ಎಲ್ಲ ಋತುವಿನಲ್ಲೂ ಆರೋಗ್ಯವಾಗಿರಲು ಯಾವ ಆಹಾರ ಸೇವಿಸಿಬೇಕು? ಇಲ್ಲಿದೆ ಮಾಹಿತಿ
ಆರೋಗ್ಯವಾಗಿರುವುದು ಎಂದರೆ ಉತ್ತಮ ದೈಹಿಕ ಮತ್ತು ಉತ್ತಮ ಮಾನಸಿಕ ಸ್ಥಿತಿಯಲ್ಲಿರುವುದು. ಇದು ನಾವು ತಿನ್ನುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ.
Updated on: May 29, 2022 | 3:02 PM

Simple nutrition tips to stay healthy in all seasons

Simple nutrition tips to stay healthy in all seasons

ಗೋಧಿ, ರಾಗಿ ಮತ್ತು ಕಂದು ಅಕ್ಕಿಯಂತಹ ಧಾನ್ಯಗಳು ಮೈದಾದಂತಹ ಸಂಸ್ಕರಿಸಿದ ಬಿಳಿ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತವೆ.

ಬೇಳೆ ಕಾಳುಗಳು ಆರೋಗ್ಯಕರ ಕೊಬ್ಬುಗಳು, ಹೆಚ್ಚಿನ ರೋಗ ನಿರೋಧಕಗಳು, ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಅವುಗಳನ್ನು ಪ್ರತಿನಿತ್ಯ ಮಿತವಾಗಿ ಸೇವಿಸುವುದರಿಂದ ವರ್ಷವಿಡೀ ಆರೋಗ್ಯವಾಗಿರಬಹುದು. ಅವು ಮೆದುಳಿನ ಕಾರ್ಯದಲ್ಲಿ ಸಹಾಯಕವಾಗಿವೆ, ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡುತ್ತದೆ, ಉರಿಯೂತ ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.

ನಮ್ಮ ದೇಹದಲ್ಲಿ ಪ್ರತಿ ಜೀವಕೋಶವನ್ನು ನಿರ್ಮಿಸಲು ಪ್ರೋಟೀನ್ ಅಗತ್ಯವಿದೆ. ಬೇಳೆಕಾಳುಗಳು, ಪನೀರ್, ಸೊಪ್ಪು , ಚಿಕನ್, ಮೀನು ಅಥವಾ ಮಾಂಸ ಇತ್ಯಾದಿಗಳಂತಹ ಪ್ರೋಟೀನ್‌ಗಳನ್ನು ತಿನ್ನುವುದರಿಂದ ಸ್ನಾಯುವಿನ ದ್ರವ್ಯರಾಶಿಯನ್ನು ಕಾಪಾಡುತ್ತದೆ.

ಕಾಲೋಚಿತ ಮತ್ತು ಸ್ಥಳೀಯ ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಿ: ಕಾಲೋಚಿತ ಅಂದರೆ ಆಯಾ ಋತುವಿನಲ್ಲಿ ಬೆಳೆಯುವ ಆಹರವನ್ನು ಮತ್ತು ಸ್ಥಳೀಯ ವಾತಾವರಣದ ಅನುಗುಣವಾಗಿ ಆಹಾರ ತಿನ್ನುವುದರಿಂದ ರುಚಿಯನ್ನು ಉತ್ತಮಗೊಳಿಸುತ್ತದೆ ಮತ್ತು ಹೆಚ್ಚಿನ ಪ್ರಮಾಣದ ಪೋಷಣೆ ಮತ್ತು ಹೆಚ್ಚಿನ ರೋಗ ನಿರೋಧಕ ಶಕ್ತಿ ಮತ್ತು ಫೈಟೊನ್ಯೂಟ್ರಿಯೆಂಟ್‌ಗಳನ್ನು ಹೊಂದಿರುತ್ತದೆ.

ಸಾಕಷ್ಟು ನೀರು ಕುಡಿಯುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ನಮ್ಮ ಚರ್ಮವನ್ನು ಹೊಳೆಯುವಂತೆ ಮತ್ತು ತೇವಾಂಶದಿಂದ ಇಡುತ್ತದೆ. ಇದು ನಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ತಾಪಮಾನ ಬದಲಾವಣೆಗಳು, ವಯಸ್ಸು, ವೈದ್ಯಕೀಯ ಪರಿಸ್ಥಿತಿಗಳು ಮತ್ತು ಚಟುವಟಿಕೆಯ ಮಟ್ಟಗಳ ಆಧಾರದ ಮೇಲೆ ನೀರಿನ ಬಳಕೆಯನ್ನು ಬದಲಾಯಿಸಬೇಕು.



















