World Radiography Day 2023: ವಿಶ್ವ ರೇಡಿಯಾಗ್ರಫಿ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ದಿನದ ಇತಿಹಾಸ ತಿಳಿಯಿರಿ

ರೋಗಿಗಳ ಆಂತರಿಕ ಆರೋಗ್ಯ ಸಮಸ್ಯೆಗಳನ್ನು ಪತ್ತೆ ಹಚ್ಚಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ಸಹಕಾರಿಯಾದ ಎಕ್ಸ್-ರೇ ಹಾಗೂ ಇತ್ಯಾದಿ ರೇಡಿಯೋಗ್ರಫಿ ಸಾಧನಗಳ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ನವೆಂಬರ್ 08 ರಂದು ಅಂತರಾಷ್ಟ್ರೀಯ ರೇಡಿಯಾಗ್ರಫಿ ದಿನವನ್ನು ಆಚರಿಸಲಾಗುತ್ತದೆ. ಈ ಆಚರಣೆಯ ಇತಿಹಾಸ ಮತ್ತು ಪ್ರಾಮುಖ್ಯತೆಯನ್ನು ತಿಳಿಯೋಣ.

World Radiography Day 2023: ವಿಶ್ವ ರೇಡಿಯಾಗ್ರಫಿ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ದಿನದ ಇತಿಹಾಸ ತಿಳಿಯಿರಿ
World Radiography Day
Follow us
| Updated By: ಅಕ್ಷತಾ ವರ್ಕಾಡಿ

Updated on: Nov 07, 2023 | 6:32 PM

ರೇಡಿಯಾಗ್ರಫಿ (Radiography) ಎಂಬ ಹೆಸರನ್ನು ಕೇಳಿದಾಗ ಹೆಚ್ಚಿನವರಿಗೆ ಎಕ್ಸ್-ರೇ ಎಂಬ ಪದ ತಕ್ಷಣ ನೆನಪಾಗುತ್ತದೆ. ಕೆಲವು ವರ್ಷಗಳ ಹಿಂದೆ ಮನುಷ್ಯನ ದೇಹದೊಳಗಿನ ಕಾಯಿಲೆಗಳನ್ನು ಅಥವಾ ಸಮಸ್ಯೆಗಳನ್ನು ಪತ್ತೆಹಚ್ಚಲು ಕೇವಲ ಎಕ್ಸ್-ರೇ ಯನ್ನು ಬಳಸಲಾಗುತ್ತಿತ್ತು. ಪ್ರಸ್ತುತ ಆಧುನಿಕ ಕಾಲದಲ್ಲಿ ವೈದ್ಯಕೀಯ ವಿಜ್ಞಾನದಲ್ಲಿನ ಹಲವಾರು ಬದಲಾವಣೆಗಳಿಂದಾಗಿ ಅಲ್ಟ್ರಾಸೌಂಡ್, ಎಂ.ಐ.ಆರ್, ಆಂಜಿಯೋಗ್ರಫಿಯಂತಹ ರೇಡಿಯಾಗ್ರಫಿ ತಂತ್ರಜ್ಞಾನಗಳು ಬಂದಿವೆ. ಈ ಎಲ್ಲಾ ರೇಡಿಯಾಗ್ರಫಿ ತಂತ್ರಜ್ಞಾನಗಳು ಅಲ್ಪಾವಧಿಯೊಳಗೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚಲು ವೈದ್ಯರಿಗೆ ಸಹಾಯ ಮಾಡುವ ಮಹತ್ವದ ರೋಗನಿರ್ಣಯ ಸಾಧನಗಳಾಗಿವೆ. ರೇಡಿಯಾಗ್ರಫಿ ಸಾಧನಗಳ ಮೂಲಕ ದೇಹದೊಳಗಿನ ಸಮಸ್ಯೆಯನ್ನು ಕ್ಷಣದೊಳಗೆ ಪತ್ತೆ ಹಚ್ಚಿ ರೋಗಿಗೆ ಸೂಕ್ತವಾದ ಚಿಕಿತ್ಸೆಯನ್ನು ನೀಡಲಾಗುತ್ತದೆ. ಹೀಗೆ ರೇಡಿಯಾಗ್ರಫಿ ಇಮೇಜಿಂಗ್ ಮತ್ತು ಚಿಕಿತ್ಸೆಯ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿವರ್ಷ ನವೆಂಬರ್ 08 ರಂದು ವಿಶ್ವ ರೇಡಿಯಾಗ್ರಫಿ ದಿನವನ್ನು ಆಚರಿಸಲಾಗುತ್ತದೆ

