Pears Benefits: ನಿಮ್ಮ ಭಾವೋದ್ವೇಗಕ್ಕೂ ಮದ್ದು ಈ ಮರಸೇಬು

Fruits : ನಿಮ್ಮ ಇಷ್ಟದ ಆಹಾರವನ್ನೂ ತಿನ್ನಿ. ಅದನ್ನು ಸಮದೂಗಿಸಲು ಹಣ್ಣುಗಳನ್ನೂ ತಿನ್ನಿ. ಆಗ ನಿಮ್ಮ ದೇಹವು ಆರೋಗ್ಯವಾಗಿರುತ್ತದೆ. ಮನಸ್ಸೂ ನಿಯಂತ್ರಣದಲ್ಲಿರುತ್ತದೆ.

Pears Benefits: ನಿಮ್ಮ ಭಾವೋದ್ವೇಗಕ್ಕೂ ಮದ್ದು ಈ ಮರಸೇಬು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jul 05, 2022 | 11:49 AM

Pears Fruit : ಬಾಯಿರುಚಿಗೆ ಎಟುಕುವ ಎಲ್ಲವೂ ನಮಗೆ ಬೇಕು. ಆದರೆ ಆರೋಗ್ಯಕ್ಕೆ ಲಾಭವಿರುವ ಆಹಾರಗಳೆಂದರೆ ಮಾರುದೂರ. ಆದರೆ ಸ್ವಲ್ಪ ಯೋಚಿಸಿ ನಿತ್ಯದ ಆಹಾರವನ್ನು ಯೋಜಿಸಿದರೆ ಖಂಡಿತ ರುಚಿಯೊಂದಿಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಅದಕ್ಕಾಗಿ ವ್ಯವಧಾನ ಎನ್ನುವುದು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಹೆಚ್ಚು ತರಕಾರಿ, ಸೊಪ್ಪು, ಹಣ್ಣುಗಳನ್ನು ತಿನ್ನಲೇಬೇಕು ಎಂದು ವೈದ್ಯರು ಶಿಫಾರಸು ಮಾಡುತ್ತಲೇ ಇದ್ದಾರೆ. ಆದರೆ ಸಮಸ್ಯೆಗಳು ಕಾಲಬುಡಕ್ಕೆ ಬರುವ ತನಕ ಆ  ಬಗ್ಗೆ ಗಂಭೀರತೆ ಹುಟ್ಟಲು ಸಾಧ್ಯವೆ?  ಯಾವಾಗ ಒಂದೊಂದೇ ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆಯೋ ಆಗ ವೈದ್ಯರನ್ನು ನೆನಪಿಸಿಕೊಳ್ಳುತ್ತೇವೆ. ಆದರೆ ಪರಿಹಾರ ಎನ್ನುವುದು ನಮ್ಮ ಆಹಾರಕ್ರಮದಲ್ಲೇ ಇದೆ ಎನ್ನುವುದು ಅವರನ್ನು ಹೋಗಿ ಭೇಟಿಯಾಗುವ ತನಕ ನಮಗೆ ಅರಿವಾಗುವುದೇ ಇಲ್ಲವಲ್ಲ. ಯಾಕೆ? ಹಾಗಾಗಬಾರದಲ್ಲವೆ?

ಎಷ್ಟೊಂದು ಹಣ್ಣುಗಳನ್ನು ಪ್ರಕೃತಿ ನೀಡಿದೆ. ಒಂದೊಂದಕ್ಕೂ ಒಂದೊಂದು ರುಚಿ. ಅತ್ಯಂತ ಪೋಷಕಾಂಶಭರಿತ ಹಣ್ಣುಗಳು ನಮ್ಮ ನಿತ್ಯದ ಆಹಾರದಲ್ಲಿ ಇರಲೇಬೇಕು. ಮರಸೇಬು ಬಹಳ ಪೋಷಕಾಂಶಗಳಿಂದ ಕೂಡಿದ ಹಣ್ಣು. ಫೈಬರ್ ಇದರಲ್ಲಿ ಹೇರಳವಾಗಿರುತ್ತದೆ. ಊಟದ ನಂತರ ಈ ಹಣ್ಣನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸುಲಭವಾಗಿ ಆಗುತ್ತದೆ. ಕರುಳಿನ ಚಯಾಪಚಯ ಕ್ರಿಯೆಗಳನ್ನು ಇದು ಸುಧಾರಿಸುತ್ತದೆ.

ಇದನ್ನೂ ಓದಿ : Vajrasana Benefits : ವಜ್ರಾಸನವನ್ನು ಏಕೆ ಮಾಡಬೇಕು?

ಇದನ್ನೂ ಓದಿ
Image
ಆಗಾಗ ಅರುಂಧತಿ : ನನ್ನ ಶ್ರೀಮಂತ ತಂದೆತಾಯಿಯ ನೆರಳು ಸೋಕದಷ್ಟು ಸ್ವತಂತ್ರಳಾಬೇಕು
Image
ಆಗಾಗ ಅರುಂಧತಿ: ಕಟಕರೊಟ್ಟಿ ಬೆಳ್ಳುಳ್ಳಿ ಖಾರ ಮತ್ತು ಬ್ಲ್ಯಾಕ್​ ಟೀ ಹಂಬಲ
Image
ಆಗಾಗ ಅರುಂಧತಿ: ಮಗುವನ್ನು ಚಿವುಟುವವನು ಅವನೇ, ತೊಟ್ಟಿಲನ್ನು ತೂಗುವವನೂ ಅವನೇ
Image
ಆಗಾಗ ಅರುಂಧತಿ: ಫೋನ್​ ಸಂಭಾಷಣೆಗೆ ತನ್ನ ಹೆಂಡತಿ ಸಾಕ್ಷಿಯಾಗಿದ್ದಾಳೆ ಎಂದು ಆ ಲಂಪಟನಿಗೆ ತಿಳಿದಿಲ್ಲ!

ಮಧುಮೇಹಿಗಳಿಗಂತೂ ಇದು ನೆಚ್ಚಿನ ಹಣ್ಣು. ಈ ಹಣ್ಣಿನಲ್ಲಿರುವ ಆ್ಯಂಥೊಸಯಾನಿನ್​ ಟೈಪ್​ 2 ಮಧುಮೇಹಿಗಳ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ರೋಗನಿರೋಧಕ ಅಂಶಗಳು ಹೇರಳವಾಗಿ  ಇರುವುದರಿಂದ ಯಾವುದೇ ರೋಗವನ್ನು ಇದು ದೇಹದೊಳಗೆ ಸುಲಭವಾಗಿ ಬಿಟ್ಟುಕೊಡದು. ಇದರಲ್ಲಿರುವ ಕ್ರೆರ್ಸೆಟಿನ್ ಮತ್ತು ಪ್ರೊಸೈನಿಡಿನ್​ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್​ ಅನ್ನು ಕಡಿಮೆ ಮಾಡಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ನೀರು ಮತ್ತು ನಾರಿನಂಶ ಈ ಹಣ್ಣಿನಲ್ಲಿ ಸಾಕಷ್ಟು ಇರುವುದರಿಂದ ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ. ತೂಕ ನಿಯಂತ್ರಣದಲ್ಲಿಟ್ಟುಕೊಳ್ಳಲು ಈ ಹಣ್ಣನ್ನು ಸೇವಿಸಬಹುದು. ಇದರಲ್ಲಿರುವ ನಾರು ಮತ್ತು ನೀರಿನಾಂಶ ನಿಮ್ಮ ಭಾವೋದ್ವೇಗವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Health: ಎಚ್ಚರ! ಎಲ್ಲವನ್ನೂ ದಕ್ಕಿಸಿಕೊಳ್ಳುತ್ತಿದ್ದೀರಿ, ಆದರೆ ನಿದ್ರೆಯನ್ನು?

ಆಯಾ ಋತುಮಾನಕ್ಕೆ ತಕ್ಕಂತೆ ಹಣ್ಣುಗಳು ಎಲ್ಲೆಡೆಯೂ ಲಭ್ಯ. ಕುಳಿತಲ್ಲಿಯೇ ಆನ್​ಲೈನ್​ ಆರ್ಡರ್ ಮಾಡಿ ತರಿಸಿಕೊಳ್ಳಬಹುದು. ನಡೆದುಕೊಂಡು ಹೋಗಿ ತಂದರೆ ನಡಿಗೆಯೂ ಆಗುತ್ತದೆ. ಗಾಳಿಸೇವನೆಯೂ ಆಗುತ್ತದೆ. ಯಾಕೆ ಅನವಶ್ಯಕ ಔಷಧಿಗಳಿಗೆ ಮೊರೆಹೋಗಬೇಕು? ಹಣ್ಣು ಹಂಪಲಗಳನ್ನು ಸೇವಿಸಿ ಹೊಟ್ಟೆ ತಂಪಾಗಿಟ್ಟುಕೊಂಡಲ್ಲಿ ನಿತ್ಯವೂ ಪ್ರಸನ್ನಚಿತ್ತರಾಗಿರುತ್ತೀರಿ. ಏಕೆಂದರೆ, ಮನಸ್ಸು ದೇಹ ಒಂದಕ್ಕೊಂದು ಸಂಬಂಧ ಹೊಂದಿವೆ. ಹಾಗಾಗಿ ಎಳವೆಯಿಂದಲೇ ಹಣ್ಣು ತಿನ್ನುವುದನ್ನು ಮಕ್ಕಳಲ್ಲಿಯೂ ರೂಢಿಸಿ. ನೀವೂ ತಿನ್ನಿ.

Published On - 11:47 am, Tue, 5 July 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್