ಮಲದಲ್ಲಿ ಈ ಆಹಾರ ಕಣಗಳು ಕಾಣಿಸಿಕೊಂಡರೆ ಏನರ್ಥ? ಇಲ್ಲಿದೆ ನೋಡಿ ವೈದ್ಯರ ಸಲಹೆ

ಮಲ ವಿಸರ್ಜನೆ ಮಾಡುವಾಗ ಆಹಾರದ ಕಣಗಳು ಕಾಣಿಸಿಕೊಳ್ಳುತ್ತಿದೆ ಎಂದರೆ ಭಯಪಡುವ ಅವಶ್ಯಕತೆ ಇಲ್ಲ. ಯಾಕೆಂದರೆ ಅದು ಗಂಭೀರ ಸಮಸ್ಯೆ ಅಲ್ಲ, ಆದರೆ ಅದು ಯಾಕೆ ಹಾಗೆ ಕಾಣಿಸಿಕೊಳ್ಳುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಇದಕ್ಕೆ ಮುಖ್ಯ ಕಾರಣ ಏನು ಎಂಬ ಬಗ್ಗೆ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿಯ ಸಲಹೆಗಾರರಾದ ಡಾ. ಗೌರವ್ ಮೆಹ್ತಾ ತಿಳಿಸಿದ್ದಾರೆ.

ಮಲದಲ್ಲಿ ಈ ಆಹಾರ ಕಣಗಳು ಕಾಣಿಸಿಕೊಂಡರೆ ಏನರ್ಥ? ಇಲ್ಲಿದೆ ನೋಡಿ ವೈದ್ಯರ ಸಲಹೆ
ಸಾಂದರ್ಭಿಕ ಚಿತ್ರ
Image Credit source: Getty Images
Updated By: ಅಕ್ಷಯ್​ ಪಲ್ಲಮಜಲು​​

Updated on: Apr 29, 2025 | 6:00 PM

ಆಗಾಗ ಮಲ ವಿಸರ್ಜನೆ (undigested food in stool) ಮಾಡಿದಾಗ ಆಹಾರದ ಕಣಗಳು ಕಾಣಿಸಿಕೊಳ್ಳುತ್ತೀಯಾ? ಭಯ ಪಡುವ ಅವಶ್ಯಕತೆ ಇಲ್ಲ. ಇದರಿಂದ ಯಾವುದೇ ಸಮಸ್ಯೆ ಇಲ್ಲ. ಇದು ಸಹಜ ಪ್ರಕ್ರಿಯೆಯ ಬಗ್ಗೆ ಅನೇಕರಿಗೆ ಈ ಬಗ್ಗೆ ಭಯ ಇದೆ. ಏನಾದರೂ ಸಮಸ್ಯೆಯ ಇದ್ದೀಯಾ? ಎಂಬ ಗೊಂದಲುಗಳು ಮೂಡುವುದು ಸಹಜ. ಜೋಳ, ಬೀಜಗಳು ಅಥವಾ ಸಣ್ಣ ತುಂಡು ತರಕಾರಿಗಳು ಹೀಗೆ ಮಲದಲ್ಲಿ ಕಾಣಿಸುತ್ತದೆ. ಈ ಬಗ್ಗೆ ಭಯಪಡುವ ಅಗತ್ಯ ಇಲ್ಲ ಎಂದು ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿಯ ಸಲಹೆಗಾರರಾದ ಡಾ. ಗೌರವ್ ಮೆಹ್ತಾ (Dr. Gaurav Mehta) ಹೇಳುತ್ತಾರೆ. ಈ ಬಗ್ಗೆ ಇಂಡಿಯನ್​​​​ ಎಕ್ಸ್​​​ಪ್ರೆಸ್​​​​ ವರದಿ ಮಾಡಿದೆ. ಮಲದಲ್ಲಿ ಕಾಲಕಾಲಕ್ಕೆ ಜೀರ್ಣವಾಗದ ಆಹಾರವನ್ನು ನೋಡುವುದು ವಾಸ್ತವವಾಗಿ ತುಂಬಾ ಸಾಮಾನ್ಯ ಎಂದು ಹೇಳುತ್ತಾರೆ.

