AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Foods to Avoid in Summer: ಬೇಸಿಗೆಯಲ್ಲಿ ಈ ಆಹಾರ ಸೇವನೆ ತಪ್ಪಿಸಿ! ಆರೋಗ್ಯ ಚೆನ್ನಾಗಿರುತ್ತೆ

ಬೇಸಿಗೆಯಲ್ಲಿ ನಾವು ಪ್ರತಿನಿತ್ಯ ಸೇವನೆ ಮಾಡುವ ಅನೇಕ ಆಹಾರಗಳು ನಮಗರಿವಿಲ್ಲದಂತೆ ದೇಹದ ನಿರ್ಜಲೀಕರಣಕ್ಕೆ ಕಾರಣವಾಗುತ್ತವೆ. ಹಾಗಾಗಿ ಉಪ್ಪು ಮತ್ತು ಮಸಾಲೆ ಅಧಿಕವಾಗಿರುವ ಆಹಾರಗಳು, ಹಾಗೆಯೇ ಹುರಿದ ಮತ್ತು ಕರಿದ ಆಹಾರಗಳು ಬೇಸಿಗೆಗೆ ಸೂಕ್ತವಲ್ಲ ಎಂದು ತಜ್ಞರು ಹೇಳುತ್ತಾರೆ. ಬದಲಿಗೆ, ಕಲ್ಲಂಗಡಿ, ಸೌತೆಕಾಯಿ, ಎಳನೀರು ಮತ್ತು ನಿಂಬೆ ರಸ ಇತ್ಯಾದಿ ಹಣ್ಣು, ತರಕಾರಿಗಳನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು. ಇದರ ಜೊತೆಗೆ ಬೇಸಿಗೆಯಲ್ಲಿ ಕೆಲವು ಆಹಾರಗಳನ್ನು ಸೇವನೆ ಮಾಡದಿದ್ದರೆ ತುಂಬಾ ಒಳ್ಳೆಯದು. ಅವು ಯಾವುದು? ಏಕೆ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.

Foods to Avoid in Summer: ಬೇಸಿಗೆಯಲ್ಲಿ ಈ ಆಹಾರ ಸೇವನೆ ತಪ್ಪಿಸಿ! ಆರೋಗ್ಯ ಚೆನ್ನಾಗಿರುತ್ತೆ
Summer Health TipsImage Credit source: Pinterest
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ|

Updated on: Mar 18, 2025 | 3:00 PM

Share

ಬೇಸಿಗೆಯಲ್ಲಿ ಸೇವನೆ ಮಾಡುವ ಆಹಾರಗಳ ಬಗ್ಗೆ ವಿಶೇಷವಾಗಿ ಗಮನ ಹರಿಸಬೇಕಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ವಾತಾವರಣ (atmosphere) ಸಾಕಷ್ಟು ಬಿಸಿಯಾಗಿರುವುದರಿಂದ ನಮ್ಮ ಆಹಾರ (food) ದೇಹವನ್ನು ಅದರಿಂದ ರಕ್ಷಿಸಿಕೊಳ್ಳುವುದಕ್ಕೆ ಪೂರಕವಾಗಿರಬೇಕು. ಬೇಸಿಗೆ (Summer) ಯಲ್ಲಿ ನೀರನ್ನು ಹೆಚ್ಚಾಗಿ ಕುಡಿಯುವುದರ ಜೊತೆಗೆ ಜಲಸಂಚಯನದಿಂದ ಸಮೃದ್ಧವಾಗಿರುವ ಹಣ್ಣು (fruit) ಮತ್ತು ತರಕಾರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಅದೇ ರೀತಿ, ಬೇಸಿಗೆಯಲ್ಲಿ ನಾವು ಪ್ರತಿನಿತ್ಯ ಸೇವನೆ ಮಾಡುವ ಅನೇಕ ಆಹಾರಗಳು ನಮಗರಿವಿಲ್ಲದಂತೆ ದೇಹದ ನಿರ್ಜಲೀಕರಣಕ್ಕೆ ಕಾರಣವಾಗುತ್ತವೆ. ಹಾಗಾಗಿ ಉಪ್ಪು (salt) ಮತ್ತು ಮಸಾಲೆ ಅಧಿಕವಾಗಿರುವ ಆಹಾರಗಳು, ಹಾಗೆಯೇ ಹುರಿದ ಮತ್ತು ಕರಿದ ಆಹಾರಗಳು ಬೇಸಿಗೆಗೆ ಸೂಕ್ತವಲ್ಲ ಎಂದು ತಜ್ಞರು ಹೇಳುತ್ತಾರೆ. ಬದಲಿಗೆ, ಕಲ್ಲಂಗಡಿ , ಸೌತೆಕಾಯಿ , ಎಳನೀರು ಮತ್ತು ನಿಂಬೆ ರಸ ಇತ್ಯಾದಿ ಹಣ್ಣು, ತರಕಾರಿಗಳನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು. ಇದರ ಜೊತೆಗೆ ಬೇಸಿಗೆಯಲ್ಲಿ ಕೆಲವು ಆಹಾರಗಳನ್ನು ಸೇವನೆ ಮಾಡದಿದ್ದರೆ ತುಂಬಾ ಒಳ್ಳೆಯದು. ಅವು ಯಾವುದು? ಏಕೆ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.

