ತೆಳ್ಳಗೆ, ಆರೋಗ್ಯಯುತವಾಗಿ ಕಾಣಬೇಕೆಂಬ ಆಸೆ ಪುರುಷರು, ಮಹಿಳೆಯರಿಬ್ಬರಿಗೂ ಇರುತ್ತದೆ. ಬೊಜ್ಜು (Fat) ಹೆಚ್ಚಾದರೆ ಆರೋಗ್ಯವಾಗಿರಲು ಸಾಧ್ಯವಿಲ್ಲ. ತೂಕ ಕಡಿಮೆ ಮಾಡಿಕೊಳ್ಳಲು ಬಹುತೇಕರು ಮೊಟ್ಟೆಯನ್ನು ತಿನ್ನುತ್ತಾರೆ. ಆದರೆ, ಮೊಟ್ಟೆಯಷ್ಟೇ ಪನೀರ್‌ನಲ್ಲಿ ಕೂಡ ಪೌಷ್ಠಿಕಾಂಶ ಇರುತ್ತದೆ. ಸಸ್ಯಾಹಾರಿಗಳಿಗೆ ತೂಕವನ್ನು ಕಳೆದುಕೊಳ್ಳಲು ಇರುವ ಉತ್ತಮ ಆಹಾರ ಪದಾರ್ಥವೆಂದರೆ ಪನೀರ್. ಪ್ರೋಟೀನ್ (Protein) ಸೇವಿಸುವ ಮೂಲಗಳಲ್ಲಿ ಪನೀರ್ ಕೂಡ ಒಂದು. ಮಾಂಸಾಹಾರಿಗಳು ಪ್ರೋಟೀನ್ಗಾಗಿ ಮೊಟ್ಟೆ ಮತ್ತು ಪನೀರ್ ಎರಡನ್ನೂ ಸೇವಿಸುವ ಅವಕಾಶ ಹೊಂದಿದ್ದಾರೆ. ಪನೀರ್ ಮತ್ತು ಮೊಟ್ಟೆಗಳು ನಮ್ಮ ದೇಹಕ್ಕೆ ಪ್ರೋಟೀನ್ ಒದಗಿಸುತ್ತವೆ ಮತ್ತು ವೇಗವಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಮೊಟ್ಟೆ ಮತ್ತು ಪನೀರ್ ಅನ್ನು ಬೇಯಿಸುವುದು ಸುಲಭ. ಇವುಗಳನ್ನು ವಿವಿಧ ಆಹಾರ ಪದಾರ್ಥಗಳಲ್ಲಿ ಪನೀರ್ ಮತ್ತು ಮೊಟ್ಟೆಯನ್ನು ಸೇರಿಸಿ ಸೇವಿಸಬಹುದು.
ಮೊಟ್ಟೆ ಮತ್ತು ಪನೀರ್ ಎರಡು ಸಹ ಆರೋಗ್ಯಕ್ಕೆ ಉತ್ತಮ ಪೋಷಣೆಯನ್ನು ನೀಡುತ್ತವೆ. ಮಕ್ಕಳ ಬೆಳವಣಿಗೆಗೆ ಹಾಗೂ ಆರೋಗ್ಯ ವೃದ್ಧಿಗೆ ಈ ಎರಡು ಆಹಾರ ಪದಾರ್ಥಗಳು ಅತ್ಯುತ್ತಮ ಆಯ್ಕೆ. ಮೊಟ್ಟೆ ಸಮೃದ್ಧವಾದ ಖನಿಜ ಹಾಗೂ ಜೀವಸತ್ವಗಳನ್ನು ಒಳಗೊಂಡಿದೆ. ಹಾಗೇ, ಪನೀರ್ ಅಧಿಕ ಪ್ರಮಾಣದ ಕ್ಯಾಲ್ಷಿಯಂ, ಪ್ರೋಟೀನ್ ಹಾಗೂ ಆರೋಗ್ಯಕರ ಕೊಬ್ಬಿನಾಂಶವನ್ನು ಒಳಗೊಂಡಿದೆ.
