Tuberculosis: ಕ್ಷಯ ರೋಗವು ಉಸಿರಾಟ ತೊಂದರೆ ಮಾತ್ರವಲ್ಲದೆ ಬಂಜೆತನಕ್ಕೂ ಕಾರಣವಾಗಬಹುದು

| Updated By: ನಯನಾ ರಾಜೀವ್

Updated on: May 13, 2022 | 10:17 AM

ಕ್ಷಯ ರೋಗ(Tuberculosis)ವು ಕೇವಲ ಉಸಿರಾಟದ ತೊಂದರೆಯನ್ನುಂಟು ಮಾಡುವುದು ಮಾತ್ರವಲ್ಲದೆ, ಮಹಿಳೆಯರ ಬಂಜೆತನಕ್ಕೂ ಕಾರಣವಾಗಬಹುದು ಎನ್ನುವ ಮಾಹಿತಿ ಲಭ್ಯವಾಗಿದೆ. ಎಲ್ಲಾ ವೈದ್ಯಕೀಯ ಔಷಧೋಪಚಾರಗಳು ಇರುವ ಕಾರಣದಿಂದಾಗಿ ಕ್ಷಯ ರೋಗವೆಂದರೆ ಅದಕ್ಕೆ ಯಾರೂ ಭಯಪಡುವ ಅಗತ್ಯವಿಲ್ಲ.

Tuberculosis: ಕ್ಷಯ ರೋಗವು ಉಸಿರಾಟ ತೊಂದರೆ ಮಾತ್ರವಲ್ಲದೆ ಬಂಜೆತನಕ್ಕೂ ಕಾರಣವಾಗಬಹುದು
ಕ್ಷಯ ರೋಗ
Follow us on

ಕ್ಷಯ ರೋಗ(Tuberculosis)ವು ಕೇವಲ ಉಸಿರಾಟದ ತೊಂದರೆಯನ್ನುಂಟು ಮಾಡುವುದು ಮಾತ್ರವಲ್ಲದೆ, ಮಹಿಳೆಯರ ಬಂಜೆತನಕ್ಕೂ ಕಾರಣವಾಗಬಹುದು ಎನ್ನುವ ಮಾಹಿತಿ ಲಭ್ಯವಾಗಿದೆ. ಎಲ್ಲಾ ವೈದ್ಯಕೀಯ ಔಷಧೋಪಚಾರಗಳು ಇರುವ ಕಾರಣದಿಂದಾಗಿ ಕ್ಷಯ ರೋಗವೆಂದರೆ ಅದಕ್ಕೆ ಯಾರೂ ಭಯಪಡುವ ಅಗತ್ಯವಿಲ್ಲ. ಕ್ಷಯ ರೋಗವು ಶ್ವಾಸಕೋಶ( Lungs) ಮತ್ತು ಶ್ವಾಸಕೋಶದ ಕಾರ್ಯದ ಮೇಲೆ ಪರಿಣಾಮ ಬೀರುವುದು. ಇದನ್ನು ಸರಿಯಾದ ಸಮಯದಲ್ಲಿ ಪತ್ತೆ ಮಾಡಿ ಅದಕ್ಕೆ ಚಿಕಿತ್ಸೆ ಕೊಡಬೇಕು. ಕ್ಷಯ ರೋಗವು ಮಹಿಳೆಯರಲ್ಲಿ ಫಲವತ್ತತೆ ಮೇಲೆ ಪರಿಣಾಮ ಬೀರುವುದು. ಗರ್ಭಕೋಶಕ್ಕೆ ಇದು ಹಾನಿ ಉಂಟು ಮಾಡಬಹುದು ಮಾತ್ರವಲ್ಲದೆ ಮಹಿಳೆಯರಲ್ಲಿ ಬಂಜೆತನ ಉಂಟು ಮಾಡಬಹುದು.

ಕ್ಷಯ ರೋಗವು ರಕ್ತದ ಮೂಲಕ ಮೂಳೆ, ಗಂಟುಗಳು ಮತ್ತು ಇತರ ಅಂಗಾಂಗಗಳಿಗೆ ಕೂಡ ಪ್ರವೇಶ ಮಾಡುತ್ತದೆ, ಕ್ಷಯದ ಬ್ಯಾಕ್ಟೀರಿಯಾವು ಜನನೇಂದ್ರಿಯದ ಭಾಗಕ್ಕೆ ಪ್ರವೇಶ ಪಡೆದರೆ ಆಗ ಅದು ಫಲವತ್ತತೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟು ಮಾಡಬಹುದು ಎಂದು ವೈದ್ಯರು ಹೇಳುತ್ತಾರೆ.

ಬಂಜೆತನ ಮತ್ತು ಜನನೇಂದ್ರಿಯ ಕ್ಷಯಕ್ಕೆ ಸಂಬಂಧವೇನು?
ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಜನನೇಂದ್ರಿಯ ಕ್ಷಯದ ಬಗ್ಗೆ ತಿಳಿದುಬರುವುದು. ಹಲವು ಬಾರಿ ಅಂತಿಮ ಹಂತದವರೆಗೆ ಯಾವುದೇ ಲಕ್ಷಣಗಳು ಕಾಣಿಸುವುದಿಲ್ಲ. ಶೇ.90ರಷ್ಟು ಸಂದರ್ಭದಲ್ಲಿ ಫಾಲ್ಲೋಪಿಯನ್ ಟ್ಯೂಬ್ ಮೇಲೆ ದುಷ್ಪರಿಣಾಮ ಬೀರುತ್ತದೆ.
ಫಲವತ್ತತೆಗೊಂಡಿರುವಂತಹ ಅಂಡಾಣುಗಳು ಫಾಲ್ಲೊಪಿಯನ್ ಟ್ಯೂಬ್​ನ ಒಳಗಡೆ ಪ್ರವೇಶ ಪಡೆಯಲು ಅವಕಾಶ ನೀಡದು. ಇದರಿಂದಾಗಿ ಗರ್ಭಧಾರಣೆ ಆಗುವ ಸಾಧ್ಯತೆಯು ಕಡಿಮೆ ಇರುವುದು.

ಗರ್ಭಕೋಶದಲ್ಲಿ ಯಾವುದೇ ರೀತಿಯ ಸೋಂಕು ಕಂಡುಬಂದರೂ ಆ ವೇಳೆ ಅಂಡಾಣುವಿನ ಗುಣಮಟ್ಟವು ತುಂಬಾ ಪ್ರಮುಖ ಪಾತ್ರ ವಹಿಸುವುದು. ಫಾಲ್ಲೋಪಿನ್ ಟ್ಯೂಬ್ ನಲ್ಲಿ ತಡೆಯಿದ್ದರೆ ಆಗ ಇದು ಅಂಡಾಣುವನ್ನು ವೀರ್ಯವು ಸೇರದಂತೆ ತಡೆಯುವುದು ಮತ್ತು ಇದರಿಂದಾಗಿ ಬಂಜೆತನ ಬರುವುದು. ಎಂಡೊಮೆಟ್ರಿಯಮ್ ಪದರಕ್ಕೆ ಹಾನಿಯಾದರೆ ಆಗ ಫಲವತ್ತತೆಗೊಂಡಿರುವಂತಹ ಮೊಟ್ಟೆಯು ಗರ್ಭಕೋಶದಲ್ಲಿ ಕಸಿ ಮಾಡಲು ಆಗದು.

ಜನನೇಂದ್ರಿಯ ಭಾಗದಲ್ಲಿನ ಕ್ಷಯದ ಲಕ್ಷಣಗಳು ಹೇಗಿರುತ್ತೆ?
ರಕ್ತದ ಕಲೆಗಳೊಂದಿಗೆ ಯಾವಾಗಲೂ ಡಿಸ್ಚಾರ್ಜ್
ಡಿಸ್ಚಾರ್ಜ್ ನಿಂದ ದುರ್ವಾಸನೆ
ಲೈಂಗಿಕ ಕ್ರಿಯೆ ಬಳಿಕ ರಕ್ತಸ್ರಾವ
ಅನಿಯಮಿತ ಋತುಚಕ್ರ

