AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Addicted to Tea or Coffee: ಕಾಫಿ, ಟೀ ಕುಡಿಯುವುದನ್ನು ನಿಯಂತ್ರಿಸಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲವೇ? ಇಲ್ಲಿದೆ ಉಪಾಯ

ಇಂದಿನಿಂದ ಕಾಫಿ, ಟೀ ಕುಡಿಯೋದನ್ನು ನಿಲ್ಲಿಸಬೇಕು ಎಂದು ಪ್ರತಿದಿನ ಯೋಚಿಸುತ್ತೀರಿ, ಆದರೆ ಇದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗುತ್ತಿಲ್ಲವೇ? ಹಾಗಿದ್ದರೆ ಚಹಾ ಮತ್ತು ಕಾಫಿಯ ಕಡುಬಯಕೆಯನ್ನು ನಿಯಂತ್ರಿಸಲು ಪ್ರಮುಖ ಟ್ರಿಕ್ಸ್​ಗಳು ಇಲ್ಲಿವೆ.

Addicted to Tea or Coffee: ಕಾಫಿ, ಟೀ ಕುಡಿಯುವುದನ್ನು ನಿಯಂತ್ರಿಸಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲವೇ? ಇಲ್ಲಿದೆ ಉಪಾಯ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jan 07, 2023 | 3:54 PM

Share

ಅತಿಯಾದರೆ ಅಮೃತವು ವಿಷ ಎಂಬ ಮಾತಿದೆ. ಹಾಗೆ ಯಾವುದಾದರೂ ಅತಿಯಾದರೆ ಅದು ನಿಮಗೆ ಹಾನಿಕಾರಕವಾಗಬಹುದು. ಆದ್ದರಿಂದ ಹೆಚ್ಚುವರಿ ಕಾಫಿ ಮತ್ತು ಚಹಾವನ್ನು ಸೇವಿಸುವುದನ್ನು ಹೇಗೆ ನಿಯಂತ್ರಿಸುವುದು ಎಂಬುದು ಇಲ್ಲಿದೆ. ಒಂದು ಕಪ್ ಕಾಫಿ ಅಥವಾ ಟೀ ಇಲ್ಲದೆ ಬೆಳಗಿನ ಸಮಯವು ಸಂಪೂರ್ಣವಾಗಿ ಅಪೂರ್ಣವಾಗಿರುತ್ತದೆ. ಅದರಲ್ಲೂ ಈ ಚಳಿಗಾಲದಲ್ಲಿ ಅದರ ಸೇವನೆ ತುಸು ಹೆಚ್ಚೇ ಇರುತ್ತದೆ. ಇದರಲ್ಲಿ ಕೆಫೀನ್ ಅಂಶ ಇರುವುದರಿಂದ ಅತಿಯಾಗಿ ಸೇವಿಸುವುದು ಹಾನಿಕಾಕರವಾಗಬಹುದು. ಹೆಚ್ಚಿನ ಕೆಫೀನ್ ಸೇವನೆಯು ಒತ್ತಡ ಅಥವಾ ನಿದ್ರಾಹೀನತೆಗೂ ಕಾರಣವಾಗಬಹುದು. ಆದ್ದರಿಂದ ಕಾಫಿ ಮತ್ತು ಟೀ ಸೇವಿಸುವುದನ್ನು ಆದಷ್ಟು ಕಡಿಮೆ ಮಾಡಬೇಕು. ನಿಮ್ಮ ಚಹಾ ಅಥವಾ ಕಾಫಿಯ ಕಡುಬಯಕೆ (ಕ್ರೇವಿಂಗ್ಸ್)ಗಳನ್ನು ಹೇಗೆ ನಿಯಂತ್ರಿಸುವುದು ಎಂಬುವುದು ಇಲ್ಲಿದೆ.

ನಿಮ್ಮ ನಿಯಮಿತ ಚಹಾ ಅಥವಾ ಕಾಫಿಯನ್ನು ಪರ್ಯಾಯವಾಗಿ ಬದಲಿಸಿ:

ಗಿಡಮೂಲಿಕೆ ಚಹಾ, ಅರಶಿನ ಅಥವಾ ಏಲಕ್ಕಿ ಹಾಲಿನಂತಹ ಪರ್ಯಾಯಗಳೊಂದಿಗೆ ನಿಮ್ಮ ಸಾಮಾನ್ಯ ಚಹಾವನ್ನು ಬದಲಿಸಿ. ಇದು ನಿಮ್ಮ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಕಾಫಿ ಪ್ರಿಯರಿಗೆ ಕೆಫೀನ್ ವ್ಯಸನವನ್ನು ತಡೆಗಟ್ಟಲು ಡಿ-ಕೆಫೀನ್ ಮಾಡಿದ ಕಾಫಿಯು ಉತ್ತಮ ಪರ್ಯಾಯವಾಗಿದೆ.

