ನಿಮಗೆ ಆಗಾಗ ವಿಚಿತ್ರ ಕನಸುಗಳು ಬೀಳುತ್ತಾ? ರಾತ್ರಿ ಈ ಆಹಾರಗಳ ಸೇವನೆ ಮಾಡುವುದನ್ನು ಬಿಟ್ಟುಬಿಡಿ

ನೀವು ಸೇವನೆ ಮಾಡುವ ಆಹಾರ ನಿಮಗೆ ಯಾವ ರೀತಿಯ ಕನಸುಗಳನ್ನು ಬೀಳುತ್ತದೆ ಎಂಬುದನ್ನು ನಿರ್ಧರಿಸುತ್ತದೆ ಎಂದರೆ ನೀವು ನಂಬುತ್ತೀರಾ? ಈ ವಿಷಯ ನಿಮಗೆ ಆಶ್ಚರ್ಯ ಹುಟ್ಟಿಸಿದರೂ ಸಹ ಇದು ಸತ್ಯ. ಇದು ಹಲವಾರು ಅಧ್ಯಯನಗಳಿಂದಲೂ ಸಾಬೀತಾಗಿದೆ. ರಾತ್ರಿ ಕಂಡುಬರುವ ದುಃಸ್ವಪ್ನಗಳನ್ನು ತಡೆಯಲು ಯಾವ ರೀತಿಯ ಆಹಾರಗಳ ಸೇವನೆ ಮಾಡುವುದನ್ನು ತಪ್ಪಿಸಬೇಕು? ನಿದ್ರಾಹೀನತೆ ಹೆಚ್ಚಳವಾಗುತ್ತಿರುವುದಕ್ಕೂ ನೀವು ಸೇವನೆ ಮಾಡುವ ಆಹಾರಕ್ಕೂ ಯಾವ ರೀತಿಯ ಸಂಬಂಧವಿದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿಮಗೆ ಆಗಾಗ ವಿಚಿತ್ರ ಕನಸುಗಳು ಬೀಳುತ್ತಾ? ರಾತ್ರಿ ಈ ಆಹಾರಗಳ ಸೇವನೆ ಮಾಡುವುದನ್ನು ಬಿಟ್ಟುಬಿಡಿ
Vivid Dreams

