AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 ನಿಮಿಷದ ಮಿನಿ ಸ್ಟ್ರೋಕ್‌ ಅನ್ನು ನಿರ್ಲಕ್ಷಿಸಬೇಡಿ! ಈ ಲಕ್ಷಣ ಸ್ಟ್ರೋಕ್‌ ಬರುವ ಮುನ್ಸೂಚನೆಯೇ?

ಮಿನಿ ಸ್ಟ್ರೋಕ್ ಬಗ್ಗೆ ನಿಮಗೆ ತಿಳಿದಿದೆಯೇ? ಇದು ಸ್ವಲ್ಪ ಸಮಯದವರೆಗೆ ಮಾತನಾಡಲು ತೊಂದರೆ ಅಥವಾ ದೃಷ್ಟಿ ಮಸುಕಾಗಲು ಕಾರಣವಾಗಬಹುದು. ಇದನ್ನು ನಿರ್ಲಕ್ಷಿಸುವುದರಿಂದ ನಂತರ ಗಂಭೀರ ಸಮಸ್ಯೆಗಳು ಉಂಟಾಗಬಹುದು. ಇದನ್ನು ಟಿಐಎ ಎಂದು ಕರೆಯಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಲಕ್ಷಣಗಳ ಬಗ್ಗೆ ಮೊದಲೇ ತಿಳಿದಿದ್ದರೆ ಇಂತಹ ಲಕ್ಷಣಗಳು ಗಂಭೀರ ಪರಿಣಾಮ ಉಂಟುಮಾಡುವುದನ್ನು ತಪ್ಪಿಸಬಹುದು. ಹಾಗಾದರೆ ಮಿನಿ ಸ್ಟ್ರೋಕ್‌ ಎಂದರೇನು, ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

5 ನಿಮಿಷದ ಮಿನಿ ಸ್ಟ್ರೋಕ್‌ ಅನ್ನು ನಿರ್ಲಕ್ಷಿಸಬೇಡಿ! ಈ ಲಕ್ಷಣ ಸ್ಟ್ರೋಕ್‌ ಬರುವ ಮುನ್ಸೂಚನೆಯೇ?
Mini StrokeImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jul 04, 2026 | 3:29 PM

Share

ಮುಖ್ಯಾಂಶಗಳು

  • ಸ್ಟ್ರೋಕ್‌ಗೆ ಮುನ್ನ ಕಾಣಿಸಿಕೊಳ್ಳುವ ಮಿನಿ ಸ್ಟ್ರೋಕ್‌ ಲಕ್ಷಣಗಳಿವು
  • ಹಠಾತ್ ಮಾತು ಬರದಿದ್ದರೆ ಅಥವಾ ಕೈ ದುರ್ಬಲವಾದರೆ ಎಚ್ಚರ! ಇದು ಮಿನಿ ಸ್ಟ್ರೋಕ್‌ ಆಗಿರಬಹುದು
  • ಮಿನಿ ಸ್ಟ್ರೋಕ್ ಅಪಾಯ ಯಾರಲ್ಲಿ ಹೆಚ್ಚಾಗಿ ಕಂಡುಬರುತ್ತೆ ಗೊತ್ತಾ?

ಕೆಲವು ನಿಮಿಷಗಳ ಕಾಲ ಮಾತಾಡಲು ತೊಂದರೆ, ಕೈ- ಕಾಲುಗಳಲ್ಲಿ ದಿಢೀರ್ ದುರ್ಬಲತೆ ಅಥವಾ ದೃಷ್ಟಿ ಮಸುಕಾಗುವುದು ಕಾಣಿಸಿಕೊಂಡು ಬಳಿಕ ಸಹಜ ಸ್ಥಿತಿಗೆ ಮರಳಿದರೆ ಅದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷಿಸಬೇಡಿ. ಇದು ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು. ಹೌದು. ಈ ರೀತಿಯಾಗುವುದು ಟ್ರಾನ್ಸಿಯಂಟ್ ಇಸ್ಕೆಮಿಕ್ ಅಟ್ಯಾಕ್ (TIA) ಅಥವಾ ಮಿನಿ ಸ್ಟ್ರೋಕ್ (Mini Stroke) ಆಗಿರಬಹುದು. ಇದು ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ದೊಡ್ಡ ಸ್ಟ್ರೋಕ್‌ಗೆ ಮುನ್ನೆಚ್ಚರಿಕೆ ನೀಡುವ ಪ್ರಮುಖ ಸಂಕೇತವೂ ಆಗಿರಬಹುದು .

ಮಿನಿ ಸ್ಟ್ರೋಕ್ ಎಂದರೇನು?

