AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ವಿಶ್ವ ಕ್ಯಾನ್ಸರ್ ದಿನ, ಈ ಕ್ರಮಗಳನ್ನು ಪಾಲಿಸಿದರೆ ಕ್ಯಾನ್ಸರ್ ನಿಯಂತ್ರಣ ಖಂಡಿತ !

ವಿಶ್ವ ಕ್ಯಾನ್ಸರ್ ದಿನಾಚರಣೆಯ ಪ್ರಮುಖ ಉದ್ದೇಶ: ಜಗತ್ತಿನಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು, ಜೊತೆಗೆ ಜನರಲ್ಲಿ ಈ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ತೆಗೆದು ಹಾಕಬೇಕು. ಈ ಕಾಯಿಲೆಗೆ ಯಾವ ರೀತಿಯ ಚಿಕಿತ್ಸೆಗಳು ಇವೆ ಎಂಬ ಮಾಹಿತಿಯನ್ನು ನೀಡುವ ಜಾಗತಿಕ ಮಟ್ಟ ದೊಡ್ಡ ಅಭಿಯಾನ ಈ ದಿನವಾಗಿದೆ.

ಇಂದು ವಿಶ್ವ ಕ್ಯಾನ್ಸರ್ ದಿನ, ಈ ಕ್ರಮಗಳನ್ನು ಪಾಲಿಸಿದರೆ ಕ್ಯಾನ್ಸರ್ ನಿಯಂತ್ರಣ ಖಂಡಿತ !
ಸಾಂಧರ್ಬಿಕ ಚಿತ್ರ
TV9 Web
| Edited By: |

Updated on: Feb 04, 2022 | 6:30 AM

Share

ವಿಶ್ವ ಕ್ಯಾನ್ಸರ್ ದಿನವನ್ನು ಪ್ರಮುಖವಾಗಿ ವಿಶ್ವದ್ಯಾಂತ (ಫೆ.4ರಂದು) ಇಂದು ಆಚರಿಸುತ್ತಾರೆ. ಕ್ಯಾನ್ಸರ್ ಪಿಡಿತರಿಗೆ ಆಗುವ ಅನ್ಯಾಯದ ಬಗ್ಗೆ ಮತ್ತು ಅದರಿಂದ ಎಚ್ಚರಿಕೆ ವಹಿಸುವಂತೆ ಈ ದಿನವನ್ನು ವಿಶ್ವದಲ್ಲಿ ಆಚರಿಲಾಗುತ್ತದೆ. ಜಗತ್ತಿನಲ್ಲಿ ಕಾಡುತ್ತಿರುವ ಕ್ಯಾನ್ಸರ್ ಸಮಸ್ಯೆಯ ಬಗ್ಗೆ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಜಗತ್ತಿನ ವೈದ್ಯ ಬಳಗವು ಅತ್ಯಂತ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಬಗ್ಗೆ ಸರ್ಕಾರಗಳು ಅನೇಕ ಕ್ರಮಗಳನ್ನು ತಂದಿರುವ ನಿಟ್ಟಿನಲ್ಲಿ ಇಂದು ವಿಶ್ವ ಕ್ಯಾನ್ಸರ್ ದಿನವನ್ನಾಗಿ ಆಚರಿಸಲಾಗುತ್ತಿದೆ. ಕ್ಯಾನ್ಸರ್ ಎಂದಾಗ ನಮ್ಮಲ್ಲಿ ಭಯ ಕಾಣಿಸಿಕೊಳ್ಳುವುದು ಸಹಜ ಆದರೆ ಈ ಬಗ್ಗೆ ನಮ್ಮಲ್ಲಿ ಒಂದು ರೀತಿಯಲ್ಲಿ ಮಹತ್ವದ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಈ ಕಾರಣದಿಂದ ಕ್ಯಾನ್ಸರ್ ದಿನವನ್ನು ಈ ದಿನದಂದು ಆಚರಿಸಲು ವಿಶ್ವ ಆರೋಗ್ಯ ಸಂಸ್ಥೆ ನಿರ್ಧಾರಿಸಿತ್ತು.

