AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Walnuts vs Almonds: ಮೆದುಳಿನ ಆರೋಗ್ಯ ಕಾಪಾಡಲು ವಾಲ್ನಟ್, ಬಾದಾಮಿ ಇವುಗಳಲ್ಲಿ ಯಾವುದು ಒಳ್ಳೆಯದು ತಿಳಿದುಕೊಳ್ಳಿ

ವಾಲ್ನಟ್ ಮತ್ತು ಬಾದಾಮಿ ಎರಡೂ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಆದರೆ ವಾಲ್ನಟ್ಗಳಲ್ಲಿ ಒಮೆಗಾ -3 ಮತ್ತು ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿರುವುದರಿಂದ, ಅವುಗಳನ್ನು ಇನ್ನೂ ಉತ್ತಮವೆಂದು ಪರಿಗಣಿಸಬಹುದು. ವಾಲ್ನಟ್ ಮೆಮೊರಿ ಮತ್ತು ಮೆದುಳಿನ ಸಾಮರ್ಥ್ಯಗಳನ್ನು ಸುಧಾರಿಸುತ್ತದೆ. ಆದರೆ ಬಾದಾಮಿ ಮೆದುಳಿನ ಕೋಶಗಳ ರಕ್ಷಣೆ ಮತ್ತು ನರಪ್ರೇಕ್ಷಕ ಕಾರ್ಯಕ್ಕಾಗಿ ವಿಟಮಿನ್ ಇ ಮತ್ತು ಮೆಗ್ನೀಸಿಯಮ್ ಅನ್ನು ಒದಗಿಸುತ್ತದೆ. ಹಾಗಾದರೆ ಮೆದುಳಿನ ಆರೋಗ್ಯ ಕಾಪಾಡಲು ಯಾವುದರ ಸೇವನೆ ಮಾಡಬೇಕು? ಇವೆರಡರಲ್ಲಿ ಯಾವುದು ಉತ್ತಮ ಎಂಬುದನ್ನು ತಿಳಿದುಕೊಳ್ಳಿ.

Walnuts vs Almonds: ಮೆದುಳಿನ ಆರೋಗ್ಯ ಕಾಪಾಡಲು ವಾಲ್ನಟ್, ಬಾದಾಮಿ ಇವುಗಳಲ್ಲಿ ಯಾವುದು ಒಳ್ಳೆಯದು ತಿಳಿದುಕೊಳ್ಳಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Feb 12, 2025 | 2:35 PM

Share

ವಾಲ್ನಟ್ ಮತ್ತು ಬಾದಾಮಿ ಎರಡೂ ಕೂಡ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್ಗಳು, ಜೀವಸತ್ವಗಳು ಮತ್ತು ಖನಿಜಗಳು ಸಮೃದ್ದವಾಗಿದೆ. ಆದರೂ ಕೂಡ ಇವು ಕೆಲವೊಂದು ವಿಷಯಗಳಲ್ಲಿ ಸ್ವಲ್ಪ ಭಿನ್ನವಾಗಿದೆ. ಇವೆರಡೂ ಪೋಷಕಾಂಶಗಳ ಸಾಂದ್ರತೆಯಲ್ಲಿ ಸಮಾನವಾಗಿದ್ದರೂ ಅವುಗಳ ರಚನೆಯಲ್ಲಿ ವ್ಯತ್ಯಾಸಗಳಿವೆ. ವಾಲ್ನಟ್ಗಳು ಅಗತ್ಯ ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿವೆ ಇವು ಮೆದುಳಿಗೆ ತುಂಬಾ ಒಳ್ಳೆಯದು. ವಾಲ್ನಟ್ನಲ್ಲಿ ವಿಟಮಿನ್ ಇ ಕಡಿಮೆ ಇದೆ. ಇನ್ನು ಬಾದಾಮಿಯಲ್ಲಿ ಹೆಚ್ಚಿನ ಪ್ರೋಟೀನ್ ಮತ್ತು ಹೆಚ್ಚು ಮೆಗ್ನೀಸಿಯಮ್ ಅಂಶವಿದ್ದು ಇದು ಮೆದುಳಿನ ಕೋಶಗಳ ರಕ್ಷಣೆ ಮಾಡುತ್ತದೆ. ಹಾಗಾದರೆ ಮೆದುಳಿನ ಆರೋಗ್ಯ ಕಾಪಾಡಲು ಯಾವುದರ ಸೇವನೆ ಮಾಡಬೇಕು? ಇವೆರಡರಲ್ಲಿ ಯಾವುದು ಉತ್ತಮ ಎಂಬುದನ್ನು ತಿಳಿದುಕೊಳ್ಳಿ.

ಬಾದಾಮಿಯಲ್ಲಿ ಕ್ಯಾಲೊರಿಗಳು ಮತ್ತು ಕೊಬ್ಬುಗಳು ಕಡಿಮೆ ಇದ್ದರೂ, ವಾಲ್ನಟ್ಗಳಲ್ಲಿ ಆರೋಗ್ಯಕರ ಪಾಲಿಅನ್ಸಾಚುರೇಟೆಡ್ ಕೊಬ್ಬುಗಳು ಹೆಚ್ಚಾಗಿರುತ್ತವೆ. ಹಾಗಾಗಿ ಇವೆರಡೂ ಒಟ್ಟಾರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ವಾಲ್ನಟ್ಗಳು ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಅದಲ್ಲದೆ ವಾಲ್ನಟ್ನಲ್ಲಿ ಒಮೆಗಾ -3 ಗಳು ಹೆಚ್ಚಾಗಿರುತ್ತವೆ. ಬಾದಾಮಿಯಲ್ಲಿ ವಿಟಮಿನ್ ಇ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ವಾಲ್ನಟ್ ಹೆಚ್ಚಿನ ಉತ್ಕರ್ಷಣ ನಿರೋಧಕಗಳು ಮತ್ತು ಪಾಲಿಫಿನಾಲ್ಗಳನ್ನು ಒದಗಿಸುತ್ತವೆ. ಅಲ್ಲದೆ ವಾಲ್ನಟ್ ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

ವಾಲ್ನಟ್ ಆರೋಗ್ಯಕ್ಕೆ ಏಕೆ ಒಳ್ಳೆಯದು?

  • ಇದು ಒಮೆಗಾ -3 ಕೊಬ್ಬಿನಾಮ್ಲಗಳಿಂದ ಹೇರಳವಾಗಿದೆ. ವಾಲ್ನಟ್ನಲ್ಲಿ ಎಎಲ್ಎ ಸಮೃದ್ಧವಾಗಿದೆ. ಇದು ಸಸ್ಯ ಆಧಾರಿತ ಒಮೆಗಾ -3 ಕೊಬ್ಬಿನಾಮ್ಲವಾಗಿದೆ. ಇದು ಮೆದುಳಿನ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ.
  • ಸಾಮಾನ್ಯವಾಗಿ ವಯಸ್ಸು ಹೆಚ್ಚಾದಂತೆ ಜ್ಞಾಪಕ ಶಕ್ತಿ ಕಡಿಮೆಯಾಗುತ್ತದೆ ಆದರೆ ವಾಲ್ನಟ್ ಸೇವನೆ ಮಾಡುವುದರಿಂದ ಅದನ್ನು ತಡೆಯಬಹುದಾಗಿದೆ. ಒಮೆಗಾ -3 ಗಳು ಸ್ಮರಣೆ, ಕಲಿಕೆ ಮತ್ತು ಮಾನವ ಮೆದುಳಿನ ಕಾರ್ಯವನ್ನು ಸುಧಾರಿಸುತ್ತವೆ ಎಂದು ಕೆಲವು ಅಧ್ಯಯನಗಳಿಂದ ಸಾಬೀತಾಗಿದೆ.
  • ಅಲ್ಲದೆ ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡಲು ಇದನ್ನು ಬಳಸಲಾಗುತ್ತದೆ.
  • ವಾಲ್ನಟ್ ಹೃದಯದ ಆರೋಗ್ಯವನ್ನು ಬಲಪಡಿಸುತ್ತದೆ. ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ರಾತ್ರಿ ಊಟ ತಡವಾಗಿ ಮಾಡುತ್ತಿದ್ದರೆ ಈ ವಿಷಯಗಳನ್ನು ನೀವು ತಿಳಿದುಕೊಳ್ಳಬೇಕು

ಇದು ಮೆದುಳಿನ ರಚನೆಯನ್ನು ಸುಲಭಗೊಳಿಸುತ್ತದೆ.