ಜನನೇಂದ್ರಿಯ ಕ್ಷಯವನ್ನು ಪತ್ತೆ ಮಾಡುವುದು ಹೇಗೆ?
ಮುಟ್ಟಿನ ರಕ್ತದ ಮೂಲಕವೂ ಜನನಾಂಗದ ಕ್ಷಯವನ್ನು ಪತ್ತೆ ಮಾಡಬಹುದು. ವಿವರವಾದ ಲ್ಯಾಪರೊಸ್ಕೋಪಿ ಜನನಾಂಗದ ಹಾನಿಯ ಪ್ರಮಾಣವನ್ನು ತಿಳಿಯಲು ಸಹಕಾರಿ. ಕೆಲವು ಪರೀಕ್ಷೆಗಳ ಮೂಲಕ ಇದನ್ನು ಪತ್ತೆ ಮಾಡಬಹುದು. ಎಂಡೊಮೆಟ್ರಿಯಮ್​ನ ಬಯೊಸ್ಪಿ ಮಾಡಬಹುದು, ಇದರಿಂದ ಎಂಡೊಮೆಟ್ರಿಯಮ್ ನಲ್ಲಿ ಯಾವುದೇ ತೊಂದರೆ ಇದೆಯಾ ಎಂದು ತಿಳಿದುಬರುವುದು.

ಜನನೇಂದ್ರಿಯ ಕ್ಷಯಕ್ಕೆ ಚಿಕಿತ್ಸೆ
ಜನನೇಂದ್ರೀಯದ ಕ್ಷಯವು ಇರುವುದನ್ನು ಮೊದಲೇ ಪತ್ತೆ ಮಾಡಿದರೆ ಆಗ ಇದು ಗರ್ಭಧಾರಣೆಗೆ ನೆರವಾಗಲಿದೆ. ಕ್ಷಯ ನಿರೋಧಕ ಚಿಕಿತ್ಸೆಯು ಜನನೇಂದ್ರೀಯದ ಕ್ಷಯವನ್ನು ನಿವಾರಣೆ ಮಾಡುವುದು. ಕೆಲವು ಮಹಿಳೆಯರು ಐವಿಎಫ್ ಮೂಲಕವು ಮಗುವನ್ನು ಪಡೆಯಬಹುದಾಗಿದೆ
ಕ್ಷಯ ರೋಗವು ಪತ್ತೆಯಾದ ಕೂಡಲೇ ಇದಕ್ಕೆ ಚಿಕಿತ್ಸೆ ಆರಂಭಿಸಬೇಕು. ಸಾಮಾಜಿಕ ಅವಮಾನದ ಭೀತಿಯಿಂದಾಗಿ ಹೆಚ್ಚಿನವರು ಇದಕ್ಕೆ ಚಿಕಿತ್ಸೆ ನೀಡಲು ಮುಂದಾಗುವುದಿಲ್ಲ.

ಕ್ಷಯ ರೋಗದ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಂಡರೆ ತುಂಬಾ ಒಳ್ಳೆಯದು. ಪೋಷಕಾಂಶಗಳಿರುವಂತಹ ಆಹಾರ ಸೇವನೆ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕವಾಗಿ ಪ್ರತಿರೋಧಕ ಶಕ್ತಿ ವೃದ್ಧಿಸಬಹುದು. ಸೋಂಕಿತರದಿಂದ ಬೇರೆಯವರು ದೂರವಿದ್ದರೆ ಒಳ್ಳೆಯದು. ಇದು ನೆಗರಿ ಅಥವಾ ಕೆಮ್ಮಿನ ಮೂಲಕವಾಗಿ ಹರಡುವುದು.

ಈ ಮೇಲಿನ ಮಾಹಿತಿ ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ ಸಾಮಾನ್ಯ ಹಾಗೂ ಮನೆಮದ್ದು ಆಧರಿತ ಮಾಹಿತಿಯಾಗಿರುತ್ತದೆ. ಇಂತಹ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:13 am, Fri, 13 May 22