Mosquito bite: ಬಿಯರ್ ಕುಡಿಯುವವರನ್ನು ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ! ಯಾಕೆ ಗೊತ್ತಾ?
Mosquitoes: ಸೊಳ್ಳೆಯಿಂದ ಕಚ್ಚಿಸಿಕೊಳ್ಳದವರು ಮತ್ತು ಸೊಳ್ಳೆಯೇ ಇಲ್ಲದ ಪ್ರದೇಶ ಬಹುಶಃ ಈ ಭೂಮಿಯ ಮೇಲೆ ಎಲ್ಲೂ ಇಲ್ಲ! ಪ್ರತಿ ಮನೆಯಲ್ಲೂ ಸೊಳ್ಳೆಗಳು ಕಂಡುಬರುತ್ತವೆ. ನಿಮಗೆ ಗೊತ್ತೇ ಇರುತ್ತದೆ... ಸೊಳ್ಳೆಗಳು ಆಯ್ದ ಕೆಲವನ್ನು ಮಾತ್ರವೇ ಆರಿಸಿ, ಆರಿಸಿ ಹೆಚ್ಚು ಕಚ್ಚುತ್ತವೆ. ಆಶ್ಚರ್ಯ ಅಂದರೆ ಕೆಲವರ ತಂಟೆಗೆ ಅದು ಹೋಗುವುದಿಲ್ಲ.
Mosquitoes Are Attracted to Certain Blood Types: ಸೊಳ್ಳೆಯಿಂದ ಕಚ್ಚಿಸಿಕೊಳ್ಳದವರು ಮತ್ತು ಸೊಳ್ಳೆಯೇ ಇಲ್ಲದ ಪ್ರದೇಶ ಬಹುಶಃ ಈ ಭೂಮಿಯ ಮೇಲೆ ಎಲ್ಲೂ ಇಲ್ಲ! ಪ್ರತಿ ಮನೆಯಲ್ಲೂ ಸೊಳ್ಳೆಗಳು ಕಂಡುಬರುತ್ತವೆ. ಸೊಳ್ಳೆಗಳು ಕೆಲವು ರಕ್ತದ ಗುಂಪುಗಳಿಗೆ ಆಕರ್ಷಿತವಾಗುತ್ತವೆ. ನಿಮಗೆ ಗೊತ್ತೇ ಇರುತ್ತದೆ… ಸೊಳ್ಳೆಗಳು ಆಯ್ದ ಕೆಲವನ್ನು ಮಾತ್ರವೇ ಆರಿಸಿ, ಆರಿಸಿ ಹೆಚ್ಚು ಕಚ್ಚುತ್ತವೆ. ಆಶ್ಚರ್ಯ ಅಂದರೆ ಕೆಲವರ ತಂಟೆಗೆ ಅದು ಹೋಗುವುದಿಲ್ಲ. ವಾಸ್ತವವಾಗಿ, ಹೆಣ್ಣು ಸೊಳ್ಳೆಗಳು ಮಾತ್ರ ಮನುಷ್ಯರನ್ನು ಕಚ್ಚುತ್ತವೆ. ಅವು ನಮ್ಮ ದೇಹದಿಂದ ರಕ್ತದ ಮೂಲಕ ಪ್ರೋಟೀನುಗಳನ್ನು ಸಂಗ್ರಹಿಸುತ್ತವೆ. ಹಾಗಾಗಿ ಕೆಲವು ನಿರ್ದಿಷ್ಟ ರಕ್ತದ ಗುಂಪುಗಳ ಜನರನ್ನು ಅವು ಹೆಚ್ಚು ಕಚ್ಚುತ್ತವೆ ಎನ್ನುತ್ತವೆ ಅಧ್ಯಯನಗಳು.
ಮನುಷ್ಯರ ಉಸಿರಾಟ ವಾಸನೆಯ ಮೂಲಕ ರಕ್ತದ ಗುಂಪು ಕಂಡುಹಿಡಿಯುತ್ತವೆ!
A-ಗುಂಪಿನ ರಕ್ತ ಹೊಂದಿರುವ ಜನರು ವಿಶೇಷವಾಗಿ ಸೊಳ್ಳೆ ಕಡಿತಕ್ಕೆ ತುತ್ತಾಗುತ್ತಾರೆ. ಆದರೆ O-ಬ್ಲಡ್ ಗ್ರೂಪ್ ಇರುವವರನ್ನು ಅದಕ್ಕಿಂತ ಎರಡು ಪಟ್ಟು ಹೆಚ್ಚು ರಕ್ತ ಹೀರುತ್ತದೆ. ಸೊಳ್ಳೆಗಳು ಮನುಷ್ಯರ ಉಸಿರಾಟದ ವಾಸನೆಯ ಮೂಲಕ ಜನರ ರಕ್ತದ ಗುಂಪುಗಳನ್ನು ಕಂಡುಹಿಡಿಯುತ್ತವೆ. ಕಾರ್ಬನ್ ಡೈಆಕ್ಸೈಡ್ ಜೊತೆಗೆ, ಸೊಳ್ಳೆಗಳು ಲ್ಯಾಕ್ಟಿಕ್ ಆಮ್ಲ, ಯೂರಿಕ್ ಆಸಿಡ್, ಅಮೋನಿಯಾ ಮತ್ತು ಬೆವರಿನ ಮೂಲಕ ಬಿಡುಗಡೆಯಾಗುವ ಇತರ ವಸ್ತುಗಳನ್ನು ವಾಸನೆ ಮೂಲಕ ಗ್ರಹಿಸಬಹುದು. ಲ್ಯಾಕ್ಟಿಕ್ ಆಮ್ಲವು ದೇಹದಲ್ಲಿ ಶಾಖವನ್ನು ಉತ್ಪಾದಿಸುತ್ತದೆ. ಸೊಳ್ಳೆಗಳು ಅದನ್ನು ಪತ್ತೆ ಮಾಡಬಹುದು. ರಕ್ತದಲ್ಲಿ ಯೂರಿಕ್ ಆಸಿಡ್ ಅಧಿಕವಾಗಿರುವ ಜನರನ್ನು ಸೊಳ್ಳೆಗಳು ಕಚ್ಚುತ್ತವೆ.
ಬಿಯರ್ ಕುಡಿಯುವವರನ್ನು ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ! ಯಾಕೆ ಗೊತ್ತಾ?
ಸಂಶೋಧಕರು 2011 ರ ಅಧ್ಯಯನದಲ್ಲಿ ಈ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಕೆಲವು ಜನರು ಬ್ಯಾಕ್ಟೀರಿಯಾದ ಸೋಂಕಿಗೆ ಹೆಚ್ಚು ಒಳಗಾಗುತ್ತಾರೆ ಎಂದು ಅವರ ಸಂಶೋಧನೆಯಿಂದ ತಿಳಿದುಬಂದಿದೆ. ಹೆಚ್ಚು ಬಿಯರ್ ಕುಡಿಯುವವರಿಗೂ ಸೊಳ್ಳೆಗಳು ಕಚ್ಚುತ್ತವೆ. ಪ್ರತಿನಿತ್ಯ ಬಿಯರ್ ಕುಡಿಯುವವರ ಬೆವರಿನ ಮೂಲಕ ಎಥೆನಾಲ್ ಬಿಡುಗಡೆಯಾಗುತ್ತದೆ. ಹಾಗಾಗಿ ಬಿಯರ್ ಪ್ರಿಯರು ಸೊಳ್ಳೆಗಳ ಕಾಟ ಹೆಚ್ಚು ಎಂದು ಹೇಳಬಹುದು.
ಅಲ್ಲದೆ, ಗರ್ಭಿಣಿಯರನ್ನು ಸಹ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ. ಕಾರಣ ಗರ್ಭಿಣಿಯರ ದೇಹದ ಉಷ್ಣತೆ ಹೆಚ್ಚಾಗಿರುತ್ತದೆ. ಅಲ್ಲದೆ ಅವರ ದೇಹದಿಂದ ಹೆಚ್ಚು ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ. ಅದಕ್ಕೆ ಸೊಳ್ಳೆಗಳು ಹೆಚ್ಚು ಆಕರ್ಷಿತವಾಗುತ್ತವೆ.