ಸಿಹಿ ತಿಂಡಿಯನ್ನು ಇಷ್ಟಪಡುತ್ತೀರಾ? ಪದೇ ಪದೇ ಸಿಹಿ ತುಂಬಿರುವ ಆಹಾರ ನಿಮ್ಮನ್ನು ಸೆಳೆಯುತ್ತಾ? ಒಂದೇ ರೀತಿಯ ತೂಕ ಕಾಪಾಡಿಕೊಳ್ಳುವುದು ಸವಾಲಾಗಿದೆಯಾ? ಸಕ್ಕರೆ ಸೇರಿಸಿದ ಆಹಾರ ತಿನ್ನುವ ಬಯಕೆಗಳಿಂದ ಬಳಲುತ್ತಿದ್ದರೆ, ನಿಮ್ಮನ್ನು ತೃಪ್ತಿಪಡಿಸಿಕೊಳ್ಳಲು ಆರೋಗ್ಯಕರ ಮಾರ್ಗವನ್ನು ಹುಡುಕುತ್ತಿದ್ದರೆ, ಇದನ್ನು ನಿವಾರಿಸಲು ಉತ್ತಮ ಮಾರ್ಗವೆಂದರೆ ಹುಳಿ ತಿನ್ನುವುದು. ಇದನ್ನು ಕೇಳಿ ನೀವು ಅಚ್ಚರಿ ಪಡಬಹುದು ಆದರೆ ಇದು ಸತ್ಯ. ಹಾಗಾದರೆ ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಇಲ್ಲಿದೆ.
ಹೊಟ್ಟೆ ತುಂಬಾ ಊಟ ಮಾಡಿದ ಮೇಲೂ ಸಿಹಿ ತಿಂಡಿ ತಿನ್ನಬೇಕು ಅನಿಸುತ್ತದೆ ಎಂದು ಆಹಾರ ತಜ್ಞೆ ಗರಿಮಾ ಗೋಯಲ್ ಹೇಳುತ್ತಾರೆ, ಅಂತಹ ಹಂಬಲ ಹೊಂದಿರುವವರು ಆಹಾರದ ವಿಷಯದಲ್ಲಿ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲು ಕಷ್ಟ ಪಡುತ್ತಾರೆ, ಅವರು ಎಷ್ಟೇ ತಿಂದರೂ ಸಹ, ಸಕ್ಕರೆ ತುಂಬಿರುವ ಆಹಾರ ತಿನ್ನಬೇಕೆಂಬ ಬಯಕೆಯು ಅತಿಯಾಗಿ ತಿನ್ನಲು ಕಾರಣವಾಗುತ್ತದೆ, ಇದರಿಂದಾಗಿ ನಿಮ್ಮ ಒಟ್ಟು ಕ್ಯಾಲೊರಿ ಸೇವನೆ ಹೆಚ್ಚಾಗುತ್ತದೆ. ಹಾಗಾದರೆ ಈ ಬಯಕೆ ನಮ್ಮಲ್ಲಿ ಯಾಕಾಗಿ ಇರುತ್ತವೆ? ಆಗಾಗ ಈ ರೀತಿಯ ಕಿರಿಕಿರಿಗಳಿಂದ ಬಳಲುತ್ತಿದ್ದರೆ, ಮತ್ತು ನಿಮ್ಮನ್ನು ತೃಪ್ತಿಪಡಿಸಿಕೊಳ್ಳಲು ಆರೋಗ್ಯಕರ ಮಾರ್ಗವನ್ನು ಹುಡುಕುತ್ತಿದ್ದರೆ, ಇಲ್ಲಿದೆ ಸುಲಭ ಪರಿಹಾರ.
ರಕ್ತದಲ್ಲಿ ಗ್ಲುಕೋಸ್ ಮಟ್ಟ ಕಡಿಮೆ ಇರುವುದು: ಸಿಹಿಯಾದ ಆಹಾರ ತಿನ್ನಬೇಕೆಂಬ ಬಯಕೆಗೆ ಸಂಬಂಧಿಸಿದ ಒಂದು ಸಾಮಾನ್ಯ ಕಾರಣ ವೆಂದರೆ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಉಂಟಾಗುವ ಅಸಮತೋಲನ. ರಕ್ತದಲ್ಲಿ ಕಡಿಮೆ ಮಟ್ಟದ ಸಕ್ಕರೆಯು ಈ ಕುಸಿತವನ್ನು ಸರಿದೂಗಿಸಲು ಸಿಹಿಯಾದದ್ದನ್ನು ತಿನ್ನಲು ಮೆದುಳಿಗೆ ಸಂಕೇತ ನೀಡುತ್ತದೆ.
