AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Thyroid: ನಿಮಗೆ ಥೈರಾಯ್ಡ್​ ಸಮಸ್ಯೆ ಇದೆಯೇ? ಹಾಗಿದ್ದರೆ ಈ 5 ಆಹಾರ ಸೇವಿಸಬೇಡಿ

ಥೈರಾಯ್ಡ್ ಗ್ರಂಥಿಯು ಕುತ್ತಿಗೆಯ ಮುಂಭಾಗದಲ್ಲಿ ಇರುವ ಒಂದು ಸಣ್ಣ ಅಂಗವಾಗಿದ್ದು, ಶ್ವಾಸನಾಳದ ಸುತ್ತಲೂ ಸುತ್ತುತ್ತದೆ. ಇದು ಚಿಟ್ಟೆಯ ಆಕಾರದಲ್ಲಿರುತ್ತದೆ. ಮಧ್ಯದಲ್ಲಿ ಚಿಕ್ಕದಾಗಿದ್ದು, ಎರಡು ಅಗಲವಾದ ರೆಕ್ಕೆಗಳು ನಿಮ್ಮ ಗಂಟಲಿನ ಸುತ್ತಲೂ ವಿಸ್ತರಿಸುತ್ತವೆ. ಥೈರಾಯ್ಡ್ ಒಂದು ಗ್ರಂಥಿ. ನಿಮಗೆ ಥೈರಾಯ್ಡ್​ ಸಮಸ್ಯೆಯಿದ್ದರೆ ಈ 5 ಆಹಾರಗಳನ್ನು ಸೇವಿಸಬೇಡಿ.

Thyroid: ನಿಮಗೆ ಥೈರಾಯ್ಡ್​ ಸಮಸ್ಯೆ ಇದೆಯೇ? ಹಾಗಿದ್ದರೆ ಈ 5 ಆಹಾರ ಸೇವಿಸಬೇಡಿ
ಥೈರಾಯ್ಡ್Image Credit source: iStock
ಸುಷ್ಮಾ ಚಕ್ರೆ
|

Updated on:Feb 20, 2024 | 7:12 PM

Share

ನಿಮ್ಮ ದೇಹದಾದ್ಯಂತ ನೀವು ಗ್ರಂಥಿಗಳನ್ನು ಹೊಂದಿರುತ್ತೀರಿ. ಥೈರಾಯ್ಡ್ ನಿಮ್ಮ ದೇಹದ ಅನೇಕ ಪ್ರಮುಖ ಕಾರ್ಯಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಹಾರ್ಮೋನುಗಳನ್ನು ನಿಯಂತ್ರಿಸುವ ಅಂಗ. ನಿಮ್ಮ ಥೈರಾಯ್ಡ್ (Thyroid) ಸರಿಯಾಗಿ ಕೆಲಸ ಮಾಡದಿದ್ದರೆ ಅದು ನಿಮ್ಮ ಇಡೀ ದೇಹದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ದೇಹವು ಹೆಚ್ಚು ಥೈರಾಯ್ಡ್ ಹಾರ್ಮೋನ್ ಅನ್ನು ಉತ್ಪಾದಿಸಿದರೆ ನೀವು ಹೈಪರ್ ಥೈರಾಯ್ಡಿಸಮ್ ಎಂಬ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ದೇಹವು ಥೈರಾಯ್ಡ್ ಹಾರ್ಮೋನ್ ಅನ್ನು ಕಡಿಮೆ ಮಾಡಿದರೆ, ಅದನ್ನು ಹೈಪೋಥೈರಾಯ್ಡಿಸಮ್ ಎಂದು ಕರೆಯಲಾಗುತ್ತದೆ. ಈ ಎರಡೂ ಸಮಸ್ಯೆಗಳು ಗಂಭೀರವಾಗಿರುತ್ತವೆ.

