Sign In

By signing in or creating an account, you agree with Associated Broadcasting Company's Terms & Conditions and Privacy Policy.

World Hepatitis Day 2023: ವಿಶ್ವ ಹೆಪಟೈಟಿಸ್ ದಿನ, ಇಲ್ಲಿದೆ ನೀವು ತಿಳಿದುಕೊಳ್ಳಬೇಕಾದ ಒಂದಿಷ್ಟು ಮಾಹಿತಿ

ಪ್ರತಿ ವರ್ಷ ಜುಲೈ 28ರಂದು ವಿಶ್ವ ಹೆಪಟೈಟಿಸ್‌ ದಿನವನ್ನು ಆಚರಿಸಲಾಗುತ್ತದೆ. ಹೆಚ್ಚುತ್ತಿರುವ ಹೆಪಟೈಟಿಸ್‌ ರೋಗದ ಬಗ್ಗೆ ವಿಶೇಷ ಜಾಗೃತಿ ಮತ್ತು ಅರಿವು ಮೂಡಿಸಲು ಆಚರಿಸಲಾಗುವ ಈ ದಿನದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ನೀವೂ ಇದರ ಬಗ್ಗೆ ತಿಳಿದುಕೊಳ್ಳಿ.

World Hepatitis Day 2023: ವಿಶ್ವ ಹೆಪಟೈಟಿಸ್ ದಿನ, ಇಲ್ಲಿದೆ ನೀವು ತಿಳಿದುಕೊಳ್ಳಬೇಕಾದ ಒಂದಿಷ್ಟು ಮಾಹಿತಿ
ವಿಶ್ವ ಹೆಪಟೈಟಿಸ್‌ ದಿನ
Follow us
ರಮೇಶ್ ಬಿ. ಜವಳಗೇರಾ
|

Updated on: Jul 28, 2023 | 7:04 AM

ಪ್ರತಿ ವರ್ಷ ಜುಲೈ 28 ರಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ. ಸ್ಯಾಮ್ಯುಯೆಲ್ ಬ್ಲೂಮ್‌ಬರ್ಗ್ ಅವರ ಜನ್ಮದಿನದಂದು ಹೆಪಟೈಟಿಸ್ ದಿನ(World Hepatitis Day) ಎಂದು ಆಚರಿಸಲಾಗುತ್ತದೆ. ಬ್ಲೂಮ್‌ಬರ್ಗ್ ಹೆಪಟೈಟಿಸ್(Hepatitis) ಬಿ ವೈರಸ್ (ಎಚ್‌ಬಿವಿ) ಅನ್ನು ಕಂಡುಹಿಡಿದರು. ಹೆಪ್-ಬಿ ವೈರಸ್‌ಗೆ ಚಿಕಿತ್ಸೆ ನೀಡಲು, ರೋಗನಿರ್ಣಯ ಪರೀಕ್ಷೆ ಮತ್ತು ಲಸಿಕೆಯನ್ನು ಸಹ ಇವರು ಅಭಿವೃದ್ಧಿಪಡಿಸಿದರು. ಹೀಗಾಗಿ ಹೆಪಟೈಟಿಸ್ ದಿನವನ್ನು ಅವರ ಜನ್ಮದಿನದಂದೇ ಆಚರಿಸಲಾಗುತ್ತದೆ. ಸದ್ಯ ಹೆಚ್ಚುತ್ತಿರುವ ಹೆಪಟೈಟಿಸ್‌ ರೋಗದ ಬಗ್ಗೆ ವಿಶೇಷ ಜಾಗೃತಿ ಮತ್ತು ಅರಿವು ಮೂಡಿಸಲು ಆಚರಿಸಲಾಗುವ ಈ ದಿನದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Migraine Headache: ಮೈಗ್ರೇನ್ ತಲೆ ನೋವಿನ ಕಿರಿಕಿರಿಯಿಂದ ಮುಕ್ತಿಗೆ ಇಲ್ಲಿದೆ ಸರಳ ಪರಿಹಾರ

ಯಕೃತ್ತಿನಲ್ಲಿ (ಲಿವರ್‌) ಉರಿಯೂತವನ್ನುಂಟು ಮಾಡುವ ಲಕ್ಷಣಗಳು ಅಥವಾ ರೋಗಗಳಿಗೆ ಹೆಪಟೈಟಿಸ್‌ ಎಂದು ಹೇಳಲಾಗುತ್ತದೆ. ಈ ಉರಿಯೂತ ಸತತ ಮದ್ಯಪಾನ ಸೇವನೆಯಿಂದ ಅಥವಾ ವೈರಸ್‌ಗಳಿಂದ ಹೆಪಟೈಟಿಸ್‌ ಅನ್ನು ಹೆಪಟೈಟಿಸ್‌ ಎ,ಬಿ, ಸಿ ಮತ್ತು ಡೆಲ್ಟಾ ಫ್ಯಾಕ್ಟರ್‌ ಎಂದು ಗುರುತಿಸಲಾಗುವ ವೈರಸ್‌ಗಳಿಂದ ಹರಡಬಹುದು.

ಹೆಪಟೈಟಿಸ್ ಯಕೃತ್ತನ್ನು ಅಥವಾ ಪಿತ್ತಜನಕಾಂಗವನ್ನು ನಿಧಾನವಾಗಿ ನಾಶಪಡಿಸುವ ಒಂದು ಕಾಯಿಲೆ. ಹೆಪಟೈಟಿಸ್‌ ಸೋಂಕಿನಲ್ಲಿ ಎ, ಬಿ, ಡಿ, ಇ ಎಂಬ ವಿಧಗಳಿವೆ. ಹೀಗಾಗಿ ಈ ರೋಗದ ವಿರುದ್ಧ ಮುನ್ನೆಚ್ಚರಿಕೆ ವಹಿಸುವುದು, ಈ ರೋಗದ ಲಕ್ಷಣಗಳನ್ನು ಅರಿಯುವುದು ಮುಖ್ಯ. ಆದರೆ ಈ ಕಾಯಿಲೆ ಬಗ್ಗೆ ಹೆಚ್ಚಿನ ಜನರಲ್ಲಿ ನಿರ್ಲಕ್ಷ್ಯ ಭಾವನೆ ಇದೆ. ಈ ಕಾರಣದಿಂದಾಗಿ ಲಕ್ಷಾಂತರ ಜನರು ಹೆಪಟೈಟಿಸ್ ​ನಿಂದಾಗಿ ಸಾವಿಗೀಡಾಗಿದ್ದಾರೆ. ಹೆಪಟೈಟಿಸ್ ಎ ಮತ್ತು ಇ ಅಷ್ಟು ಅಪಾಯಕಾರಿಯಲ್ಲ. ಆದರೆ ಹೆಪಟೈಟಿಸ್ ಬಿ, ಸಿ ಮತ್ತು ಡಿ ವೈರಸ್​ಗಳು ಯಕೃತ್ತಿನ ಶಕ್ತಿಯನ್ನು ಕುಂದಿಸುತ್ತದೆ. ಕ್ರಮೇಣ ಯಕೃತ್ತಿನ ಕ್ಯಾನ್ಸರ್​ಗೆ ಇದು ಕಾರಣವಾಗುತ್ತದೆ. ಹೀಗಾಗಿ ಹೆಪಟೈಟಿಸ್ ದಿನವನ್ನು ಈ ವೈರಸ್‌ಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮುಖ್ಯ ಉದ್ದೇಶದಿಂದ ಆಚರಿಸಲಾಗುತ್ತದೆ.

ಹೆಪಟೈಟಿಸ್‌ ಗುರುತಿಸುವುದು ಹೇಗೆ?

ರಕ್ತ ಪರೀಕ್ಷೆಗಳಿಂದ ಹೆಪಟೈಟಿಸ್ ಬಿ ವೈರಸ್ ಅನ್ನು ಕಂಡುಹಿಡಿಯಬಹುದು. ಹೆಪಟೈಟಿಸ್ ಬಿ ಮತ್ತು ಸಿ ವೈರಸ್ ಪತ್ತೆಗಾಗಿ ಜನರು ಸ್ವಯಂಪ್ರೇರಿತವಾಗಿ ರಕ್ತ ಪರೀಕ್ಷೆಗೆ ಮುಂದಾಗಬೇಕು. ಈ ವಿಷಯವನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕಾಗಿದೆ. ಹೆಪಟೈಟಿಸ್ ಬಿ ಮತ್ತು ಸಿ ವೈರಸ್​ಗಳು 10 ರಿಂದ 15 ವರ್ಷಗಳವರೆಗೆ ಯಾವುದೇ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಅಂತಿಮವಾಗಿ ಪಿತ್ತಜನಕಾಂಗವು ಸಂಪೂರ್ಣವಾಗಿ ಅಸಮರ್ಥವಾಗುತ್ತದೆ. ಆ ಹಂತದಲ್ಲಿ ಪಿತ್ತಜನಕಾಂಗದ ಕಸಿ ಹೊರತುಪಡಿಸಿ ಯಾವುದೇ ಚಿಕಿತ್ಸೆಯು ಕಾರ್ಯನಿರ್ವಹಿಸುವುದಿಲ್ಲ.

ಹೆಪಟೈಟಿಸ್‌ ತಡೆಗಟ್ಟುವುದು ಹೇಗೆ?

ಸ್ವಚ್ಛವಾದ ನೀರು ಮತ್ತು ಆಹಾರ ಸೇವನೆ, ಮತ್ತೊಬ್ಬರಿಂದ ರಕ್ತ ಪಡೆಯುವಾಗ ಸಾಕಷ್ಟು ಮುಂಜಾಗ್ರತೆ ವಹಿಸುವುದು, *ಚೆನ್ನಾಗಿ ಬೇಯಿಸದೇ ಮಾಂಸ ತಿನ್ನಬಾರದು, ಒಬ್ಬರಿಗೆ ಬಳಸಿದ ಸೂಜಿ ಮತ್ತೊಬ್ಬರಿಗೆ ಬಳಸಬಾರದು. ಒಬ್ಬರು ಬಳಸಿದ ಬ್ಲೇಡ್‌/ ರೇಜರ್‌ ಮತ್ತೊಬ್ಬರು ಬಳಸಬಾರದು, ಹೆಪಟೈಟಿಸ್ ಇರುವ ವ್ಯಕ್ತಿ ಬಳಸಿದ ಟೂತ್‌ಬ್ರೆಷ್‌ ಮುಟ್ಟಬಾರದು, ಹೆಪಟೈಟಿಸ್ ಇರುವ ವ್ಯಕ್ತಿಯ ರಕ್ತವನ್ನು ಬರಿಕೈಯಿಂದ ಮುಟ್ಟಬಾರದು.

ಇನ್ನಷ್ಟು ಹೆಲ್ತ್​ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿನಯ್ ಸೋಮಯ್ಯ ಸಾವು; ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ: ಕೊಡಗು ಎಸ್​ಪಿ
ವಿನಯ್ ಸೋಮಯ್ಯ ಸಾವು; ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ: ಕೊಡಗು ಎಸ್​ಪಿ
‘ಡೆವಿಲ್’ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ದರ್ಶನ್: ವಿಡಿಯೋ
‘ಡೆವಿಲ್’ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ದರ್ಶನ್: ವಿಡಿಯೋ
ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ನಾವ್ಯಾರು ಅವರ ಜೊತೆ ಹೋಗಲ್ಲ: ಬಂಗಾರಪ್ಪ
ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ನಾವ್ಯಾರು ಅವರ ಜೊತೆ ಹೋಗಲ್ಲ: ಬಂಗಾರಪ್ಪ
ಕೆಪಿಸಿಸಿ ಅಧ್ಯಕ್ಷ ಮಂತ್ರಿಗಿರಿ ಬಿಡಬೇಕಾದ ವಿಷಯ ಗೊತ್ತಿಲ್ಲ: ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷ ಮಂತ್ರಿಗಿರಿ ಬಿಡಬೇಕಾದ ವಿಷಯ ಗೊತ್ತಿಲ್ಲ: ಜಾರಕಿಹೊಳಿ
ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್
ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್
SSLC,PUC ಬಳಿಕ ಮುಂದೇನು?ಚಿಂತೆ ಬೇಡ,ಟಿವಿ9 ಎಜುಕೇಷನ್ EXPOದಲ್ಲಿ ಭಾಗವಹಿಸಿ
SSLC,PUC ಬಳಿಕ ಮುಂದೇನು?ಚಿಂತೆ ಬೇಡ,ಟಿವಿ9 ಎಜುಕೇಷನ್ EXPOದಲ್ಲಿ ಭಾಗವಹಿಸಿ
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಅಕ್ರಮ ಮದ್ಯ ಮಾರಾಟ, ಇಲಾಖೆ ನಿರ್ಲಿಪ್ತ
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಅಕ್ರಮ ಮದ್ಯ ಮಾರಾಟ, ಇಲಾಖೆ ನಿರ್ಲಿಪ್ತ
ಚಲಿಸುತ್ತಿರುವ ರೈಲು ಹತ್ತಲು ಹೋಗಿ ನಿಯಂತ್ರಣ ಕಳೆದುಕೊಂಡ ವೃದ್ಧ
ಚಲಿಸುತ್ತಿರುವ ರೈಲು ಹತ್ತಲು ಹೋಗಿ ನಿಯಂತ್ರಣ ಕಳೆದುಕೊಂಡ ವೃದ್ಧ
ಸವದತ್ತಿ ಯಲ್ಲಮ್ಮಗೆ ಜಲ ದಿಗ್ಭಂಧನ: ದೇಗುಲದಲ್ಲಿ ಪ್ರವಾಹದಂತೆ ಹರಿದ ನೀರು
ಸವದತ್ತಿ ಯಲ್ಲಮ್ಮಗೆ ಜಲ ದಿಗ್ಭಂಧನ: ದೇಗುಲದಲ್ಲಿ ಪ್ರವಾಹದಂತೆ ಹರಿದ ನೀರು
ಬಡವರಿಗೆ ನಿವೇಶನಗಳನ್ನು ಮಾಡಿ ಹಂಚಲು ಬೈಲಹೊಂಗಲದಲ್ಲಿ ಖರೀದಿಯಾಗಿದ್ದ ಜಮೀನು
ಬಡವರಿಗೆ ನಿವೇಶನಗಳನ್ನು ಮಾಡಿ ಹಂಚಲು ಬೈಲಹೊಂಗಲದಲ್ಲಿ ಖರೀದಿಯಾಗಿದ್ದ ಜಮೀನು