ಐರನ್ ಕೊರತೆ ಇದ್ಯಾ? ಹಾಗಿದ್ರೆ ಈ ಆಹಾರಗಳನ್ನು ನೀವು ಸೇವನೆ ಮಾಡಲೇಬೇಕು

ಇತ್ತೀಚಿನ ದಿನಗಳಲ್ಲಿ ಅನೇಕರು ದೇಹದಲ್ಲಿ ಐರನ್ ಕೊರತೆಯಿಂದ ಬಳಲುತ್ತಿದ್ದಾರೆ. ಈ ಕೊರತೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಆದರೆ ಇದನ್ನು ನಿರ್ಲಕ್ಷ್ಯ ಮಾಡುವವರ ಸಂಖ್ಯೆ ಹೆಚ್ಚಾಗಿ ಇರುವುದರಿಂದ ಈ ರೀತಿಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾದರೆ ಈ ರೀತಿಯ ಸಮಸ್ಯೆಯನ್ನು ತಡೆಗಟ್ಟಲು ಏನು ಮಾಡಬಹುದು, ಯಾವ ರೀತಿಯ ಆಹಾರ ಐರನ್ ಕೊರತೆಯನ್ನು ನೀಗಿಸುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಐರನ್ ಕೊರತೆ ಇದ್ಯಾ? ಹಾಗಿದ್ರೆ ಈ ಆಹಾರಗಳನ್ನು ನೀವು ಸೇವನೆ ಮಾಡಲೇಬೇಕು
Beat Iron Deficiency with These Power Foods

Updated on: Apr 14, 2026 | 9:01 PM

ಇತ್ತೀಚಿನ ದಿನಗಳಲ್ಲಿ ಅನೇಕರು ದೇಹದಲ್ಲಿ ಐರನ್ ಕೊರತೆಯಿಂದ (Iron Deficiency) ಬಳಲುತ್ತಿದ್ದಾರೆ. ವಿಶೇಷವಾಗಿ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು, ಪೋಷಕಾಂಶಗಳ ಕೊರತೆ ಮತ್ತು ದೇಹದ ಹೆಚ್ಚಿದ ಅಗತ್ಯತೆಗಳು ಇದರ ಪ್ರಮುಖ ಕಾರಣಗಳಾಗಿವೆ. ಐರನ್ ಕೊರತೆಯಿಂದ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಾಗುತ್ತದೆ, ಇದರಿಂದ ದಣಿವು, ದುರ್ಬಲತೆ, ತಲೆ ಸುತ್ತು, ಉಸಿರಾಟದ ತೊಂದರೆ ಹೀಗೆ ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ ಇದನ್ನು ನಿರ್ಲಕ್ಷ್ಯ ಮಾಡುವವರ ಸಂಖ್ಯೆ ಹೆಚ್ಚಾಗಿ ಇರುವುದರಿಂದ ಈ ರೀತಿಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾದರೆ ಈ ರೀತಿಯ ಸಮಸ್ಯೆಯನ್ನು ತಡೆಗಟ್ಟಲು ಏನು ಮಾಡಬಹುದು, ಯಾವ ರೀತಿಯ ಆಹಾರ ಐರನ್ ಕೊರತೆಯನ್ನು ನೀಗಿಸುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಐರನ್ ಹೆಚ್ಚಿಸಲು ಯಾವ ಆಹಾರ ಸೇವನೆ ಮಾಡಬೇಕು?

