ನ್ಯುಮೋನಿಯಾ ಅಪಾಯ; ಚಳಿಗಾಲದಲ್ಲಿ ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ಶೀತ ವಾತಾವರಣ ವೈರಸ್‌ಗಳು ಗಾಳಿಯಲ್ಲಿ ದೀರ್ಘಕಾಲ ಉಳಿಯಲು ಅನುವು ಮಾಡಿಕೊಡುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಹೀಗಾಗಿ, ಚಳಿಗಾಲದಲ್ಲಿ ನಿಮ್ಮ ಶ್ವಾಸಕೋಶಗಳನ್ನು ರಕ್ಷಿಸಲು ಉತ್ತಮ ಮಾರ್ಗಗಳು ಯಾವುವು? ಎಂಬುದರ ಮಾಹಿತಿ ಇಲ್ಲಿದೆ.

ನ್ಯುಮೋನಿಯಾ ಅಪಾಯ; ಚಳಿಗಾಲದಲ್ಲಿ ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
ಸುಷ್ಮಾ ಚಕ್ರೆ
|

Updated on: Dec 11, 2023 | 2:49 PM

ಚಳಿಗಾಲದಲ್ಲಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಸಾಮಾನ್ಯ. ಚಳಿಗಾಲದ ತಣ್ಣನೆಯ ಗಾಳಿಯು ಶ್ವಾಸನಾಳವನ್ನು ಕೆರಳಿಸುತ್ತದೆ. ಇದರಿಂದ ಕೆಲವು ಜನರಿಗೆ ಉಸಿರಾಡಲು ಸಹ ಕಷ್ಟವಾಗಿ, ನ್ಯುಮೋನಿಯಾ ಅಪಾಯವನ್ನು ಹೆಚ್ಚಿಸುತ್ತದೆ. ತಜ್ಞರ ಪ್ರಕಾರ, ಅನೇಕ ಜನರು ಅದರಲ್ಲೂ ವಿಶೇಷವಾಗಿ ವಯಸ್ಸಾದವರು ಚಳಿಗಾಲದ ತಿಂಗಳುಗಳಲ್ಲಿ ಹೆಚ್ಚಿನ ಸಮಯವನ್ನು ಮನೆಯೊಳಗೆ ಕಳೆಯುತ್ತಾರೆ. ಇದು ಉಸಿರಾಟದ ಸೋಂಕುಗಳನ್ನು ಹರಡುವ ಅಪಾಯವನ್ನು ಹೆಚ್ಚಿಸುತ್ತದೆ.

ಶೀತ ಪರಿಸ್ಥಿತಿಗಳು ವೈರಸ್‌ಗಳು ಗಾಳಿಯಲ್ಲಿ ದೀರ್ಘಕಾಲ ಉಳಿಯಲು ಅನುವು ಮಾಡಿಕೊಡುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಹೀಗಾಗಿ, ಚಳಿಗಾಲದಲ್ಲಿ ನಿಮ್ಮ ಶ್ವಾಸಕೋಶಗಳನ್ನು ರಕ್ಷಿಸಲು ಉತ್ತಮ ಮಾರ್ಗಗಳು ಯಾವುವು? ಎಂಬುದರ ಮಾಹಿತಿ ಇಲ್ಲಿದೆ.

ನಿಮ್ಮ ಕೈಗಳನ್ನು ತೊಳೆದುಕೊಳ್ಳಿ:

ದಿನವೂ ನಿಯಮಿತವಾಗಿ ನಿಮ್ಮ ಕೈಗಳನ್ನು ಸೋಪ್ ಮತ್ತು ನೀರಿನಿಂದ ತೊಳೆದುಕೊಳ್ಳುವುದು ಅತ್ಯಗತ್ಯ. ಇದರಿಂದ ಕೈಗಳ ಮೂಲಕ ಮೂಗಿಗೆ ಮತ್ತು ಬಾಯಿಗೆ ಸೋಂಕು ಹರಡುವುದು ಕಡಿಮೆಯಾಗುತ್ತದೆ. ವೈದ್ಯರ ಪ್ರಕಾರ, ಸೂಕ್ಷ್ಮಜೀವಿಗಳು ಕಣ್ಣು, ಮೂಗು ಮತ್ತು ಬಾಯಿಯಲ್ಲಿ ಲೋಳೆಯ ಪೊರೆಗಳ ಮೂಲಕ ಹರಡುತ್ತವೆ. ಆದ್ದರಿಂದ, ವೈರಸ್‌ಗಳು ನಿಮ್ಮ ಕೈಗಳನ್ನು ಸ್ಪರ್ಶಿಸಿದರೆ ಬಳಿಕ ಅದು ದೇಹದ ಇತರ ಭಾಗಗಳಿಗೆ ಹರಡಿ ನೀವು ಅನಾರೋಗ್ಯಕ್ಕೆ ಒಳಗಾಗುತ್ತೀರಿ.

ದೀರ್ಘಕಾಲದ ರೋಗ ನಿರ್ವಹಣೆ:

ಮಧುಮೇಹ, ಮತ್ತು ಹೃದಯ ಸಮಸ್ಯೆಗಳಂತಹ ದೀರ್ಘಕಾಲದ ಆರೋಗ್ಯ ತೊಂದರೆಗಳಿಗೆ ಸರಿಯಾದ ಚಿಕಿತ್ಸೆ ಪಡೆಯುವುದು ಮತ್ತು ನ್ಯುಮೋನಿಯಾ ಹರಡುವ ಅಪಾಯವನ್ನು ಕಡಿಮೆ ಮಾಡಲು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಬಹಳ ಮುಖ್ಯ.

ಇದನ್ನೂ ಓದಿ: Pregnant Women: ಡೆಂಘಿ ಜ್ವರ ಗರ್ಭಿಣಿ ಹಾಗೂ ಭ್ರೂಣದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ?

ಜೀವನಶೈಲಿಯನ್ನು ಬದಲಿಸಿ:

ನ್ಯುಮೋನಿಯಾದಂತಹ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುವುದನ್ನು ತಪ್ಪಿಸಲು ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಅದರಲ್ಲೂ ವಿಶೇಷವಾಗಿ ವಯಸ್ಸಾದವರು ತಮ್ಮ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸಬೇಕು.

ಸಾಮಾಜಿಕ ಅಂತರ ಕಾಯ್ದುಕೊಳ್ಳಿ:

ನೀವು ಶೀತ ಅಥವಾ ಚಳಿಯಲ್ಲಿ ಹೊರಗೆ ಹೋಗುವಾಗ ನಿಮ್ಮ ಮೂಗಿಗೆ ಮಾಸ್ಕ್ ಧರಿಸುವುದನ್ನು ಮರೆಯಬೇಡಿ. ಇದರಿಂದ ವೈರಸ್ ಹರಡುವುದನ್ನು ಕೊಂಚ ಮಟ್ಟಿಗೆ ತಪ್ಪಿಸಬಹುದು. ತಂಪಾದ ಗಾಳಿಯು ಶುಷ್ಕವಾಗಿರುವುದರಿಂದ ನೀವು ಆಸ್ತಮಾ, COPD ಅಥವಾ ಬ್ರಾಂಕೈಟಿಸ್ ಹೊಂದಿದ್ದರೆ ಅದು ಶ್ವಾಸನಾಳಗಳನ್ನು ಕೆರಳಿಸಬಹುದು ಎಂದು ವೈದ್ಯರು ಹೇಳುತ್ತಾರೆ. ಇದು ಉಬ್ಬಸ, ಕೆಮ್ಮು ಮತ್ತು ಉಸಿರಾಟದ ತೊಂದರೆಗೆ ಕಾರಣವಾಗಬಹುದು.