ಭಾವನಾತ್ಮಕ ಕೊಂಡಿ: ಸಿಹಿಯಾದದ್ದನ್ನು ತಿನ್ನುವುದು ದೇಹದಲ್ಲಿ ಸಿರೊಟೋನಿನ್ ಮತ್ತು ಎಂಡಾರ್ಫಿನ್ ಎಂಬ ನರಪ್ರೇಕ್ಷಕ ಭಾವನೆಯನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ, ಇವೆರಡನ್ನೂ ‘ಫೀಲ್ ಗುಡ್’ ರಾಸಾಯನಿಕಗಳು ಎಂದು ಕರೆಯಲಾಗುತ್ತದೆ. ಆದ್ದರಿಂದ ಸಿಹಿಯಾದ ಆಹಾರವನ್ನು ಸೇವಿಸುವುದು ವ್ಯಕ್ತಿಯು ಉತ್ತಮ ಭಾವನೆಯನ್ನು ಹೊಂದಲು ಸಹಾಯ ಮಾಡುತ್ತದೆ. ಜೊತೆಗೆ ಖಿನ್ನತೆ ಮತ್ತು ಆತಂಕವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಸಿಹಿ ಆಹಾರವನ್ನು ಸೇವಿಸುವುದು ಖಿನ್ನತೆಗೆ ಸ್ವಯಂ ಔಷಧಿ ನೀಡುವ ನೈಸರ್ಗಿಕ ಮಾರ್ಗವಾಗಿದೆ.
ಮೆಗ್ನೀಸಿಯಮ್ ಕೊರತೆ: ಕೆಲವೊಮ್ಮೆ ಸಿಹಿ ತಿನ್ನುವ ಬಯಕೆ ಆಳವಾದ ಪೌಷ್ಠಿಕಾಂಶದ ಸಮಸ್ಯೆಯನ್ನು ಸೂಚಿಸುತ್ತದೆ ಮತ್ತು ಮೆಗ್ನೀಸಿಯಮ್ ಕೊರತೆ. ಜೊತೆಗೆ ದೇಹದ ಜೀವಕೋಶಗಳನ್ನು ಶಕ್ತಿಯುತಗೊಳಿಸಲು, ಆಹಾರವನ್ನು ಸಮರ್ಪಕವಾಗಿ ಬಳಸಲು ಸಾಧ್ಯವಾಗದಿದ್ದಾಗ ಇದು ಸಿಹಿ ಅಥವಾ ಸಕ್ಕರೆಯ ಬಯಕೆಗೆ ಕಾರಣವಾಗಬಹುದು.
ಚಡಪಡಿಕೆ: ನೀವು ಸರಿಯಾಗಿ ನಿದ್ರೆ ಮಾಡದಿದ್ದಾಗ, ಇದು ದೇಹದಲ್ಲಿ ಸಿಹಿಯ ಬಯಕೆಯನ್ನು ಪ್ರಚೋದಿಸುತ್ತದೆ. ಏಕೆಂದರೆ ನೀವು ಚೆನ್ನಾಗಿ ವಿಶ್ರಾಂತಿ ಪಡೆಯದಿದ್ದಾಗ, ಮೆದುಳು ಜಂಕ್, ಸಕ್ಕರೆ ಆಹಾರಗಳನ್ನು ತಿನ್ನಲು ನಿಮ್ಮನ್ನು ಪ್ರೇರೇಪಿಸುತ್ತದೆ.
ಕರುಳಿನ ಆರೋಗ್ಯ: ಕರುಳಿನ ಉರಿಯೂತದಂತಹ ಕೆಲವು ಕರುಳಿನ ಸಮಸ್ಯೆಯನ್ನು ಹೊಂದಿರುವ ವ್ಯಕ್ತಿಯು ಸಿಹಿ ಆಹಾರಕ್ಕಾಗಿ ಹಂಬಲಿಸುತ್ತಾನೆ ಏಕೆಂದರೆ ಕರುಳಿನಲ್ಲಿರುವ ರೋಗಕಾರಕ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಕ್ಕರೆ ಬೇಕಾಗುತ್ತದೆ.
