AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂತ್ರನಾಳ ಸೋಂಕು, ರಕ್ತಹೀನತೆಗೆ ಆಯುರ್ವೇದ ಪರಿಹಾರ; ಪತಂಜಲಿ ಯುರಿನಿಲ್ ವಟಿ ಔಷಧ

Patanjali's ayurvedic solution for UTI and Anaemia: ನೀವು ಯುಟಿಐ ಅಥವಾ ಮೂತ್ರನಾಳ ಸೋಂಕಿನಿಂದ ಬಳಲುತ್ತಿದ್ದರೆ ಆಯುರ್ವೇದ ಪರಿಹಾರ ಲಭ್ಯ ಇದೆ. ಪತಂಜಲಿಯ ದಿವ್ಯ ಉರಿನಿಲ್ ವಟಿ ಈ ಸಮಸ್ಯೆ ನಿವಾರಣೆಗೆ ಪ್ರಯೋಜನಕಾರಿಯಾಗಬಹುದು. ಯುಟಿಐ ಮಾತ್ರವಲ್ಲದೆ, ರಕ್ತಹೀನತೆಯ ಸಮಸ್ಯೆಗೂ ಈ ಔಷಧ ಪರಿಣಾಮಕಾರಿಯಾಗಿದೆ.

ಮೂತ್ರನಾಳ ಸೋಂಕು, ರಕ್ತಹೀನತೆಗೆ ಆಯುರ್ವೇದ ಪರಿಹಾರ; ಪತಂಜಲಿ ಯುರಿನಿಲ್ ವಟಿ ಔಷಧ
ಪತಂಜಲಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 03, 2025 | 7:08 PM

Share

Patanjali Divya Urinil Vati usage and benefits: ಯುಟಿಐ (UTI- Urinary Tract Infection) ತುಂಬಾ ಸಾಮಾನ್ಯ ಹಾಗೂ ಬಹಳ ಗಂಭೀರವಾಗಿರುವ ಆರೋಗ್ಯ ಸಮಸ್ಯೆ. ಮೂತ್ರಕೋಶ ಮತ್ತು ಅದರ ನಾಳವು ಬ್ಯಾಕ್ಟೀರಿಯಾ ಸೋಂಕಿಗೆ ಒಳಗಾದಾಗ ಯುಟಿಐ ಸಂಭವಿಸುತ್ತದೆ. ಯುಟಿಐಗೆ ಕಾರಣ ಇ-ಕೋಲಿ ಬ್ಯಾಕ್ಟೀರಿಯಾ. ಅಸುರಕ್ಷಿತ ಲೈಂಗಿಕತೆ, ದೀರ್ಘಕಾಲದವರೆಗೆ ಮೂತ್ರವನ್ನು ಹಿಡಿದಿಟ್ಟುಕೊಳ್ಳುವುದು, ಸೋಂಕಿತ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವುದು ಸೇರಿ ಇನ್ನೂ ಹಲವು ಕಾರಣಗಳಿಗೆ ಯುಟಿಐ ಹರಡಬಹುದು. ವೈದ್ಯರು ಈ ಸಮಸ್ಯೆಗೆ ಆ್ಯಂಟಿಬಯೋಟಿಕ್ಸ್ ನೀಡುತ್ತಾರೆ. ಆದರೆ, ಆಯುರ್ವೇದಲ್ಲಿ ಮೂತ್ರನಾಳ ಸೋಂಕಿಗೆ ಚಿಕಿತ್ಸೆ ಇದೆಯಾ?

ಈ ಯುಟಿಐ ಸಮಸ್ಯೆಗೆ ಪತಂಜಲಿ ತಮ್ಮ ಸಂಶೋಧನೆಯಿಂದ ಔಷಧವನ್ನು ತಯಾರಿಸಿರುವುದಾಗಿ ಹೇಳಿಕೊಂಡಿದೆ. ಇದು ಯುಟಿಐ ಮತ್ತು ರಕ್ತಹೀನತೆಯನ್ನು ನಿಯಂತ್ರಿಸಬಹುದು. ಈ ಔಷಧಿಗೆ ಪತಂಜಲಿ ದಿವ್ಯ ಉರಿನಿಲ್ ವಟಿ (Divya Urinil Vati) ಎಂದು ಹೆಸರಿಸಲಾಗಿದೆ. ದಿವ್ಯ ಉರಿನಿಲ್ ವಟಿ ಸುರಕ್ಷಿತ ಮತ್ತು ಹರ್ಬಲ್ ಆಯುರ್ವೇದ ಔಷಧವಾಗಿದೆ. ಇದು ಯುಟಿಐ ಮತ್ತು ರಕ್ತಹೀನತೆಯಂತಹ ಸಮಸ್ಯೆಗಳಲ್ಲಿ ವಿಶೇಷವಾಗಿ ಪ್ರಯೋಜನಕಾರಿ ಎಂದು ಪತಂಜಲಿ ಸಂಸ್ಥೆ ಹೇಳಿಕೊಳ್ಳುತ್ತದೆ. ಇದರ ಮುಖ್ಯ ಘಟಕಾಂಶವಾದ ಕರಮರ್ದ (ನೆಲ್ಲೀಕಾಯಿ) ನೈಸರ್ಗಿಕವಾಗಿ ದೇಹವು ಸೋಂಕಿನ ವಿರುದ್ಧ ಹೋರಾಡಲು ಮತ್ತು ರಕ್ತದ ಕೊರತೆಯನ್ನು ನೀಗಿಸಲು ಸಹಾಯ ಮಾಡುತ್ತದೆ. ಈ ಔಷಧಿಯನ್ನು ಸಂಪೂರ್ಣ ಗಿಡಮೂಲಿಕೆಗಳಿಂದ ಮಾಡಲಾಗಿದೆ. ಯಾವುದೇ ಪ್ರಮುಖ ಅಡ್ಡಪರಿಣಾಮಗಳು ವರದಿಯಾಗಿಲ್ಲ. ಆದರೂ ಕೂಡ ತಜ್ಞರ ಸಲಹೆ ಮೇರೆಗೆ ಮಾತ್ರವೇ ಇದನ್ನು ಸೇವಿಸುವುದು ಸರಿ.

