ಪತ್ನಿ ಜತೆ ಸಂಭೋಗ ನಡೆಸಿದ ಬಳಿಕ ಐರಿಶ್ ವ್ಯಕ್ತಿಯೊಬ್ಬ 10 ನಿಮಿಷಗಳ ಕಾಲ ನೆನಪಿನ ಶಕ್ತಿ ಕಳೆದುಕೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ. ಈ ಕುರಿತು ಐರಿಶ್ ಮೆಡಿಕಲ್ ಜರ್ನಲ್ನಲ್ಲಿ ವರದಿ ಪ್ರಕಟವಾಗಿದ್ದು, 66 ವರ್ಷದ ವ್ಯಕ್ತಿ ಪತ್ನಿಯೊಂದಿಗೆ ಸಂಭೋಗ ಕ್ರಿಯೆ ನಡೆಸಿದ ಬಳಿಕ ಶಾರ್ಟ್ ಅಮ್ನೇಶಿಯಾದಿಂದ ಬಳಲುತ್ತಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ವ್ಯಕ್ತಿ ಶಾರ್ಟ್ ಟರ್ಮ್ ಅಮ್ನೇಶಿಯಾ ಅಥವಾ ಟ್ರಾನ್ಸಿಯಂಟ್ ಗ್ಲೋಬಲ್ ಅಮ್ನೇಶಿಯಾ(TGA)ಯಿಂದ ಬಳಲುತ್ತಿರುವುದು ಗೊತ್ತಾಗಿದೆ.
ಮಯೋ ಕ್ಲಿನಿಕ್ ಹೇಳುವ ಪ್ರಕಾರ, ಈ ರೀತಿ ಏಕಾಏಕಿ ಟ್ರಾನ್ಸಿಯಂಟ್ ಗ್ಲೋಬಲ್ ಅಮ್ನೇಶಿಯಾಕ್ಕೆ ತುತ್ತಾಗುವುದರಿಂದ ಮೂರ್ಚೆರೋಗ ಅಥವಾ ಪಾರ್ಶ್ವವಾಯುವಿಗೂ ಗುರಿಯಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮೆಡಿಕಲ್ ಜರ್ನಲ್ ವರದಿ ಪ್ರಕಾರ ಈ ವ್ಯಕ್ತಿಯು ಸಂಭೋಗ ನಡೆಸಿದ ಬಳಿಕ ಹತ್ತು ನಿಮಿಷಗಳ ಕಾಲ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದು, ಬಳಿಕ ನೆನಪು ಮರಳಿದೆ ಎಂದು ಹೇಳಲಾಗಿದೆ.
ಆ ಸಂದರ್ಭದಲ್ಲಿ ವ್ಯಕ್ತಿಯು ಅವರು ಹಿಂದಿನ ದಿನ ತಮ್ಮ ಮದುವೆಯ ವಾರ್ಷಿಕೋತ್ಸವ ಸಮಾರಂಭ ನಡೆದಿದ್ದನ್ನೂ ಮರೆತಿದ್ದರು. ಹಿಂದಿನ ದಿನ ಮನೆಯಲ್ಲಿ ನಡೆದ ಸಂಭ್ರಮಾಚರಣೆ ಕುರಿತು ಒಂದಿಷ್ಟೂ ನೆನಪಿರಲಿಲ್ಲ.
ಬಳಿಕ ಅವರು ತಮ್ಮ ಪತ್ನಿ ಹಾಗೂ ಮಗಳ ಬಳಿ ಹಿಂದಿನ ದಿನ ಸಂಜೆ ಹಾಗೂ ಬೆಳಗ್ಗೆ ನಡೆದ ಕಾರ್ಯಕ್ರಮಗಳ ಬಗ್ಗೆ ವಿಚಾರಿಸಿದ್ದರು.
ಈ ಸಮಸ್ಯೆಯು ಸಾಮಾನ್ಯವಾಗಿ 50-70 ವರ್ಷ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುತ್ತದೆ. ಅವರಿಗೆ ಇತ್ತೀಚೆಗೆ ನಡೆದ ಘಟನೆಗಳ ಬಗ್ಗೆ ನೆನಪಿರುವುದಿಲ್ಲ. ಹಾಗೆಯೇ ಟಿಜಿಎ ಕಾಯಿಲೆಯಿಂದ ಬಳಲುತ್ತಿರುವವರು ಕಳೆದ ವರ್ಷ ನಡೆದಿರುವ ಘಟನೆಯೂ ನೆನಪಿರುವುದಿಲ್ಲ. ಕೆಲವು ಗಂಟೆಗಳ ಕಾಲ ನೆನಪು ಮರಳುತ್ತದೆ.
2015ರಲ್ಲಿ ಈ ವ್ಯಕ್ತಿಯು ಈ ರೀತಿಯ ಸಮಸ್ಯೆಯನ್ನು ಎದುರಿಸಿದ್ದರು. ನ್ಯೂರಾಲಾಜಿಕಲ್ ಎಕ್ಸಾಮಿನೇಷನ್ ಬಳಿಕ ಅವರ ನೆನಪಿನ ಶಕ್ತಿ ವಾಪಸಾಗಿತ್ತು. ಟಿಜಿಎ ಕಾಯಿಲೆಯೂ ಗಂಭೀರ ಕಾಯಿಲೆ ಎಂದು ಪರಿಗಣಿಸಲಾಗಿಲ್ಲ.
ಟ್ರಾನ್ಸಿಯಂಟ್ ಗ್ಲೋಬಲ್ ಅಮ್ನೇಶಿಯಾ ಎಂದರೇನು?
ಈಗ ಏನು ನಡೆಯುತ್ತಿದೆ ಎಂಬುದರ ಕುರಿತು ಏನೂ ನೆನಪಿಲ್ಲದಿರಬಹುದು. ಪರಿಣಾಮವಾಗಿ, ನೀವು ಅದೇ ಪ್ರಶ್ನೆಗಳನ್ನು ಪುನರಾವರ್ತಿಸಬಹುದು ಏಕೆಂದರೆ ನಿಮಗೆ ಈಗ ನೀಡಿದ ಉತ್ತರಗಳು ನಿಮಗೆ ನೆನಪಿಲ್ಲ. ಒಂದು ದಿನ, ಒಂದು ತಿಂಗಳು ಅಥವಾ ಒಂದು ವರ್ಷದ ಹಿಂದೆ ನಡೆದ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಕಷ್ಟವಾಗಬಹುದು.
ನೀವು ಯಾರೆಂದು ನೀವು ನೆನಪಿಸಿಕೊಳ್ಳುತ್ತೀರಿ ಮತ್ತು ನಿಮಗೆ ಚೆನ್ನಾಗಿ ತಿಳಿದಿರುವ ಜನರನ್ನು ನೀವು ಗುರುತಿಸುತ್ತೀರಿ. ಯಾವಾಗಲೂ ಕೆಲವು ಗಂಟೆಗಳಲ್ಲಿ ಕ್ರಮೇಣ ಸುಧಾರಿಸುತ್ತದೆ. ಚೇತರಿಕೆಯ ಸಮಯದಲ್ಲಿ, ನೀವು ನಿಧಾನವಾಗಿ ಘಟನೆಗಳು ಮತ್ತು ಸಂದರ್ಭಗಳನ್ನು ನೆನಪಿಟ್ಟುಕೊಳ್ಳಲು ಪ್ರಾರಂಭಿಸಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