ದೇಹದ ತೂಕವನ್ನು ಇಳಿಸಲು ಅಥವಾ ಸ್ನಾಯುಗಳ ವೃದ್ಧಿಗೆ ಪ್ರಯತ್ನಿಸುತ್ತಿದ್ದವರಿಗೆ ಮೊಟ್ಟೆ ಮತ್ತು ಪನೀರ್ ಅತ್ಯುತ್ತಮವಾದ ಆಯ್ಕೆ. ನಮ್ಮ ದೇಹದಲ್ಲಿ ಇರುವ ಆರೋಗ್ಯಕರವಾದ ಕೊಬ್ಬು ಹಾಗೂ ಪ್ರೋಟೀನ್ ದೇಹದ ಆರೋಗ್ಯ ಕಾಪಾಡಲು ಪ್ರಮುಖವಾದ ಸಂಗತಿಯಾಗಿರುತ್ತವೆ. ಇವು ಮೂಳೆ, ಸ್ನಾಯು ಹಾಗೂ ದೇಹದ ಅಂಗಾಂಗಗಳ ನಿರ್ಮಾಣಕ್ಕೆ ಉತ್ತಮ ರೀತಿಯಲ್ಲಿ ಸಹಾಯ ಮಾಡುವುದು. ಮೊಟ್ಟೆ ಮತ್ತು ಪನೀರ್ ಎರಡರಲ್ಲಿಯೂ ಉತ್ತಮ ಮಟ್ಟದ ಕ್ಯಾಲ್ಸಿಯಂ, ಬಿ12 ಮತ್ತು ಕಬ್ಬಿಣಾಂಶ ಸೇರಿದಂತೆ ಇನ್ನಿತರ ಆರೋಗ್ಯಕರ ಪೋಷಕಾಂಶಗಳಿವೆ.
ಸಸ್ಯಹಾರಿಗಳಿಗೆ ಪನೀರ್ ಅತ್ಯುತ್ತಮ ಪ್ರೋಟೀನ್ ಅನ್ನು ಒದಗಿಸುತ್ತದೆ. ಮಾಂಸಾಹಾರಿಗಳು ಮೊಟ್ಟೆ ಹಾಗೂ ಪನೀರ್ ಎರಡನ್ನೂ ಸಹ ಬಳಸುವುದರ ಮೂಲಕ ಅಗತ್ಯ ಪ್ರೋಟೀನ್ ಅನ್ನು ಪಡೆದುಕೊಳ್ಳಬಹುದು. ಮೊಟ್ಟೆಯು ಕಡಿಮೆ ಬೆಲೆಯಲ್ಲಿ ದೊರೆಯುವ ಅತ್ಯುತ್ತಮವಾದ ಆಹಾರ ವಸ್ತುವಾಗಿದೆ. ಇದರಲ್ಲಿ ಸಮೃದ್ಧವಾದ ಪ್ರೋಟೀನ್‍ಗಳಿವೆ. ತೂಕ ಇಳಿಸಲು ಬಯಸುವವರು ಇದನ್ನು ಸೇವಿಸುವುದರ ಮೂಲಕ ಹಸಿವನ್ನು ದೀರ್ಘ ಸಮಯ ನಿಯಂತ್ರಿಸಬಹುದು. ಇದನ್ನು ಸಂಪೂರ್ಣ ಆಹಾರ ಎಂದು ಸಹ ಕರೆಯಲಾಗುವುದು. ಬೇಯಿಸಿದ ಒಂದು ಮೊಟ್ಟೆಯಲ್ಲಿ 5.5 ಗ್ರಾಂ. ನಷ್ಟು ಪ್ರೋಟೀನ್, 24.6 ಎಂಜಿ ಕ್ಯಾಲ್ಸಿಯಂ, 0.8 ಎಂಜಿ ಕಬ್ಬಿಣಾಂಶ, 4.2 ಗ್ರಾಂ ಕೊಬ್ಬಿನಾಂಶ ಮತ್ತು 5.3 ಎಂಜಿ ಮ್ಯಾಗ್ನೀಷಿಯಂ ಇರುತ್ತದೆ.
