ದೈಹಿಕ ದೌರ್ಬಲ್ಯ ಸಮಸ್ಯೆಯೇ..? ಚಿಂತಿಸಬೇಡಿ ಇಲ್ಲಿದೆ ಉತ್ತಮ ಪರಿಹಾರ

ನಮ್ಮ ದೈಹಿಕ ದೌರ್ಬಲ್ಯಗಳನ್ನು ನಿಭಾಯಿಸಲು ಅಡುಗೆಮನೆಯಲ್ಲಿ ಕಂಡುಬರುವ ಈ ಐದು ವಸ್ತುಗಳನ್ನು ಬಳಸಿಕೊಂಡು ನಮ್ಮ ದೈಹಿಕ ದೌರ್ಬಲ್ಯ ಸಮಸ್ಯೆಯನ್ನು ನಿವಾರಿಸಲಿಕೊಳ್ಳಬಹುದು. ಇಲ್ಲಿದೆ ಮಾಹಿತಿ 

ದೈಹಿಕ ದೌರ್ಬಲ್ಯ ಸಮಸ್ಯೆಯೇ..? ಚಿಂತಿಸಬೇಡಿ ಇಲ್ಲಿದೆ ಉತ್ತಮ ಪರಿಹಾರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 29, 2022 | 1:08 PM

ಆಧುನಿಕ ಜಗತ್ತಿನಲ್ಲಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ದೊಡ್ಡ ಚಾಲೇಂಜಾಗಿದೆ. ದಿನನಿತ್ಯ ಕೆಲಸ ಮತ್ತು ಒತ್ತಡವೂ ಕೂಡ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ.  ನಮ್ಮ ದೈಹಿಕ ದೌರ್ಬಲ್ಯಗಳನ್ನು ನಿಭಾಯಿಸಲು ಸಹಾಯ ಮಾಡಲು ವಿವಿಧ ಔಷಧಗಳು ಮತ್ತು ಟಾನಿಕ್‌ಗಳನ್ನು ಬಳಸುತ್ತಾರೆ. ಆದಾಗ್ಯೂ, ಅಡುಗೆಮನೆಯಲ್ಲಿ ಕಂಡುಬರುವ ಈ ಐದು ವಸ್ತುಗಳನ್ನು ಬಳಸಿಕೊಂಡು ನಮ್ಮ ದೈಹಿಕ ದೌರ್ಬಲ್ಯ ಸಮಸ್ಯೆಯನ್ನು ನಿವಾರಿಸಲಿಕೊಳ್ಳಬಹುದು.

ಇಂದಿನ ದಿನಗಳಲ್ಲಿ ದೈಹಿಕ ದೌರ್ಬಲ್ಯದ ಸಮಸ್ಯೆ ವಯಸ್ಸಾದವರನ್ನಷ್ಟೇ ಅಲ್ಲ ಯುವಕರನ್ನೂ ಕಾಡುತ್ತದೆ. ಮಾನವನ ದೈಹಿಕ ದೌರ್ಬಲ್ಯವು ವಿವಿಧ ಅಂಶಗಳ ಪರಿಣಾಮವಾಗಿರಬಹುದು. ಕಷ್ಟಪಟ್ಟು ಕೆಲಸ ಮಾಡುವುದು, ಸಾಕಷ್ಟು ಅಗತ್ಯವಾದ ಪೋಷಕಾಂಶಗಳು ಮತ್ತು ನೀರನ್ನು ಕಡಿಯದಿರುವುದು, ಧೂಮಪಾನ ಮತ್ತು ಮದ್ಯಪಾನ ಸೇವನೆಯು ದೈಹಿಕ ದೌರ್ಬಲ್ಯಕ್ಕೆ ಕಾರಣವಾಗುವ ಕೆಲವು ಕಾರಣಗಳಾಗಿವೆ. ಜನರು ತಮ್ಮ ದೈಹಿಕ ದೌರ್ಬಲ್ಯಗಳನ್ನು ನಿಭಾಯಿಸಲು ಔಷಧ ಮತ್ತು ಟಾನಿಕ್ಸ್‌ಗಳ ಒಂದು ಶ್ರೇಣಿಯನ್ನು ಬಳಸುತ್ತಾರೆ. ಆದಾಗ್ಯೂ, ಅಡುಗೆಮನೆಯಲ್ಲಿ ಕಂಡುಬರುವ ಈ ಐದು ವಸ್ತುಗಳನ್ನು ಬಳಸಿಕೊಂಡು ನೀವು ದೌರ್ಬಲ್ಯವನ್ನು ನಿವಾರಿಸಿಕೊಳ್ಳಬಹುದು. ಆ ಕುರಿತು ಒಂದು ವರದಿ ಇಲ್ಲಿದೆ ಓದಿ.

ಮೊಟ್ಟೆ

ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ನೀವು ಪ್ರತಿದಿನ ಮೊಟ್ಟೆಗಳನ್ನು ಸೇವಿಸಬಹುದು.