1. ಹೆಚ್ಚು ಉಪ್ಪಿರುವ ಆಹಾರಗಳು:

ಬೇಸಿಗೆಯಲ್ಲಿ ಉಪ್ಪು ಸಮೃದ್ಧವಾಗಿರುವ ಆಹಾರಗಳನ್ನು ಆದಷ್ಟು ತಪ್ಪಿಸುವುದು ಉತ್ತಮ. ಏಕೆಂದರೆ ಅತಿಯಾದ ಸೋಡಿಯಂ ಸೇವನೆಯು ದೇಹದಲ್ಲಿನ ಜಲಸಂಚಯನವನ್ನು ಕಡಿಮೆ ಮಾಡುತ್ತದೆ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ.

2. ಹುರಿದ ಆಹಾರ:

ಬೇಸಿಗೆಯಲ್ಲಿ ಬರ್ಗರ್, ಫ್ರೆಂಚ್ ಫ್ರೈಸ್, ಚಿಕನ್ ಫ್ರೈಸ್ ಮತ್ತು ಬಜ್ಜಿಯಂತಹ ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಸಾಧ್ಯವಾದಷ್ಟು ತಪ್ಪಿಸುವುದು ಉತ್ತಮ. ಇದು ದೇಹದ ನೀರಿನಾಂಶದ ಕೊರತೆಗೆ ಕಾರಣವಾಗಬಹುದು. ಇದಲ್ಲದೆ, ಅಂತಹ ಆಹಾರಗಳು ಜೀರ್ಣಕ್ರಿಯೆ ಪ್ರಕ್ರಿಯೆಯ ಮೇಲೂ ಪರಿಣಾಮ ಬೀರುತ್ತವೆ.

3. ಕಾಫಿ:

ಅತಿಯಾಗಿ ಕಾಫಿ ಕುಡಿಯುವುದರಿಂದ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಇದು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಬೇಸಿಗೆಯಲ್ಲಿ ಕಾಫಿ ಬಳಕೆಯನ್ನು ಮಿತಿಗೊಳಿಸುವುದು ಬಹಳ ಉತ್ತಮ.

4. ಉಪ್ಪಿನಕಾಯಿ:

ಉಪ್ಪಿನಕಾಯಿಗಳಲ್ಲಿ ಸೋಡಿಯಂ ಸಮೃದ್ಧವಾಗಿರುವುದರಿಂದ ಬೇಸಿಗೆಯಲ್ಲಿ ಅವುಗಳ ಸೇವನೆ ಮಾಡುವುದನ್ನು ಆದಷ್ಟು ತಪ್ಪಿಸುವುದು ಉತ್ತಮ. ಇದು ನಿರ್ಜಲೀಕರಣಕ್ಕೂ ಕಾರಣವಾಗಬಹುದು. ಇದಲ್ಲದೆ, ಹೆಚ್ಚು ಉಪ್ಪಿನಕಾಯಿ ಸೇವನೆಯು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು.

5. ಒಣ ಹಣ್ಣುಗಳು:

ಒಣ ಹಣ್ಣುಗಳು ಪೋಷಕಾಂಶ ಭರಿತವಾಗಿದ್ದರೂ, ಬೇಸಿಗೆಯಲ್ಲಿ ಅವುಗಳ ಬಳಕೆಯನ್ನು ಮಿತಿಗೊಳಿಸುವುದು ಉತ್ತಮ. ಒಣ ಹಣ್ಣುಗಳು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತವೆ ಮತ್ತು ಆ ಮೂಲಕ ಅಸ್ವಸ್ಥತೆಯನ್ನು ಉಂಟುಮಾಡುತ್ತವೆ.

ಇದನ್ನೂ ಓದಿ: ರಾತ್ರಿ ಹಲ್ಲುಜ್ಜದೇ ಮಲಗ್ತೀರಾ? ಇದು ನಿಮ್ಮ ಹೃದಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಗೊತ್ತಾ?

6. ಸೋಡಾ:

ಸೋಡಾದಂತಹ ಕಾರ್ಬೊನೇಟೆಡ್ ಪಾನೀಯಗಳು ಅತಿಯಾದ ಬಯಕೆಗೆ ಕಾರಣವಾಗುತ್ತವೆ. ಇದನ್ನು ಕುಡಿಯುವ ಹಂಬಲವು ಪದೇ ಪದೇ ಹೆಚ್ಚಾಗುತ್ತದೆ, ವಿಶೇಷವಾಗಿ ಬೇಸಿಗೆಯಲ್ಲಿ. ಆದರೆ ಇದರ ಅತಿಯಾದ ಬಳಕೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಇದು ನಿರ್ಜಲೀಕರಣಕ್ಕೂ ಕೂಡ ಕಾರಣವಾಗಬಹುದು.

7. ಮಸಾಲೆಯುಕ್ತ ಆಹಾರಗಳು:

ಬೇಸಿಗೆಯಲ್ಲಿ ಸಾಧ್ಯವಾದಷ್ಟು ಅತಿಯಾದ ಮಸಾಲೆಯುಕ್ತ ಆಹಾರವಗಳ ಸೇವನೆ ಮಾಡುವುದನ್ನು ತಪ್ಪಿಸುವುದು ಸಹ ಒಳ್ಳೆಯದು. ಮಸಾಲೆಯುಕ್ತ ಆಹಾರಗಳಲ್ಲಿ ಇರುವ ಕ್ಯಾಪ್ಸೈಸಿನ್ ಎಂಬ ಸಂಯುಕ್ತವು ನಿರ್ಜಲೀಕರಣ, ದೇಹದ ತಾಪಮಾನ ಹೆಚ್ಚಳ, ಅಜೀರ್ಣ ಮತ್ತು ಅಸ್ವಸ್ಥತೆಗೆ ಕಾರಣವಾಗುತ್ತದೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