ಸಾಮಾನ್ಯವಾಗಿ ಒಂದು ವರ್ಷ ಮೇಲ್ಪಟ್ಟ ಮಕ್ಕಳಲ್ಲಿ ಗಂಡು ಮಕ್ಕಳು ಪ್ರಾಯಕ್ಕಿಂತ ಮೊದಲು ಹಾಗೂ ಹೆಣ್ಣು ಮಕ್ಕಳು ಪ್ರಾಯದಲ್ಲಿದ್ದಾಗ. ಅಸ್ತಮಾ ಹಾಗೂ ಅಲರ್ಜಿ ಇರುವ ಪಾಲಕರಿದ್ದಲ್ಲಿ , ಮಗುವು ಕಡಿಮೆ ತೂಕದೊಂದಿಗೆ ಜನಿಸಿದ್ದಲ್ಲಿ , ಬಾಲ್ಯದಲ್ಲಿ ತಾಯಿಯ ಹಾಲನ್ನು ಉಣಿಸದಿದ್ದಲ್ಲಿ, ಮಗುವು ಕೈಗಾರಿಕೆಯಿಂದ ಮುಂದುವರಿದ ನಗರದಲ್ಲಿ ವಾಸಿಸುತ್ತಿದ್ದರೆ ಹಾಗೂ ಹೆಚ್ಚು ತೂಕ ಹೊಂದಿದ ಮಕ್ಕಳಲ್ಲಿ ಕಾಯಿಲೆ ಬೇರೆ ಮಕ್ಕಳಿಗಿಂತಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಮುಂದುವರಿದ ರಾಷ್ಟ್ರಗಳಲ್ಲಿ ಪ್ರತಿಶತ 0.8ರಿಂದ 37ರಷ್ಟು ಮಕ್ಕಳು ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದು, ಭಾರತದಲ್ಲಿ ಪ್ರತಿಶತ ಶೇ.2ರಿಂದ 20ರಷ್ಟಿದೆ. ಅಸ್ತಮಾದಿಂದ ವಿಶ್ವದಲ್ಲಿ ಸುಮಾರು 400 ಮಿಲಿಯನ್ಗೂ ಅಧಿಕ ರೋಗಿಗಳು ಬಳಲುತ್ತಿದ್ದಾರೆ. ಇವರಲ್ಲಿ 100 ಮಿಲಿಯನ್ ರೋಗಿಗಳು ಭಾರತದಲ್ಲಿದ್ದಾರೆ.
ಅತ್ಯಂತ ಅಪಾಯಕಾರಿ ಕಾಯಿಲೆಗಳಾದ ಡಯಾಬಿಟಿಸ್, ಹೃದ್ರೋಗ ಮತ್ತು ಕ್ಯಾನ್ಸರ್‌ಗಳಿಗಿಂತಲೂ ಹೆಚ್ಚು ಜನರು ಅಸ್ತಮಾ ಕಾಯಿಲೆಯಿಂದ ಸಾವು ಮತ್ತು ನೋವು ಅನುಭವಿಸುತ್ತಿದ್ದಾರೆ.
ಶ್ವಾಸಕೋಶದ ರಚನೆ: ಮೂಗಿನಿಂದ ಪ್ರಾರಂಭವಾಗಿ ಸಣ್ಣ ಸಣ್ಣದಾಗಿರುವ ಗಾಲಿ ಚೀಲದವರೆಗೆ ಶ್ವಾಸಕೋಶಗಳು ಸಂಪರ್ಕ ಹೊಂದಿವೆ. ಚಿಕ್ಕ ಗಾಳಿಚೀಲಗಳಲ್ಲಿ ಇಂಗಾಲದ ಡೈಆಕ್ಸೈಡ್‌ನ್ನು ಹೊರದೂಡಿ ಆಮ್ಲಜನಕವನ್ನು ಹೀರಿಕೊಳ್ಳುವ ಕೆಲಸ ಶ್ವಾಸಕೋಶದ್ದಾಗಿದೆ.
-ಅಸ್ತಮಾ ಇದ್ದಾಗ ಮನೆಯನ್ನು ಸ್ವಚ್ಛವಾಗಿರಿಸುವುದು ಬಹಳ ಮುಖ್ಯ. ಮನೆಯ ಸ್ವಚ್ಛತೆ ಬಗ್ಗೆ ವಿಶೇಷ ಗಮನಕೊಡಬೇಕು.
-ಮಾನ್ಸೂನ್ ಆಗಮನವಾಗಿದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ಮನೆಗಳಲ್ಲಿ ತೇವವು ತುಂಬಾ ಸಾಮಾನ್ಯವಾಗಿದೆ. ಆದರೆ ನಿಮ್ಮ ಮನೆಯಲ್ಲಿ ಅಸ್ತಮಾದಿಂದ ಬಳಲುತ್ತಿರುವ ಮಗು ಇದ್ದರೆ, ನಿಮ್ಮ ಮನೆಯ ಗೋಡೆಗಳ ಮೇಲೆ ತೇವ ಬರದಂತೆ ನೋಡಿಕೊಳ್ಳಬೇಕು.
-ಮನೆಯಲ್ಲಿ ನಾಯಿ, ಬೆಕ್ಕು ಸೇರಿದಂತೆ ಇತರೆ ಸಾಕುಪ್ರಾಣಿಗಳನ್ನು ಸಾಕುತ್ತಿದ್ದರೆ ಮಗುವನ್ನು ಪ್ರಾಣಿಗಳಿಂದ ದೂರವಿರಿ. ಸಾಕುಪ್ರಾಣಿಗಳ ಕೂದಲುಗಳು ಅಲರ್ಜಿಯನ್ನು ಉಂಟುಮಾಡುತ್ತದೆ.
-ಅಸ್ತಮಾ ಇರುವ ಮಕ್ಕಳು ಯಾವುದೇ ರೀತಿಯ ಹೊಗೆಯನ್ನು ಉಸಿರಾಡದಂತೆ ನೋಡಿಕೊಳ್ಳಿ. ಮೊದಲನೆಯದಾಗಿ, ನೀವು ಧೂಮಪಾನ ಮಾಡುತ್ತಿದ್ದರೆ, ಇಂದೇ ನಿಲ್ಲಿಸಿ. ಮಗುವಿಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಅಷ್ಟೇ ಅಲ್ಲ, ಇದರಿಂದ ಮಗು ಪದೇ ಪದೇ ಅಸ್ತಮಾ ದಾಳಿಗೆ ತುತ್ತಾಗುತ್ತಿದೆ.
-ಮಗುವಿಗೆ ನಿಯಮಿತವಾಗಿ ಔಷಧಿಗಳನ್ನು ನೀಡಿ. ಔಷಧವನ್ನು ಎಂದಿಗೂ ನಿಲ್ಲಿಸಬೇಡಿ.