Ash Gourd: ತೂಕ ಇಳಿಸಿಕೊಳ್ಳಬೇಕೆ? ನಿತ್ಯ ಬೂದುಗುಂಬಳಕಾಯಿ ಜ್ಯೂಸ್ ಕುಡಿಯಿರಿ

| Updated By: ನಯನಾ ರಾಜೀವ್

Updated on: Jul 01, 2022 | 1:30 PM

ತೂಕ ಇಳಿಸಿಕೊಳ್ಳಲು ವ್ಯಾಯಾಮದ ಜತೆಗೆ ನಾವು ತೆಗೆದುಕೊಳ್ಳುವ ಆಹಾರ, ಕುಡಿಯುವ ಪಾನೀಯವು ಪ್ರಮುಖ ಪಾತ್ರವಹಿಸುತ್ತವೆ. ಹಾಗೆಯೇ ನಿತ್ಯ ಬೆಳಗ್ಗೆ ಬೂದುಗುಂಬಳದ( Ash Gourd)ಜ್ಯೂಸ್ ಕುಡಿಯುವುದರಿಂದ ನೀವು ತೂಕವನ್ನು ಇಳಿಸಿಕೊಳ್ಳಬಹುದು. ಇದು ಬಾಡಿಯನ್ನು ಡಿಟಾಕ್ಸ್ ಮಾಡಲು ಸಹಾಯ ಮಾಡುತ್ತದೆ

Ash Gourd: ತೂಕ ಇಳಿಸಿಕೊಳ್ಳಬೇಕೆ? ನಿತ್ಯ ಬೂದುಗುಂಬಳಕಾಯಿ ಜ್ಯೂಸ್ ಕುಡಿಯಿರಿ
Ash Gourd
Follow us on

ತೂಕ ಇಳಿಸಿಕೊಳ್ಳಲು ವ್ಯಾಯಾಮದ ಜತೆಗೆ ನಾವು ತೆಗೆದುಕೊಳ್ಳುವ ಆಹಾರ, ಕುಡಿಯುವ ಪಾನೀಯವು ಪ್ರಮುಖ ಪಾತ್ರವಹಿಸುತ್ತವೆ. ಹಾಗೆಯೇ ನಿತ್ಯ ಬೆಳಗ್ಗೆ ಬೂದುಗುಂಬಳದ( Ash Gourd)ಜ್ಯೂಸ್ ಕುಡಿಯುವುದರಿಂದ ನೀವು ತೂಕವನ್ನು ಇಳಿಸಿಕೊಳ್ಳಬಹುದು. ಇದು ಬಾಡಿಯನ್ನು ಡಿಟಾಕ್ಸ್ ಮಾಡಲು ಸಹಾಯ ಮಾಡುತ್ತದೆ.

ಶೀತ, ಕೆಮ್ಮನ್ನು ಕಡಿಮೆ ಮಾಡಲು ಕೂಡ ಬೂದುಗುಂಬಳವನ್ನು ಬಳಕೆ ಮಾಡಲಾಗುತ್ತದೆ. ಮಿಜೋರಾಂನ ಜನರು ಡೀಸೆಂಟ್ರಿ ಲಕ್ಷಣಗಳಿದ್ದರೆ ಬೂದುಗುಂಬಳದ ಜ್ಯೂಸ್, ಸೂಪ್​ ಅನ್ನು ಕುಡಿಯುತ್ತಾರೆ.ಬೂದುಗುಂಬಳಕಾಯಿಯನ್ನು ದೃಷ್ಟಿ ತೆಗೆಯಲು, ಮನೆಯೆದುರು ನೇತು ಹಾಕಲು ಬಳಸುತ್ತಾರೆ ಆದರೆ ಇದು ಆರೋಗ್ಯಕ್ಕೂ ಬಹಳ ಉತ್ತಮ.

ಬೂದುಗುಂಬಳಕಾಯಿಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ ಸಿಕ್ಸ್ ಹೆಚ್ಚಾಗಿರುತ್ತದೆ ಅಲ್ಲದೆ ಕ್ಯಾಲ್ಶಿಯಂ, ಪ್ರೋಟೀನ್, ಮೆಗ್ನೀಷಿಯಂ, ಜಿಂಕ್, ಐರನ್ ಮುಂತಾದ ಆರೋಗ್ಯಕರ ಅಂಶಗಳು ಹಾಗೂ ನಾರಿನ ಅಂಶ, ನೀರಿನ ಅಂಶ ಹೆಚ್ಚಾಗಿರುತ್ತದೆ.