ಸಾಮಾನ್ಯವಾಗಿ ಐರನ್ ಕೊರತೆಯನ್ನು ನಿವಾರಿಸಲು ಆಹಾರದಲ್ಲಿ ಐರನ್ ಸಮೃದ್ಧ ಪದಾರ್ಥಗಳನ್ನು ಸೇರಿಸಬೇಕು. ಪಾಲಕ್, ಮೆಂತೆ ಮತ್ತು ಸಾಸಿವೆ ಸೊಪ್ಪುಗಳಂತಹ ಹಸಿರು ಸೊಪ್ಪು ಉತ್ತಮ ಮೂಲಗಳಾಗಿವೆ. ಜೊತೆಗೆ ಬೀಟ್‌ರೂಟ್, ದಾಳಿಂಬೆ, ಖರ್ಜೂರ ಮತ್ತು ಒಣದ್ರಾಕ್ಷಿ ಹೀಮೋಗ್ಲೋಬಿನ್ ಹೆಚ್ಚಿಸಲು ಸಹಾಯಕವಾಗುತ್ತದೆ. ದಾಲ್, ಕಡಲೆ, ರಾಜ್ಮಾ ಮತ್ತು ಸೋಯಾಬೀನ್ ಕೂಡ ಐರನ್ ಸಮೃದ್ಧವಾಗಿದ್ದು, ನಿಯಮಿತವಾಗಿ ಸೇವಿಸಬೇಕು. ಮಾಂಸಾಹಾರ ಸೇವಿಸುವವರು ಮೊಟ್ಟೆ, ಮೀನು ಮತ್ತು ಕೋಳಿ ಮಾಂಸವನ್ನು ಆಹಾರದಲ್ಲಿ ಸೇರಿಸಬಹುದು.

ಇದನ್ನೂ ಓದಿ: ಮಹಿಳೆಯರಲ್ಲಿ ಐರನ್ ಕೊರತೆ ಇದ್ದಾಗ ಪ್ರೆಗ್ನೆನ್ಸಿಗೆ ಪ್ಲಾನ್ ಮಾಡ್ಬಾರ್ದು ಯಾಕೆ?

ಐರನ್ ಇರುವ ಆಹಾರ ಸೇವಿಸುವುದಷ್ಟೇ ಸಾಕಾಗುವುದಿಲ್ಲ, ಅದು ದೇಹದಲ್ಲಿ ಸರಿಯಾಗಿ ಅವಶೋಷಣೆಯಾಗಬೇಕು. ಇದಕ್ಕಾಗಿ ವಿಟಮಿನ್ ಸಿ ಇರುವ ನಿಂಬೆ, ಕಿತ್ತಳೆ ಮತ್ತು ನೆಲ್ಲಿಕಾಯಿ ಸೇವಿಸುವುದು ಉತ್ತಮ. ಇದು ಐರನ್ ಪೋಷಣೆಯನ್ನು ಹೆಚ್ಚಿಸುತ್ತದೆ. ಆದರೆ, ಐರನ್ ಸಮೃದ್ಧ ಆಹಾರಗಳೊಂದಿಗೆ ಚಹಾ ಅಥವಾ ಕಾಫಿ ಸೇವಿಸುವುದನ್ನು ತಪ್ಪಿಸಬೇಕು.

ಜೀವನಶೈಲಿಯ ಮಹತ್ವ

ಸರಿಯಾದ ಸಮಯಕ್ಕೆ ಆಹಾರ ಸೇವನೆ, ಸರಿಯಾಗಿ ನಿದ್ರೆ ಮತ್ತು ದೈನಂದಿನ ವ್ಯಾಯಾಮ ದೇಹದ ಆರೋಗ್ಯವನ್ನು ಉತ್ತಮವಾಗಿಡುತ್ತವೆ. ಐರನ್ ಕೊರತೆ ಹೆಚ್ಚಿದ್ದರೆ ವೈದ್ಯರ ಸಲಹೆಯೊಂದಿಗೆ ಸಪ್ಲಿಮೆಂಟ್ ತೆಗೆದುಕೊಳ್ಳಬಹುದು. ಐರನ್ ಕೊರತೆಯನ್ನು ಸರಿಯಾದ ಆಹಾರ ಮತ್ತು ಜೀವನಶೈಲಿಯಿಂದ ನಿಯಂತ್ರಿಸಬಹುದು. ನಿಯಮಿತ ಆರೋಗ್ಯ ತಪಾಸಣೆ ಮತ್ತು ಸಮತೋಲನ ಆಹಾರದಿಂದ ದೇಹವನ್ನು ಶಕ್ತಿಯುತವಾಗಿಡುವುದು ಅತ್ಯಂತ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us