Weight Loss V/S Fat Loss: ತೂಕ ನಷ್ಟ – ಕೊಬ್ಬು ಕರಗಿಸುವುದರ ನಡುವಿನ ವ್ಯತ್ಯಾಸವೇನು? ಕೊಬ್ಬನ್ನು ಕರಗಿಸಲು 5 ಮಾರ್ಗಗಳು ಇಲ್ಲಿವೆ

ತೂಕ ನಷ್ಟ ಮತ್ತು ಕೊಬ್ಬು ನಷ್ಟ ಯಾವುದು ಸೂಕ್ತ ಎಂದರೆ ನಿಮ್ಮ ದೇಹಕ್ಕೆ ಅತ್ಯಂತ ಪರಿಣಾಮಕಾರಿ ರೀತಿಯಲ್ಲಿ ತೂಕವನ್ನು ಕಡಿಮೆ ಮಾಡಲು ಕೊಬ್ಬನ್ನು ಕಳೆದುಕೊಳ್ಳುವತ್ತ ಗಮನ ಹರಿಸಬೇಕು ಎಂದು ತಜ್ಞರು ತಿಳಿಸಿದ್ದಾರೆ.

Weight Loss V/S Fat Loss: ತೂಕ ನಷ್ಟ - ಕೊಬ್ಬು ಕರಗಿಸುವುದರ ನಡುವಿನ ವ್ಯತ್ಯಾಸವೇನು? ಕೊಬ್ಬನ್ನು ಕರಗಿಸಲು 5 ಮಾರ್ಗಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 13, 2023 | 2:45 PM

ತೂಕ ಇಳಿಸಿಕೊಳ್ಳಲು (Weight Loss) ಹರಸಾಹಸ ಮಾಡುವವರಿದ್ದಾರೆ. ಆದರೆ ತೂಕ ಕಡಿಮೆ ಮಾಡುವುದಕ್ಕಿಂತ ಮೊದಲು ದೇಹದಲ್ಲಿರುವ ಅನಾವಶ್ಯಕ ಕೊಬ್ಬು ಕರಗಿಸುವುದು ಒಳಿತು. ಹಾಗಾದರೆ ತೂಕ ನಷ್ಟ ಮತ್ತು ಕೊಬ್ಬು ನಷ್ಟ! ಇವೆರಡು ಒಂದೇಯಾ? ವ್ಯತ್ಯಾಸವೇನು? ಆರೋಗ್ಯ ತಜ್ಞರ ಪ್ರಕಾರ, “ಕೊಬ್ಬಿನ ನಷ್ಟವನ್ನು ಪ್ರಮಾಣದಲ್ಲಿ ತೋರಿಸಬಹುದು ಅಥವಾ ತೋರಿಸದಿರಬಹುದು. ತೂಕ ನಷ್ಟವು ಹೆಚ್ಚಾಗಿ ಪ್ರಮಾಣದಲ್ಲಿ ಕಂಡುಬರುತ್ತದೆ. ನೀವು ಅದರೊಂದಿಗೆ ಸ್ಪಷ್ಟವಾಗಿ ತೆಳ್ಳಗೆ ಕಾಣಿಸಬಹುದು ಅಥವಾ ಕಾಣಿಸದಿರಬಹುದು. ತೂಕ ನಷ್ಟ ಮತ್ತು ಕೊಬ್ಬು ನಷ್ಟ ಒಟ್ಟಿಗೆ ಸಂಭವಿಸಬಹುದು. ಆದರೆ ಇವೆರಡೂ ವಿಭಿನ್ನವಾಗಿವೆ. ಕೊಬ್ಬು ನಷ್ಟದ ವಿಷಯಕ್ಕೆ ಬಂದಾಗ ಕ್ಯಾಲೊರಿ ಕೊರತೆ ಇದಕ್ಕೆ ರಾಜ. ಆದರೆ ನಿಮ್ಮ ಆಹಾರ ಯೋಜನೆಯಿಂದ ಹೆಚ್ಚಿನ ಕ್ಯಾಲೊರಿ ಪಡೆದು ಉತ್ತಮ ಫಲಿತಾಂಶಗಳನ್ನು ನೀಡಲು ನಿಮಗೆ ಸಹಾಯ ಮಾಡುತ್ತದೆ.