Updated on: Sep 02, 2025 | 3:58 PM

ರಾತ್ರಿ ಇದ್ದಕ್ಕಿದ್ದಂತೆ, ವಿಚಿತ್ರ ಕನಸು (Dream) ಬಿದ್ದು ಹಠಾತ್ತನೆ ಎಚ್ಚರವಾಗುತ್ತದೆ. ಪೂರ್ತಿ ರಾತ್ರಿ ಮತ್ತೆ ಮತ್ತೆ ಕೆಟ್ಟ ಕೆಟ್ಟ ಕನಸು ಬಿದ್ದು ನಿದ್ರೆಗೆ ಅಡ್ಡಿಪಡಿಸುತ್ತದೆ. ಇವೆಲ್ಲಾ ಕನಸುಗಳು, ಅಪ್ರಸ್ತುತವಾಗಿದ್ದು ಒಂದಕ್ಕೊಂದು ಸಂಬಂಧವೇ ಇರುವುದಿಲ್ಲ. ಈ ರೀತಿ ಆಗಾಗ ಆಗುತ್ತಿರುತ್ತದೆ. ಆದರೆ ಇದು ಸಾಮಾನ್ಯವಲ್ಲ. ಈ ಕುರಿತಾಗಿ ನಡೆದಂತಹ ಹೊಸ ಅಧ್ಯಯನವೊಂದು ರಾತ್ರಿ ಸೇವನೆ ಮಾಡುವ ಆಹಾರದ ಮೇಲೆ ಯಾವ ರೀತಿಯ ಕನಸುಗಳನ್ನು ಬೀಳುತ್ತವೆ ಎಂಬುದು ನಿರ್ಧಾರವಾಗುತ್ತದೆ ಎಂದು ಹೇಳಿದೆ. ಹಾಗಾದರೆ ನಿದ್ರಾಹೀನತೆ (Insomnia) ಹೆಚ್ಚಳವಾಗುತ್ತಿರುವುದಕ್ಕೂ ನೀವು ಸೇವನೆ ಮಾಡುವ ಆಹಾರಕ್ಕೂ ಯಾವ ರೀತಿಯ ಸಂಬಂಧವಿದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ವಾಸ್ತವದಲ್ಲಿ ಇದಕ್ಕೆ ಸಂಬಂಧಿಸಿದ ಕೆಲವು ಸಂಶೋಧನೆಗಳು 2007ರ ಹಿಂದೆಯೇ ಯುಕೆಯಲ್ಲಿ ನಡೆದಿತ್ತು. ಆ ಸಮಯದಲ್ಲಿ ನಡೆಸಿದ ಅಧ್ಯಯನಗಳು ರಾತ್ರಿ ಮಲಗುವ ಮೊದಲು ಆದಷ್ಟು ಕಡಿಮೆ ಮತ್ತು ಹಗುರವಾದ ಆಹಾರಗಳನ್ನು ಸೇವಿಸುವವರಲ್ಲಿ ಒಳ್ಳೆ ಕನಸುಗಳು ಬೀಳುತ್ತವೆ ಎಂಬುದನ್ನು ಬ೦ಹಿರಂಗಪಡಿಸಿದೆ. ಮಾತ್ರವಲ್ಲ ಸಂಜೆ ಸಮಯದಲ್ಲಿ ಫಾಸ್ಟ್ ಫುಡ್ ಅನ್ನು ಅತಿಯಾಗಿ ಸೇವಿಸುವವರಲ್ಲಿ ಕೆಟ್ಟ ಸ್ವಪ್ನಗಳು ಕಂಡುಬರುತ್ತದೆ ಎಂಬುದು ತಿಳಿದುಬಂದಿದೆ. ಅಂದರೆ ನೀವು ಸೇವನೆ ಮಾಡುವ ಆಹಾರ ರಾತ್ರಿ ಬೀಳುವಂತಹ ಕನಸುಗಳನ್ನು ನಿರ್ಧರಿಸುತ್ತದೆ. ಅನೇಕ ಪುಸ್ತಕಗಳಲ್ಲಿಯೂ ಈ ಬಗ್ಗೆ ವಿವರಣೆಗಳನ್ನು ನೀಡಲಾಗಿದೆ. ಇದು ಕೇವಲ ಕಟ್ಟುಕಥೆಯಲ್ಲ. 2007 ರಲ್ಲಿ ಮಾತ್ರವಲ್ಲ, 2022 ರಲ್ಲಿಯೂ ಸಹ ಅದೇ ವಿಷಯದ ಕುರಿತು ಅಧ್ಯಯನ ನಡೆದು ಬಂದಿದ್ದು ಕೆಲವು ಆಸಕ್ತಿದಾಯಕ ಸಂಶೋಧನೆಗಳು ಬಹಿರಂಗಗೊಂಡಿವೆ.

ಅಧ್ಯಯನದಲ್ಲಿ ಏನಿದೆ?