ಸಾಮಾನ್ಯವಾಗಿ ಮಿನಿ ಸ್ಟ್ರೋಕ್ (TIA) ಸಂದರ್ಭದಲ್ಲಿ ಮೆದುಳಿನ ಒಂದು ಭಾಗಕ್ಕೆ ಕೆಲಕಾಲ ರಕ್ತಸಂಚಾರ ಕಡಿಮೆಯಾಗುತ್ತದೆ. ಲಕ್ಷಣಗಳು ಕೆಲವೇ ನಿಮಿಷಗಳಲ್ಲಿ ಮಾಯವಾದರೂ ಅಪಾಯ ಸಂಪೂರ್ಣವಾಗಿ ತಪ್ಪಿದೆ ಎಂದರ್ಥವಲ್ಲ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದಿದ್ದರೆ ಭವಿಷ್ಯದಲ್ಲಿ ಗಂಭೀರ ಸ್ಟ್ರೋಕ್ ಸಂಭವಿಸುವ ಸಾಧ್ಯತೆ ಹೆಚ್ಚುತ್ತದೆ.

ಮಿನಿ ಸ್ಟ್ರೋಕ್‌ನ ಪ್ರಮುಖ ಲಕ್ಷಣಗಳು:

  • ಮುಖದ ಒಂದು ಭಾಗ ಬಾಗುವುದು
  • ಒಂದು ಕೈ ಅಥವಾ ಕಾಲಿನಲ್ಲಿ ದುರ್ಬಲತೆ ಅಥವಾ ಸಂವೇದನೆ ಕಳೆದುಕೊಳ್ಳುವುದು
  • ಮಾತನಾಡಲು ಅಥವಾ ಅರ್ಥಮಾಡಿಕೊಳ್ಳಲು ತೊಂದರೆ
  • ಒಂದು ಅಥವಾ ಎರಡೂ ಕಣ್ಣುಗಳಲ್ಲಿ ದೃಷ್ಟಿ ಮಸುಕಾಗುವುದು
  • ಹಠಾತ್ ತಲೆಸುತ್ತು ಅಥವಾ ಸಮತೋಲನ ಕಳೆದುಕೊಳ್ಳುವುದು
  • ಕಾರಣವಿಲ್ಲದೆ ತೀವ್ರ ತಲೆನೋವು

ಈ ಲಕ್ಷಣಗಳು 5–10 ನಿಮಿಷಗಳಲ್ಲಿ ಕಡಿಮೆಯಾದರೂ ಕೂಡ ತಕ್ಷಣ ಆಸ್ಪತ್ರೆಗೆ ತೆರಳಬೇಕು.

ಇದನ್ನೂ ಓದಿ: ಮೈಗ್ರೇನ್ ಮತ್ತು ರಕ್ತಹೀನತೆಗೆ ಸಂಬಂಧವಿದೆಯೇ? ಅಧ್ಯಯನದ ತಿಳಿದುಬಂದ ಅಚ್ಚರಿ ಮಾಹಿತಿ ಇಲ್ಲಿದೆ

ಯಾರಿಗೆ ಹೆಚ್ಚು ಅಪಾಯ?

ಅಧಿಕ ರಕ್ತದೊತ್ತಡ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಧೂಮಪಾನ, ಬೊಜ್ಜು, ಹೃದಯದ ಸಮಸ್ಯೆಗಳು, 55 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ ಕುಟುಂಬದಲ್ಲಿ ಸ್ಟ್ರೋಕ್ ಇತಿಹಾಸವಿರುವವರಿಗೆ ಅಪಾಯ ಹೆಚ್ಚಿರುತ್ತದೆ.

ಗೋಲ್ಡನ್ ಅವರ್ ಏಕೆ ಮುಖ್ಯ?

ಸ್ಟ್ರೋಕ್ ಚಿಕಿತ್ಸೆಯಲ್ಲಿ ಪ್ರತಿಯೊಂದು ನಿಮಿಷವೂ ಅಮೂಲ್ಯ. ಸಮಯಕ್ಕೆ ಆಸ್ಪತ್ರೆಗೆ ತಲುಪಿದರೆ ಮೆದುಳಿನ ಹಾನಿಯನ್ನು ಕಡಿಮೆ ಮಾಡುವ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.

ತಡೆಗಟ್ಟುವುದು ಹೇಗೆ?

ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ. ಆರೋಗ್ಯಕರ ಆಹಾರ ಸೇವಿಸಿ, ಪ್ರತಿದಿನ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಿ, ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ. ವೈದ್ಯರು ಸೂಚಿಸಿದ ಔಷಧಿಗಳನ್ನು ನಿಯಮಿತವಾಗಿ ಸೇವಿಸುವುದು ಹಾಗೂ ಮಿನಿ ಸ್ಟ್ರೋಕ್‌ ಆಗಿದ್ದರೆ ಫಾಲೋ-ಅಪ್‌ ಪರೀಕ್ಷೆಗಳನ್ನು ತಪ್ಪದೇ ಮಾಡಿಸಿಕೊಳ್ಳುವುದು ಅತ್ಯಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಜ್ಯದಲ್ಲಿ SIR ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ: ಪ್ರಹ್ಲಾದ್​ ಜೋಶಿ
ರಾಜ್ಯದಲ್ಲಿ SIR ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ: ಪ್ರಹ್ಲಾದ್​ ಜೋಶಿ
ನೆಲಮಂಗಲ: ಮನೆ ಮನೆಗೆ ಹೋಗುವ ಬದಲು ಮಸೀದಿಯಲ್ಲೇ ಕುಳಿತು SIR ಪತ್ರ ವಿತರಣೆ
ನೆಲಮಂಗಲ: ಮನೆ ಮನೆಗೆ ಹೋಗುವ ಬದಲು ಮಸೀದಿಯಲ್ಲೇ ಕುಳಿತು SIR ಪತ್ರ ವಿತರಣೆ
ಬತ್ತಿದ್ದ ಕೃಷ್ಣಾ ನದಿಗೆ ಜೀವ ಕಳೆ, 15 ಸಾವಿರ ಕ್ಯೂಸೆಕ್ ಒಳ ಹರಿವು
ಬತ್ತಿದ್ದ ಕೃಷ್ಣಾ ನದಿಗೆ ಜೀವ ಕಳೆ, 15 ಸಾವಿರ ಕ್ಯೂಸೆಕ್ ಒಳ ಹರಿವು
SIR ವಿವಾದ: ಸರ್ಕಾರದ ವಿರುದ್ಧ ಜಂಟಿ ಸಮರಕ್ಕೆ ಬಿಜೆಪಿ, ಜೆಡಿಎಸ್‌ ಸಿದ್ಧತೆ
SIR ವಿವಾದ: ಸರ್ಕಾರದ ವಿರುದ್ಧ ಜಂಟಿ ಸಮರಕ್ಕೆ ಬಿಜೆಪಿ, ಜೆಡಿಎಸ್‌ ಸಿದ್ಧತೆ
ಟ್ರಾಫಿಕ್ ಸಿಗ್ನಲ್​ನಲ್ಲಿ ನಿಂತಿದ್ದ ಎಸಿ ಬಸ್​ಗೆ ಮತ್ತೊಂದು ಬಸ್ ಡಿಕ್ಕಿ!
ಟ್ರಾಫಿಕ್ ಸಿಗ್ನಲ್​ನಲ್ಲಿ ನಿಂತಿದ್ದ ಎಸಿ ಬಸ್​ಗೆ ಮತ್ತೊಂದು ಬಸ್ ಡಿಕ್ಕಿ!
ಸರ್ಕಾರಿ ಕೆಲಸ ಕೊಡಿಸುವ ನೆಪದಲ್ಲಿ ವಂಚನೆ: ಟಿವಿ9 ವರದಿ ಬಳಿಕ ಆರೋಪಿಗಳ ಬಂಧನ
ಸರ್ಕಾರಿ ಕೆಲಸ ಕೊಡಿಸುವ ನೆಪದಲ್ಲಿ ವಂಚನೆ: ಟಿವಿ9 ವರದಿ ಬಳಿಕ ಆರೋಪಿಗಳ ಬಂಧನ
ಮಂಡ್ಯ ಫೈರಿಂಗ್: ಪ್ರಭಾವಿ ಪುತ್ರನ ಬೆನ್ನಿಗೆ ನಿಂತ್ರಾ ಎಸ್‌ಪಿ ಶೋಭಾರಾಣಿ?
ಮಂಡ್ಯ ಫೈರಿಂಗ್: ಪ್ರಭಾವಿ ಪುತ್ರನ ಬೆನ್ನಿಗೆ ನಿಂತ್ರಾ ಎಸ್‌ಪಿ ಶೋಭಾರಾಣಿ?
ರೌಡಿಶೀಟರ್​ಗಳಿಗೆ ಸಿಸಿಬಿ ಬಿಗ್ ಶಾಕ್, ರಾತ್ರೋರಾತ್ರಿ ಮಿಂಚಿನ ಕಾರ್ಯಾಚರಣೆ
ರೌಡಿಶೀಟರ್​ಗಳಿಗೆ ಸಿಸಿಬಿ ಬಿಗ್ ಶಾಕ್, ರಾತ್ರೋರಾತ್ರಿ ಮಿಂಚಿನ ಕಾರ್ಯಾಚರಣೆ
ಕೊರತೆ ತಪ್ಪಿಸಲು ಸಿಎಂ ಡಿಕೆ ಶಿವಕುಮಾರ್ ತುರ್ತು ಸಭೆ, ಅಧಿಕಾರಿಗಳಿಗೆ ಸೂಚನೆ
ಕೊರತೆ ತಪ್ಪಿಸಲು ಸಿಎಂ ಡಿಕೆ ಶಿವಕುಮಾರ್ ತುರ್ತು ಸಭೆ, ಅಧಿಕಾರಿಗಳಿಗೆ ಸೂಚನೆ
Video: ಮಕ್ಕಳ ನಡುವೆಯೇ ಚಾಪೆಯಲ್ಲಿತ್ತು 5 ಅಡಿಯ ಬೃಹತ್ ನಾಗರಹಾವು!
Video: ಮಕ್ಕಳ ನಡುವೆಯೇ ಚಾಪೆಯಲ್ಲಿತ್ತು 5 ಅಡಿಯ ಬೃಹತ್ ನಾಗರಹಾವು!