Tongue Color: ಆಸ್ಪತ್ರೆಗೆ ಹೋದಾಗ ವೈದ್ಯರು ಮೊದಲು ನಾಲಿಗೆ ನೋಡುವುದೇಕೆ ಗೊತ್ತಾ?

ಅನಾರೋಗ್ಯ ಎಂದು ಆಸ್ಪತ್ರೆಗೆ ಹೋದಾಗ ವೈದ್ಯರು ಮೊದಲು ನೋಡುವುದು ನಮ್ಮ ನಾಲಿಗೆಯನ್ನು. ನಿಮಗೆ ಗೊತ್ತಾ? ವೈದ್ಯರು ನಾಲಿಗೆ ನೋಡಲು ಕಾರಣವೇನು? ಸಾಮಾನ್ಯವಾಗಿ ನಾಲಿಗೆಯ ಬಣ್ಣವು ನೀವು ಆರೋಗ್ಯವಾಗಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಹೇಳುತ್ತದೆ. ಜೊತೆಗೆ ನಾಲಿಗೆಯ ಬಣ್ಣವು ನಿಮ್ಮ ದೇಹದಲ್ಲಿನ ವಿವಿಧ ರೋಗಗಳನ್ನು ಸೂಚಿಸುತ್ತದೆ. ಹಾಗಾದರೆ ಆರೋಗ್ಯವಂತರ ನಾಲಿಗೆ ಹೇಗಿರುತ್ತದೆ? ಯಾವ ಬಣ್ಣ ಯಾವ ರೋಗಗಳನ್ನು ಸೂಚಿಸುತ್ತವೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

Tongue Color: ಆಸ್ಪತ್ರೆಗೆ ಹೋದಾಗ ವೈದ್ಯರು ಮೊದಲು ನಾಲಿಗೆ ನೋಡುವುದೇಕೆ ಗೊತ್ತಾ?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 18, 2024 | 6:01 PM

ನಾವು ಅನಾರೋಗ್ಯ ಎಂದು ಆಸ್ಪತ್ರೆಗೆ ಹೋದಾಗ ವೈದ್ಯರು ಮೊದಲು ನೋಡುವುದು ನಮ್ಮ ನಾಲಿಗೆಯನ್ನು. ನಿಮಗೆ ಗೊತ್ತಾ? ವೈದ್ಯರು ನಾಲಿಗೆ ನೋಡಲು ಕಾರಣವೇನು? ಸಾಮಾನ್ಯವಾಗಿ ನಾಲಿಗೆಯ ಬಣ್ಣವು ನೀವು ಆರೋಗ್ಯವಾಗಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಹೇಳುತ್ತದೆ. ಜೊತೆಗೆ ನಾಲಿಗೆಯ ಬಣ್ಣವು ನಿಮ್ಮ ದೇಹದಲ್ಲಿನ ವಿವಿಧ ರೋಗಗಳನ್ನು ಸೂಚಿಸುತ್ತದೆ. ಹಾಗಾದರೆ ಆರೋಗ್ಯವಂತರ ನಾಲಿಗೆ ಹೇಗಿರುತ್ತದೆ? ಯಾವ ಬಣ್ಣ ಯಾವ ರೋಗಗಳನ್ನು ಸೂಚಿಸುತ್ತವೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಿಳಿ ನಾಲಿಗೆ: ನಿಮ್ಮ ನಾಲಿಗೆಯ ಮೇಲೆ ಬಿಳಿ ಕಲೆಗಳು ಯೀಸ್ಟ್ ಸೋಂಕಿನ ಸಂಕೇತವಾಗಿದೆ. ಈ ಬಿಳಿ ಕಲೆಗಳು ಹೆಚ್ಚಾಗಿ ಮಕ್ಕಳು ಅಥವಾ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತವೆ. ಜೊತೆಗೆ ಈ ಬಿಳಿ ನಾಲಿಗೆ ನಿರ್ಜಲೀಕರಣದ ಸಮಸ್ಯೆಯನ್ನು ಕೂಡ ಸೂಚಿಸುತ್ತದೆ. ಲ್ಯುಕೋಪ್ಲಾಕಿಯಾದಲ್ಲಿಯೂ ನಾಲಿಗೆ ಬಿಳಿಯಾಗಿ ಕಾಣುತ್ತದೆ.

ಕಪ್ಪು ನಾಲಿಗೆ: ನಿಮ್ಮ ನಾಲಿಗೆ ಕಪ್ಪು ಬಣ್ಣದಲ್ಲಿದ್ದರೆ, ಅದು ಗಂಟಲು ಸೋಂಕು ಅಥವಾ ಬ್ಯಾಕ್ಟೀರಿಯಾದ ಸಂಕೇತವಾಗಿದೆ. ಔಷಧಿಗಳನ್ನು ಹೆಚ್ಚಾಗಿ ಬಳಸುವವರಲ್ಲಿಯೂ ನಾಲಿಗೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಅಂತೆಯೇ, ಕೆಲವು ಮಧುಮೇಹಿಗಳಿಗೂ, ಕ್ಯಾನ್ಸರ್ ರೋಗಿಗಳಲ್ಲಿಯೂ ಸಹ ನಾಲಿಗೆ ಕಪ್ಪಾಗುತ್ತದೆ. ಹೊಟ್ಟೆ ಹುಣ್ಣಿನಿಂದ ಬಳಲುತ್ತಿರುವ ಜನರಲ್ಲಿ ನಾಲಿಗೆಯ ಬಣ್ಣ ಬದಲಾಗುತ್ತದೆ. ಆದ್ದರಿಂದ ಅಂತಹ ರೋಗಲಕ್ಷಣಗಳು ಕಾಣಿಸಿಕೊಂಡರೆ, ಮೊದಲು ವೈದ್ಯರನ್ನು ಸಂಪರ್ಕಿಸಲು ಮರೆಯಬೇಡಿ.

ಹಳದಿ ನಾಲಿಗೆ: ನಿಮ್ಮ ನಾಲಿಗೆ ಹಳದಿಯಾಗಿದ್ದರೆ ಅದು ಕಾಮಾಲೆಯ ಲಕ್ಷಣವಾಗಿದೆ. ಆದರೆ ಇದು ಕೇವಲ ಆರಂಭಿಕ ಚಿಹ್ನೆ ಮಾತ್ರ. ನಾಲಿಗೆಯ ಬಣ್ಣ ಬದಲಾದರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಕಂದು ಅಥವಾ ನೀಲಿ: ನಿಮ್ಮ ನಾಲಿಗೆ ಕಂದು ಅಥವಾ ನೀಲಿ ಬಣ್ಣಕ್ಕೆ ತಿರುಗಿದರೆ ಅದು ಅಪಾಯಕಾರಿ. ಕಂದು ನಾಲಿಗೆ ಹೃದಯದ ಸಮಸ್ಯೆಗಳ ಸಂಕೇತವಾಗಿದೆ. ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡಲು ಸಾಧ್ಯವಾಗದಿದ್ದಾಗ ಅಥವಾ ರಕ್ತದಲ್ಲಿ ಆಮ್ಲಜನಕವಿಲ್ಲದಿದ್ದಾಗ ನಾಲಿಗೆಯ ಮೇಲೆ ಕಂದು ಲೇಪನ ಉಂಟಾಗುತ್ತದೆ.

ತಿಳಿ ಗುಲಾಬಿ: ನಾಲಿಗೆಯು ಸಂಪೂರ್ಣವಾಗಿ ಮಸುಕಾದ ಅಥವಾ ತಿಳಿ ಗುಲಾಬಿ ಬಣ್ಣದಲ್ಲಿದ್ದರೆ, ಅದು ದೇಹದಲ್ಲಿ ರಕ್ತದ ಕೊರತೆಯನ್ನು ಸೂಚಿಸುತ್ತದೆ. ರಕ್ತಹೀನತೆ ಮತ್ತು ವಿಟಮಿನ್ ಬಿ -12 ಕೊರತೆಯೂ ಇದಕ್ಕೆ ಕಾರಣವಾಗಬಹುದು. ಈ ಸಂದರ್ಭದಲ್ಲಿ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಿ ಇದಕ್ಕೆ ಸರಿಯಾದ ಔಷಧಗಳನ್ನು ತೆಗೆದುಕೊಳ್ಳಬೇಕು.

ಇದನ್ನೂ ಓದಿ: ಮಧುಮೇಹದ ಅಪಾಯವನ್ನು ಹೆಚ್ಚಿಸುವ ಈ ಆಹಾರಗಳನ್ನು ಸೇವನೆ ಮಾಡಬೇಡಿ

ಆರೋಗ್ಯವಂತ ವ್ಯಕ್ತಿಗಳ ನಾಲಿಗೆಯ ಬಣ್ಣ ಹೇಗಿರಬೇಕು?

ಆರೋಗ್ಯ ತಜ್ಞರ ಪ್ರಕಾರ, ಕಲೆಗಳಿಲ್ಲದ ನಾಲಿಗೆಯನ್ನು ಹೊಂದಿರುವವರು ಆರೋಗ್ಯವಾಗಿರುತ್ತಾರೆ ಜೊತೆಗೆ ನಾಲಿಗೆ ಗಾಢವಾದ ಗುಲಾಬಿ ಬಣ್ಣದಲ್ಲಿದ್ದರೆ ಅದು ಆರೋಗ್ಯವಂತರ ನಾಲಿಗೆಯಾಗಿರುತ್ತದೆ. ಆದರೆ ನಾಲಿಗೆಯ ಮೇಲೆ ತೇವಾಂಶದ ಕೊರತೆಯೂ ರೋಗದ ಸಂಕೇತವಾಗಿದೆ ಎಂಬುದನ್ನು ಮರೆಯಬೇಡಿ. ಅಂದರೆ ಗಾಢವಾದ ಗುಲಾಬಿ ಬಣ್ಣ ಇದ್ದು ತೇವಾಂಶದ ಕೊರತೆ ಇದ್ದರೆ ನೀವು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
Hanuman Chalisa: ಹನುಮಾನ್ ಚಾಲಿಸಾದ ವಿಶೇಷ ಹಾಗೂ ಮಹತ್ವ
Hanuman Chalisa: ಹನುಮಾನ್ ಚಾಲಿಸಾದ ವಿಶೇಷ ಹಾಗೂ ಮಹತ್ವ