ವಿಶ್ವ ರೇಡಿಯಾಗ್ರಫಿ ದಿನದ ಇತಿಹಾಸ:

ನವೆಂಬರ್ 08, 1895 ರಂದು ನೋಬೆಲ್ ಪ್ರಶಸ್ತಿ ಪುರಸ್ಕೃತ ವಿಲ್ಹೆಲ್ಮ್ ಕಾನ್ರಾಡ್ ರಾಂಟ್ಜೆನ್ ಅವರು ಎಕ್ಸ್-ರೆ ತಂತ್ರಜ್ಞಾನದ ಆವಿಷ್ಕಾರವನ್ನು ಮಾಡುತ್ತಾರೆ. ಇವರು ಕಂಡುಹಿಡಿದ ಎಕ್ಸ್-ರೇ ತಂತ್ರಜ್ಞಾನವು ವೈದ್ಯಕೀಯ ಕ್ಷೇತ್ರದಲ್ಲಿ ವಹಿಸಿದ ಮಹತ್ತರ ಪಾತ್ರದ ಬಗ್ಗೆ ಎಲ್ಲರಿಗೂ ತಿಳಿದಿದೆ. ಈ ನಿಟ್ಟಿನಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ರೇಡಿಯಾಗ್ರಫಿ ಸಾಧನಗಳು ಹಾಗೂ ವಿಲ್ಹೆಲ್ಮ್ ಕಾನ್ರಾಡ್ ರಾಂಟ್ಜೆನ್ ಅವರ ಕೊಡುಗೆಯನ್ನು ಸ್ಮರಿಸಲು ಯುರೋಪಿಯನ್ ಸೊಸೈಟಿ ಆಫ್ ರೇಡಿಯಾಲಜಿ, ರೇಡಿಯಾಲಾಜಿಕಲ್ ಸೊಸೈಟಿ ಆಫ್ ನಾರ್ತ್ ಅಮೇರಿಕಾ ಮತ್ತು ಅಮೇರಿಕನ್ ಕಾಲೇಜ್ ಆಫ್ ರೇಡಿಯಾಲಜಿ ಸಂಸ್ಥೆಯ ಸಹಯೋಗದಲ್ಲಿ ವಿಶ್ವ ರೇಡಿಯಾಗ್ರಫಿ (World Radiography Day) ದಿನವನ್ನು ಆಚರಿಸುವ ಉಪಕ್ರಮವನ್ನು ತೆಗೆದುಕೊಳ್ಳಲಾಯಿತು. ಈ ವಿಶೇಷ ದಿನವನ್ನು ಮೊದಲ ಬಾರಿಗೆ ನವೆಂಬರ್ 08, 2012 ರಲ್ಲಿ ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ವಿಶ್ವ ರೇಡಿಯಾಗ್ರಫಿ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ಮೆದುಳು ಜ್ವರ ಎಂದರೇನು? ಹೇಗೆ ಬರುತ್ತದೆ? ಲಕ್ಷಣ ಮತ್ತು ಚಿಕಿತ್ಸೆ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ

ವಿಶ್ವ ರೇಡಿಯಾಗ್ರಫಿ ದಿನದ ಪ್ರಾಮುಖ್ಯತೆ:

ಎಕ್ಸ್ ರೇ, ಎಂ.ಆರ್.ಐ ಮತ್ತು ಅಲ್ಟ್ರಾಸೌಂಡ್ ನಂತಹ ರೇಡಿಯಾಗ್ರಫಿ ಸಾಧನಗಳು ರೋಗದ ಮೂಲ ಕಾರಣಗಳನ್ನು ಕಂಡುಹಿಡಿಯಲು ಬಹಳ ಸಹಾಯ ಮಾಡುತ್ತವೆ ಮತ್ತು ಇದರಿಂದ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆಯನ್ನು ನೀಡಬಹುದಾಗಿದೆ. ಹೀಗೆ ಈ ರೇಡಿಯಾಗ್ರಫಿ ಸಾಧನಗಳ ಪ್ರಯೋಜನಗಳು ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸುವುದು ವಿಶ್ವ ರೇಡಿಯಾಗ್ರಫಿ ದಿನವನ್ನು ಆಚರಿಸುವ ಮುಖ್ಯ ಉದ್ದೇಶವಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತಾಜಾ ಸುದ್ದಿ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