ವಾಲ್ನಟ್ನಲ್ಲಿರುವ ಪಾಲಿಫಿನಾಲ್ಗಳು ಮತ್ತು ಆರೋಗ್ಯಕರ ಕೊಬ್ಬುಗಳು ನರಕೋಶಗಳ ಕಾರ್ಯನಿರ್ವಹಣೆ ಮತ್ತು ಸಂವಹನವನ್ನು ಬೆಂಬಲಿಸುತ್ತವೆ. ಆದ್ದರಿಂದ, ಸ್ಮರಣೆ ಮತ್ತು ಮೆದುಳಿನ ಕಾರ್ಯ ಚಟುವಟಿಕೆಗಳು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.

ಮೆದುಳಿನ ಆರೋಗ್ಯಕ್ಕೆ ಬಾದಾಮಿ ಏಕೆ ಒಳ್ಳೆಯದು?

  • ಬಾದಾಮಿಯಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದು ಮೆದುಳಿನ ಕೋಶಗಳನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಜ್ಞಾಪಕ ಶಕ್ತಿ ನಷ್ಟವನ್ನು ಕಡಿಮೆ ಮಾಡುತ್ತದೆ.
  • ಬಾದಾಮಿಯಲ್ಲಿರುವ ಮೆಗ್ನೀಸಿಯಮ್ ನರಪ್ರೇಕ್ಷಕ ಚಟುವಟಿಕೆಗೆ ಉತ್ತಮವಾಗಿದೆ. ಇದು ಮೆದುಳಿನಲ್ಲಿ ಮಾಹಿತಿಯ ಸರಿಯಾದ ಹರಿವು, ನೆನೆಪಿನ ಶಕ್ತಿ ಕುಂದದಂತೆ ನೋಡಿಕೊಳ್ಳುತ್ತದೆ.
  • ಬಾದಾಮಿ ಸೇವನೆ ಏಕಾಗ್ರತೆ ಮತ್ತು ಆಲೋಚನೆಯ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ. ಬಾದಾಮಿಯಲ್ಲಿರುವ ಪ್ರೋಟೀನ್, ಆರೋಗ್ಯಕರ ಕೊಬ್ಬು ಮತ್ತು ಫೈಬರ್ ದೀರ್ಘಕಾಲದ ವರೆಗೆ ಶಕ್ತಿಯನ್ನು ಒದಗಿಸುತ್ತದೆ. ಇದು ಮೆದುಳನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ.
  • ಬಾದಾಮಿಯಲ್ಲಿ ರೈಬೋಫ್ಲೇವಿನ್ (ವಿಟಮಿನ್ ಬಿ 2) ಮತ್ತು ಎಲ್- ಕಾರ್ನಿಟೈನ್ ಇರುತ್ತದೆ. ಇವೆರಡೂ ಮೆದುಳಿನ ಚಟುವಟಿಕೆಯನ್ನು ಸುಧಾರಿಸುವುದಲ್ಲದೆ, ಸ್ಮರಣ ಶಕ್ತಿಯ ನಷ್ಟವನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಗಳಿಂದ ಬಹಿರಂಗಗೊಂಡಿದೆ.

ವಾಲ್ನಟ್ ಮತ್ತು ಬಾದಾಮಿ ಎರಡೂ ಮೆದುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಎಂದು ಸಾಬೀತಾಗಿದೆ. ವಾಲ್ನಟ್ಗಳು ಹೆಚ್ಚಿನ ಮಟ್ಟದ ಒಮೆಗಾ -3, ಉತ್ಕರ್ಷಣ ನಿರೋಧಕಗಳು ಮತ್ತು ಸ್ಮರಣ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅದರ ಹೊರತಾಗಿಯೂ ಇವೆರಡನ್ನೂ ದಿನನಿತ್ಯ ಸೇವನೆ ಮಾಡುವುದರಿಂದ ಮೆದುಳಿನ ಕಾರ್ಯನಿರ್ವಹಣೆಗೆ ಅಗತ್ಯವಾಗಿ ಬೇಕಾಗುವ ಮಿಶ್ರ ಪೌಷ್ಠಿಕಾಂಶವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ನಿಮ್ಮ ಮೆದುಳನ್ನು ತೀಕ್ಷ್ಣವಾಗಿ ಮತ್ತು ಆರೋಗ್ಯಕರವಾಗಿಡಲು ಒಟ್ಟಾರೆ ಆರೋಗ್ಯಕರ ಆಹಾರದ ಭಾಗವಾಗಿ ಪ್ರತಿದಿನ ವಾಲ್ನಟ್ ಮತ್ತು ಬಾದಾಮಿಯನ್ನು ಸೇವಿಸುವುದು ಬಹಳ ಒಳ್ಳೆಯದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:22 pm, Wed, 12 February 25