ಭಾರತವು ಇದಕ್ಕೆ ಹೊರತಾಗಿಲ್ಲ ದೇಶದಲ್ಲಿಯು ಕ್ಯಾನ್ಸರ್ ಪೀಡಿತ ಸಂಖ್ಯೆಯು ಹೆಚ್ಚಾಗಿದೆ. ಈ ಬಗ್ಗೆ ಸರ್ಕಾರವು ಅನೇಕ ಆರೋಗ್ಯ ಯೋಜನೆಗಳನ್ನು ಮತ್ತು ಪರಿಹಾರ ಕ್ರಮಗಳನ್ನು ತರುತ್ತಿದೆ.  ಕ್ಯಾನಸ್

ವಿಶ್ವ ಕ್ಯಾನ್ಸರ್ ದಿನದ ಉದ್ದೇಶ  

ಈ ದಿನಾಚರಣೆಯ ಪ್ರಮುಖ ಉದ್ದೇಶ ಜಗತ್ತಿನಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು, ಜೊತೆಗೆ ಜನರಲ್ಲಿ ಈ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ತೆಗೆದು ಹಾಕಬೇಕು. ಈ ಕಾಯಿಲೆಗೆ ಯಾವ ರೀತಿಯ ಚಿಕಿತ್ಸೆಗಳು ಇವೆ ಎಂಬ ಮಾಹಿತಿಯನ್ನು ನೀಡುವ ಜಾಗತಿಕ ಮಟ್ಟ ದೊಡ್ಡ ಅಭಿಯಾನ ಈ ದಿನವಾಗಿದೆ.

ವಿಶ್ವ ಕ್ಯಾನ್ಸರ್ ದಿನದ ಹಿನ್ನಲೆ 

1993ರಲ್ಲಿ ಸ್ಥಾಪನೆಯಾದ ಯೂನಿಯನ್ ಫಾರ್ ಇಂಟರ್ ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ (ಯುಐಸಿಸಿ)2000ರಲ್ಲಿ ಈ ದಿನವನ್ನು ಆಚರಿಸಲಾಗಿತ್ತು. ಈ ಬಗ್ಗೆ ವಿಶ್ವಸಂಸ್ಥೆಯಲ್ಲಿ ಚರ್ಚೆಗಳು ನಡೆದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಹಲವು ಅಂತರಾಷ್ಟ್ರೀಯ ಸಂಸ್ಥೆಗಳು ಬೆಂಬಲವನ್ನು ನೀಡಿದವು, ಪ್ಯಾರಿಸ್ ನಲ್ಲಿ ನಡೆದ ಶೃಂಗಸಭೆಯಲ್ಲಿ ಕ್ಯಾನ್ಸರ್ ದಿನವನ್ನು (ಫೆ.4) ಈ ದಿನದಂದು ಆಚರಿಸಲು ಅವಕಾಶ ನೀಡಲಾಯಿತು. ಇದಕ್ಕಾಗಿ ಹಲವು ದಿನಗಳ ಕಾರ್ಯಕ್ರಮಗಳು ಹಾಗೂ ಚರ್ಚೆಗಳು ಜಾಗತಿಕ ಮಟ್ಟದಲ್ಲಿ ಮಾಡಲಾಯಿತು. ಸ್ವಾಭಾವಿಕವಾಗಿ ಮುಂದಕ್ಕೆ ಕ್ಯಾನ್ಸರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿತ್ತು. ಕ್ಯಾನ್ಸರ್ ದಿನ ಆಚರಣೆಗೂ ಮುನ್ನ ಹಲವು ಸಾಕ್ಷಚಿತ್ರಗಳನ್ನು ರಚಿಸಿ ಇದರಿಂದ ಜನರಿಗೆ ಕ್ಯಾನ್ಸರ್ ಬಗ್ಗೆ ಮಹತ್ವದ ಮಾಹಿತಿ ಮತ್ತು ಜಾಗೃತಿಯನ್ನು ಮೂಡಿಲಾಗಿತ್ತು.

