ನೀವು ತೂಕ ಇಳಿಸಲು(Weight Loss)ಸಾಕಷ್ಟು ಕಷ್ಟ ಪಡುತ್ತೀದ್ದೀರಾ? ಆದರೆ ಏನು ಪ್ರಯೋಜನವಾಗುತ್ತಿಲ್ಲವೇ? ಹಾಗಿದ್ದರೆ ಆರೋಗ್ಯವಾಗಿ ಹಾಗೂ ನಿಧಾನವಾಗಿ ನಿಮ್ಮ ದೇಹದ ಅತಿಯಾದ ತೂಕವನ್ನು ಇಳಿಸಲು ಸಿಂಪಲ್ ಟಿಪ್ಸ್ ಇಲ್ಲಿದೆ. ಒಂದೇ ವಾರದಲ್ಲಿ ನೀವು ಒಂದು ಕೆಜಿ ತೂಕವನ್ನು ಇಳಿಸಬಹುದು. ಹಾಗಿದ್ದರೆ ಇಲ್ಲಿರುವ ಸಲಹೆ ಪಾಲಿಸಿ. ವಾರದ 6 ದಿನ 6 ವಿಧದ ಆಹಾರ ಕ್ರಮವನ್ನು ರೂಢಿಸಿಕೊಳ್ಳಿ. ನಿಮ್ಮ ತೂಕ ನಷ್ಟದಲ್ಲಿ ಕೇವಲ ಆಹಾರ ಕ್ರಮ ಮಾತ್ರ ಪ್ರಮುಖವಾಗಿರುವುದಿಲ್ಲ. ಬದಲಾಗಿ ಮಾನಸಿಕ ಆರೋಗ್ಯವು ಕೂಡ ಅಗತ್ಯವಾಗಿದೆ.
ದಿನ 1:
ಬೆಳಗ್ಗೆ 2 ಮೊಟ್ಟೆ ಆಮ್ಲೇಟ್ ಮತ್ತು ಟೋಸ್ಟ್ ಸೇವಿಸಿ. ಮಧ್ಯಾಹ್ನದ ವೇಳೆ ಚಪಾತಿ ಸೇವಿಸಿ ಮತ್ತು ಆಹಾರದಲ್ಲಿ ಕಡಿಮೆ ಎಣ್ಣೆ ಬಳಸಿ. ದಿನದಲ್ಲಿ 1-2ಲೀಟರ್ ನೀರು ಕುಡಿಯಿರಿ. ರಾತ್ರಿಯ ವೇಳೆ ಕಡಿಮೆ ಆಹಾರ ಸೇವಿಸಿ. ಉಪ್ಪಿಟ್ಟು ಮತ್ತು ತರಕಾರಿ ಸೇವಿಸಿ.
ದಿನ 2:
ಬೆಳಗ್ಗೆ ಎದ್ದ ಕೂಡಲೇ ಮತ್ತು ದಿನದಲ್ಲಿ 1-2ಲೀಟರ್ ನೀರು ಕುಡಿಯುವುದನ್ನು ಮರೆಯದಿರಿ. ಮೂರು ಇಡ್ಲಿ ಮತ್ತು ಮಿಶ್ರ ತರಕಾರಿಗಳ ಸಂಬಾರು ಸವಿಯಿರಿ. ಅನ್ನದ ಬದಲಾಗಿ ಚಪಾತಿ ಮತ್ತು ಪನ್ನೀರ್ನಲ್ಲಿ ಮಾಡಿದ ಕರಿ ಸೇವಿಸಿ.
ದಿನ 3:
ಮ್ಯೂಸ್ಲಿ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಬ್ರೇಕ್‌ಫಾಸ್ಟ್ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುವಲ್ಲಿ ಕೂಡ ಸಹಕಾರಿ. ಜೊತೆಗೆ ಸಾಕಷ್ಟು ತರಕಾರಿಗಳನ್ನು ಆಹಾರ ಕ್ರಮದಲ್ಲಿ ಬಳಸಿ.
