ಮಹಿಳೆಯರಿಗೆ ಹೋಲಿಸಿದರೆ ಪುರುಷರು ಬೇಗ ತೂಕ ಕಡಿಮೆ ಮಾಡಿಕೊಳ್ಳುತ್ತಾರೆ ಎಂಬುದು ನಿಜವೇ?

ತೂಕ ಇಳಿಕೆಯ ಪ್ರಯಾಣದಲ್ಲಿ ನೀವು ಗಂಡೋ ಅಥವಾ ಹೆಣ್ಣೋ ಎಂಬುದು ಬಹಳ ನಿರ್ಣಾಯಕ ಅಂಶವಾಗಬಹುದು ಎಂದು ನಿಮಗೆ ತಿಳಿದಿದೆಯೇ? ಪುರುಷರಿಗೆ ಹೋಲಿಸಿದರೆ ಮಹಿಳೆಯರು ತೂಕ ಇಳಿಸಿಕೊಳ್ಳಲು ಕಷ್ಟಪಡುತ್ತಾರೆ ಎಂದು ಹಲವಾರು ಅಧ್ಯಯನಗಳಿಂದ ತಿಳಿದು ಬಂದಿದೆ. ಆದರೆ ಇದು ಏಕೆ? ನಮ್ಮ ದೇಹ ವಿಭಿನ್ನವಾಗಿರುವುದು ಇದಕ್ಕೆ ಕಾರಣವೇ? ಇದೆಲ್ಲಾ ಪ್ರಶ್ನೆಗಳಿಗೆ ಪೌಷ್ಟಿಕ ತಜ್ಞೆ ಶ್ವೇತಾ ಜೆ ಪಾಂಚಾಲ್ ಅವರು ಮಾಹಿತಿ ನೀಡಿದ್ದು ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದನ್ನು ತಮ್ಮ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದು ಅವರು ತಿಳಿಸಿರುವ ಕೆಲವು ವಿಷಯಗಳು ಇಲ್ಲಿವೆ.

ಮಹಿಳೆಯರಿಗೆ ಹೋಲಿಸಿದರೆ ಪುರುಷರು ಬೇಗ ತೂಕ ಕಡಿಮೆ ಮಾಡಿಕೊಳ್ಳುತ್ತಾರೆ ಎಂಬುದು ನಿಜವೇ?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 19, 2024 | 2:48 PM

ಇತ್ತೀಚಿನ ದಿನಗಳಲ್ಲಿ ಆರೋಗ್ಯವಾಗಿರಲು ಅನೇಕ ರೀತಿಯ ಕಸರತ್ತುಗಳು ನಡೆಯುತ್ತಿದೆ. ಅದರಲ್ಲಿ ತೂಕ ಕಡಿಮೆ ಮಾಡಿಕೊಳ್ಳುವುದು ಒಂದು. ಇದು ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಸಾಕಷ್ಟು ಸವಾಲಿನ ಸಂಗತಿಯಾಗಿದೆ. ಕಟ್ಟುನಿಟ್ಟಾದ ಆಹಾರ ಕ್ರಮವನ್ನು ಅನುಸರಿಸುವುದರಿಂದ ಹಿಡಿದು ಫಿಟ್ನೆಸ್ ನಿಯಮವನ್ನು ಕಾಪಾಡಿಕೊಳ್ಳುವ ವರೆಗೆ, ಒಬ್ಬ ವ್ಯಕ್ತಿ ಅನೇಕ ರೀತಿಯಲ್ಲಿ ತ್ಯಾಗ ಮಾಡಬೇಕಾಗುತ್ತದೆ. ಆದರೂ ಗಂಟೆಗಳ ಕಾಲ ಕಠಿಣ ಪರಿಶ್ರಮ ವಹಿಸಿದರೂ ನಮಗೆ ಸಿಗಬೇಕಾದ ಅಪೇಕ್ಷಿತ ಫಲಿತಾಂಶಗಳು ಸಿಗದಿದ್ದಾಗ ಬೇಸರವಾಗುತ್ತದೆ. ನೀವು ಸಹ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದೀರಾ? ಭರವಸೆ ಕಳೆದುಕೊಳ್ಳಬೇಡಿ, ಶ್ರಮ ಹಾಕುವುದನ್ನು ಬಿಡಬೇಡಿ, ಏಕೆಂದರೆ ಅದು ನಿಮ್ಮ ತಪ್ಪಲ್ಲ.

ತೂಕ ಇಳಿಕೆಯ ಪ್ರಯಾಣದಲ್ಲಿ ನೀವು ಗಂಡೋ ಅಥವಾ ಹೆಣ್ಣೋ ಎಂಬುದು ಬಹಳ ನಿರ್ಣಾಯಕ ಅಂಶವಾಗಬಹುದು ಎಂದು ನಿಮಗೆ ತಿಳಿದಿದೆಯೇ? ಪುರುಷರಿಗೆ ಹೋಲಿಸಿದರೆ ಮಹಿಳೆಯರು ತೂಕ ಇಳಿಸಿಕೊಳ್ಳಲು ಕಷ್ಟಪಡುತ್ತಾರೆ ಎಂದು ಹಲವಾರು ಅಧ್ಯಯನಗಳಿಂದ ತಿಳಿದು ಬಂದಿದೆ. ಆದರೆ ಇದು ಏಕೆ? ನಮ್ಮ ದೇಹ ವಿಭಿನ್ನವಾಗಿರುವುದು ಇದಕ್ಕೆ ಕಾರಣವೇ? ಇದೆಲ್ಲಾ ಪ್ರಶ್ನೆಗಳಿಗೆ ಪೌಷ್ಟಿಕ ತಜ್ಞೆ ಶ್ವೇತಾ ಜೆ ಪಾಂಚಾಲ್ ಅವರು ಮಾಹಿತಿ ನೀಡಿದ್ದು ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದನ್ನು ತಮ್ಮ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದು ಅವರು ತಿಳಿಸಿರುವ ಕೆಲವು ವಿಷಯಗಳು ಇಲ್ಲಿವೆ.

ಮಹಿಳೆಯರಿಗಿಂತ ಪುರುಷರು ವೇಗವಾಗಿ ತೂಕ ಇಳಿಸಿಕೊಳ್ಳಲು ಇಲ್ಲಿದೆ ಕಾರಣಗಳು: *ಪುರುಷರು ಮಹಿಳೆಯರಿಗಿಂತ ಹೆಚ್ಚು ತೆಳ್ಳಗಿನ ಸ್ನಾಯು ಅಂಗಾಂಶವನ್ನು ಹೊಂದಿರುತ್ತಾರೆ. ಇದು ಮಹಿಳೆಯರಿಗೆ ಹೋಲಿಸಿದರೆ ಪುರುಷರು ಹೆಚ್ಚಿನ ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ಆದ್ದರಿಂದ ಪುರುಷರು ಮತ್ತು ಮಹಿಳೆಯರು ತಮ್ಮ ಆಹಾರದಲ್ಲಿ ಕಡಿಮೆ ಕ್ಯಾಲೊರಿ ಇರುವ ಆಹಾರಗಳನ್ನು ಸೇವಿಸಿದರೂ ಮಹಿಳೆಯರಿಗಿಂತ ಪುರುಷರು ಬೇಗ ತೂಕ ಕಳೆದುಕೊಳ್ಳುತ್ತಾರೆ.

*ಶ್ವೇತಾ ಅವರ ಪ್ರಕಾರ, ಮಹಿಳೆಯರಿಗೆ ಹೋಲಿಸಿದರೆ ಪುರುಷರು ಸ್ವಾಭಾವಿಕವಾಗಿ ಹೆಚ್ಚಿನ ಚಯಾಪಚಯ ಶಕ್ತಿಯನ್ನು ಹೊಂದಿರುತ್ತಾರೆ. ಹಾಗಾಗಿ ಇದು ಕೂಡ ಪುರುಷರು ಹೆಚ್ಚಿನ ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ.