ಥೈರಾಯ್ಡ್ ಚಯಾಪಚಯವನ್ನು ನಿಯಂತ್ರಿಸುವ ಥೈರಾಯ್ಡ್ ಹಾರ್ಮೋನುಗಳನ್ನು ಬಿಡುಗಡೆ ಮಾಡುವುದು ಮತ್ತು ನಿಯಂತ್ರಿಸುವ ಕೆಲಸ ಮಾಡುತ್ತದೆ. ಚಯಾಪಚಯವು ನಿಮ್ಮ ದೇಹಕ್ಕೆ ನೀವು ತೆಗೆದುಕೊಳ್ಳುವ ಆಹಾರವು ಶಕ್ತಿಯಾಗಿ ರೂಪಾಂತರಗೊಳ್ಳುವ ಪ್ರಕ್ರಿಯೆಯಾಗಿದೆ. ನಿಮ್ಮ ದೇಹದ ಅನೇಕ ವ್ಯವಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸಲು ಈ ಶಕ್ತಿಯನ್ನು ನಿಮ್ಮ ಇಡೀ ದೇಹದಾದ್ಯಂತ ಬಳಸಲಾಗುತ್ತದೆ. ನಿಮ್ಮ ಥೈರಾಯ್ಡ್ ಸರಿಯಾಗಿ ಕೆಲಸ ಮಾಡಿದಾಗ, ನಿಮ್ಮ ಚಯಾಪಚಯವನ್ನು ಸರಿಯಾದ ದರದಲ್ಲಿ ಕೆಲಸ ಮಾಡಲು ಸರಿಯಾದ ಪ್ರಮಾಣದ ಹಾರ್ಮೋನುಗಳನ್ನು ನಿರ್ವಹಿಸುತ್ತದೆ.

ಡಾ. ಭಾವಸರ್ ಸವಲಿಯಾ ಅವರು ಥೈರಾಯ್ಡ್ ಹೊಂದಿರುವ ಜನರು ಯಾವ 5 ಆಹಾರಗಳನ್ನು ಸೇವಿಸಬಾರದು ಎಂಬುದರ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Soaked Peanut: ಶೇಂಗಾವನ್ನು ನೀರಿನಲ್ಲಿ ನೆನೆಸಿಟ್ಟು ತಿಂದರೆ ಏನಾಗುತ್ತದೆ?

ಶೇಂಗಾ:

ಶೇಂಗಾ ಬೀಜಗಳನ್ನು ತಿನ್ನುವುದರಿಂದ ಅವುಗಳಲ್ಲಿನ ಗೋಯಿಟ್ರೋಜೆನ್‌ಗಳ ಉಪಸ್ಥಿತಿಯಿಂದಾಗಿ ಹೈಪೋಥೈರಾಯ್ಡಿಸಮ್ ಅನ್ನು ಹದಗೆಡಿಸಬಹುದು. ಆದ್ದರಿಂದ ಹೈಪೋಥೈರಾಯ್ಡ್ ಹೊಂದಿರುವ ಜನರು ಕಡಲೆಕಾಯಿ ಅಥವಾ ಪೀನಟ್ ಬಟರ್ ಸೇವನೆಯನ್ನು ನಿಲ್ಲಿಸಬೇಕು.

ರಾಗಿ:

ರಾಗಿ ಆರೋಗ್ಯಕರವಾದ ಆಹಾರವೆಂಬುದರಲ್ಲಿ ಅನುಮಾನವಿಲ್ಲ. ಆದರೆ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ನಾರಿನಂಶದಿಂದ ಸಮೃದ್ಧವಾಗಿರುವ ರಾಗಿ ಗಾಯಿಟ್ರೊಜೆನಿಕ್ ಆಹಾರವಾಗಿದೆ. ಇದನ್ನು ಚೆನ್ನಾಗಿ ನೆನೆಸಿ ಮತ್ತು ಬೇಯಿಸಿದ ನಂತರ ಆಗಾಗ ಅಪರೂಪಕ್ಕೆ ಮಾತ್ರ ಇದನ್ನು ತಿನ್ನಬೇಕು.

ಬಾದಾಮಿ:

ಬಾದಾಮಿಯು ಸೆಲೆನಿಯಮ್ ಮತ್ತು ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ. ಇವೆರಡೂ ಥೈರಾಯ್ಡ್ ಕಾರ್ಯಕ್ಕೆ ಒಳ್ಳೆಯದು. ಆದರೆ ಬಾದಾಮಿಯು ಗಾಯಿಟ್ರೊಜೆನಿಕ್ ಹೊಂದಿರುವ ಆಹಾರವಾದ್ದರಿಂದ, ಇದನ್ನು ಅತಿಯಾದ ಪ್ರಮಾಣದಲ್ಲಿ ಸೇವಿಸಿದಾಗ ಥೈರಾಯ್ಡ್ ಅನ್ನು ವಿಸ್ತರಿಸಬಹುದು, ಇದು ಅಯೋಡಿನ್ ಅನ್ನು ಹೀರಿಕೊಳ್ಳುವ ಥೈರಾಯ್ಡ್ ಗ್ರಂಥಿಯ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಹೈಪೋಥೈರಾಯ್ಡ್ ಹೊಂದಿರುವ ಜನರು ಪ್ರತಿದಿನ 3-5 ಬಾದಾಮಿಗಳನ್ನು ತಿನ್ನಬಹುದು. ಆದರೆ ಅದಕ್ಕಿಂತ ಹೆಚ್ಚಿಗೆ ತಿನ್ನಬಾರದು.

ಸೋಯಾ ಆಹಾರಗಳು:

ಸೋಯಾ ಭರಿತ ಆಹಾರಗಳು ಥೈರಾಯ್ಡ್ ಔಷಧಿಗಳನ್ನು ಸರಿಯಾಗಿ ಹೀರಿಕೊಳ್ಳುವ ದೇಹದ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಸೋಯಾ-ಆಧಾರಿತ ಆಹಾರ ಉತ್ಪನ್ನಗಳಲ್ಲಿಯೂ ಸಹ ಗೈಟ್ರೋಜೆನ್‌ಗಳು ಪತ್ತೆಯಾಗಿವೆ. ಇದು ಥೈರಾಯ್ಡ್ ಗ್ರಂಥಿಯ ಕಿರಿಕಿರಿಯನ್ನು ಉಂಟುಮಾಡುತ್ತದೆ. ಆದ್ದರಿಂದ ಸೋಯಾ ಉತ್ಪನ್ನಗಳನ್ನು ಅವಾಯ್ಡ್ ಮಾಡಬೇಕು.

ಇದನ್ನೂ ಓದಿ: Rice Diet: ರೈಸ್ ಡಯೆಟ್​​ನಿಂದ ತೂಕ ಇಳಿಯೋದು ಹೇಗೆ?

ಗ್ಲುಟನ್:

ಗೋಧಿಯು ಗ್ಲುಟನ್ ಅನ್ನು ಹೊಂದಿರುತ್ತದೆ ಮತ್ತು ಇದು ಸಂಭಾವ್ಯ ಗಾಯಿಟ್ರೋಜೆನಿಕ್ ಆಹಾರವಾಗಿದೆ. ಆಟೋಇಮ್ಯೂನ್ ಹೈಪೋಥೈರಾಯ್ಡಿಸಂ ಸಂದರ್ಭದಲ್ಲಿ ಗೋಧಿಯ ಸೇವನೆಯನ್ನು ಕಡಿಮೆ ಮಾಡಲು ಸೂಚಿಸಲಾಗುತ್ತದೆ. ಗ್ಲುಟನ್ ಮುಕ್ತ ಆಹಾರವನ್ನು ಸೇವಿಸುವ ಜನರು ಥೈರಾಯ್ಡ್ ಗ್ರಂಥಿಯ ಮೇಲೆ ದಾಳಿ ಮಾಡುವ ರಕ್ತದಲ್ಲಿನ ಪ್ರತಿಕಾಯಗಳ ಕಡಿಮೆ ಸಾಂದ್ರತೆಯನ್ನು ಹೊಂದಿರುತ್ತಾರೆ ಎಂದು ಸಂಶೋಧನೆ ತೋರಿಸುತ್ತದೆ.

ಥೈರಾಯ್ಡ್‌ಗೆ ಉತ್ತಮ ಆಹಾರಗಳು ಯಾವುವು?:

ಥೈರಾಯ್ಡ್ ಸಮಸ್ಯೆ ಇರುವವರು ಕೊತ್ತಂಬರಿ, ತೆಂಗಿನಕಾಯಿ, ಬ್ರೆಜಿಲ್ ಬೀಜಗಳು, ಸೂರ್ಯಕಾಂತಿ ಬೀಜಗಳು, ಕುಂಬಳಕಾಯಿ ಬೀಜಗಳು, ಮೂಂಗ್ ಬೀನ್ಸ್ ಮತ್ತು ಇತರ ಆಹಾರಗಳನ್ನು ಸೇವಿಸಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:12 pm, Tue, 20 February 24

ಪರಸ್ಪರ ಸಮ್ಮತಿಯಿಂದ ಡಿವೋರ್ಸ್ ಪಡೆದುಕೊಳ್ಳಲು ಮುಂದಾಗಿರುವ ಪತಿ-ಪತ್ನಿ
ಪರಸ್ಪರ ಸಮ್ಮತಿಯಿಂದ ಡಿವೋರ್ಸ್ ಪಡೆದುಕೊಳ್ಳಲು ಮುಂದಾಗಿರುವ ಪತಿ-ಪತ್ನಿ
ಬಾಹ್ಯಾಕಾಶದಿಂದ ಪೆಸಿಫಿಕ್ ಮಹಾಸಾಗರಕ್ಕೆ ಇಳಿದ ಡ್ರ್ಯಾಗನ್ ಕ್ಯಾಪ್ಸುಲ್
ಬಾಹ್ಯಾಕಾಶದಿಂದ ಪೆಸಿಫಿಕ್ ಮಹಾಸಾಗರಕ್ಕೆ ಇಳಿದ ಡ್ರ್ಯಾಗನ್ ಕ್ಯಾಪ್ಸುಲ್
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
ಸರೋಜಾದೇವಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು: ಸಿದ್ದರಾಮಯ್ಯ
ಸರೋಜಾದೇವಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು: ಸಿದ್ದರಾಮಯ್ಯ
ಹಾಲ್​ನಲ್ಲಿ ಪತಿಯೊಂದಿಗೆ ಸರೋಜಾ ದೇವಿ ಮತ್ತು ತಂದೆ-ತಾಯಿಯವರ ಫೋಟೋ!
ಹಾಲ್​ನಲ್ಲಿ ಪತಿಯೊಂದಿಗೆ ಸರೋಜಾ ದೇವಿ ಮತ್ತು ತಂದೆ-ತಾಯಿಯವರ ಫೋಟೋ!
W,W,W: ಟೆಸ್ಟ್​ನಲ್ಲಿ ಹ್ಯಾಟ್ರಿಕ್... ಹೊಸ ಇತಿಹಾಸ ಬರೆದ ಬೋಲ್ಯಾಂಡ್
W,W,W: ಟೆಸ್ಟ್​ನಲ್ಲಿ ಹ್ಯಾಟ್ರಿಕ್... ಹೊಸ ಇತಿಹಾಸ ಬರೆದ ಬೋಲ್ಯಾಂಡ್
ತಾಯಿಯ ಸಮಾಧಿ ಪಕ್ಕದಲ್ಲೇ ಸರೋಜಾದೇವಿ ಪಾರ್ಥೀವ ಶರೀರ ದಫನ
ತಾಯಿಯ ಸಮಾಧಿ ಪಕ್ಕದಲ್ಲೇ ಸರೋಜಾದೇವಿ ಪಾರ್ಥೀವ ಶರೀರ ದಫನ
‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಶೂಟಿಂಗ್ ಶುರು ಮಾಡಿದ ಡಾರ್ಲಿಂಗ್​ ಕೃಷ್ಣ
‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಶೂಟಿಂಗ್ ಶುರು ಮಾಡಿದ ಡಾರ್ಲಿಂಗ್​ ಕೃಷ್ಣ
ಬಿಬಿಎಂಪಿ ಕಚೇರಿ ಎದುರೇ ನಾಯಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿದ ವಾಟಾಳ್!
ಬಿಬಿಎಂಪಿ ಕಚೇರಿ ಎದುರೇ ನಾಯಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿದ ವಾಟಾಳ್!