ರಾತ್ರಿಯಲ್ಲಿ ಹೆಚ್ಚು ಹಣ್ಣುಗಳ ಸೇವನೆ ಮಾಡುವವರಲ್ಲಿ ಒಳ್ಳೆಯ ಕನಸು ಬೀಳುತ್ತದೆ. ಅದೇ ಸಕ್ಕರೆ ಅಧಿಕವಾಗಿರುವ ಆಹಾರವನ್ನು ಸೇವನೆ ಮಾಡುವವರಲ್ಲಿ ದುಃಸ್ವಪ್ನ ಗಳು ಕಂಡುಬರುತ್ತದೆ. ರಾತ್ರಿ ಸಮಯದಲ್ಲಿ ಬಹಳಷ್ಟು ಸಂಸ್ಕರಿಸಿದ ಆಹಾರ ಮತ್ತು ತ್ವರಿತ ಆಹಾರ ಸೇವನೆ ಮಾಡುವರಲ್ಲಿ ಗೊಂದಲವಾದ ಕನಸುಗಳು ಬೀಳುತ್ತದೆ ಎಂಬುದು ಈ ಸಂಶೋಧನೆಯಿಂದ ವರದಿಯಾಗಿದೆ. ಮಾತ್ರವಲ್ಲ ಹೆಚ್ಚು ಸಿಹಿತಿಂಡಿ ಮತ್ತು ಡೈರಿ ಉತ್ಪನ್ನಗಳನ್ನು ಸೇವನೆ ಮಾಡುವವರ ನಿದ್ರೆಗೆ ಭಂಗವಾಗುತ್ತದೆ. ಈಗಾಗಲೇ ಜೀರ್ಣಕಾರಿ ಸಮಸ್ಯೆಗಳು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಲ್ಲಿ ಈ ಪರಿಣಾಮವು ಹೆಚ್ಚಾಗಿ ಕಂಡುಬರುತ್ತದೆ. ಗ್ಲುಟನ್ ಅಧಿಕವಾಗಿರುವ ಆಹಾರ ಸೇವನೆ ಮಾಡುವುದರಿಂದಲೂ ಕೂಡ ಅಲರ್ಜಿ ಉಂಟಾಗುವುದಲ್ಲದೆ, ದುಃಸ್ವಪ್ನಗಳಿಗೂ ಕಾರಣವಾಗುತ್ತದೆ ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ: ನಿದ್ರಾಹೀನತೆ ಸಮಸ್ಯೆಗೆ ಹೊಸ ಪರಿಹಾರ ಕಂಡುಕೊಂಡ ಚೀನಾ, ಇಲ್ಲಿದೆ ನೋಡಿ

ಯಾಕೆ ಹೀಗೆ?

ತಜ್ಞರು ಹೇಳುವ ಪ್ರಕಾರ, ಕರುಳಿನಲ್ಲಿರುವ ಸೂಕ್ಷ್ಮಜೀವಿಯು ಕೇಂದ್ರ ನರಮಂಡಲಕ್ಕೆ ಸಂಬಂಧಿಸಿದ್ದು ಇದು ಸರಿಯಾಗಿ ಬಿಡುಗಡೆಯಾಗದಿದ್ದಾಗಲೆಲ್ಲಾ, ಕೇಂದ್ರ ನರಮಂಡಲಕ್ಕೆ ಸಂಕೇತಗಳನ್ನು ಕಳುಹಿಸಲಾಗುತ್ತದೆ. ಆ ಸಮಯದಲ್ಲಿ, ಅಸ್ವಸ್ಥತೆಯ ಅನುಭವವಾಗುತ್ತದೆ. ಹಾಗಾಗಿ ಆಹಾರವು ಚೆನ್ನಾಗಿ ಜೀರ್ಣವಾಗುವುದಿಲ್ಲ. ಮಾತ್ರವಲ್ಲ ಇದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚಾಗುತ್ತದೆ. ಈ ರೀತಿಯ ಮಾನಸಿಕ ಒತ್ತಡವು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ರಾತ್ರಿ ನಿದ್ರೆ ಬಂದರೂ ಸಹ, ಕೆಟ್ಟ ಕೆಟ್ಟ ಕನಸುಗಳು ಬೀಳುತ್ತದೆ. ತಿಂದ ನಂತರ ಈ ಒತ್ತಡ ಹೆಚ್ಚಾಗುವುದರಿಂದ, ಇದನ್ನು ಪೋಸ್ಟ್- ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (PTSD) ಎಂದು ಕರೆಯಲಾಗುತ್ತದೆ. ಹಾಗಾಗಿ ನೀವು ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡುತ್ತೀರಿ ಅದಕ್ಕೆ ತಕ್ಕಂತೆ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ನೀವು ಯಾವ ರೀತಿಯ ಕನಸುಗಳನ್ನು ಕಾಣುತ್ತೀರಿ ಎಂಬುದರ ಆಧಾರದ ಮೇಲೆ, ನೀವು ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