ಬೀನ್ಸ್ ಅಥವಾ ಜೋಳದಂತಹ ಹೆಚ್ಚಿನ ಫೈಬರ್ ಆಹಾರವನ್ನು ಸೇವಿಸಿದ್ದರೆ, ಈ ರೀತಿಯ ಆಹಾರಗಳು ಜೀರ್ಣಕ್ರಿಯೆಯ ಸಮಯದಲ್ಲಿ ಹಾಗೆಯೇ ಹೊರಬರುತ್ತದೆ. ಹೀಗೆ ಬರಲು ಪ್ರಮುಖ ಕಾರಣ ಇದೆ. ತುಂಬಾ ವೇಗವಾಗಿ ತಿನ್ನುವುದು, ಸರಿಯಾಗಿ ಅಗಿಯದಿದ್ದಾಗ ಜೀರ್ಣಾಂಗ ವ್ಯವಸ್ಥೆ ಸಮಯದಲ್ಲಿ ಹೀಗೆ ಹೊರ ಬರುತ್ತದೆ ಎಂದು ಡಾ. ಮೆಹ್ತಾ ಹೇಳುತ್ತಾರೆ. ಆಹಾರವು ಸಂಪೂರ್ಣವಾಗಿ ಪುಡಿಯಾಗದಿದ್ದರೆ, ಅವುಗಳು ಈ ರೂಪದಲ್ಲಿ ಹೊರಕ್ಕೆ ಬರುತ್ತದೆ. ಇದು ಆಗಾಗ್ಗೆ ಸಂಭವಿಸುವುದು ಸಹಜವಾಗಿದೆ ಎಂದು ವೈದ್ಯರು ಹೇಳುತ್ತಾರೆ.

ಒಂದು ವೇಳೆ ವೇಗವಾಗಿ ತಿಂದರೆ ಅಥವಾ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಆಗದೆ ಇದ್ದರೆ ಹೊಟ್ಟೆ ಸೆಳೆತ, ನಡೆಯುತ್ತಿರುವ ಅತಿಸಾರ, ಆಯಾಸ ಅಥವಾ ಕಡಿಮೆ ಹಿಮೋಗ್ಲೋಬಿನ್ ನಂತಹ ಇತರ ಲಕ್ಷಣಗಳೊಂದಿಗೆ ಕಂಡು ಬರುತ್ತದೆ. ಹೀಗೆ ಕಂಡು ಬಂದರೆ ದೇಹದಲ್ಲಿ ಏನೋ ಬದಲಾವಣೆ ಆಗುತ್ತಿದೆ ಎಂಬುದರ ಸಂಕೇತವಾಗಿದೆ.

ಇದನ್ನೂ ಓದಿ
ಪರಶುರಾಮರ ಬಗೆಗಿನ ಆಸಕ್ತಿದಾಯಕ ಕಥೆಗಳು
ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸುವ ಉದ್ದೇಶವೇನು?
ಮೇ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

ಇದನ್ನೂ ಓದಿ: ಬೆಳ್ಳುಳ್ಳಿ ಸಿಪ್ಪೆ ಎಸೆಯಬೇಡಿ, ಇದನ್ನು ಈ ರೀತಿ ಬಳಸಿದರೆ ನಿಮ್ಮ ಆರೋಗ್ಯ ಕಾಪಾಡುತ್ತೆ

ಮಲದಲ್ಲಿ ಜೀರ್ಣವಾಗದ ಆಹಾರ ಕಾಣಿಸಿಕೊಳ್ಳಲು ಕಾರಣವಾಗುವ ಕೆಲವು ಪರಿಸ್ಥಿತಿಗಳು:

1.ಸೆಲಿಯಾಕ್ ಕಾಯಿಲೆ, ಇದರಲ್ಲಿ ಗ್ಲುಟನ್ ಸಣ್ಣ ಕರುಳನ್ನು ಹಾನಿಗೊಳಿಸುತ್ತದೆ.

2.ಮೇದೋಜ್ಜೀರಕ ಗ್ರಂಥಿಯ ಸಮಸ್ಯೆಗಳು, ಇದು ನಿಮ್ಮ ದೇಹವು ಜೀರ್ಣಕಾರಿ ಕಿಣ್ವಗಳನ್ನು ಹೇಗೆ ಬಿಡುಗಡೆ ಮಾಡುತ್ತದೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ.

3.ಲ್ಯಾಕ್ಟೋಸ್ ಅಸಹಿಷ್ಣುತೆ, ಇದು ಉಬ್ಬುವುದು ಮತ್ತು ಆಹಾರದ ಅಸಮರ್ಪಕ ಹೀರಿಕೊಳ್ಳುವಿಕೆಗೆ ಕಾರಣವಾಗಬಹುದು

4. ಕರುಳಿನ ಸಿಂಡ್ರೋಮ್ (IBS), ಇದು ಕರುಳಿನ ಚಲನಶೀಲತೆಯ ಮೇಲೆ ಪರಿಣಾಮ ಬೀರುತ್ತದೆ

5.ಕ್ರೋನ್ಸ್ ಅಥವಾ ಅಲ್ಸರೇಟಿವ್ ಕೊಲೈಟಿಸ್‌ನಂತಹ ಉರಿಯೂತದ ಕರುಳಿನ ಕಾಯಿಲೆಗಳು, ಇದು ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿಪಡಿಸುತ್ತದೆ

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