Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಂಜಲಿಯ ರೇನೋಗ್ರಿಟ್ ಟ್ಯಾಬ್ಲೆಟ್ ಕಿಡ್ನಿ ಸಮಸ್ಯೆಗೆ ರಾಮಬಾಣ! ಸಂಶೋಧನೆಯಿಂದ ಬಹಿರಂಗ

ರೇನೋಗ್ರಿಟ್ ಟ್ಯಾಬ್ಲೆಟ್ ಅಥವಾ ಪತಂಜಲಿ ದಿವ್ಯ ರೆನೋಗ್ರಿಟ್ ಟ್ಯಾಬ್ಲೆಟ್ ಕಿಡ್ನಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಪರಿಣಾಮಕಾರಿಯಾಗಿದೆ ಎಂಬುದು ಸಂಶೋಧನೆಗಳಿಂದ ಬಹಿರಂಗಗೊಂಡಿದೆ. ನೆಚರ್ ಜರ್ನಲ್‌ನಲ್ಲಿ ಈ ಸಂಶೋಧನೆಯ ಕುರಿತು ಕೆಲವು ಮಾಹಿತಿಗಳು ಪ್ರಕಟವಾಗಿದೆ. ಇದರಲ್ಲಿ ಹೇಳಿರುವಂತೆ, ಈ ಪತಂಜಲಿಯ ಔಷಧಿ ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲದೆಯೇ, ಕಿಡ್ನಿಗೆ ಸಂಬಂಧಿಸಿದ ಕಾಯಿಲೆಯನ್ನು ಗುಣಪಡಿಸುತ್ತದೆ ಎಂದು ಹೇಳಲಾಗಿದೆ.

ಪತಂಜಲಿಯ ರೇನೋಗ್ರಿಟ್ ಟ್ಯಾಬ್ಲೆಟ್ ಕಿಡ್ನಿ ಸಮಸ್ಯೆಗೆ ರಾಮಬಾಣ! ಸಂಶೋಧನೆಯಿಂದ ಬಹಿರಂಗ
Patanjali
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on:Mar 19, 2025 | 2:10 PM

