದು, ಒಟ್ಟಾರೆ ಯೋಗಕ್ಷೇಮಕ್ಕೆ ಕೊಡುಗೆ ನೀಡಬಹುದು. ಆದರೆ ಯಾವುದೇ ಆಹಾರ ಮಾರ್ಗದರ್ಶನಕ್ಕಾಗಿ ನಿಮ್ಮ ಆರೋಗ್ಯ ತಜ್ಞರೊಂದಿಗೆ ಸಮಾಲೋಚಿಸುವುದು ಸೂಕ್ತ, ವಿಶೇಷವಾಗಿ ನಿರ್ದಿಷ್ಟ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರಿಗೆ ಇದು ಅಗತ್ಯವಾಗಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!
ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!