ಚಳಿಗಾಲದಲ್ಲಿ ಮರದ ತುಂಡುಗಳನ್ನು ಸುಡಬೇಡಿ:

ಚಳಿ ಹೆಚ್ಚಾದಂತೆ ಕೆಲವರು ಬೆಚ್ಚಗಾಗಲು ಕಟ್ಟಿಗೆ ಸುಟ್ಟು ಮೈಕಾಯಿಸಿಕೊಳ್ಳುವುದು ಸಾಮಾನ್ಯ ಅಭ್ಯಾಸವಾಗಿದೆ. ಶೀತವನ್ನು ನಿವಾರಿಸಲು ಇದು ಉತ್ತಮ ಮಾರ್ಗವೆಂದು ತೋರುತ್ತದೆಯಾದರೂ, ಇದರಿಂದ ನೀವು ಆಸ್ತಮಾ, ಅಲರ್ಜಿಗಳು ಮತ್ತು ಇತರ ಶ್ವಾಸಕೋಶದ ಕಾಯಿಲೆಗಳನ್ನು ಹೊಂದಿದ್ದರೆ ಅದು ಹೆಚ್ಚಾಗಬಹುದು. ಹಾಗೇ ಇದು ನ್ಯುಮೋನಿಯಾದ ಅಪಾಯವನ್ನು ಹೆಚ್ಚಿಸುತ್ತದೆ.

ಇನ್ಹೇಲರ್ ಬಳಸಿ:

ನೀವು ಆಸ್ತಮಾ ಅಥವಾ COPD ಹೊಂದಿದ್ದರೆ, ನಿಮ್ಮ ಇನ್ಹೇಲರ್ ಅನ್ನು ಯಾವಾಗಲೂ ಹತ್ತಿರದಲ್ಲಿಟ್ಟುಕೊಳ್ಳಿ . ನೀವು ಉಸಿರಾಟದ ತೊಂದರೆಯನ್ನು ಅನುಭವಿಸಲು ಪ್ರಾರಂಭಿಸಿದ ತಕ್ಷಣ, ನಿಮ್ಮ ಇನ್ಹೇಲರ್ ಬಳಸಿ.

ಇದನ್ನೂ ಓದಿ: ನ್ಯುಮೋನಿಯಾ: ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆ ಹೇಗೆ? ಇಲ್ಲಿದೆ ವಿವರ

ನ್ಯುಮೋನಿಯಾ ಎಂದರೇನು?:

ನ್ಯುಮೋನಿಯಾವು ಬ್ಯಾಕ್ಟೀರಿಯಾ, ವೈರಲ್ ಅಥವಾ ಶಿಲೀಂಧ್ರಗಳ ಸೋಂಕಿನಿಂದ ನಿಮ್ಮ ಶ್ವಾಸಕೋಶದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಯಾಗಿದೆ. ಇದರಿಂದ ಉಸಿರಾಡಲು ಕಷ್ಟವಾಗುತ್ತದೆ ಮತ್ತು ಹಳದಿ, ಹಸಿರು ಅಥವಾ ರಕ್ತಸಿಕ್ತ ಕಫದೊಂದಿಗೆ ಜ್ವರ ಮತ್ತು ಕೆಮ್ಮನ್ನು ಉಂಟುಮಾಡಬಹುದು. ಫ್ಲೂ, ಕೋವಿಡ್-19 ಮತ್ತು ನ್ಯುಮೋಕೊಕಲ್ ಕಾಯಿಲೆಗಳು ನ್ಯುಮೋನಿಯಾಕ್ಕೆ ಸಾಮಾನ್ಯ ಕಾರಣಗಳಾಗಿವೆ.

ನ್ಯುಮೋನಿಯಾದ ಲಕ್ಷಣಗಳೇನು?:

ನ್ಯುಮೋನಿಯಾದ ರೋಗಲಕ್ಷಣಗಳು ಹೀಗಿವೆ. ಅಧಿಕ ಜ್ವರ, ಹಳದಿ, ಹಸಿರು ಅಥವಾ ರಕ್ತಸಿಕ್ತ ಲೋಳೆಯೊಂದಿಗೆ ಕೆಮ್ಮು, ದಣಿವು, ತ್ವರಿತ ಉಸಿರಾಟ, ಉಸಿರಾಟದ ತೊಂದರೆ, ಎದೆ ನೋವು ಅಥವಾ ಹೊಟ್ಟೆ ನೋವು, ಹಸಿವಾಗದಿರುವುದು, ಗೊಂದಲ ಅಥವಾ ಬದಲಾದ ಮಾನಸಿಕ ಸ್ಥಿತಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು