
ಇತ್ತೀಚಿಗೆ ಎಲ್ಲರಲ್ಲಿಯೂ ಹೆಚ್ಚಾಗಿ ಜೀರ್ಣಕ್ರಿಯೆಗೆ (Digestion) ಸಂಬಂಧಿಸಿದ ಸಮಸ್ಯೆಗಳು ಕಂಡುಬರುತ್ತಿರುವುದನ್ನು ಗಮನಿಸಿರಬಹುದು. ಇದಕ್ಕೆ ಹಲವಾರು ಕಾರಣಗಳಿರಬಹುದು ಆದರೆ ಮುಖ್ಯವಾದ ಕಾರಣ ನಾವು ಪ್ರತಿನಿತ್ಯ ಸೇವನೆ ಮಾಡುವ ಆಹಾರವೇ ಆಗಿರುತ್ತದೆ. ಒಬ್ಬ ಮನುಷ್ಯನಿಗೆ ಜೀರ್ಣಕ್ರಿಯೆ ಸರಿಯಾಗಿ ಆಗದಿದ್ದರೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಆಹ್ವಾನ ನೀಡಿದಂತಾಗುತ್ತದೆ ಮಾತ್ರವಲ್ಲ ಇದು ನಿಮ್ಮ ದೇಹ ಮತ್ತು ಮನಸ್ಸು ಎರಡನ್ನೂ ಹಾಳು ಮಾಡುತ್ತದೆ. ಹಾಗಾಗಿ ಈ ರೀತಿ ಸಮಸ್ಯೆ ಕಂಡು ಬಂದಾಗ ಅದಕ್ಕೆ ತಾತ್ಕಾಲಿಕವಾಗಿ ಸಿಗುವಂತಹ ಪರಿಹಾರವಲ್ಲ ಬದಲಾಗಿ ಶಾಶ್ವತವಾಗಿ ಮುಕ್ತಿ ನೀಡುವ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇವುಗಳಲ್ಲಿ ಶುಂಠಿ ನೀರು ಅಥವಾ ಕಷಾಯ ಸೇವನೆಯೂ ಒಂದು. ಆದರೆ ಇದನ್ನು ಕುಡಿಯುವ ಸಮಯ ಮುಖ್ಯವಾಗುತ್ತದೆ. ಹಾಗಾದ್ರೆ ಈ ರೀತಿ ಜೀರ್ಣಕ್ರಿಯೆ, ಮಲಬದ್ಧತೆಯಂತಹ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಲು ಶುಂಠಿ ನೀರನ್ನು ಹೇಗೆ, ಯಾವ ಸಮಯದಲ್ಲಿ ಸೇವನೆ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ
ಶುಂಠಿಯು ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿಯಾದ ಮನೆಮದ್ದು ಎಂಬುದು ತಿಳಿದ ವಿಚಾರ. ಇದು ನೀವು ಸೇವನೆ ಮಾಡಿದಂತಹ ಆಹಾರವನ್ನು ತ್ವರಿತವಾಗಿ ಜೀರ್ಣಿಸಿಕೊಳ್ಳಲು, ಹೊಟ್ಟೆ ಉಬ್ಬುವುದನ್ನು ತಡೆಯಲು ಮತ್ತು ಕರುಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದು ಅನೇಕ ವೈಜ್ಞಾನಿಕ ಅಧ್ಯಯನಗಳಿಂದ ಸಾಬೀತಾಗಿದೆ. ಆದರೆ ಶುಂಠಿ ನೀರನ್ನು ಕುಡಿಯುವ ಮೊದಲು ಇದನ್ನು ಯಾವ ಸಮಯದಲ್ಲಿ ಕುಡಿಯಬೇಕು? ಇದರ ಗರಿಷ್ಠ ಪ್ರಯೋಜನ ಹೇಗೆ ಸಿಗುತ್ತದೆ ಎಂಬುದನ್ನು ತಿಳಿದುಕೊಂಡಿರಬೇಕಾಗುತ್ತದೆ.
ಇದನ್ನೂ ಓದಿ: ಬೆಳಿಗ್ಗೆ ಎದ್ದ ತಕ್ಷಣ ಬಿಸಿ ಚಹಾ ಕುಡಿಯುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಈ ಸ್ಟೋರಿಯನ್ನು ಮಿಸ್ ಮಾಡ್ದೆ ಓದಿ
ಊಟಕ್ಕೆ ಮೊದಲು (20-30 ನಿಮಿಷಗಳ ಮೊದಲು): ಶುಂಠಿ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ಹೊಟ್ಟೆಯಲ್ಲಿ ಪಿತ್ತರಸ ಮತ್ತು ಕಿಣ್ವಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಆಹಾರ ಸರಿಯಾಗಿ ಜೀರ್ಣವಾಗಲು ಅನುವು ಮಾಡಿಕೊಡುತ್ತದೆ. ಹಾಗಾಗಿ ಊಟ ಮಾಡುವುದಕ್ಕಿಂತ ಮೊದಲೇ ಇದನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು.
ಅಗತ್ಯಕ್ಕಿಂತ ಹೆಚ್ಚು ಊಟ ಮಾಡಿದ ನಂತರ (30-60 ನಿಮಿಷಗಳ ನಂತರ): ನೀವು ಹೊಟ್ಟೆ ಬಿರಿಯುವಷ್ಟು ಆಹಾರ ಸೇವನೆ ಮಾಡಿದಾಗ ಈ ಶುಂಠಿ ನೀರನ್ನು ಕುಡಿಯಲೇ ಬೇಕು. ಇದು ಅಜೀರ್ಣವನ್ನು ನಿವಾರಿಸುತ್ತದೆ. ಒಂದು ಅಧ್ಯಯನದ ಪ್ರಕಾರ, ಶುಂಠಿ ಹೊಟ್ಟೆಯನ್ನು ಖಾಲಿ ಮಾಡುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಹೊಟ್ಟೆಯನ್ನು ಹಗುರವಾಗಿರಿಸಲು ಸಹಾಯ ಮಾಡುತ್ತದೆ ಎಂಬುದು ತಿಳಿದು ಬಂದಿದೆ.
ಬೆಳಗಿನ ಉಪಾಹಾರದ ನಂತರ ಮತ್ತು ಮಧ್ಯಾಹ್ನ ಊಟಕ್ಕಿಂತ ಮೊದಲು: ಬೆಳಿಗ್ಗೆ 10 ರಿಂದ 11 ಗಂಟೆಯ ನಡುವೆ ಶುಂಠಿ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ, ವಾಕರಿಕೆ ಮತ್ತು ಉಬ್ಬುವುದು ಕಡಿಮೆಯಾಗುತ್ತದೆ. ಇದು ದೇಹವನ್ನು ಉಲ್ಲಾಸಗೊಳಿಸುತ್ತದೆ ಮತ್ತು ಏಕಾಗ್ರತೆಗೆ ಸಹಾಯ ಮಾಡುತ್ತದೆ. ಮಲಗುವ ಮುನ್ನ ಸ್ವಲ್ಪ ಪ್ರಮಾಣದ ಶುಂಠಿ ನೀರನ್ನು ಕುಡಿಯುವುದರಿಂದ ದೇಹವು ಶಾಂತವಾಗುತ್ತದೆ ಮತ್ತು ರಾತ್ರಿಯಿಡೀ ನಿರ್ವಿಶೀಕರಣ ಹೆಚ್ಚಾಗುತ್ತದೆ. ಆದರೆ, ನಿಮಗೆ ಆಮ್ಲೀಯತೆ ಸಮಸ್ಯೆ ಇದ್ದರೆ, ರಾತ್ರಿಯಲ್ಲಿ ಶುಂಠಿ ನೀರನ್ನು ಕುಡಿಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