ಬೆಳಿಗ್ಗೆ ಎದ್ದ ತಕ್ಷಣ ಬಿಸಿ ಚಹಾ ಕುಡಿಯುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಈ ಸ್ಟೋರಿಯನ್ನು ಮಿಸ್ ಮಾಡ್ದೆ ಓದಿ
ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಇದನ್ನು ಎಷ್ಟೇ ಪ್ರಯತ್ನ ಪಟ್ಟರು ಅವರಿಂದ ಬದಲಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಈ ರೀತಿಯ ಅಭ್ಯಾಸ ಎಷ್ಟರ ಮಟ್ಟಿಗೆ ಸರಿ ಎಂದು ಎಂದಾದರೂ ಯೋಚನೆ ಮಾಡಿದ್ದೀರಾ? ಹೌದು. ನೀವು ತಪ್ಪದೆ ರೂಢಿಸಿಕೊಂಡು ಬಂದಿರುವ ಈ ಅಭ್ಯಾಸದಿಂದ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹಾಗಾದರೆ ಏನದು? ಯಾಕೆ ಒಳ್ಳೆಯದಲ್ಲ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಮ್ಮಲ್ಲಿ ಹಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಇದೊಂದು ರೀತಿ ವಾಹನಗಳಿಗೆ ಇಂಧನ ಹಾಕಿದಂತೆ. ಸಮಯಕ್ಕೆ ಸರಿಯಾಗಿ ಹಾಕದಿದ್ದರೆ ಗಾಡಿ ಮುಂದೆಯೇ ಹೋಗುವುದಿಲ್ಲ. ಅದೇ ರೀತಿ ಈ ಪಾನೀಯಗಳು ಕೂಡ ಬೆಳಿಗ್ಗಿನ ಸಮಯದಲ್ಲಿ ಹೊಟ್ಟೆಗೆ ಬಿಳದಿದ್ದರೆ ಯಾವುದೇ ಕೆಲಸ ಆಗುವುದಿಲ್ಲ ಅನ್ನುವಷ್ಟರ ಮಟ್ಟಿಗೆ ನಮ್ಮ ಮನಸ್ಥಿತಿ ಹೊಂದಿಕೊಂಡು ಬಿಟ್ಟಿರುತ್ತದೆ. ಅದಕ್ಕಾಗಿಯೇ ಬೆಳಿಗ್ಗೆ ಎದ್ದ ತಕ್ಷಣ ಸಮಯಕ್ಕೆ ಸರಿಯಾಗಿ ಒಂದು ಕಪ್ ಬಿಸಿ ಚಹಾ (Hot Tea) ಕುಡಿಯಬೇಕೆಂಬ ನಿಯಮವನ್ನು ನಮಗೆ ನಾವೇ ಹಾಕಿಕೊಂಡಿರುತ್ತೇವೆ. ಮಾತ್ರವಲ್ಲ ಅದನ್ನು ತಪ್ಪದೆ ಪಾಲನೆಯೂ ಮಾಡುತ್ತೇವೆ. ಆದರೆ ಈ ರೀತಿಯ ಅಭ್ಯಾಸ ಎಷ್ಟರ ಮಟ್ಟಿಗೆ ಸರಿ ಎಂದು ಎಂದಾದರೂ ಯೋಚನೆ ಮಾಡಿದ್ದೀರಾ? ಹೌದು. ನೀವು ತಪ್ಪದೆ ರೂಢಿಸಿಕೊಂದು ಬಂದಿರುವ ಈ ಅಭ್ಯಾಸದಿಂದ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹಾಗಾದರೆ ಏನದು? ಯಾಕೆ ಒಳ್ಳೆಯದಲ್ಲ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸಾಮಾನ್ಯವಾಗಿ ನಿದ್ರೆ ಮಾಡಿ ಎದ್ದ ನಂತರ ದೇಹದಲ್ಲಿನ ಕ್ಷಾರೀಯತೆ ಮತ್ತು ಆಮ್ಲೀಯತೆಯ ಮಟ್ಟಗಳು ಸ್ವಲ್ಪ ಮಟ್ಟಿಗೆ ಅಸಮತೋಲನಗೊಳ್ಳುತ್ತವೆ. ಇದು ಸಾಮಾನ್ಯ ಕೂಡ. ಹೀಗೆ ಎಚ್ಚರವಾದ ತಕ್ಷಣ ಬಿಸಿ ಚಹಾ ಕುಡಿಯುವ ಅಭ್ಯಾಸವು ಅವುಗಳ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಕಾಲಾನಂತರದಲ್ಲಿ, ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದಲ್ಲದೆ, ಇದು ಹಲ್ಲುಗಳ ಮೇಲಿನ ಪದರವನ್ನು ಸವೆದು ದಂತ ಸಂಬಂಧಿತ ಕಾಯಿಲೆಗಳು ಬರುವುದಕ್ಕೆ ಕಾರಣವಾಗುತ್ತದೆ. ಈ ರೀತಿ ಬಿಸಿ ಚಹಾ ಕುಡಿಯುವುದರಿಂದ ಆರೋಗ್ಯದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತದೆ ಮತ್ತು ವಿವಿಧ ರೀತಿಯ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು.
ಇನ್ನು ಚಿಕ್ಕ ಮಕ್ಕಳಿಗೆ ಈ ರೀತಿ ಎದ್ದ ಕೂಡಲೇ ಚಹಾ ನೀಡಬಾರದು. ಬಿಸಿ ಚಹಾ ಕುಡಿಯುವುದು ಜೀರ್ಣಾಂಗ ವ್ಯವಸ್ಥೆಗೆ ಇನ್ನೂ ಹೆಚ್ಚು ಅಪಾಯಕಾರಿ. ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಮಕ್ಕಳು ಹಠ ಮಾಡುತ್ತಾರೆ ಅಥವಾ ನೀವು ಕುಡಿಯುವಾಗ ಅವರಿಗೂ ಕೊಡುವಂತಹ ಅಭ್ಯಾಸಗಳನ್ನು ಮಾಡಬೇಡಿ ಇದರಿಂದ ಮಕ್ಕಳ ಆರೋಗ್ಯ ಹಂತ ಹಂತವಾಗಿ ಹಾಳಾಗುತ್ತದೆ.
ಇದನ್ನೂ ಓದಿ: ಜ್ವರ ಬಂದಾಗ ಕಾಫಿ ಕುಡಿಯಬಾರದು ಏಕೆ? ಈ ಬಗ್ಗೆ ತಜ್ಞರು ಹೇಳೋದೇನು?
ಯಾವಾಗ ಸೇವನೆ ಮಾಡಬೇಕು?
ಆದ್ದರಿಂದ, ಇಂದಿನಿಂದಲೇ ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಬಿಸಿ ಚಹಾ ಕುಡಿಯುವ ಅಭ್ಯಾಸವನ್ನು ಬಿಟ್ಟುಬಿಡುವುದು ಒಳ್ಳೆಯದು. ಅದೇ ರೀತಿ, ಊಟದ ನಂತರ ಚಹಾ ಕುಡಿಯುವುದು ಸಹ ತುಂಬಾ ಕೆಟ್ಟ ಅಭ್ಯಾಸವಾಗಿದೆ. ಊಟದ ನಂತರ ನಿದ್ರೆ ಬರುವುದರಿಂದ ಅನೇಕರು ಊಟದ ನಂತರ ತಕ್ಷಣ ಚಹಾ ಕುಡಿಯುತ್ತಾರೆ. ಆದರೆ, ಈ ಅಭ್ಯಾಸವು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ಏನಿದ್ದರೂ ತಿಂಡಿ ಮಾಡಿದ ಬಳಿಕ ಅಥವಾ ಸಂಜೆ ಹೊತ್ತಲ್ಲಿ ಟೀ ಅಥವಾ ಕಾಫಿಯಂತಹ ಪಾನೀಯಗಳನ್ನು ಸೇವನೆ ಮಾಡಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