ನಿರ್ಜಲೀಕರಣ: ಅಸಮರ್ಪಕ ಪ್ರಮಾಣದ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಸಿಹಿ ತಿನ್ನುವ ಬಯಕೆ ಉಂಟಾಗಬಹುದು. ಆದ್ದರಿಂದ, ಒಂದು ಲೋಟ ನೀರನ್ನು ಕುಡಿಯುವುದು ಸಿಹಿ ತಿನ್ನುವ ಬಯಕೆಯನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಸಕ್ಕರೆಯೇತರ ಸಿಹಿಕಾರಕ ಆಹಾರಕ್ರಮ ಆರೋಗ್ಯಕ್ಕೆ ಹಾನಿಕಾರಕ, ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ಹುಳಿ ತುಂಬಿದ ಹಣ್ಣುಗಳಲ್ಲಿ ಕಂಡು ಬರುವ ಆಮ್ಲಗಳು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತವೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸದಂತೆ ಮತ್ತು ಕುಸಿಯದಂತೆ ತಡೆಯುತ್ತವೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತವೆ. ಹುಳಿ ಆಹಾರಗಳನ್ನು ಸೇವಿಸುವುದರಿಂದ ನಮ್ಮ ಬಾಯಿಯ ರುಚಿ ವಿಶಿಷ್ಟ ರೀತಿಯಲ್ಲಿ ಸಕ್ರಿಯಗೊಳಿಸುತ್ತದೆ, ಉಲ್ಲಾಸದಾಯಕ ಮತ್ತು ತೀವ್ರವಾದ ಸಂವೇದನೆಯನ್ನು ನೀಡುತ್ತದೆ ಎಂದು ಗೋಯಲ್ ವಿವರಿಸುತ್ತಾರೆ.
ಸಮತೋಲನ ರುಚಿಗಳು: ನಮ್ಮ ರುಚಿ ಮೊಗ್ಗುಗಳು ಹೆಚ್ಚಾಗಿ ಸಮತೋಲನವನ್ನು ಬಯಸುತ್ತವೆ, ಮತ್ತು ಹುಳಿ ಆಹಾರವನ್ನು ಸೇವಿಸುವುದರಿಂದ ನಮ್ಮ ನಾಲಿಗೆಗೆ ಒಗ್ಗಿಕೊಂಡಿರುವ ಅತಿಯಾದ ಸಿಹಿ ರುಚಿಗಳನ್ನು ಎದುರಿಸಬಹುದು. ಜೊತೆಗೆ ಸಿಹಿ ಮತ್ತು ಹುಳಿ ನಡುವಿನ ವ್ಯತ್ಯಾಸವು ಸಿಹಿ ಆಹಾರಗಳನ್ನು ಕಡಿಮೆ ತಿನ್ನಲು ಸಹಾಯ ಮಾಡುತ್ತದೆ.
ಸಂತೃಪ್ತಿ: ಹುಳಿ ಆಹಾರಗಳು ಹೊಟ್ಟೆ ತುಂಬಿದ ಮತ್ತು ತೃಪ್ತಿಯ ಭಾವನೆಯನ್ನು ನೀಡಬಹುದು. ನೀವು ಹುಳಿಯ ಪದಾರ್ಥಗಳನ್ನು ಏನನ್ನಾದರೂ ತಿನ್ನುವಾಗ, ನೀವು ಗಣನೀಯವಾದದ್ದನ್ನು ಸೇವಿಸಿದ್ದೀರಿ ಎಂದು ಅದು ನಿಮ್ಮ ಮೆದುಳಿಗೆ ಸಂಕೇತಗಳನ್ನು ಕಳುಹಿಸುತ್ತದೆ, ಇದು ಹೆಚ್ಚಿನ ಆಹಾರ ಸೇವಿಸುವ ಬಯಕೆಯನ್ನು ಕಡಿಮೆ ಮಾಡುತ್ತದೆ, ವಿಶೇಷವಾಗಿ ಸಿಹಿ ತಿನಿಸುಗಳು ತಿನ್ನದಂತೆ ತಡೆಯುತ್ತದೆ.
ಕಡಿಮೆ ಸಕ್ಕರೆ ಸೇವನೆ: ಹುಳಿ ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ನಿಮ್ಮ ಒಟ್ಟಾರೆ ಸಕ್ಕರೆ ಸೇವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹುಳಿ ತಿಂಡಿಗಳನ್ನು ಆಯ್ಕೆ ಮಾಡುವ ಮೂಲಕ ಅಥವಾ ನಿಮ್ಮ ಊಟದಲ್ಲಿ ಹುಳಿ ಅಂಶಗಳನ್ನು ಸೇರಿಸುವ ಮೂಲಕ, ಸಕ್ಕರೆ ಪರ್ಯಾಯಗಳಿಗೆ ಕಡಿಮೆ ಒಲವು ತೋರಬಹುದು.