ತೂಕ ನಷ್ಟ V/S ಕೊಬ್ಬಿನ ನಷ್ಟ

ಕೊಬ್ಬು ನಷ್ಟ ಮತ್ತು ತೂಕ ನಷ್ಟದ ನಡುವೆ ಸ್ವಲ್ಪ ವ್ಯತ್ಯಾಸವಿದೆ, ಆದರೂ ಅವುಗಳನ್ನು ಆಗಾಗ್ಗೆ ಪರ್ಯಾಯವಾಗಿ ಬಳಸಲಾಗುತ್ತದೆ. ತೂಕ ನಷ್ಟ ಎಂಬ ಪದವು ನಿಮ್ಮ ಒಟ್ಟು ದೇಹದ ತೂಕ ಕಡಿಮೆಯಾಗುವುದು. ಇದು ಕೊಬ್ಬಿನ ನಷ್ಟವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಹಾಗಾಗಿ ದೇಹದ ಕೊಬ್ಬಿನ ಅಂಶ ಕೆಡಿಮೆಯಾಗಿ ತೂಕ ಕಳೆದುಕೊಳ್ಳುವುದು ಎಂದರ್ಥ. ಇದರಿಂದ ತೂಕ ಕಳೆದುಕೊಳ್ಳುವತ್ತ ಗಮನ ಹರಿಸುವ ಬದಲು, ಕೊಬ್ಬನ್ನು ಕಡಿಮೆ ಮಾಡುವ ಗುರಿ ಇಟ್ಟರೆ ಆರೋಗ್ಯಕ್ಕೆ ಉತ್ತಮ.

ಇದನ್ನೂ ಓದಿ;Weight Loss Breakfast: ತೂಕ ನಷ್ಟಕ್ಕೆ ಸಹಕಾರಿ ಈ ರುಚಿಕರ ಜೋಳದ ಉಪ್ಪಿಟ್ಟು

ಕೊಬ್ಬನ್ನು ತ್ವರಿತವಾಗಿ ಕಳೆದುಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ

-ಪ್ರೋಟೀನ್ ಸೇವನೆಯನ್ನು ಹೆಚ್ಚಿಸಿ

-ಕಾರ್ಬೋಹೈಡ್ರೇಟ್​​ಗಳನ್ನು ಹೊರಗಿಡಬೇಡಿ, ಅವು ರುಚಿಕರವಾಗಿದ್ದು ಮತ್ತು ನಿಮ್ಮ ಯೋಜನೆಗೆ ದೀರ್ಘಕಾಲವಿರಲು ಸಹಾಯ ಮಾಡುತ್ತದೆ.

-ಕರಿದ ಮತ್ತು ಹೆಚ್ಚಿನ ಕ್ಯಾಲೊರಿ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ. ಕರಿದ ಆಹಾರಗಳ ಬದಲಿಗೆ ಬೇಯಿಸಿದ ಆಹಾರವನ್ನು ಆರಿಸಿ.

-ಸೂಪ್​​ಗಳು ಮತ್ತು ಸಲಾಡ್​​ಗಳನ್ನು ಹೆಚ್ಚಿಸಬಹುದು, ಅವುಗಳನ್ನು ಊಟದೊಂದಿಗೆ ಕೂಡ ತಿನ್ನಬಹುದು.

– ಕೊಬ್ಬನ್ನು ಕಡಿಮೆ ಮಾಡುವುದರಿಂದ ಸ್ನಾಯುವಿನ ದ್ರವ್ಯರಾಶಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ವಾಕಿಂಗ್, ರನ್ನಿಂಗ್, ಸೈಕ್ಲಿಂಗ್, ತೂಕ ತರಬೇತಿ, ಸರ್ಕ್ಯೂಟ್ ತರಬೇತಿ, ಈಜು, ಯೋಗ ಮತ್ತು ಪಿಲೇಟ್ಸ್ ಸೇರಿದಂತೆ ಇತರ ವ್ಯಾಯಾಮಗಳಿಂದ ಕೊಬ್ಬು ನಷ್ಟವನ್ನು ಯಶಸ್ವಿಯಾಗಿಸಬಹುದು. ತೂಕ ಇಳಿಸಿಕೊಳ್ಳಲು, ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವ ಆಹಾರವನ್ನು ಆಯ್ಕೆ ಮಾಡಬೇಕು. ತೂಕ ಇಳಿಸಿಕೊಳ್ಳಲು ದಿನಕ್ಕೆ 500 ಕ್ಯಾಲೊರಿ ಕೊರತೆ ಮಾತ್ರ ಬೇಕಾಗುತ್ತದೆ ಎಂದು ಹೆಲ್ತ್ಲೈನ್ ತಿಳಿಸಿದೆ. ಆದ್ದರಿಂದ, ನೀವು ಈಗ ತಿಳಿದು ಕೊಂಡಂತೆ, ಕೊಬ್ಬನ್ನು ಕಳೆದುಕೊಳ್ಳುವುದು ಮತ್ತು ತೂಕವನ್ನು ಕಳೆದುಕೊಳ್ಳುವುದರ ನಡುವೆ ಗಮನಾರ್ಹ ವ್ಯತ್ಯಾಸವಿದೆ. ಆರೋಗ್ಯಕರ ಜೀವನವನ್ನು ನಡೆಸಲು ಬಯಸಿದರೆ ತೂಕ ನಷ್ಟಕ್ಕಿಂತ ಕೊಬ್ಬು ನಷ್ಟವನ್ನು ಉತ್ತೇಜಿಸುವ ಜೀವನಶೈಲಿಯನ್ನು ಆರಿಸಿಕೊಂಡರೆ ಉತ್ತಮ.

Published On - 2:45 pm, Thu, 13 April 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್