*ಸಾಮಾನ್ಯವಾಗಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ವಿಭಿನ್ನ ರೀತಿಯ ಹಾರ್ಮೋನುಗಳನ್ನು ಹೊಂದಿರುತ್ತಾರೆ. ಇದು ತೂಕ ಇಳಿಕೆಯ ಪ್ರಕ್ರಿಯೆಯಲ್ಲಿ ಪ್ರಮುಖವಾಗುತ್ತದೆ. ಪುರುಷರು ಹೆಚ್ಚು ಟೆಸ್ಟೋಸ್ಟೆರಾನ್ ಮತ್ತು ಕಡಿಮೆ ಈಸ್ಟ್ರೊಜೆನ್ ಹೊಂದಿರುತ್ತಾರೆ. ಆದರೆ ಮಹಿಳೆಯರು ಹೆಚ್ಚು ಈಸ್ಟ್ರೊಜೆನ್ ಮತ್ತು ಕಡಿಮೆ ಟೆಸ್ಟೋಸ್ಟೆರಾನ್ ಅನ್ನು ಹೊಂದಿರುತ್ತಾರೆ. ಇದು ತೂಕ ನಷ್ಟದ ವಿಷಯದಲ್ಲಿ ಮಹಿಳೆಯರಿಗೆ ಅನಾನುಕೂಲ ಉಂಟು ಮಾಡುತ್ತದೆ. ಪುರುಷರಿಗೆ ಅನುಕೂಲವಾಗಿದೆ.

ಇದನ್ನೂ ಓದಿ: ಇಡ್ಲಿ ತಿಂದು ವ್ಯಕ್ತಿ ಸಾವು; ಆಹಾರ ಜೀವಕ್ಕೆ ಅಪಾಯ ತರುತ್ತದೆಯೇ? ತಜ್ಞರು ನೀಡಿದ ಮಾಹಿತಿ ಇಲ್ಲಿದೆ

ತೂಕ ಇಳಿಸಿಕೊಳ್ಳಲು ಉತ್ತಮ ಆಹಾರಗಳು ಯಾವುವು?

ತೂಕ ಇಳಿಕೆಯ ಪ್ರಯಾಣವು ಪುರುಷರು ಮತ್ತು ಮಹಿಳೆಯರಿಗೆ ವಿಭಿನ್ನವಾಗಿರುತ್ತದೆ. ಆದರೆ ಕೆಲವು ಆಹಾರಗಳು ಯಾರಿಗಾದರೂ ಕೂಡ ಅತ್ಯುತ್ತಮ ಸೇರ್ಪಡೆಯಾಗಬಹುದು. ನಮ್ಮ ಅಡುಗೆ ಮನೆಯಲ್ಲಿಯೇ, ತೂಕ ನಷ್ಟಕ್ಕೆ ಸಹಕಾರಿಯಾಗಿರುವ ಹಲವಾರು ಪದಾರ್ಥಗಳು, ಹಣ್ಣ ಮತ್ತು ತರಕಾರಿಗಳಿವೆ. ಇವುಗಳಲ್ಲಿ ಮೊಟ್ಟೆ, ಅಣಬೆ, ಕ್ಯಾರೆಟ್, ಅನಾನಸ್, ಸೌತೆಕಾಯಿ, ಸೇಬು, ಬ್ರೊಕೋಲಿ ಮತ್ತು ಹೆಚ್ಚಿನವು ಸೇರಿವೆ. ಇವೆಲ್ಲವೂ ಹೆಚ್ಚಿನ ಫೈಬರ್ ಮತ್ತು ಅಗತ್ಯ ಜೀವಸತ್ವಗಳು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತದೆ. ಇದು ತೂಕ ನಷ್ಟಕ್ಕೆ ಉತ್ತಮವಾಗಿದೆ. ಆದ್ದರಿಂದ ಮಹಿಳೆಯರು ಪುರುಷರೊಂದಿಗೆ ನಿಮ್ಮ ತೂಕವನ್ನು ಹೋಲಿಸಿಕೊಳ್ಳಬಾರದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