ವಿಟಮಿನ್ ಡಿ ಕೊರತೆಯ ಲಕ್ಷಣಗಳೇನು?; ಯಾವ ಆಹಾರವನ್ನು ಸೇವಿಸಬೇಕು?

|

Updated on: Nov 08, 2023 | 11:42 AM

Vitamin D Deficiency: ವಿಟಮಿನ್ ಡಿ ಕೊರತೆಗೆ ಎರಡು ಪ್ರಮುಖ ಕಾರಣಗಳಿವೆ. ಆಹಾರದಲ್ಲಿ ಮತ್ತು ಸೂರ್ಯನ ಬೆಳಕಿನ ಮೂಲಕ ಸಾಕಷ್ಟು ವಿಟಮಿನ್ ಡಿ ಪಡೆಯದಿರುವುದು ಒಂದು ಕಾರಣವಾದರೆ, ನಿಮ್ಮ ದೇಹವು ವಿಟಮಿನ್ ಡಿ ಅನ್ನು ಸರಿಯಾಗಿ ಹೀರಿಕೊಳ್ಳದಿರುವುದು ಮತ್ತೊಂದು ಕಾರಣ.

ವಿಟಮಿನ್ ಡಿ ಕೊರತೆಯ ಲಕ್ಷಣಗಳೇನು?; ಯಾವ ಆಹಾರವನ್ನು ಸೇವಿಸಬೇಕು?
ವಿಟಮಿನ್ ಡಿ ಹೇರಳವಾಗಿರುವ ಆಹಾರಗಳು
Image Credit source: iStock
Follow us on

ವಿಟಮಿನ್ ಡಿಯನ್ನು ಸೂರ್ಯನ ಕಿರಣಗಳ ವಿಟಮಿನ್ ಎಂದು ಕರೆಯಲಾಗುತ್ತದೆ. ಕ್ಯಾಲ್ಸಿಯಂ ಸಮತೋಲನ, ಮೂಳೆಯ ಆರೋಗ್ಯ, ರೋಗನಿರೋಧಕ ಶಕ್ತಿ, ಹೃದಯದ ರಕ್ತನಾಳದ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಯ ಕಾರ್ಯನಿರ್ವಹಣೆಯಲ್ಲಿ ವಿಟಮಿನ್ ಡಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ವಿಟಮಿನ್ ಡಿ ಜೀವಸತ್ವವು ಮೂಳೆಗಳ ಆರೋಗ್ಯಕ್ಕೆ ಮತ್ತು ರೋಗನಿರೋಧಕ ಶಕ್ತಿಗೆ ಬಹಳ ಅವಶ್ಯಕವಾಗಿದೆ. ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿರುವ ಜನರ ಮೂಳೆ ಸಾಂದ್ರತೆಯು ಕಡಿಮೆಯಾಗುತ್ತಾ ಹೋಗುತ್ತದೆ.

ಜಾಗತಿಕವಾಗಿ ಸುಮಾರು 100 ಜನರು ವಿಟಮಿನ್ ಡಿಯಿಂದ ಬಳಲುತ್ತಿದ್ದಾರೆ. ವಿಟಮಿನ್ ಡಿ ಕೊರತೆಯು ಮಧುಮೇಹ, ಸಂಧಿವಾತ, ಮೂಳೆಗಳ ಸವಕಳಿ ಮತ್ತು ಕ್ಯಾನ್ಸರ್‌ನಂತಹ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದೆ. ಸೂರ್ಯನ ಬೆಳಕಿಗೆ ಮೈಯನ್ನು ಒಡ್ಡಿಕೊಳ್ಳದೆ ಇರುವುದು ವಿಟಮಿನ್ ಡಿ ಕಡಿಮೆಯಾಗಲು ಮುಖ್ಯ ಕಾರಣ.

