World Biriyani Day 2024: ನಾಟಿ ಸ್ಟೈಲ್ ದೊನ್ನೆ ಬಿರಿಯಾನಿ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ?
Nati Style Donne Biriyani Recipe: ಬೆಂಗಳೂರಿನ ಮೂಲೆ ಮೂಲೆಯಲ್ಲೂ ಈ ದೊನ್ನೆ ಬಿರಿಯಾನಿ, ಘಮ ಘಮಿಸುತ್ತದೆ. ಇದನ್ನು ಮಲೆನಾಡು ಭಾಗದಲ್ಲಿಯೂ ನಾವು ಕಾಣಬಹುದಾಗಿದೆ. ಬಾಯಲ್ಲಿ ನೀರೂರಿಸುವ ಈ ದೊನ್ನೆ ಬಿರಿಯಾನಿ ತಿನ್ನದವರಿಲ್ಲ. ಇತರ ಬಿರಿಯಾನಿಗಳಿಗೆ ಹೋಲಿಸಿದರೆ ಇದು ವಿಭಿನ್ನ ರುಚಿ ಮತ್ತು ಪರಿಮಳವನ್ನು ಹೊಂದಿರುತ್ತದೆ. ಜೊತೆಗೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುವುದು ಇದರ ವಿಶೇಷತೆಯಾಗಿದೆ. ಹಾಗಾ್ದರೆ ಇದನ್ನು ಮನೆಯಲ್ಲಿಯೇ ರುಚಿ ರುಚಿಯಾಗಿ ಮಾಡುವುದರ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳಿ.
ಬಾಯಲ್ಲಿ ನೀರೂರಿಸುವ ಮಾಂಸಹಾರಿ ಖಾದ್ಯಗಳಲ್ಲಿ ದೊನ್ನೆ ಬಿರಿಯಾನಿಯೂ ಒಂದು. ಬೆಂಗಳೂರಿನ ಮೂಲೆ ಮೂಲೆಯಲ್ಲೂ ಈ ದೊನ್ನೆ ಬಿರಿಯಾನಿ, ಘಮ ಘಮಿಸುತ್ತದೆ. ಇದನ್ನು ಮಲೆನಾಡು ಭಾಗದಲ್ಲಿಯೂ ನಾವು ಕಾಣಬಹುದಾಗಿದೆ. ಬಾಯಲ್ಲಿ ನೀರೂರಿಸುವ ಈ ದೊನ್ನೆ ಬಿರಿಯಾನಿ ತಿನ್ನದವರಿಲ್ಲ. ಇತರ ಬಿರಿಯಾನಿಗಳಿಗೆ ಹೋಲಿಸಿದರೆ ಇದು ವಿಭಿನ್ನ ರುಚಿ ಮತ್ತು ಪರಿಮಳವನ್ನು ಹೊಂದಿರುತ್ತದೆ. ಜೊತೆಗೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುವುದು ಇದರ ವಿಶೇಷತೆಯಾಗಿದೆ. ಹಾಗಾ್ದರೆ ಇದನ್ನು ಮನೆಯಲ್ಲಿಯೇ ರುಚಿ ರುಚಿಯಾಗಿ ಮಾಡುವುದರ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳಿ.