ಪನ್ನೀರ್ ಅಥವಾ ಕಾಟೇಜ್ ಚೀಸ್ ಜನಪ್ರಿಯ ಡೈರಿ ಉತ್ಪನ್ನಗಳಲ್ಲಿ ಒಂದು. ಮೊಟ್ಟೆಯಂತೆಯೇ ಪನೀರ್ ಅನ್ನು ಸಹ ವಿವಿಧ ಆಹಾರ ಪದಾರ್ಥಗಳಲ್ಲಿ ಸೇರಿಸಿಕೊಳ್ಳಬಹುದು. ಪನೀರ್ ಸ್ಯಾಂಡ್‍ವಿಚ್, ಕೆಲವು ಗ್ರೇವಿಗಳಲ್ಲೂ ಪನೀರ್ ಬಳಸಬಹುದು. 40 ಗ್ರಾಂ ನಷ್ಟು ಪನೀರ್ ಅಥವಾ ಕಾಟೇಜ್ ಚೀಸ್ ಅಲ್ಲಿ 7.54 ಗ್ರಾಂ. ಪ್ರೋಟೀನ್, 5.88 ಗ್ರಾಂ ಕೊಬ್ಬು, 4.96 ಗ್ರಾಂ ಕಾರ್ಬ್, 37.32 ಮೈಕ್ರೋ ಗ್ರಾಂ ಫೋಲೇಟಸ್, 190.4 ಮಿ.ಗ್ರಾಂ ಕ್ಯಾಲ್ಸಿಯಂ ಇರುತ್ತದೆ. ದೇಹವನ್ನು ಸದೃಢವಾಗಿ ಮತ್ತು ಆರೋಗ್ಯಕರವಾಗಿಡಲು, ಪ್ರೋಟೀನ್ ಪ್ರಮುಖ ಪಾತ್ರ ವಹಿಸುತ್ತದೆ. ಇದು ನಿಮಗೆ ಫಿಟ್ ಆಗಿ ಕಾಣಲು ಸಹಾಯ ಮಾಡುತ್ತದೆ.
ಮೊಟ್ಟೆಯ ಪೌಷ್ಟಿಕಾಂಶದ ವಿಷಯಗಳು ಇಲ್ಲಿವೆ:
1 ಬೇಯಿಸಿದ ಮೊಟ್ಟೆಯ ತೂಕ 44 ಗ್ರಾಂ
ಪ್ರೋಟೀನ್: 5.5 ಗ್ರಾಂ
ಒಟ್ಟು ಕೊಬ್ಬು: 4.2 ಗ್ರಾಂ
ಕ್ಯಾಲ್ಸಿಯಂ: 24.6 ಮಿ. ಗ್ರಾಂ
ಕಬ್ಬಿಣ: 0.8 ಮಿ. ಗ್ರಾಂ
ಮೆಗ್ನೀಸಿಯಮ್: 5.3 ಮಿ. ಗ್ರಾಂ
ರಂಜಕ: 86.7 ಮಿ. ಗ್ರಾಂ
ಪೊಟ್ಯಾಸಿಯಮ್: 60.3 ಮಿ. ಗ್ರಾಂ
ಸತು: 0.6 ಮಿ. ಗ್ರಾಂ
ಕೊಲೆಸ್ಟ್ರಾಲ್: 162 ಮಿ. ಗ್ರಾಂ
ಸೆಲೆನಿಯಮ್: 13.4 ಮೈಕ್ರೋಗ್ರಾಂಗಳು (mcg)
ಪನೀರ್‌ನ ಪೌಷ್ಟಿಕಾಂಶದ ಅಂಶಗಳು ಇಲ್ಲಿವೆ:
ಪನೀರ್- 40 ಗ್ರಾಂ ಕೊಬ್ಬು ಇರುತ್ತದೆ
ಪ್ರೋಟೀನ್: 7.54 ಗ್ರಾಂ
ಕೊಬ್ಬು: 5.88 ಗ್ರಾಂ
ಕಾರ್ಬೋಹೈಡ್ರೇಟ್: 4.96 ಗ್ರಾಂ
ಫೋಲೇಟ್‌ಗಳು: 37.32 ಮೈಕ್ರೋಗ್ರಾಂಗಳು