ವಿಟಮಿನ್ ಡಿ ಕೊರತೆ ಆಸ್ಟಿಯೊಪೊರೋಸಿಸ್ ಮತ್ತು ಮೂಳೆಮುರಿತದ ಅಪಾಯವನ್ನು ಹೆಚ್ಚಿಸುತ್ತದೆ. ಮಕ್ಕಳಲ್ಲಿ ವಿಟಮಿನ್ ಡಿ ಕೊರತೆಯು ರಿಕೆಟ್ಸ್ ಕಾಯಿಲೆಗಳನ್ನು ಉಂಟುಮಾಡಬಹುದು. ರಿಕೆಟ್ಸ್ ಅಪರೂಪದ ಕಾಯಿಲೆಯಾಗಿದ್ದು, ಅದು ಮೂಳೆ ರಚನೆ ಮತ್ತು ಅಂಗರಚನೆಯ ಮೇಲೆ ಪರಿಣಾಮ ಬೀರುತ್ತದೆ. ವಿಟಮಿನ್ ಡಿ ಕೊರತೆಯು ಹೃದಯದ ಆರೋಗ್ಯಕ್ಕೂ ಅಪಾಯಕಾರಿ.

ಇದನ್ನೂ ಓದಿ: ವಿಟಮಿನ್ ಡಿ ಕೊರತೆಯಿಂದ ಸ್ತನ ಕ್ಯಾನ್ಸರ್​ ಬರುತ್ತಾ?

ದೀರ್ಘಕಾಲದ ಹೃದಯಕ್ಕೆ ಸಂಬಂಧಿಸಿದ ರೋಗಗಳಿಂದ ಬಳಲುತ್ತಿರುವ ಹೆಚ್ಚಿನ ಜನರಲ್ಲಿ ವಿಟಮಿನ್ ಡಿ ಕೊರತೆ ಕಂಡುಬರುತ್ತದೆ. ಆಹಾರದಲ್ಲಿ ವಿಟಮಿನ್ ಡಿ ಪ್ರಮಾಣವನ್ನು ಹೆಚ್ಚಿಸುವ ಮೂಲಕ, ನೀವು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ವಿಟಮಿನ್ ಡಿ ಕೊರತೆಯು ವಿಶೇಷವಾಗಿ ಸ್ತನ ಕ್ಯಾನ್ಸರ್, ರಕ್ತನಾಳದ ಕ್ಯಾನ್ಸರ್, ಅನ್ನನಾಳ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್​ಗೆ ಕಾರಣವಾಗಬಹುದು.

ವಿಟಮಿನ್ ಡಿ ಕೊರತೆಯ ಲಕ್ಷಣಗಳೇನು?:

ಆಯಾಸ

ಮೂಳೆ ನೋವು

ಕೂದಲು ಉದುರುವಿಕೆ

ಸ್ನಾಯು ದೌರ್ಬಲ್ಯ, ಸ್ನಾಯು ನೋವು ಅಥವಾ ಸ್ನಾಯು ಸೆಳೆತ

ಖಿನ್ನತೆಯಂತಹ ಮೂಡ್ ಬದಲಾವಣೆಗಳು

ವಿಟಮಿನ್ ಡಿ ಕೊರತೆಗೆ ಎರಡು ಪ್ರಮುಖ ಕಾರಣಗಳಿವೆ. ಆಹಾರದಲ್ಲಿ ಮತ್ತು ಸೂರ್ಯನ ಬೆಳಕಿನ ಮೂಲಕ ಸಾಕಷ್ಟು ವಿಟಮಿನ್ ಡಿ ಪಡೆಯದಿರುವುದು ಒಂದು ಕಾರಣವಾದರೆ, ನಿಮ್ಮ ದೇಹವು ವಿಟಮಿನ್ ಡಿ ಅನ್ನು ಸರಿಯಾಗಿ ಹೀರಿಕೊಳ್ಳದಿರುವುದು ಮತ್ತೊಂದು ಕಾರಣ.

ಇದನ್ನೂ ಓದಿ: Bone Health: ನಿಮ್ಮ ಮೂಳೆಗಳನ್ನು ಗಟ್ಟಿಗೊಳಿಸುವ ಆಹಾರಗಳಿವು

ವಿಟಮಿನ್ ಡಿ ಹೇರಳವಾಗಿರುವ ಆಹಾರಗಳು:

ಮೀನಿನ ಎಣ್ಣೆ

ಸಾಲ್ಮನ್ ಮೀನು

ಕತ್ತಿ ಮೀನು

ಕಿತ್ತಳೆ ರಸ

ಡೈರಿ ಉತ್ಪನ್ನಗಳು

ಮೊಟ್ಟೆಯ ಹಳದಿ ಭಾಗ

ಗಿಣ್ಣು

ಗೋವಿನ ಲಿವರ್

ಅಣಬೆಗಳು

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