ಪ್ರಪಂಚದಾದ್ಯಂತದ ಯುವಕರಿಗೆ ಹೋಲಿಸಿದರೆ ವಯಸ್ಸಾದವರಲ್ಲಿ ವಿಟಮಿನ್ ಬಿ 12 (Vitamin B12) ಕೊರತೆಯು ಹೆಚ್ಚು ಕಾಣಿಸಿಕೊಳ್ಳುತ್ತದೆ. ಕನಿಷ್ಠ 47% ಸಸ್ಯಾಹಾರಿ (Vegetarian) ಭಾರತೀಯರು ವಿಟಮಿನ್ ಬಿ 12 ಕೊರತೆಯನ್ನು ಹೊಂದಿದ್ದಾರೆ. ಪ್ರಮುಖ ಸೂಕ್ಷ್ಮ ಪೋಷಕಾಂಶ (Micronutrients), ವಿಟಮಿನ್ ಬಿ 12 ದೇಹದ ವಿವಿಧ ಕಾರ್ಯಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ನಮ್ಮ ದೇಹವು ನೈಸರ್ಗಿಕವಾಗಿ ಅದನ್ನು ಉತ್ಪಾದಿಸುವುದಿಲ್ಲವಾದ್ದರಿಂದ, ಆಹಾರದ ,ಮೂಲಕವೇ ಇದನ್ನೂ ಸೇವಿಸಬೇಕಾಗಿದೆ. ವಿಟಮಿನ್ ಬಿ 12 ಮುಖ್ಯವಾಗಿ ಡೈರಿ, ಮಾಂಸ ಮತ್ತು ಮೊಟ್ಟೆಗಳಂತಹ ಪ್ರಾಣಿ ಉತ್ಪನ್ನಗಳಲ್ಲಿ ಕಂಡುಬರುತ್ತದೆ. ಸಸ್ಯಾಹಾರಿಗಳು ಅಗತ್ಯವಿರುವ ವಿಟಮಿನ್ ಬಿ 12 ಮಟ್ಟವನ್ನು ಪೂರೈಸಲು ವಿಟಮಿನ್ ಬಿ 12-ಬಲವರ್ಧಿತ ಆಹಾರಗಳು ಅಥವಾ ಪೂರಕಗಳನ್ನು ಸೇವಿಸಬಹುದು.
“ನರ ಕೋಶಗಳನ್ನು ನಿರ್ವಹಿಸಲು ಮತ್ತು ದೇಹದ ಆನುವಂಶಿಕ ಅಂಶವನ್ನು (DNA) ಉತ್ಪಾದಿಸಲು ದೇಹವು B12 ಅನ್ನು ಅವಲಂಬಿಸಿದೆ. B12 ಕೊರತೆಯು ಸಾಮಾನ್ಯವಾಗಿ ಕಾಳಜಿಯ ವಿಷಯವಲ್ಲ ಆದರೆ ಸರಿಯಾದ ಸಮಯದಲ್ಲಿ ನಿಭಾಯಿಸದಿದ್ದಲ್ಲಿ ತೊಂದರೆಯಾಗಬಹುದು. ಈ ರೋಗಲಕ್ಷಣಗಳನ್ನು ಗಮನಿಸುವುದರ ಮೂಲಕ ನೀವು ವಿಟಮಿನ್ ಬಿ 12 ಕೊರತೆಯನ್ನು ಹೊಂದಿದ್ದೀರ ಎಂದು ತಿಳಿಯಬಹುದು ” ಎಂದು ಝೆನ್ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಚೆಂಬೂರ್‌ನ ಕನ್ಸಲ್ಟಿಂಗ್ ಫಿಸಿಶಿಯನ್, ಸಾಂಕ್ರಾಮಿಕ ರೋಗ ತಜ್ಞ ಡಾ.ವಿಕ್ರಾಂತ್ ಷಾ ಹಿಂದೂಸ್ತಾನ್ ಟೈಮ್ಸ್ಗೆ ಹೇಳುತ್ತಾರೆ.
ಡಾ. ಷಾ, ವಿಟಮಿನ್ ಬಿ 12 ಕೊರತೆಯ ಲಕ್ಷಣಗಳನ್ನು ಹಂಚಿಕೊಂಡಿದ್ದಾರೆ:
ಇದನ್ನು ಓದಿ: ನೀವು ಯಾವ ಅಡುಗೆ ಎಣ್ಣೆ ಬಳಸುತ್ತಿದ್ದೀರಾ? ಈ 3 ಎಣ್ಣೆ ಆರೋಗ್ಯಕ್ಕೆ ಹಾನಿಕರ!
“ವೈದ್ಯರು ಸೂಚಿಸಿದಂತೆ ಬಿ 12 ಪೂರಕಗಳನ್ನು ತೆಗೆದುಕೊಳ್ಳಿ ಅಥವಾ ಮೀನು, ಮೊಟ್ಟೆ, ಪಾಲಕ, ಹಾಲು ಮತ್ತು ಡೈರಿಗಳಂತಹ ಆಹಾರವನ್ನು ಸೇವಿಸಿ” ಎಂದು ಡಾ.ಷಾ ಹೇಳುತ್ತಾರೆ.