ಕ್ಯಾಲ್ಸಿಯಂ: 190.4 ಮಿ.ಗ್ರಾಂ
ರಂಜಕ: 132 ಮಿ.ಗ್ರಾಂ
ಪೊಟ್ಯಾಸಿಯಮ್: 50 ಮಿ.ಗ್ರಾಂ
ಪ್ರತಿದಿನ ಕೈಗೆಟುಕುವ ದರದ ಮೊಟ್ಟೆಯನ್ನು ಸೇವಿಸುವುದರಿಂದ ಆರೋಗ್ಯಕರವಾಗಿರಬಹುದು. ಮೊಟ್ಟೆಗಳನ್ನು ವಿವಿಧ ರೀತಿಯಲ್ಲಿ ಸೇವಿಸಬಹುದು. ಸ್ಕ್ರಾಂಬಲ್ಡ್, ಕರಿ, ಬೇಯಿಸಿದ ಮೊಟ್ಟೆಗಳು ಮತ್ತು ಇನ್ನಷ್ಟು ರೀತಿಯಲ್ಲಿ ಮೊಟ್ಟೆಯನ್ನು ಸೇವಿಸಬಹುದು. ಕೆಲವರು ಮೊಟ್ಟೆಯ ಹಳದಿ ಭಾಗವನ್ನು ಸೇವಿಸಿದರೆ ಇನ್ನು ಕೆಲವರು ಬಿಳಿ ಭಾಗವನ್ನು ತಿನ್ನುತ್ತಾರೆ. ಮೊಟ್ಟೆಯ ಹಳದಿ ಭಾಗ ಅತ್ಯಂತ ಪ್ರಮುಖ ಪೋಷಕಾಂಶಗಳನ್ನು ಹೊಂದಿರುತ್ತದೆ.
ಮತ್ತೊಂದೆಡೆ ಪನೀರ್‌ನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ12, ಸೆಲೆನಿಯಮ್, ವಿಟಮಿನ್ ಡಿ ಮತ್ತು ರೈಬೋಫ್ಲಾವಿನ್ ಇದೆ. ಪನೀರ್ ಅನ್ನು ಸಲಾಡ್‌ನಲ್ಲಿ ಮತ್ತು ಪೂರ್ಣ ಪ್ರಮಾಣದ ಊಟದಲ್ಲಿ ಸೇರಿಸಿಕೊಳ್ಳಬಹುದು. ಪನೀರ್ ಮತ್ತು ಮೊಟ್ಟೆಗಳೆರಡೂ ಬಹುತೇಕ ಒಂದೇ ರೀತಿಯ ಪೋಷಕಾಂಶಗಳ ಸಂಯೋಜನೆಯನ್ನು ಹೊಂದಿವೆ. ಸಸ್ಯಾಹಾರಿಗಳು ತಮ್ಮ ಆಹಾರದಲ್ಲಿ ಪನೀರ್ ಅನ್ನು ಸೇರಿಸಲು ಪ್ರಯತ್ನಿಸಬೇಕು.
ಇದನ್ನೂ ಓದಿ: Weight Loss: ತೂಕ ಇಳಿಸಿಕೊಳ್ಳಲು ಜಿಮ್ನಲ್ಲಿ ಗಂಟೆಗಟ್ಟಲೆ ವರ್ಕ್ಔಟ್ ಮಾಡೋ ಬದಲು ಹೀಗೆ ಮಾಡಿ ನೋಡಿ
Weight Loss: ಗಟ್ಟಿ ಆಹಾರದ ಬದಲು ಜ್ಯೂಸ್ ಕುಡಿಯೋದ್ರಿಂದ ತೂಕ ಕಡಿಮೆಯಾಗುತ್ತಾ?
Published On - 2:16 pm, Sat, 29 January 22