ಪತಂಜಲಿ ಆಯುರ್ವೇದ (Ayurveda) ಔಷಧಿಗಳು ಆರೋಗ್ಯಕ್ಕೆ ಸಾಕಷ್ಟು ಲಾಭದಾಯಕವಾಗಿದೆ ಎಂಬ ಮಾತನ್ನು ಹಲವಾರು ಜನ ಹೇಳಿರುವುದನ್ನು ನೀವು ಕೇಳಿರಬಹುದು. ಕೆಲವರು ಅವುಗಳನ್ನು ಬಳಸಿಯೂ ಇರಬಹುದು. ಇಂತಹ ಔಷಧಿಗಳಲ್ಲಿ ರೇನೋಗ್ರಿಟ್ ಟ್ಯಾಬ್ಲೆಟ್ ಅಥವಾ ಪತಂಜಲಿ ದಿವ್ಯ ರೆನೋಗ್ರಿಟ್ ಟ್ಯಾಬ್ಲೆಟ್ (Patanjali Divya Renogrit Tablet) ಕೂಡ ಒಂದು. ಇದೀಗ ಈ ಟ್ಯಾಬ್ಲೆಟ್ ಕಿಡ್ನಿಗೆ (Kidney) ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಪರಿಣಾಮಕಾರಿಯಾಗಿದೆ ಎಂಬುದು ಸಂಶೋಧನೆಗಳಿಂದ ಬಹಿರಂಗಗೊಂಡಿದೆ. ನೆಚರ್ ಜರ್ನಲ್‌ನಲ್ಲಿ ಈ ಸಂಶೋಧನೆಯ ಕುರಿತು ಕೆಲವು ಮಾಹಿತಿಗಳು ಪ್ರಕಟವಾಗಿದೆ. ಇದರಲ್ಲಿ ಹೇಳಿರುವಂತೆ, ಈ ಪತಂಜಲಿಯ ಔಷಧಿ ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲದೆಯೇ, ಕಿಡ್ನಿಗೆ ಸಂಬಂಧಿಸಿದ ಕಾಯಿಲೆಯನ್ನು ಗುಣಪಡಿಸುತ್ತದೆ ಎಂದು ಹೇಳಲಾಗಿದೆ. ಹಾಗಾದರೆ ಇದು ಹೇಗೆ ಕೆಲಸ ಮಾಡುತ್ತದೆ? ಇದರಲ್ಲಿ ಯಾವ ರೀತಿಯ ವಸ್ತುಗಳನ್ನು ಬಳಕೆ ಮಾಡಲಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಂಶೋಧನೆಯಲ್ಲಿ ವಿವರಿಸಿರುವಂತೆ, ಈ ಔಷಧಿ ಕಿಡ್ನಿಯ ಬಾಧೆಗಳನ್ನು ತಡೆಯಲು ಸಹಕಾರಿಯಾಗಿದೆ. ಈ ರೇನೋಗ್ರಿಟ್ ಟ್ಯಾಬ್ಲೆಟ್ ಗಳನ್ನು ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಿಸಲಾಗಿದ್ದು, ಇದು ಮೂತ್ರಪಿಂಡದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ, ಮೂತ್ರಪಿಂಡದ ಕಾಯಿಲೆಗಳನ್ನು ತಡೆಗಟ್ಟಲು ಕೂಡ ಸಹಾಯ ಮಾಡುತ್ತದೆ. ರೆನೋಗ್ರಿಟ್ ಟ್ಯಾಬ್ಲೆಟ್ ಒಂದು ಆಯುರ್ವೇದ ಔಷಧಿಯಾಗಿರುವುದರಿಂದ ಇದು ಮೂತ್ರಪಿಂಡದ ಅಸ್ವಸ್ಥತೆಗಳನ್ನು ನಿವಾರಣೆ ಮಾಡುವುದಲ್ಲದೆ ಮೂತ್ರಪಿಂಡದ ಆರೋಗ್ಯವನ್ನು ನೈಸರ್ಗಿಕವಾಗಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ ಈ ಔಷಧಿಯನ್ನು ಸಂಪೂರ್ಣವಾಗಿ ಆಯುರ್ವೇದದಲ್ಲಿ ಬಳಕೆ ಮಾಡುವ, ಔಷಧಿ ಗುಣಗಳಿರುವ, ಹುಲ್ಲುಗಳಿಂದ ತಯಾರಿಸಲಾಗಿದೆ. ಇದರಲ್ಲಿ ಅಪಮಾರ್ಗ್ (Apamarg -Achyranthes aspera), ಪಾಶಾನ್ ಬೆಡ್ (Pashanbed -Bergenia ligulata), ಪಲಾಶ್ (Palash Butea monosperma), ವರುಣ್, ಪುನರ್ನವಮೂಲ್ (Punarnavamool -Boerhavia diffusa), ಕಾಸ್ನಿ (Kasni -Cichorium intybus), ಗೋಖರು (Gokharu -Tribulus Terrestris) ಗಳನ್ನು ಬಳಕೆ ಮಾಡಲಾಗಿದೆ. ಹಾಗಾಗಿ ಈ ಟ್ಯಾಬ್ಲೆಟ್ ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ ಜೊತೆಗೆ ದೀರ್ಘಕಾಲದ ಮೂತ್ರಪಿಂಡದ ಪರಿಸ್ಥಿತಿಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಅಧ್ಯಯನ ಹೇಳುವುದೇನು?