ಯುಟಿಐ ತಪ್ಪಿಸಲು ಆಯುರ್ವೇದ ಚಿಕಿತ್ಸೆ

ಇಂದಿನ ಒತ್ತಡದ ಜೀವನ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಎರಡು ಪ್ರಮುಖ ಸಮಸ್ಯೆಗಳೆಂದರೆ ಮೂತ್ರದ ಸೋಂಕು (ಯುಟಿಐ) ಮತ್ತು ರಕ್ತಹೀನತೆ (Anaemia). ಈ ಎರಡೂ ಸಮಸ್ಯೆಗಳನ್ನು ನಿವಾರಿಸಲು ಆಯುರ್ವೇದದಲ್ಲಿ ಅನೇಕ ಔಷಧಿಗಳನ್ನು ಉಲ್ಲೇಖಿಸಲಾಗಿದೆ. ಅವುಗಳಲ್ಲಿ ಒಂದು ದಿವ್ಯ ಉರಿನಿಲ್ ವಟಿ. ಇದು ಗಿಡಮೂಲಿಕೆ ಔಷಧವಾಗಿದ್ದು, ಇದನ್ನು ಆಯುರ್ವೇದ ವಿಧಾನಗಳಿಂದ ತಯಾರಿಸಲಾಗುತ್ತದೆ ಮತ್ತು ಇದರ ಮುಖ್ಯ ಘಟಕಾಂಶವೆಂದರೆ ಕರಂದಾ (ನೆಲ್ಲಿ) ಸಾರ.

ಇದನ್ನೂ ಓದಿ: ಮೂತ್ರಪಿಂಡದಲ್ಲಿ ಕಲ್ಲು ಮತ್ತಿತರ ಸಮಸ್ಯೆಗಳಿಗೆ ಆಯುರ್ವೇದ ಪರಿಹಾರ; ಪತಂಜಲಿಯ ಅಶ್ಮರಿಹರ್ ಕ್ವಾತ್

ದಿವ್ಯ ಉರಿನಿಲ್ ವಟಿ ಔಷಧಿಯ ಅಂಶಗಳು

ನೆಲ್ಲಿಕಾಯಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್, ಐರನ್ ಮತ್ತು ವಿಟಾಮಿನ್​ಗಳು (ಜೀವಸತ್ವ) ಸಮೃದ್ಧವಾಗಿವೆ. ಆಯುರ್ವೇದದಲ್ಲಿ, ಇದನ್ನು ರಕ್ತವರ್ಧಕ ಎಂದು ಪರಿಗಣಿಸಲಾಗುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ದಿವ್ಯ ಉರಿನಿಲ್ ವಟಿ ಮೂತ್ರಕೋಶದ ಸಮಸ್ಯೆಗಳು ಮತ್ತು ಸೋಂಕುಗಳನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ.

ದಿವ್ಯ ಉರಿನಿಲ್ ವಟಿ ಯಾವ ರೋಗಗಳಿಗೆ ಪ್ರಯೋಜನಕಾರಿ?