ವಿಶೇಷವಾದ ಬೂದುಗುಂಬಳಕಾಯಿಯ ಜ್ಯೂಸ್ ತಯಾರಿಸುವುದು ಹೇಗೆಂದರೆ ಬೂದುಗುಂಬಳಕಾಯಿಯು ಗಾತ್ರದಲ್ಲಿ ದೊಡ್ಡದಾಗಿದ್ದು ಬೇಕಾದಷ್ಟು ಮಾತ್ರ ಬಳಸಬಹುದು ಉಳಿದಿರುವುದನ್ನು ಫ್ರಿಜ್ ನಲ್ಲಿ ಇಡಬಹುದು.
ಬೂದುಗುಂಬಳಕಾಯಿಯ ಸಿಪ್ಪೆಯನ್ನು ಮತ್ತು ಬೀಜವನ್ನು ತೆಗೆದು ಸಣ್ಣದಾಗಿ ಕಟ್ ಮಾಡಿಕೊಳ್ಳಬೇಕು ನಂತರ ಅದನ್ನು ಮಿಕ್ಸಿಗೆ ಹಾಕಿ ನೀರು ಹಾಕದೆ ಗ್ರೈಂಡ್ ಮಾಡಿಕೊಳ್ಳಬೇಕು.

ನಂತರ ಫಿಲ್ಟರ್ ಮಾಡಿ ಬೇಕಾದರೆ ಅದಕ್ಕೆ ಪೆಪ್ಪರ್ ಪೌಡರ್ ಸೇರಿಸಿ ಕುಡಿಯಬಹುದು. ಮಕ್ಕಳಿಗೆ 100ml ನಷ್ಟು ದೊಡ್ಡವರಿಗೆ 200ml ಕುಡಿಯಬಹುದು.

ಬೂದುಗುಂಬಳ ಸೇವನೆಯಿಂದ ಆಗುವ ಪ್ರಯೋಜನಗಳೇನು? ಎಂಬುದರ ಕುರಿತ ಮಾಹಿತಿ ಇಲ್ಲಿದೆ

ದೇಹದಲ್ಲಿರುವ ಬೇಡದ ಅಂಶವನ್ನು ಹೊರಹಾಕುತ್ತದೆ: ಬೂದುಗುಂಬಳಕಾಯಿ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ಹೊರಹೋಗುತ್ತವೆ.

ತೂಕ ಇಳಿಕೆಗೆ ಸಹಕಾರಿ: ಬೂದುಗುಂಬಳವು ತೂಕ ಇಳಿಕೆಗೆ ಸಹಕಾರಿಯಾಗಿದೆ. ಬೂದುಗುಂಬಳದಲ್ಲಿ ಕಡಿಮೆ ಪ್ರಮಾಣದ ಕ್ಯಾಲೊರಿಗಳಿದ್ದು, ಫೈಬರ್ ಅಂಶ ಹೆಚ್ಚಿರುತ್ತದೆ, ಯೋಗ, ವ್ಯಾಯಾಮದ ಜತೆಗೆ ಬೂದುಗುಂಬಳ ಜ್ಯೂಸ್ ಸೇವನೆಯಿಂದ ತೂಕವನ್ನು ಬಹುಬೇಗ ಕಳೆದುಕೊಳ್ಳಬಹುದು.

ದೇಹವನ್ನು ತಂಪಾಗಿರಿಸುತ್ತದೆ: ಬೂದುಗುಂಬಳಕಾಯಿ ಜ್ಯೂಸ್ ಕುಡಿಯುವುದರಿಂದ ನಿಮ್ಮ ದೇಹವನ್ನು ತಂಪಾಗಿರಿಸಿಕೊಳ್ಳಬಹುದು. ಹಾಗೆಯೇ ಆಹಾರಗಳನ್ನು ಸುಲಭವಾಗಿ ಜೀರ್ಣಸಿಕೊಳ್ಳಲು ಸಹಾಯ ಮಾಡುತ್ತದೆ.

ಕರುಳು ಆರೋಗ್ಯ ಕಾಪಾಡುತ್ತದೆ: ಬೂದುಗುಂಬಳ ಜ್ಯೂಸ್ ಕುಡಿಯುವುದರಿಂದ ನಿಮ್ಮ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಮಲಬದ್ಧತೆ ಸೇರಿದಂತೆ ಉದರಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯೂ ನಿಮ್ಮನ್ನು ಬಾಧಿಸುವುದಿಲ್ಲ.

ಸದಾ ಚೈತನ್ಯರಾಗಿರುತ್ತೀರಿ: ಬೂದುಗುಂಬಳ ಜ್ಯೂಸ್ ಕುಡಿಯುವುದರಿಂದ ನಿಮ್ಮ ದೇಹಕ್ಕೆ ಜಿಂಕ್, ಕ್ಯಾಲ್ಶಿಯಂ, ಫಾಸ್ಪರಸ್, ವಿಟಮಿನ್ ಅಂಶಗಳು ದೇಹದೊಳಗೆ ಹೋಗಿ ನೀವು ಸದಾ ಲವಲವಿಕೆಯಿಂದಿರುವಂತೆ ಮಾಡುತ್ತದೆ

Published On - 1:13 pm, Fri, 1 July 22