ಜಗತ್ತಿನಲ್ಲಿ ಎಲ್ಲ ವಯಸ್ಸಿನ ವ್ಯಕ್ತಿಗಳಿಗೂ ಕ್ಯಾನ್ಸರ್ ಎಂಬ ಕಾಡುತ್ತಿದೆ. ವರದಿಗಳ ಪ್ರಕಾರ ಕ್ಯಾನ್ಸರ್ ಬಗ್ಗೆ ತಕ್ಷಣದ ಕ್ರಮಗಳನ್ನು ಕೈಗೊಳ್ಳದಿದ್ದಾರೆ, ಸಾವು ಕಟಿಟ್ಟ ಬುತ್ತಿ ಎಂಬುದು ವೈದ್ಯರ ವಾದ, ಇತ್ತೀಚಿನ ದಿನಗಳಲ್ಲಿ ಕ್ಷಯ, ಏಡ್ಸ್, ಮಲೇರಿಯಾದಿಂದ ಸಾಯುವುದಕ್ಕಿಂತ ಕ್ಯಾನ್ಸರ್ ನಿಂದ ಸಾಯುತ್ತಿದ್ದಾರೆ. ಈ ಬಗ್ಗೆ ಜಗತ್ತನ್ನು ಒಂದು ಬಾರಿ ನಡುಗಿಸಿದ್ದು ಇದೆ. ಒಂದು ಕಾಲದಲ್ಲಿ ಕೊರೊನಾದಂತೆ ಈ ಕ್ಯಾನ್ಸರ್ ಕೂಡ ಭಯನಕ ವ್ಯಾಪ್ತಿಯನ್ನು ಹಬ್ಬಿತ್ತು.

ಕ್ಯಾನ್ಸರ್ ಹಲವು ಮೂಲಗಳಿಂದ ಬರುಬಹುದು ಅದು ನಾವು ಸೇವಿಸುವ ಆಹಾರದಿಂದ, ಅಥವಾ ಕೆಟ್ಟ ಅಭ್ಯಾಸಗಳಿಂದ ಕಾಣಿಸಿಕೊಳ್ಳುತ್ತದೆ. ನಾವು ಅತೀಯಾದ ಸಿಹಿಗಳನ್ನು ಮತ್ತು ಟೀಯನ್ನು, ಸೇವಿಸಿದರೆ ನಮ್ಮ ದೇಹದ ಆರೋಗ್ಯದಲ್ಲಿ ಬದಲಾವಣೆಗಳು ಉಂಟಾಗಿ ಕ್ಯಾನ್ಸರ್ ಬರಬಹುದು. ಇನ್ನೂ ಕೆಟ್ಟ ಅಭ್ಯಾಸಗಳು ತಂಬಾಕು, ಗುಟ್ಕಾಗಳ ಸೇವನೆ ಇದು ನಮ್ಮ ದೇಹದಲ್ಲಿ ವಿಷದ ಅಂಶವನ್ನು ಸೃಷ್ಟಿಸಿ, ದೇಹದಲ್ಲಿ ರೋಗವನ್ನು ಉತ್ಪಾದಿಸುತ್ತದೆ.

ಕ್ಯಾನ್ಸರ್ ಗೆ ಮನೆಮದ್ದು

ಬೆಳ್ಳುಳ್ಳಿ ಕ್ಯಾನ್ಸರ್ ತಡೆಯಲು ಬೆಳ್ಳುಳ್ಳಿ ಉತ್ತಮ ಔಷಧಿಯಾಗಿದೆ. ಇದರಿಂದ ಕ್ಯಾನ್ಸರ್ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಧ್ಯಾಯನಗಳ ಪ್ರಕಾರ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಜಠರದ ಕ್ಯಾನ್ಸರ್ ಗೆ ಹೆಚ್ಚು ಉಪಯುಕ್ತವಾಗಿದೆ. ದೇಹದಲ್ಲಿ ಹೆಚ್ಚಿನ ರಕ್ತ ಸಂಚಾರವನ್ನು ಹೆಚ್ಚಿಸುವ ಶಕ್ತಿ ಈ ಬೆಳ್ಳುಳ್ಳಿಗೆ ಇದೆ.

ಬ್ರೊಕೋಲಿ (ಕೋಸುಗಡ್ಡೆ) ಬ್ರೊಕ್ರೋಲಿ ಎಂಬ ಪದಾರ್ಥವು ಕ್ಯಾನ್ಸರ್ ಮೇಲೆ ಹೆಚ್ಚು ಪರಿಣಾಮವನ್ನು ಬೀರುತ್ತದೆ. ಈ ಬಗ್ಗೆ ಸಂಶೋಧನೆಯು ಕೂಡ ಬ್ರೊಕೋಲಿಯನ್ನು ಕ್ಯಾನ್ಸರ್ ಪೀಡಿತರು ಸೇವೆ ಮಾಡಿದರೆ ಕ್ಯಾನ್ಸರ್ ಹೆಚ್ಚಾಗುವುದನ್ನು ಕಡಿಮೆ ಮಾಡಬಹುದು.

ವ್ಯಾಯಮ ಪ್ರಮುಖವಾಗಿ ಮನುಷ್ಯ ಆರೋಗ್ಯವಾಗಿಬೇಕು ಎಂದರೆ ಮೊದಲು ವ್ಯಾಯಮವನ್ನು ಮಾಡಬೇಕು ಈ ಒತ್ತಡದ ಜೀವನದಲ್ಲಿ ರೋಗಗಳು ಬರುವುದು ಹೆಚ್ಚು, ಆ ಕಾರಣದಿಂದ ವ್ಯಾಯಮವೆಂಬುದು ಅತೀ ಮುಖ್ಯವಾಗಿರುತ್ತದೆ. ಕ್ಯಾನ್ಸರ್ ಕೂಡ ನಿಯಂತ್ರಣಕ್ಕೆ ಬರಬೇಕಾದರೆ ವ್ಯಾಯಮ ಎಂಬುದು ಹೆಚ್ಚು ಮುಖ್ಯವಾಗಿರುತ್ತದೆ.

ನಿದ್ರೆ ಮನುಷ್ಯ ಅತಿಯಾಗಿ ನಿದ್ದೆಯು ಮಾಡಬಾರದು, ಹಾಗೆಯೇ ನಿದ್ದೆಯು ಕೆಡಬಾರದು ಇದನ್ನು ಸಮಾನವಾಗಿ ನೋಡಿಕೊಂಡು ಒಬ್ಬ ಮನುಷ್ಯನಿಗೆ ಎಷ್ಟು ನಿದ್ರೆಯಾಗಬೇಕು ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅಷ್ಟು ನಿದ್ದೆಯನ್ನು ಮಾಡಲೇ ಬೇಕು. ನಿದ್ರೆ ಸರಿಯಾಗಿ ಮಾಡಿದರೆ ಕ್ಯಾನ್ಸರ್ ನ್ನು ನಿಯಂತ್ರಣ ಮಾಡಬಹುದು ಎಂಬುದು ಅಧ್ಯಯನದ ವಾದವಾಗಿದೆ.

ಚಾಕಲೇಟ್ ವಿಚಿತ್ರವಾಗಿದ್ದರು ಚಾಕಲೇಟ್ ನಿಂದ ಕ್ಯಾನ್ಸರ್ ನ್ನು ತಡೆಗಟ್ಟಬಹುದು, ಹೌದು ಡಾರ್ಕ್ ಚಾಕಲೇಟ್ ಗಳನ್ನು ಸೇವೆ ಮಾಡುವುದರಿಂದ ಕ್ಯಾನ್ಸರ್ ನಿಯಂತ್ರಣ ಮಾಡಬಹುದು.

ನೀರು ನಮ್ಮ ದೇಹದಲ್ಲಿ ನೀರಿನ ಅಂಶಗಳು ಕಡಿಮೆಯಾದರೆ ದೇಹದಲ್ಲಿ ಹಲವು ರೋಗಗಳು ಹುಟ್ಟಿಕೊಳ್ಳುತ್ತದೆ. ನೀರನ್ನು ಹೆಚ್ಚಾಗಿ ಸೇವೆ ಮಾಡುವುದರಿಂದ ದೇಹದಲ್ಲಿ ಹೆಚ್ಚಿನ ಶಕ್ತಿಗಳು ಉತ್ಪಾದನೆಯಾಗುತ್ತದೆ. ನೀರು ಕೂಡ ಕ್ಯಾನ್ಸರ್ ಕಡಿಮೆ ಮಾಡಬಹುದು.

ಸೂರ್ಯನ ಶಾಖ ನಮ್ಮ ದೇಹದ ಮೇಲೆ ಸೂರ್ಯ ಕಿರಣಗಳು ಬಿದ್ದರೆ ದೇಹದ ಕಣಗಳು ಹೆಚ್ಚು ಸಶಕ್ತವಾಗಿ ಕಾರ್ಯನಿರ್ವಹಿಸುತ್ತದೆ. ಕ್ಯಾನ್ಸರ್ ಗೂ ಸೂರ್ಯನ ಶಾಖಗಳು ಹೆಚ್ಚು ಪ್ರಕಾಶಗಳು ಬಿದ್ದಾಗ ಕ್ಯಾನ್ಸರ್ ಬೆಳವಣಿಗಳು ಕಡಿಮೆಯಾಗುತ್ತದೆ.

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?