ಪ್ರಯಾಣ (Travel) ಅಥವಾ ರಜೆಯ ಸಮಯದಲ್ಲಿ ಮಲಬದ್ಧತೆ (Constipation) ಸಮಸ್ಯೆ ಸಂಭವಿಸುತ್ತಿದೆಯೇ? ಈ ಸಮಸ್ಯೆ ಕೆಲವು ಗಂಟೆಗಳವರೆಗೆ ಅಥವಾ ಹಲವಾರು ದಿನಗಳವರೆಗೆ ಇರುತ್ತದೆ. ನಿಮ್ಮ ಆಹಾರದಲ್ಲಿ (Food) ಹಠಾತ್ ಬದಲಾವಣೆ ಅಥವಾ ವ್ಯಾಯಾಮ ದಿನಚರಿ ಅಥವಾ ನಿರ್ದಿಷ್ಟ ವೈದ್ಯಕೀಯ ಸಮಸ್ಯೆಗಳಿಂದ ಉಂಟಾಗುವ ದೈಹಿಕ ಬದಲಾವಣೆಗಳಂತಹ ಹಲವಾರು ಅಂಶಗಳು ಮಲಬದ್ಧತೆಗೆ ಕಾರಣವಾಗಬಹುದು. ಮಲಬದ್ಧತೆ ಸಮಸ್ಯೆ ತೀವ್ರವಾಗಿ, ಮಲ ವಿಸರ್ಜನೆಗೆ ತೊಂದರೆ ಉಂಟಾದರೆ ಈ ಸಲಹೆಗಳನ್ನು ನೀವೂ ಪರಿಗಣಿಸುವುದು ಉತ್ತಮ.
ನೀವು ಪ್ರಯಾಣಿಸುವಾಗ ನಿಮ್ಮ ಪೌಷ್ಟಿಕಾಂಶವು ಸಾಮಾನ್ಯವಾಗಿ ವೇರುಪೇರಾಗುತ್ತದೆ ಮತ್ತು ದೀರ್ಘಕಾಲದವರೆಗೆ ಕುಳಿತುಕೊಳ್ಳುವುದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ನಿಮ್ಮ ಮಲಬದ್ದತೆಗೆ ಕಾರಣವಾಗಬಹುದು.
Instagram ರೀಲ್ ಮೂಲಕ, ಪೌಷ್ಟಿಕತಜ್ಞೆ ಲೊವ್ನೀತ್ ಬಾತ್ರಾ ಪ್ರಯಾಣದಿಂದ ಉಂಟಾಗುವ ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುವ 5 ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಅವರು ಬರೆಯುತ್ತಾರೆ, “ಪ್ರಯಾಣ ಮಾಡುವಾಗ ಮಲಬದ್ಧತೆ ಇತ್ತೀಚಿಗೆ ಕಂಡು ಬರುವ ಸಮಸ್ಯೆಯಾಗಿದೆ, ಇದು ಸಾಮಾನ್ಯವಾಗಿ ಎಲ್ಲರನ್ನು ಕಾಡುತ್ತದೆ. ನಿಮ್ಮ ದಿನಚರಿ ಬದಲಾದಾಗ ಈ ಸಮಸ್ಯೆ ಕಂಡುಬರುವುದು ಸಹಜ” ಎಂದು ಬಾತ್ರಾ ತಿಳಿಸಿದ್ದಾರೆ.
ಪೌಷ್ಟಿಕತಜ್ಞರ ಪ್ರಕಾರ ಪ್ರಯಾಣ ಮಾಡುವಾಗ ಮಲಬದ್ಧತೆಯನ್ನು ತಡೆಗಟ್ಟಲು ಮತ್ತು ನಿವಾರಿಸಲು ಕೆಲವು ಹಂತಗಳು ಇಲ್ಲಿವೆ:
ಇದನ್ನೂ ಓದಿ: ಆರೋಗ್ಯಕರ ಹೃದಯಕ್ಕಾಗಿ ಸೇವಿಸಬೇಕಾದ 5 ಕಡಿಮೆ ಸೋಡಿಯಂ ಆಹಾರಗಳು
Published On - 6:01 pm, Wed, 15 March 23