ದಿನ 4:
ಮೆಂತ್ಯ ಸೊಪ್ಪಿನ ರೊಟ್ಟಿ ಮತ್ತು ಚಟ್ನಿಯನ್ನು ತಿನ್ನಿ. ಇದು ನಿಮ್ಮ ದೇಹದ ತೂಕವನ್ನು ನಿಧಾನವಾಗಿ ಮತ್ತು ಆರೋಗ್ಯಕರವಾಗಿ ಇಳಿಸಲು ಸಹಾಯಕವಾಗಿದೆ. ಜೊತೆಗೆ ದಿನದಲ್ಲಿ 1-2ಲೀಟರ್ ನೀರು ಕುಡಿಯುವುದನ್ನು ಮರೆಯದಿರಿ. ಬೇಯಿಸಿದ ತರಕಾರಿಯ ಸೂಪ್ ಮತ್ತು ಒಂದು ಬೇಯಿಸಿದ ಮೊಟ್ಟೆ ತಿನ್ನಿ.
ದಿನ 5:
ಓಟ್ಸ್ ಕುಡಿಯಿರಿ. ಇದು ನಿಮ್ಮ ದೇಹದ ತೂಕ ನಷ್ಟಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಜೊತೆಗೆ ದಿನದಲ್ಲಿ 1-2ಲೀಟರ್ ನೀರು ಕುಡಿಯುವುದನ್ನು ಮರೆಯದಿರಿ. ಬೇಯಿಸಿದ 2 ಮೊಟ್ಟೆ ಸೇವಿಸಿ.
ದಿನ 6:
ಅನ್ನದ ಬದಲಾಗಿ 2ರಿಂದ 3 ಚಪಾತಿ ಹಾಗೂ ಮೊಟ್ಟೆ ಕರಿ ಸೇವಿಸಿ. ಬೇಯಸಿದ ತರಕಾರಿಯನ್ನು ಸೇವಿಸಿ. ಬೆಳಗ್ಗೆ ಎದ್ದ ಕೂಡಲೇ ಮತ್ತು ದಿನದಲ್ಲಿ 1-2ಲೀಟರ್ ನೀರು ಕುಡಿಯುವುದನ್ನು ಮರೆಯದಿರಿ. ಸಂಜೆ ಹೊತ್ತಿನಲ್ಲಿ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿದ ತಿಂಡಿ ತಿನ್ನುವುದನ್ನು ಕಡಿಮೆ ಮಾಡಿ.
ಇದನ್ನೂ ಓದಿ: ಕಾಫಿ, ಟೀ ಕುಡಿಯುವುದನ್ನು ನಿಯಂತ್ರಿಸಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲವೇ? ಇಲ್ಲಿದೆ ಉಪಾಯ
ದಿನ 7:
1ರಿಂದ 2 ದೋಸೆ ಮತ್ತು ಸಾಂಬಾರ್. ಮಧ್ಯಾಹ್ನ ದಾಲ್ ಮತ್ತು ಚಪಾತಿ ಹಾಗೂ ರಾತ್ರಿ ಹೊತ್ತು ನಿಮ್ಮ ಆಯ್ಕೆಯ ಸೂಪ್ ಸವಿಯಿರಿ. ಆದರೆ ಯಾವುದೇ ಕಾರಣಕ್ಕೂ ದಿನದಲ್ಲಿ 1-2ಲೀಟರ್ ನೀರು ಕುಡಿಯುವುದನ್ನು ಮರೆಯದಿರಿ. ಯಾಕೆಂದರೆ ನೀರು ನಿಮ್ಮ ದೇಹದ ತೂಕ ನಷ್ಟದಲ್ಲಿ ಪ್ರಮುಖ ಭಾಗವಾಗಿದೆ.
ಒಂದು ವಾರದ ಈ ರೀತಿಯ ಆಹಾರ ಕ್ರಮದೊಂದಿಗೆ ವ್ಯಾಯಮ ಮತ್ತು ಧ್ಯಾನದಲ್ಲಿ ತೊಡಗಿಸಿ ಕೊಳ್ಳಿ. ನಿಮ್ಮ ತೂಕ ನಷ್ಟದಲ್ಲಿ ಕೇವಲ ಆಹಾರ ಕ್ರಮ ಮಾತ್ರ ಪ್ರಮುಖವಾಗಿರುವುದಿಲ್ಲ. ಬದಲಾಗಿ ಮಾನಸಿಕ ಆರೋಗ್ಯವನ್ನು ಕಾಪಾಡುವುದು ಕೂಡ ಅಗತ್ಯವಾಗಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: