Headache: ಸಾಕಷ್ಟು ನಿದ್ದೆಯ ನಂತರವೂ ತಲೆ ಭಾರ ಎಂದೆನಿಸುತ್ತಿದೆಯೇ? ಕಾರಣ ಇಲ್ಲಿ ತಿಳಿದುಕೊಳ್ಳಿ

ನಿಮಗೂ ಸಾಕಷ್ಟು ಹೊತ್ತು ನಿದ್ದೆಯ ಬಳಿಕ ತಲೆ ಭಾರ, ಆಯಾಸದಂತಹ ಅನುಭವವಾಗುತ್ತಿದ್ದರೆ ಎಂದಿಗೂ ನಿರ್ಲಕ್ಷಿಸಬೇಡಿ. ಹಾಗಾದರೆ ಈ ತಲೆನೋವಿಗೆ ನಿಖರವಾದ ಕಾರಣಗಳು ಯಾವುವು ಮತ್ತು ತಲೆನೋವಿಗೆ ಏನು ಮಾಡಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Headache: ಸಾಕಷ್ಟು ನಿದ್ದೆಯ ನಂತರವೂ ತಲೆ ಭಾರ ಎಂದೆನಿಸುತ್ತಿದೆಯೇ? ಕಾರಣ ಇಲ್ಲಿ ತಿಳಿದುಕೊಳ್ಳಿ
Headache
Follow us
ಅಕ್ಷತಾ ವರ್ಕಾಡಿ
|

Updated on: Dec 10, 2023 | 6:40 PM

ರಾತ್ರಿ ಚೆನ್ನಾಗಿ ನಿದ್ದೆ ಮಾಡಿದರೆ , ಬೆಳಗ್ಗೆ ಎದ್ದ ನಂತರ ತಾಜಾತನದ ಅನುಭವವಾಗುತ್ತದೆ. ಆರೋಗ್ಯಕರ ಜೀವನಶೈಲಿಗೆ ಪ್ರತಿದಿನ 7 ರಿಂದ 8 ಗಂಟೆಗಳ ನಿದ್ದೆ ಅವಶ್ಯಕವಾಗಿರುತ್ತದೆ. ಏಕೆಂದರೆ ಸರಿಯಾಗಿ ನಿದ್ದೆ ಮಾಡದಿದ್ದರೆ ಹಲವಾರು ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಸಾಕಷ್ಟು ನಿದ್ರೆ ಮಾಡುವುದು ಅವಶ್ಯಕ. ಆದರೆ ಹೆಚ್ಚಿನ ಜನರು ಸಾಕಷ್ಟು ನಿದ್ದೆ ಮಾಡಿದ ನಂತರವೂ ಬೆಳಿಗ್ಗೆ ಎದ್ದ ನಂತರ ಆಯಾಸ, ತಲೆ ಭಾರ, ತಲೆಸುತ್ತು ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಾರೆ. ಕೆಲವರಿಗೆ ಬೆಳಗ್ಗೆ ಎದ್ದಾಗ ತಲೆನೋವು ಬರುತ್ತದೆ. ನಿಮಗೂ ಸಾಕಷ್ಟು ಹೊತ್ತು ನಿದ್ದೆಯ ಬಳಿಕ ತಲೆ ಭಾರ, ಆಯಾಸದಂತಹ ಅನುಭವವಾಗುತ್ತಿದ್ದರೆ ಎಂದಿಗೂ ನಿರ್ಲಕ್ಷಿಸಬೇಡಿ. ಹಾಗಾದರೆ ಈ ತಲೆನೋವಿಗೆ ನಿಖರವಾದ ಕಾರಣಗಳು ಯಾವುವು ಮತ್ತು ತಲೆನೋವಿಗೆ ಏನು ಮಾಡಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಒತ್ತಡ:

ಪ್ರಸ್ತುತ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ, ಹೆಚ್ಚಿನ ಜನರು ಒತ್ತಡದ ಜೀವನ ನಡೆಸುತ್ತಿದ್ದಾರೆ. ಕೆಲಸದ ಒತ್ತಡ, ಮನೆಯ ಸಮಸ್ಯೆ ಹೀಗೆ ಹಲವು ಕಾರಣಗಳು ಮಾನಸಿಕ ಆರೋಗ್ಯವನ್ನು ಕಡೆಸುತ್ತದೆ. ಈ ಕಾರಣದಿಂದಾಗಿ, ಸರಿಯಾಗಿ ನಿದ್ರೆ ಬರದಿರುವುದರಿಂದ ಸಾಕಷ್ಟು ಜನರು ಬೆಳಿಗ್ಗೆ ತಲೆನೋವಿನ ಸಮಸ್ಯೆ ಎದುರಿಸುತ್ತಾರೆ. ಅಲ್ಲದೆ, ನಿದ್ರಾಹೀನತೆ, ಖಿನ್ನತೆ, ಒತ್ತಡ, ಖಿನ್ನತೆ, ಅತಿಯಾಗಿ ಯೋಚಿಸುವುದು ಮುಂತಾದ ಹಲವು ಕಾರಣಗಳು ತಲೆನೋವಿಗೆ ಕಾರಣವಾಗಬಹುದು.

ಸ್ಲೀಪ್ ಡಿಸಾರ್ಡರ್ಸ್:

ಹೆಚ್ಚಿನ ಜನರು ನಿದ್ರಾಹೀನತೆಯನ್ನು ಹೊಂದಿರುತ್ತಾರೆ. ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಜನರು ತಲೆನೋವಿನಿಂದ ಬಳಲುತ್ತಿದ್ದಾರೆ. ನಿದ್ರೆಯನ್ನು ನಿಯಂತ್ರಿಸುವ ಮೆದುಳಿನ ಭಾಗವು ನಮ್ಮ ನೋವನ್ನು ಸಹ ನಿಯಂತ್ರಿಸುತ್ತದೆ. ಆದ್ದರಿಂದ ಆ ಭಾಗವು ತೊಂದರೆಗೊಳಗಾಗಿದ್ದರೆ, ನಾವು ತಲೆನೋವಿನಿಂದ ಬಳಲಬಹುದು.

ಇದನ್ನೂ ಓದಿ: ಪುರುಷರನ್ನೂ ಕಾಡುತ್ತಿದೆ ಅಪಾಯಕಾರಿ ಸ್ತನ ಕ್ಯಾನ್ಸರ್; ಆರಂಭಿಕ ಲಕ್ಷಣಗಳು ಹೀಗಿವೆ

ಶಿಫ್ಟ್ ಕೆಲಸ:

ಹೆಚ್ಚಿನವರಿಗೆ ಕೆಲಸದ ಪಾಳಿಗಳು ಬದಲಾಗುತ್ತವೆ. ಹಾಗಾಗಿ ಈ ಬದಲಾವಣೆಯಿಂದ ನಿದ್ದೆಯ ಸಮಯಕ್ಕೆ ಅಡ್ಡಿಯುಂಟಾಗಬಹುದು.ಇದು ತಲೆನೋವಿಗೆ ಕಾರಣವಾಗಬಹುದು. ನಿದ್ರೆಯ ಸಮಯದ ಬದಲಾವಣೆ ಸಾಕಷ್ಟು ಸುಸ್ತು ಆಯಾಸಕ್ಕೂ ಕಾರಣವಾಗಬಹುದು.

ಈ ತಲೆನೋವಿನ ಸಮಸ್ಯೆ ನಿಮಗೂ ಕಾಡುತ್ತಿದ್ದರೆ ಅದನ್ನು ಪರಿಹರಿಸಿಕೊಳ್ಳುವುದು ಅಗತ್ಯ. ಅದಕ್ಕಾಗಿ ವೈದ್ಯರ ಬಳಿ ತೆರಳಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಇದಲ್ಲದೇ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಯಾವುದರ ಬಗ್ಗೆಯೂ ಅತಿಯಾಗಿ ಯೋಚಿಸದೆ ಶಾಂತವಾಗಿ ಮತ್ತು ಸಾಕಷ್ಟು ನಿದ್ರೆ ಮಾಡಿ. ಇದರಿಂದ ನಿಮ್ಮ ತಲೆನೋವಿನ ಸಮಸ್ಯೆ ಕಡಿಮೆಯಾಗುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