ನೀವು ಸಾಕಷ್ಟು ನಿದ್ದೆ ಮಾಡುವುದನ್ನು ಖಚಿತಪಡಿಸಿಕೊಳ್ಳಿ:

ನಿಮ್ಮ ನಿದ್ರೆಯ ವೇಳಾಪಟ್ಟಿಯು ಹೆಚ್ಚು ಮುಖ್ಯವಾಗಿದೆ. ನೀವು ಉತ್ತಮ ನಿದ್ರೆ ಪಡೆಯುತ್ತಿರುವಿರಿ ಎಂದು ಖಚಿತಪಡಿಸಿಕೊಳ್ಳುವುದು ಕಾಫಿ, ಟೀ ಚಟವನ್ನು ಎದುರಿಸಲು ಮತ್ತೊಂದು ಮಾರ್ಗವಾಗಿದೆ. ಸರಿಯಾದ ನಿದ್ದೆಯನ್ನು ಪಡೆಯುವುದರಿಂದ ಅದು ನಿಮ್ಮನ್ನು ದಿನವಿಡೀ ಚುರುಕಾಗಿ ಇರಲು ಸಹಾಯ ಮಾಡುತ್ತದೆ. ಚಹಾ, ಕಾಫಿಯ ಕಡುಬಯಕೆಯನ್ನು ನಿಯಂತ್ರಿಸಲು ಸಹಾಯವಾಗುತ್ತದೆ.

ಇದನ್ನೂ ಓದಿ: ಚೀನಾದ ಪುರ್ಹ್ ಟೀ ಬಗ್ಗೆ ನಿಮಗೆಷ್ಟು ಗೊತ್ತು? ಇದು ಭಾರತದಲ್ಲಿ ಲಭ್ಯವಿದೆಯೇ?

ನಿಮ್ಮ ದಿನಚರಿಯನ್ನು ಬದಲಾಯಿಸಿ:

ನಿಮ್ಮ ಕಾಫಿ ಅಥವಾ ಚಹಾ ಕುಡಿಯುವ ಕಡುಬಯಕೆಯಾದಾಗ, ನಿಮ್ಮ ದಿನಚರಿಯನ್ನು ಬ್ರೇಕ್ ಮಾಡುವುದು ಉತ್ತಮ. ಸಣ್ಣ ಕಾಫಿ, ಚಹಾ ವಿರಾಮವನ್ನು ತೆಗೆದುಕೊಳ್ಳುವ ಬದಲು ವಾಕಿಂಗ್ ವಿರಾಮಗಳನ್ನು ತೆಗೆದುಕೊಳ್ಳಿ ಇದು ನಿಮ್ಮ ಕಡುಬಯಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಬಿಸಿ ನಿಂಬೆಯ ನೀರನ್ನು ಕುಡಿಯುವ ಮೂಲಕ ದಿನವನ್ನು ಪ್ರಾರಂಭಿಸಿ:

ನೀವು ಬೆಳಗ್ಗೆ ಎದ್ದ ಬಳಿಕ ಉಗುರು ಬೆಚ್ಚಗಿನ ನಿಂಬೆ ನೀರನ್ನು ಕುಡಿಯುತ್ತಾ ದಿನವನ್ನು ಪ್ರಾರಂಭಿಸುವುದು ಉತ್ತಮ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳಿ:

ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ನಿಮ್ಮ ಊಟದಲ್ಲಿ ಅಗತ್ಯವಾದ ಪೋಷಕಾಂಶಗಳನ್ನು ಸೇರಿಸುವುದು ಅತ್ಯಗತ್ಯ. ಏಕೆಂದರೆ ಇದು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಚಹಾ, ಕಾಫಿಯನ್ನು ತ್ಯಜಿಸಲು ನಿಮಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಕರಿದ ಆಹಾರ ತಿನ್ನುವ ಆಸೆಯೇ? ಆದರೆ ಹೈ ಕೊಲೆಸ್ಟ್ರಾಲ್ ಇದೆ, ಹೀಗೆ ಮಾಡಿ

ಮೂಲ ಕಾರಣವನ್ನು ಕಂಡುಕೊಳ್ಳಿ:

ಈ ಪರ್ಯಾಯಗಳು ಮತ್ತು ಹ್ಯಾಕ್‌ಗಳು ಕಡುಬಯಕೆಯನ್ನು ನಿಭಾಯಿಸಲು ಸಹಾಯಕವಾಗಿದ್ದರೂ, ಅದು ಒಂದು ಹಂತವನ್ನು ಮೀರಿದ್ದರೆ, ಅದರ ಮೂಲ ಕಾರಣವನ್ನು ತಿಳಿದುಕೊಳ್ಳುವುದು ಅವಶ್ಯಕ. ಕೆಲವೊಮ್ಮೆ ಇದಕ್ಕೆ ಆರೋಗ್ಯ ಸಮಸ್ಯೆಗಳು ಕಾರಣವಾಗಿರಬಹುದು. ಆದ್ದರಿಂದ ಕಡುಬಯಕೆಗಳನ್ನು ಮನೆಮದ್ದುಗಳಿಂದ ಗುಣಪಡಿಸಲು ಸಾಧ್ಯವಾಗದಿದ್ದರೆ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