ನೈಸರ್ಗಿಕ ಸಕ್ಕರೆಗಳು: ಕೆಲವು ಹುಳಿ ಹಣ್ಣುಗಳಲ್ಲಿ ನೈಸರ್ಗಿಕ ಸಕ್ಕರೆಗಳನ್ನು ಹೊಂದಿರುತ್ತವೆ. ಈ ನೈಸರ್ಗಿಕ ಸಕ್ಕರೆಗಳು ಕಡಿಮೆ ಸಂಸ್ಕರಿಸಲ್ಪಡುತ್ತವೆ ಮತ್ತು ಅನೇಕ ಸಿಹಿ ತಿಂಡಿಗಳಲ್ಲಿ ಕಂಡು ಬರುವ ಸಂಸ್ಕರಿಸಿದ ಸಕ್ಕರೆಗಳಿಗೆ ಆರೋಗ್ಯಕರ ಪರ್ಯಾಯವನ್ನು ಒದಗಿಸುತ್ತವೆ.
ಸೌರ್ಕ್ರಾಟ್, ಕಿಮ್ಚಿ ಮತ್ತು ಮೊಸರು ಸಿಹಿಯ ಬಯಕೆಯನ್ನು ನಿಗ್ರಹಿಸಲು ಉತ್ತಮ ಆಹಾರಗಳಾಗಿವೆ. ಅಂತಹ ಆಹಾರಗಳ ಮತ್ತೊಂದು ಪ್ರಯೋಜನವೆಂದರೆ ಅವು ಪ್ರೋಬಯಾಟಿಕ್ಗಳ ಮೂಲವಾಗಿದ್ದು, ಸಕ್ಕರೆಯ ಮೇಲೆ ಬೆಳೆಯುವ ರೋಗಕಾರಕ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಮತ್ತು ಕೊಲ್ಲಲು ಸಹಾಯ ಮಾಡುತ್ತದೆ.
ಒಂದು ಲೋಟ ಹುಳಿ ನಿಂಬೆ ನೀರನ್ನು ಸೇವಿಸುವ ಮೂಲಕ ಸಿಹಿ ತಿನ್ನುವ ಬಯಕೆಯನ್ನು ಸಮತೋಲನಗೊಳಿಸಲಾಗುತ್ತದೆ. ಅಲ್ಲದೆ, ನೀರು ದೇಹವನ್ನು ಹೈಡ್ರೇಟ್ ಮಾಡಲು ಮತ್ತು ಸಕ್ಕರೆ ಸೇರಿಸಿದ ಆಹಾರಗಳ ತಿನ್ನುವ ಬಯಕೆಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.
ಈ ಹುಳಿ ಮತ್ತು ಸಿಹಿ ರುಚಿಯ ಹಣ್ಣು ವಿಟಮಿನ್ ಎ ಮತ್ತು ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದೆ. ಇದು ಸಿಹಿ ಬಯಕೆಯನ್ನು ದೊಡ್ಡ ಪ್ರಮಾಣದಲ್ಲಿ ನಿಗ್ರಹಿಸಲು ಸಹಾಯ ಮಾಡುತ್ತದೆ.
ಈ ಉಷ್ಣವಲಯದ ಹಣ್ಣು ಹುಳಿ ರುಚಿ ಮಾತ್ರವಲ್ಲದೆ ರುಚಿಕರವಾಗಿದೆ ಮತ್ತು ವಿಟಮಿನ್ ಸಿ ಯಿಂದ ತುಂಬಿದೆ. ಅನಾನಸ್ ನಲ್ಲಿ ಬ್ರೊಮೆಲೈನ್ ಎಂಬ ಕಿಣ್ವವು ಸಮೃದ್ಧವಾಗಿದೆ, ಇದು ಉರಿಯೂತ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಈ ಡೈರಿ ಉತ್ಪನ್ನವು ಪ್ರೋಬಯಾಟಿಕ್ಗಳು, ಕ್ಯಾಲ್ಸಿಯಂ ಮತ್ತು ಪ್ರೋಟೀನ್ಗಳಿಂದ ತುಂಬಿದೆ. ಮೊಸರಿನ ಪರಿಮಳವನ್ನು ಹೆಚ್ಚಿಸಲು ನೀವು ಜೇನುತುಪ್ಪ ಮತ್ತು ಹಣ್ಣುಗಳನ್ನು ಸೇರಿಸಿಕೊಳ್ಳಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