
ಹಲಸಿನ ಹಣ್ಣು (Jackfruit) ಮಾರುಕಟ್ಟೆಗೆ ಬರಲಾರಂಭಿಸಿದೆ. ಬೇಸಿಗೆ (Summer) ಋತು ಬಂದಾಗ ತಿನ್ನಬೇಕು ಎಂದು ಅನಿಸುವ ಮೊದಲ ಹಣ್ಣುಗಳಲ್ಲಿ ಹಲಸಿನ ಹಣ್ಣು ಒಂದಾಗಿದೆ. ಮಕ್ಕಳಿಂದ ವಯಸ್ಕರ ವರೆಗೆ ಎಲ್ಲರೂ ಇದನ್ನು ತಿನ್ನಲು ಇಷ್ಟಪಡುತ್ತಾರೆ ಏಕೆಂದರೆ ಇದು ರುಚಿಕರವಾಗಿರುತ್ತದೆ. ಅದರಲ್ಲಿಯೂ ಇದು ಹಲವರಿಗೆ ಪ್ರೀಯವಾದ ಹಣ್ಣು. ಇದು ಬಾಯಿಗೆ ರುಚಿ ನೀಡುವುದು ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಹಲಸಿನ ಹಣ್ಣಿನಲ್ಲಿ ವಿಟಮಿನ್ ಎ, ಸಿ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಿವೆ. ಅವು ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುವುದಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಆದರೆ ಎಲ್ಲರೂ ಹಲಸಿನ ಹಣ್ಣನ್ನು ಇಷ್ಟಪಡುವುದಿಲ್ಲ. ಕೆಲವು ಆರೋಗ್ಯ ಸಮಸ್ಯೆಗಳಿರುವವರು ಇದನ್ನು ತಿನ್ನಬಾರದು ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಯಾರಿಗೆ ಇದು ಒಳ್ಳೆಯದಲ್ಲ? ಇದನ್ನು ಸೇವನೆ ಮಾಡುವುದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಹಲಸಿನ ಹಣ್ಣಿನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿರುವುದರಿಂದ ಮೂತ್ರಪಿಂಡದ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ. ಪೊಟ್ಯಾಸಿಯಮ್ ಅಧಿಕವಾಗಿರುವುದರಿಂದ, ಮೂತ್ರಪಿಂಡಗಳ ಕಾರ್ಯನಿರ್ವಹಣೆಗೆ ಹಾನಿಯಾಗುವ ಅಪಾಯವಿದೆ. ಆದ್ದರಿಂದ ಮೂತ್ರಪಿಂಡದ ಸಮಸ್ಯೆ ಇರುವವರು ಇದನ್ನು ತಿನ್ನದಿರುವುದು ಒಳ್ಳೆಯದು.
ಕೆಲವರಿಗೆ ಹಲಸಿನ ಹಣ್ಣನ್ನು ತಿಂದ ತಕ್ಷಣ ಚರ್ಮದ ಮೇಲೆ ದದ್ದುಗಳು, ಗಜ್ಜಿ, ತುರಿಕೆ ಮತ್ತು ಉಸಿರಾಟದ ತೊಂದರೆಗಳು ಉಂಟಾಗಬಹುದು. ಅಂತಹ ಜನರ ಮೇಲೆ ಹೆಚ್ಚು ಪರಿಣಾಮ ಬೀರಬಹುದು. ಅದಕ್ಕಾಗಿಯೇ ಅಲರ್ಜಿ ಸಮಸ್ಯೆ ಇರುವವರು ಇದನ್ನು ಸೇವನೆ ಮಾಡಬಾರದು.
ಸಕ್ಕರೆ ಕಾಯಿಲೆ ಇರುವವರು ಹಲಸಿನ ಹಣ್ಣನ್ನು ಹೆಚ್ಚು ತಿನ್ನಬಾರದು. ಇದರಲ್ಲಿ ನೈಸರ್ಗಿಕ ಸಕ್ಕರ ಅಂಶ ಅಧಿಕವಾಗಿರುತ್ತದೆ ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುವ ಅಪಾಯ ಇರುತ್ತದೆ ಹಾಗಾಗಿ ಮಧುಮೇಹ ಇರುವವರು ಈ ಹಣ್ಣಿನ ಸೇವನೆ ಮಾಡಬಾರದು.
ಕೆಲವು ರೀತಿಯ ಶಸ್ತ್ರಚಿಕಿತ್ಸೆಗಳಿಗೆ ಒಳಗಾದವರು ಹಲಸಿನ ಹಣ್ಣನ್ನು ತಿನ್ನಬಾರದು. ಇದು ಜೀರ್ಣಕಾರಿ ಸಮಸ್ಯೆಗಳನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ವಿಶೇಷವಾಗಿ ಹೊಟ್ಟೆ ನೋವಿನ ಸಮಸ್ಯೆಗಳು, ಗ್ಯಾಸ್, ಉಬ್ಬರದಂತಹ ಸಮಸ್ಯೆಗಳನ್ನು ಉಂಟು ಮಾಡಬಹುದು. ಆದ್ದರಿಂದ, ವೈದ್ಯರ ಸಲಹೆಯ ಪ್ರಕಾರ ಇದನ್ನು ಸೇವನೆ ಮಾಡುವುದು ಬಹಳ ಉತ್ತಮ.
ಇದನ್ನೂ ಓದಿ: ರಾತ್ರಿ ಹಲ್ಲುಜ್ಜದೇ ಮಲಗ್ತೀರಾ? ಇದು ನಿಮ್ಮ ಹೃದಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಗೊತ್ತಾ?
ಸಾಮಾನ್ಯವಾಗಿ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಹಲಸಿನ ಹಣ್ಣನ್ನು ಹೆಚ್ಚು ತಿನ್ನಬಾರದು. ಇದು ಕೆಲವರಲ್ಲಿ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಬಹುದು. ಆದ್ದರಿಂದ, ಇದನ್ನು ಸೇವನೆ ಮಾಡುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಸೂಕ್ತ.
ಹಲಸಿನ ಹಣ್ಣು ರುಚಿಕರ ಮಾತ್ರವಲ್ಲ, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಸಹ ಒದಗಿಸುತ್ತದೆ. ಆದರೆ ಕೆಲವರಿಗೆ ಇದು ಹಾನಿಕಾರಕವಾಗಬಹುದು. ಮೇಲೆ ತಿಳಿಸಿದ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು, ಹಲಸಿನ ಹಣ್ಣನ್ನು ತಿನ್ನುವ ಮೊದಲು ಒಮ್ಮೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:18 pm, Mon, 17 March 25