ಬೇಕಾಗುವ ಸಾಮಗ್ರಿಗಳು;
1 ಕೆಜಿ ನಾಟಿ ಕೋಳಿ ಮಾಂಸ
1 ಕೆಜಿ ಅಕ್ಕಿ (20 ನಿಮಿಷ ನೆನೆಸಿದ)
2 ಚಮಚ ಲಿಂಬೆ ರಸ
1 ಚಮಚ ಕಾರದ ಪುಡಿ
1 ಚಮಚ ಅರಿಶಿನ
6 ಹಸಿ ಮೆಣಸು
1 ಕಪ್ ಕೊತ್ತಂಬರಿ ಸೊಪ್ಪು
1/2 ಕಪ್ ಪುದೀನಾ ಎಲೆಗಳು
4 ಈರುಳ್ಳಿ
1 ಚಮಚ ಶುಂಠಿ ಪೇಸ್ಟ್
2 ಚಮಚ ಬೆಳ್ಳುಳ್ಳಿ ಪೇಸ್ಟ್
ನಾಲ್ಕೈದು ಇಂಚಿನ ದಾಲ್ಚಿನ್ನಿ
1 ಟೀ ಸ್ಪೂನ್ ಬಿರಿಯಾನಿ ಮಸಾಲಾ
4 ಏಲಕ್ಕಿ
4 ಲವಂಗ
ಸ್ವಲ್ಪ ಮೆಂತ್ಯ
250 ಗ್ರಾಂ ಮೊಸರು
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಮೊದಲು ಬಾಣಲೆಯಲ್ಲಿ 2 ಟೀ ಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ದಾಲ್ಚಿನ್ನಿ, ಲವಂಗ ಮತ್ತು ಕರಿಮೆಣಸು ಸೇರಿಸಿ ಪರಿಮಳ ಬರುವವರೆಗೆ ಹುರಿದುಕೊಳ್ಳಿ.
ಬಳಿಕ ಅದಕ್ಕೆ ಈರುಳ್ಳಿ ಸೇರಿಸಿ ಸ್ವಲ್ಪ ಕಂದು ಬಣ್ಣ ಬರುವವರೆಗೂ ಚೆನ್ನಾಗಿ ಹುರಿದುಕೊಳ್ಳಿ. ಈ ಮಿಶ್ರಣಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಮತ್ತು ನೀವು ತಿನ್ನುವ ಖಾರಕ್ಕೆ ಅನುಗುಣವಾಗಿ ಮೆಣಸಿನಕಾಯಿಗಳನ್ನು ಸೇರಿಸಿ.
1/2 ಕಪ್, 1 ಕಪ್ ಕೊತ್ತಂಬರಿ ಸೊಪ್ಪು, ಸ್ವಲ್ಪ ಮೆಂತ್ಯದ ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಪರಿಮಳ ಬರುವವರೆಗೆ ಹುರಿಯಿರಿ. ಈ ಮಿಶ್ರಣ ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಅರೆದು ಪೇಸ್ಟ್ ಮಾಡಿಕೊಟ್ಟುಕೊಳ್ಳಿ.
ಬಳಿಕ ಇನ್ನೊಂದು ಬದಿಯಲ್ಲಿ ಒಂದು ಕುಕ್ಕರ್‌ನಲ್ಲಿ ಅರ್ಧ ಕಪ್ ಎಣ್ಣೆ ಮತ್ತು ನಾಲ್ಕು ಚಮಚ ತುಪ್ಪ ಬಿಸಿ ಮಾಡಿ. ದಾಲ್ಚಿನ್ನಿ, ಏಲಕ್ಕಿ, ಲವಂಗ, ಕರಿಮೆಣಸು ಮತ್ತು ಜೀರಿಗೆ ಸೇರಿಸಿ. ಕಡಿಮೆ ಉರಿಯಲ್ಲಿ ಪರಿಮಳ ಬರುವವರೆಗೆ ಹುರಿಯಿರಿ.
ಸಣ್ಣಗೆ ಕತ್ತರಿಸಿದ ಈರುಳ್ಳಿಯನ್ನು ಕುಕ್ಕರ್‌ಗೆ ಹಾಕಿ, ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ.
ಬಳಿಕ ಚಿಕನ್ ಪೀಸ್‌ಗಳನ್ನು ಕುಕ್ಕರ್‌ಗೆ ಹಾಕಿ, ಹಸಿ ವಾಸನೆ ಹೋಗುವವರೆಗೂ ಹುರಿದುಕೊಳ್ಳಿ. ಈ ಸಮಯದಲ್ಲಿ ಚೂರು ಉಪ್ಪು ಸೇರಿಸಿಕೊಂಡು ಒಂದು ವಿಸಲ್ ಕೂಗಿಸಿ.
ವಿಸಲ್ ತೆಗೆದು ಮಿಕ್ಸರ್‌ನಲ್ಲಿ ಅರೆದ ಪೇಸ್ಟ್ ಅನ್ನು ಕುಕ್ಕರ್‌ಗೆ ಹಾಕಿ. ಅದರಲ್ಲಿಯ ಹಸಿ ವಾಸನೆ ಹೋಗುವವರೆಗೂ ಚೆನ್ನಾಗಿ ಬೇಯಿಸಿಕೊಳ್ಳಿ.
ಬಿರಿಯಾನಿ ಮಸಾಲಾ, ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ ಹಾಕಿ ಎಲ್ಲ ಮಸಾಲಾವನ್ನು ಚೆನ್ನಾಗಿ ಫ್ರೈ ಮಾಡಿ. ಬಳಿಕ ಉರಿ ಕಡಿಮೆ ಮಾಡಿ, ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
20 ನಿಮಿಷ ನೆನೆಸಿದ ಜೀರಾ ಅಕ್ಕಿಯನ್ನು ಕುಕ್ಕರ್‌ಗೆ ಹಾಕಿ, ಅಕ್ಕಿಯ ಅಳತೆಯ ಆಧಾರದ ಮೇಲೆ ನೀರನ್ನು ಸೇರಿಸಿ, ನಿಂಬೆ ಹಣ್ಣನ್ನು ಹಿಂಡಿ ಮಧ್ಯಮ ಉರಿಯಲ್ಲಿ ಎರಡು ವಿಸಲ್ ಕೂಗಿಸಿ.
ಅದಾದ ಅರ್ಧಗಂಟೆ ಬಳಿಕ ಚಿಕನ್ ಗ್ರೇವಿ ಜೊತೆಗೆ ಬಿರಿಯಾನಿ ಸವಿಯಿರಿ.
ಇದನ್ನೂ ಓದಿ: ಮನೆಯಲ್ಲೇ ಕೋಲ್ಕತ್ತ ಚಿಕನ್ ಬಿರಿಯಾನಿ ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ರೆಸಿಪಿ
ಆರೋಗ್ಯ ಪ್ರಯೋಜನಗಳೇನು?
ಒಂದು ಪ್ಲೇಟ್ ಬಿರಿಯಾನಿಯಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್ಸ್ ಮತ್ತು ಕೊಬ್ಬು ಇದ್ದು, ಕೋಳಿ ಮಾಂಸದಿಂದ ಪ್ರೋಟೀನ್ ಲಭ್ಯವಾಗುತ್ತದೆ. ಕಾರ್ಬೋಹೈಡ್ರೇಟ್ಸ್ ಅನ್ನದಿಂದ ಮತ್ತು ಕೊಬ್ಬು ಎಣ್ಣೆಯಿಂದ ಸಿಗುತ್ತದೆ. ಬಿರಿಯಾನಿ ಸೇರಿಸಿರುವ ಮಸಾಲೆಗಳು ಜೀರ್ಣಕ್ರಿಯೆಗೆ ತುಂಬಾ ಸಹಕಾರಿಯಾಗಿದೆ. ಜೀರಿಗೆಯು ಜೀರ್ಣಕ್ರಿಯೆಗೆ ವೇಗ ನೀಡುವುದಲ್ಲದೆ ಯಕೃತ್ ನಿಂದ ಪಿತ್ತರಸ ಬಿಡುಗಡೆಗೂ ನೆರವಾಗುತ್ತದೆ. ಶುಂಠಿಯು ಗ್ಯಾಸ್ ಬಿಡುಗಡೆ ಮಾಡುವುದು ಮತ್ತು ವಾಕರಿಕೆ ತಡೆದು ಪೋಷಕಾಂಶಗಳು ಹೀರಿಕೊಳ್ಳಲು ನೆರವಾಗುತ್ತದೆ. ಹೀಗೆ ಇದರಲ್ಲಿ ಬಳಸಿರುವಂತಹ ಪ್ರತಿಯೊಂದು ಪದಾರ್ಥಗಳು ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