ನೆಚರ್ ಜರ್ನಲ್‌ ಸೈನ್ಟಿಫಿಕ್ ರಿಪೋರ್ಟ್‌ಗಳು ವಿಶ್ವದ ಐದನೇ ಅತ್ಯಂತ ಪ್ರಾತಿಷ್ಠಿತ ಜರ್ನಲ್ ಆಗಿದ್ದು, ಈ ಸಂಶೋಧನೆ ಮೂಲಕ ಪತಂಜಲಿ ಔಷಧಿಯು ಯಾವುದೇ ಅಡ್ಡಪರಿಣಾಮಗಳಿಲ್ಲದೆ ಕಿಡ್ನಿ ಕಾಯಿಲೆಯನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಎಂಬುದನ್ನು ದೃಢೀಕರಿಸಿದೆ. ಜೊತೆಗೆ ಪತಂಜಲಿ ಔಷಧಿ ಕಿಡ್ನಿಯ ಮೇಲೆ ಇತರ ಔಷಧಿಗಳ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಇದು ಕಿಡ್ನಿ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ ಮತ್ತು ಇದರಿಂದ ಕಿಡ್ನಿ ತನ್ನ ಕಾರ್ಯವನ್ನು ಹೆಚ್ಚಿಸಿಕೊಳ್ಳುತ್ತದೆ. ಈ ಔಷಧಿ ಶರೀರದಿಂದ ಅಪಾಯಕಾರಿಯ ಟಾಕ್ಸಿನ್‌ಗಳನ್ನು ಹೊರಹಾಕಲು ಸಹಕಾರಿಯಾಗಿದೆ ಎಂಬುದನ್ನು ತಿಳಿಸಿದ್ದು, ರೀನೋಗ್ರಿಟ್ ಅನ್ನು ಸೇವಿಸುವುದರಿಂದ ಶರೀರಕ್ಕೆ ಯಾವುದೇ ರೀತಿಯಲ್ಲಿಯೂ ದುಷ್ಪರಿಣಾಮ ಉಂಟಾಗುವುದಿಲ್ಲ ಎಂಬುದನ್ನು ಕೂಡ ತಿಳಿಸಿದೆ.

ಇದನ್ನೂ ಓದಿ
Image
ಬೇಸಿಗೆಯಲ್ಲಿ ಈ ಆಹಾರ ಸೇವನೆ ತಪ್ಪಿಸಿ! ಆರೋಗ್ಯ ಚೆನ್ನಾಗಿರುತ್ತೆ
Image
ಈ ಆರೋಗ್ಯ ಸಮಸ್ಯೆ ಇದ್ದರೆ ಅಪ್ಪಿತಪ್ಪಿಯೂ ಹಲಸಿನ ಹಣ್ಣನ್ನು ತಿನ್ನಬೇಡಿ
Image
ರಾತ್ರಿ ಹಲ್ಲುಜ್ಜದೇ ಇರುವುದು ಹೃದಯ ಸಂಬಂಧಿ ಕಾಯಿಲೆಗೆ ಕಾರಣವಾಗಬಹುದು
Image
ಪ್ರತಿವರ್ಷ ರಾಷ್ಟ್ರೀಯ ಲಸಿಕೆ ದಿನವನ್ನು ಆಚರಿಸಲು ಕಾರಣವೇನು?

ಮತ್ತಷ್ಟು ಓದಿ: Pregnancy Care: ಗರ್ಭಿಣಿಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ವಿಷಯಗಳನ್ನು ಪಾಲನೆ ಮಾಡಿ

ಈ ಬಗ್ಗೆ ಆಚಾರ್ಯ ಬಾಲಕೃಷ್ಣ ಅವರು, “ರೀನೋಗ್ರಿಟ್ ಔಷಧಿ ಕಿಡ್ನಿ ಕಾಯಿಲೆಗಳ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎಂಬುದನ್ನು ಪ್ರಸಿದ್ಧ ಅಮೆರಿಕ ಪತ್ರಿಕೆ ನೆಚರ್ ಜರ್ನಲ್‌ ಪ್ರಕಟಗೊಂಡಿದೆ. ಹಾಗಾಗಿ ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಇಲ್ಲ ಎಂಬುದು ಎಲ್ಲರಿಗೂ ತಿಳಿದಿದೆ” ಎಂದಿದ್ದಾರೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:10 pm, Wed, 19 March 25

ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