ಥೈರಾಯ್ಡ್​ ನಿಯಂತ್ರಣಕ್ಕೆ ಈ 10 ಮನೆಮದ್ದುಗಳನ್ನು ಟ್ರೈ ಮಾಡಿ

Thyroid Home Remedies: ಥೈರಾಯ್ಡ್​ನ ಪ್ರಮುಖ ಲಕ್ಷಣಗಳೆಂದರೆ, ವಿಪರೀತ ಸುಸ್ತಾಗುವುದು, ಕೂದಲು ಉದುರುವಿಕೆ, ತೂಕ ಹೆಚ್ಚಳ, ನಿದ್ರಾಹೀನತೆ, ಮಲಬದ್ಧತೆ, ಖಿನ್ನತೆ, ಸ್ನಾಯುವಿನ ನೋವು ಮುಂತಾದವು. ಥೈರಾಯ್ಡ್​ ರೋಗದ ನಿಯಂತ್ರಣಕ್ಕೆ ಈ 10 ಮನೆಮದ್ದುಗಳನ್ನು ಬಳಸಿ ನೋಡಿ.

ಥೈರಾಯ್ಡ್​ ನಿಯಂತ್ರಣಕ್ಕೆ ಈ 10 ಮನೆಮದ್ದುಗಳನ್ನು ಟ್ರೈ ಮಾಡಿ
ಥೈರಾಯ್ಡ್Image Credit source: iStock
Follow us
ಸುಷ್ಮಾ ಚಕ್ರೆ
|

Updated on: Sep 25, 2023 | 6:06 PM

ನಮ್ಮ ಗಂಟಲಲ್ಲಿರುವ ಚಿಟ್ಟೆಯ ಆಕಾರದ ಥೈರಾಯ್ಡ್ ಗ್ರಂಥಿಯು ದೇಹದ ಹೆಚ್ಚಿನ ಚಯಾಪಚಯ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಥರ್ಮೋರ್ಗ್ಯುಲೇಷನ್, ಹಾರ್ಮೋನ್ ಮತ್ತು ತೂಕ ನಿರ್ವಹಣೆ ಈ ಗ್ರಂಥಿಯ ಕೆಲವು ಪ್ರಮುಖ ಕಾರ್ಯಗಳಾಗಿವೆ. ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುವವರು ಈ ಸಮಸ್ಯೆಯನ್ನು ನಿಯಂತ್ರಿಸಲು ಕೆಲವು ಮನೆಮದ್ದುಗಳನ್ನು ಟ್ರೈ ಮಾಡಬಹುದು.

ಥೈರಾಯ್ಡ್​ನ ಪ್ರಮುಖ ಲಕ್ಷಣಗಳೆಂದರೆ, ವಿಪರೀತ ಸುಸ್ತಾಗುವುದು, ಕೂದಲು ಉದುರುವಿಕೆ, ತೂಕ ಹೆಚ್ಚಳ, ನಿದ್ರಾಹೀನತೆ, ಮಲಬದ್ಧತೆ, ಕಡಿಮೆ ಬೆವರುವುದು ಅಥವಾ ಹೆಚ್ಚು ಬೆವರುವುದು, ಕಡಿಮೆಯಾದ ಹೃದಯ ಬಡಿತದ ವೇಗ, ಉಗುರುಗಳು ದುರ್ಬಲಗೊಳ್ಳುವಿಕೆ, ಖಿನ್ನತೆ, ಉಬ್ಬಿದ ಮುಖ, ಕೀಲು ಮತ್ತು ಸ್ನಾಯುವಿನ ನೋವು. 60 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಮತ್ತು ಜನರಲ್ಲಿ ಹೈಪರ್ ಥೈರಾಯ್ಡಿಸಮ್ ಹೆಚ್ಚು ಸಾಮಾನ್ಯವಾಗಿದೆ.

ಥೈರಾಯ್ಡ್​ ಸಮಸ್ಯೆಯ ನಿಯಂತ್ರಣಕ್ಕೆ ಮನೆಮದ್ದುಗಳು ಇಲ್ಲಿವೆ…

1. ತೆಂಗಿನ ಎಣ್ಣೆ:

ತೆಂಗಿನ ಎಣ್ಣೆಯು ಥೈರಾಯ್ಡ್ ಗ್ರಂಥಿಯ ಉತ್ತಮ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯನ್ನು ನಿರ್ದಿಷ್ಟವಾಗಿ ಬಿಸಿಯಾಗದ ರೂಪದಲ್ಲಿ ತೆಗೆದುಕೊಂಡಾಗ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ, ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ದೇಹದ ಉಷ್ಣತೆಯನ್ನು ಸಮತೋಲನಗೊಳಿಸುತ್ತದೆ.

ಇದನ್ನೂ ಓದಿ: ಒತ್ತಡವೇ ನಿಮ್ಮ ಹೃದಯದ ಅತಿದೊಡ್ಡ ಶತ್ರು; ಯಾಕೆ ಗೊತ್ತಾ?

2. ಆಪಲ್ ಸೈಡರ್ ವಿನೆಗರ್:

ಆಪಲ್ ಸೈಡರ್ ವಿನೆಗರ್ ಹಾರ್ಮೋನ್‌ಗಳ ಸಮತೋಲಿತ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ಚಯಾಪಚಯವನ್ನು ಸುಧಾರಿಸುತ್ತದೆ. ಆಪಲ್ ಸೈಡರ್ ವಿನೆಗರ್ ದೇಹದ ಕೊಬ್ಬನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ದೇಹದಿಂದ ವಿಷವನ್ನು ತೊಳೆಯುತ್ತದೆ ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ. ಆಪಲ್ ಸೈಡರ್ ವಿನೆಗರ್ ಅನ್ನು ಜೇನುತುಪ್ಪದೊಂದಿಗೆ ನೀರಿಗೆ ಸೇರಿಸಿ ಪ್ರತಿದಿನ ಬೆಳಿಗ್ಗೆ ತೆಗೆದುಕೊಳ್ಳಬಹುದು.

3. ಶುಂಠಿ:

ಥೈರಾಯ್ಡ್‌ಗೆ ಇದು ಸುಲಭವಾದ ಮನೆಮದ್ದುಗಳಲ್ಲಿ ಒಂದಾಗಿದೆ. ಶುಂಠಿಯು ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ನಂತಹ ಅಗತ್ಯವಾದ ಖನಿಜಗಳಲ್ಲಿ ಸಮೃದ್ಧವಾಗಿದೆ. ಥೈರಾಯ್ಡ್ ಸಮಸ್ಯೆಗಳ ಮುಖ್ಯ ಕಾರಣಗಳಲ್ಲಿ ಒಂದಾದ ಉರಿಯೂತವನ್ನು ಶಮನ ಮಾಡಲು ಸಹಾಯ ಮಾಡುತ್ತದೆ.

4. ವಿಟಮಿನ್ ಬಿ:

ಥೈರಾಯ್ಡ್ ಸಮಸ್ಯೆಗಳ ಮೂಲ ಕಾರಣಗಳ ವಿರುದ್ಧ ಹೋರಾಡಲು ವಿಟಮಿನ್‌ಗಳು ಸಹಾಯ ಮಾಡುತ್ತವೆ. ಥೈರಾಯ್ಡ್ ಗ್ರಂಥಿಯ ಸರಿಯಾದ ಕಾರ್ಯನಿರ್ವಹಣೆಗೆ ‘ಬಿ’ ವಿಟಮಿನ್‌ಗಳು ಅತ್ಯಗತ್ಯ. ವಿಟಮಿನ್ ಬಿ 12 ವಿಶೇಷವಾಗಿ ಹೈಪೋಥೈರಾಯ್ಡಿಸಮ್ ಹೊಂದಿರುವ ಜನರಿಗೆ ಸಹಾಯ ಮಾಡುತ್ತದೆ. ದೈನಂದಿನ ಆಹಾರದಲ್ಲಿ ಮೊಟ್ಟೆ, ಮಾಂಸ, ಮೀನು, ದ್ವಿದಳ ಧಾನ್ಯಗಳು, ಹಾಲು ಮತ್ತು ಕಾಯಿಗಳನ್ನು ಒಳಗೊಂಡಂತೆ ವಿಟಮಿನ್ ಬಿ ಪೂರೈಕೆಗೆ ಸಹಾಯ ಮಾಡಬಹುದು.

5. ವಿಟಮಿನ್ ಡಿ:

ವಿಟಮಿನ್ ಡಿ ಕೊರತೆಯು ಥೈರಾಯ್ಡ್ ಸಮಸ್ಯೆಗಳಿಗೆ ಕಾರಣವಾಗಬಹುದು. ಸೂರ್ಯನಿಗೆ ಒಡ್ಡಿಕೊಂಡಾಗ ಮಾತ್ರ ದೇಹವು ಅದನ್ನು ಉತ್ಪಾದಿಸುತ್ತದೆಯಾದ್ದರಿಂದ ನೀವು ದಿನಕ್ಕೆ ಕನಿಷ್ಠ 15 ನಿಮಿಷಗಳ ಸೂರ್ಯನ ಬೆಳಕಿಗೆ ಮೈಯನ್ನು ಒಡ್ಡಿಕೊಳ್ಳಿ. ವಿಟಮಿನ್ ಡಿ ಸಮೃದ್ಧವಾಗಿರುವ ಕೆಲವು ಆಹಾರಗಳೆಂದರೆ, ಕೊಬ್ಬಿನ ಮೀನುಗಳಾದ ಸಾಲ್ಮನ್ ಮತ್ತು ಮ್ಯಾಕೆರೆಲ್, ಡೈರಿ ಉತ್ಪನ್ನಗಳು, ಕಿತ್ತಳೆ ರಸ ಮತ್ತು ಮೊಟ್ಟೆಯ ಹಳದಿ ಲೋಳೆಗಳಾಗಿವೆ.

6. ಬಾದಾಮಿ:

ಬಾದಾಮಿ ಪ್ರೋಟೀನ್, ಫೈಬರ್ ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಬಾದಾಮಿಯಲ್ಲಿ ಸೆಲೆನಿಯಮ್ ಇದೆ. ಇದು ಥೈರಾಯ್ಡ್ ಆರೋಗ್ಯಕರ ಪೋಷಕಾಂಶವಾಗಿದೆ. ಇದರಲ್ಲಿ ಮೆಗ್ನೀಷಿಯಂ ಸಮೃದ್ಧವಾಗಿದೆ. ಇದು ಥೈರಾಯ್ಡ್ ಗ್ರಂಥಿಯನ್ನು ತುಂಬಾ ಸರಾಗವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಲಿಫ್ಟ್​ ಬದಲು ಮೆಟ್ಟಿಲು ಹತ್ತುವುದರಿಂದ ಏನೆಲ್ಲ ಪ್ರಯೋಜನವಿದೆ ಗೊತ್ತಾ?

7. ಡೈರಿ ಉತ್ಪನ್ನಗಳು:

ಹಾಲು, ಚೀಸ್ ಮತ್ತು ಮೊಸರು ಥೈರಾಯ್ಡ್‌ಗೆ ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇವುಗಳಲ್ಲಿ ಅಯೋಡಿನ್‌ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇದು ಸರಿಯಾದ ಥೈರಾಯ್ಡ್ ಕಾರ್ಯನಿರ್ವಹಣೆಗೆ ಅಗತ್ಯವಾದ ಖನಿಜವಾಗಿದೆ. ಡೈರಿ ಉತ್ಪನ್ನಗಳ ಸೇವನೆಯು ವಿಟಮಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಇದು ಥೈರಾಯ್ಡ್ ಸಮಸ್ಯೆಗಳ ಪರಿಹಾರಕ್ಕೆ ಸಹಾಯ ಮಾಡುತ್ತದೆ.

8. ಬೀನ್ಸ್:

ಬೀನ್ಸ್ ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ಅವುಗಳಲ್ಲಿ ಫೈಬರ್, ಪ್ರೋಟೀನ್, ಅಗತ್ಯವಾದ ಖನಿಜಗಳು ಮತ್ತು ಜೀವಸತ್ವ ಸಮೃದ್ಧವಾಗಿವೆ. ಬೀನ್ಸ್‌ನಲ್ಲಿ ನಾರಿನಂಶವೂ ಅಧಿಕವಾಗಿರುವುದರಿಂದ ಇದು ಹೈಪೋಥೈರಾಯ್ಡಿಸಮ್‌ನ ಸಾಮಾನ್ಯ ಅಡ್ಡ ಪರಿಣಾಮವಾಗಿರುವ ಮಲಬದ್ಧತೆ ನಿವಾರಣೆಗೆ ಸಹಾಯ ಮಾಡುತ್ತದೆ.

9. ಅಯೋಡಿನ್:

ಅಸಮರ್ಪಕ ಥೈರಾಯ್ಡ್ ಕಾರ್ಯನಿರ್ವಹಣೆಯಲ್ಲಿ ಕೆಲಸ ಮಾಡುವ ಮತ್ತೊಂದು ವಿಷಯವೆಂದರೆ ಅಯೋಡಿನ್ ಇರುವ ಆಹಾರವನ್ನು ತೆಗೆದುಕೊಳ್ಳುವುದು. ಸಸ್ಯಾಹಾರಿಗಳಿಗೆ ಇದು ಹೆಚ್ಚು ಮುಖ್ಯವಾಗುತ್ತದೆ. ಈ ಪೂರಕಗಳು ದೇಹದಲ್ಲಿ ಅಯೋಡಿನ್ ಸಮತೋಲನವನ್ನು ಪುನಃಸ್ಥಾಪಿಸಲು ಮತ್ತು ಥೈರಾಯ್ಡ್ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.

10. ನಿಯಮಿತ ವ್ಯಾಯಾಮ:

ನಿಯಮಿತವಾಗಿ ವ್ಯಾಯಾಮಗಳನ್ನು ಮಾಡುವುದರಿಂದಲೂ ಥೈರಾಯ್ಡ್​ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