ಪನೀರ್

ನೀವು ಸಸ್ಯಾಹಾರಿಯಾಗಿದ್ದರೆ ನೀವು ಪನೀರ್ ಮತ್ತು ಬೀನ್ಸ್​ನ್ನು ಸಹ ತಿನ್ನಬಹುದು. ಇವುಗಳು ಪ್ರೋಟೀನ್-ಭರಿತ ಆಹಾರಗಳಾಗಿವೆ. ಇದು ಗಮನಾರ್ಹ ಪ್ರಮಾಣದ ಮೆಗ್ನೀಸಿಯಮ್​ನ್ನು ಒಳಗೊಂಡಿರುತ್ತದೆ. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

 ಆಹಾರದಲ್ಲಿ ಓಟ್ ಮೀಲ್ ಅನ್ನು ಸೇರಿಸಿ

ದೇಹಕ್ಕೆ ಶಕ್ತಿಯನ್ನು ಒದಗಿಸಲು ಮತ್ತು ದೌರ್ಬಲ್ಯವನ್ನು ನಿವಾರಿಸಲು ಓಟ್ ಮೀಲ್ ಅನ್ನು ಪ್ರತಿದಿನ ಸೇವಿಸುವುದು ಉತ್ತಮ. ನೀವು ಅದನ್ನು ಹಾಲಿನೊಂದಿಗೆ ಸವಿಸಬಹುದಾಗಿದೆ. ನೀವು ಬಯಸಿದರೆ ಮಲ್ಟಿಗ್ರೇನ್ ಅಥವಾ ಬ್ರೌನ್ ಬ್ರೆಡ್ ಅನ್ನು ಸಹ ಸೇವಿಸಬಹುದು. ನಿಮ್ಮ ದೇಹವು ಸರಿಯಾದ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳನ್ನು ಪಡೆಯುತ್ತದೆ ಮತ್ತು ನೀವು ಯಾವುದೇ ಸಮಯದಲ್ಲಿ ದೌರ್ಬಲ್ಯದಿಂದ ಮುಕ್ತರಾಗುತ್ತೀರಿ.

ಬಾಳೆಹಣ್ಣು ತಿನ್ನಿ:

ದೇಹದ ದೌರ್ಬಲ್ಯವನ್ನು ನಿವಾರಿಸಲು ಯಾವುದೇ ರೂಪದಲ್ಲಿ ಬಾಳೆಹಣ್ಣುಗಳನ್ನು ನಿಮ್ಮ ಆಹಾರದಲ್ಲಿ ಸೇವಿಸಬಹುದು. ನೀವು ಬಯಸಿದಲ್ಲಿ ಇದನ್ನು ಬನಾನಾ ಶೇಕ್ ಆಗಿಯೂ ಕುಡಿಯಬಹುದು. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್, ಜೀವಸತ್ವಗಳು ಮತ್ತು ಖನಿಜಗಳು ಅಧಿಕವಾಗಿವೆ. ಇದು ನಿಮ್ಮ ದೇಹದ ಶಕ್ತಿಯ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ.

ಒಣ ಹಣ್ಣುಗಳು-ಬೀಜಗಳನ್ನು ತೆಗೆದುಕೊಳ್ಳಿ:

ದೇಹದ ದೌರ್ಬಲ್ಯವನ್ನು ಎದುರಿಸಲು ಒಣ ಹಣ್ಣುಗಳು ಮತ್ತು ಬೀಜಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಬಾದಾಮಿ, ಪಿಸ್ತಾ, ಕುಂಬಳಕಾಯಿ ಬೀಜಗಳು, ಚಿಯಾ ಬೀಜಗಳು ಮತ್ತು ಅಗಸೆಬೀಜಗಳು ಇದಕ್ಕೆ ಸಹಾಯ ಮಾಡುತ್ತವೆ. ನಿಮ್ಮ ದೇಹವು ಅಗತ್ಯವಿರುವ ಪೌಷ್ಟಿಕಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು ದೌರ್ಬಲ್ಯವನ್ನು ನಿವಾರಿಸುತ್ತದೆ.

ಸಾಕಷ್ಟು ನೀರು ಕುಡಿಯಿರಿ:

ತುಂಬಾ ಕಡಿಮೆ ನೀರು ಕುಡಿಯುವುದರಿಂದ ನಿಮ್ಮ ದೇಹವನ್ನು ನಿರ್ಜಲೀಕರಣಗೊಳಿಸಬಹುದು ಮತ್ತು ನೀವು ದುರ್ಬಲರಾಗಬಹುದು. ಹೆಚ್ಚಾಗಿ ನೀರು ಕುಡಿಯುವುದರಿಂದ ನಿರ್ಜಲೀಕರಣವನ್ನು ತಪ್ಪಿಸಲು ಸಹಾಯ ಮಾಡುತ್ತದೆ. ದೌರ್ಬಲ್ಯವನ್ನು ತೊಡೆದುಹಾಕಲು ನೀವು ಹಸಿರು ಅಥವಾ ಕಪ್ಪು ಚಹಾವನ್ನು ಸಹ ಕುಡಿಯಬಹುದು.

(ಈ ಲೇಖನದಲ್ಲಿ ಹಂಚಿಕೊಳ್ಳಲಾದ ಆರೋಗ್ಯ ಸಲಹೆಗಳು ಸಾಮಾನ್ಯ ಜ್ಞಾನವನ್ನು ಆಧರಿಸಿರುತ್ತದೆ. ಓದುಗರು ಮನೆಯಲ್ಲಿ ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳುವುದು ಸೂಕ್ತ)

ಇದನ್ನೂ ಓದಿ;

NeoCoV: ನಿಯೋ ಕೊವ್​ ಬಗ್ಗೆ ಹೆದರುವ ಅಗತ್ಯ ಇಲ್ಲವೇ ಇಲ್ಲ, ಇದು ಕೊರೊನಾದ ರೂಪಾಂತರಿ ಅಲ್ಲ; ಅಧ್ಯಯನ ತಿಳಿಸಿದೆ ಒಂದು ಗುಡ್​ ನ್ಯೂಸ್ !