ಯುಟಿಐ (ಮೂತ್ರನಾಳದ ಸೋಂಕು): ಪದೇ ಪದೇ ಮೂತ್ರ ವಿಸರ್ಜನೆ, ಬರ್ನಿಂಗ್ ಸೆನ್ಸ್ ಇವು ಯುಟಿಐನ ಸಾಮಾನ್ಯ ರೋಗಲಕ್ಷಣವಾಗಿವೆ. ಕರಮರ್ದ ಸಾರವು ಮೂತ್ರನಾಳವನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ ಮತ್ತು ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ರಕ್ತಹೀನತೆ: ದೇಹದಲ್ಲಿ ರಕ್ತದ ಕೊರತೆ ಉಂಟಾದಾಗ ಅಥವಾ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಾದಾಗ, ಆಯಾಸ, ದೌರ್ಬಲ್ಯ, ತಲೆತಿರುಗುವಿಕೆ ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ಕರಮರ್ದದಲ್ಲಿರುವ ಕಬ್ಬಿಣವು ರಕ್ತದ ಕೊರತೆಯನ್ನು ನೀಗಿಸಲು ಸಹಾಯ ಮಾಡುತ್ತದೆ. ಈ ಔಷಧಿ ದೇಹದಲ್ಲಿ ರಕ್ತದ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ದಿವ್ಯ ಉರಿನಿಲ್ ವಟಿ ತೆಗೆದುಕೊಳ್ಳುವುದು ಹೇಗೆ

ಡೋಸೇಜ್- ದಿನಕ್ಕೆ ಎರಡು ಬಾರಿ 1 ಅಥವಾ 2 ಕ್ಯಾಪ್ಸುಲ್‌ಗಳನ್ನು ಉಗುರು ಬೆಚ್ಚಗಿನ ನೀರಿನಿಂದ ತೆಗೆದುಕೊಳ್ಳಿ.

ಯಾವಾಗ ತೆಗೆದುಕೊಳ್ಳಬೇಕು- ಊಟಕ್ಕೆ ಮೊದಲು ಇದನ್ನು ಸೇವಿಸುವುದು ಹೆಚ್ಚು ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ.

ಎಚ್ಚರಿಕೆ- ಡೋಸೇಜ್ ಕೂಡ ವ್ಯಕ್ತಿಯ ಸ್ಥಿತಿ ಮತ್ತು ಸಮಸ್ಯೆಯ ತೀವ್ರತೆಯನ್ನು ಅವಲಂಬಿಸಿರುತ್ತದೆ. ಆದ್ದರಿಂದ ದೀರ್ಘಕಾಲದವರೆಗೆ ತೆಗೆದುಕೊಳ್ಳುವ ಮೊದಲು ಆಯುರ್ವೇದ ತಜ್ಞರನ್ನು ಸಂಪರ್ಕಿಸುವುದು ಉತ್ತಮ.

ಇದನ್ನೂ ಓದಿ: ಮಳೆಗಾಲದಲ್ಲಿ ರೋಗಬಾಧೆ ಅಧಿಕ; ಮನೆಮದ್ದು ಅತ್ಯುತ್ತಮ ಪರಿಹಾರ; ಇಲ್ಲಿದೆ ಬಾಬಾ ರಾಮದೇವ್ ಟಿಪ್ಸ್

ದಿವ್ಯ ಉರಿನಿಲ್ ವಟಿಯ ಪ್ರಯೋಜನಗಳು

  • ಮೂತ್ರಕೋಶ ಮತ್ತು ಮೂತ್ರನಾಳವನ್ನು ಆರೋಗ್ಯಕರವಾಗಿಡಲು ಸಹಾಯಕ
  • ಮರುಕಳಿಸುವ ಯುಟಿಐ ನಿಂದ ಪರಿಹಾರ
  • ದೇಹದಲ್ಲಿನ ರಕ್ತದ ಕೊರತೆಯನ್ನು ನಿವಾರಿಸಲು ಮತ್ತು ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ
  • ಆಯಾಸ, ದೌರ್ಬಲ್ಯ ಮತ್ತು ತಲೆತಿರುಗುವಿಕೆ ಮುಂತಾದ ಸಮಸ್ಯೆಗಳಿಂದ ಪರಿಹಾರ
  • ನೈಸರ್ಗಿಕ ಮತ್ತು ಗಿಡಮೂಲಿಕೆಯಾಗಿರುವುದರಿಂದ, ಇದರ ಅಡ್ಡಪರಿಣಾಮಗಳು ತೀರಾ ಕಡಿಮೆ

ಮುನ್ನಚ್ಚರಿಕೆಗಳು

ಗರ್ಭಿಣಿಯರು ಮತ್ತು ಹಾಲುಣಿಸುವ ಮಹಿಳೆಯರು ವೈದ್ಯರ ಸಲಹೆಯ ಮೇರೆಗೆ ಮಾತ್ರ ಇದನ್ನು ತೆಗೆದುಕೊಳ್ಳಬೇಕು. ಬೇರೆ ಯಾವುದೇ ಗಂಭೀರ ಕಾಯಿಲೆಗೆ ಔಷಧಿ ತೆಗೆದುಕೊಳ್ಳುತ್ತಿರುವವರು ಇದನ್ನು ತೆಗೆದುಕೊಳ್ಳುವ ಮೊದಲು ತಜ್ಞರನ್ನು ಸಂಪರ್ಕಿಸಬೇಕು. ಮಕ್ಕಳಿಗೆ ನೀಡುವ ಮೊದಲು ಆಯುರ್ವೇದ ವೈದ್ಯರ ಸಲಹೆ ಕೇಳಿ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