World Liver Day 2023: ಆರೋಗ್ಯಕರ ಯಕೃತ್ತನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು ಮತ್ತು ಮಾಡಬಾರದು? ಇಲ್ಲಿದೆ ಮಾಹಿತಿ

ದೇಹದ ಅತಿದೊಡ್ಡ ಅಂಗವಾದ ಯಕೃತ್ತು ಒಟ್ಟಾರೆ ಆರೋಗ್ಯಕ್ಕೆ ಕಾರಣವಾಗಿದ್ದು ಯಕೃತ್ತಿಗೆ ಸಂಬಂಧಿಸಿದ ರೋಗಗಳು ಮತ್ತು ಪರಿಸ್ಥಿತಿಗಳ ಬಗ್ಗೆ ಜನರಿಗೆ ಹೆಚ್ಚು ಅರಿವು ಮೂಡಿಸಿ ಯಕೃತ್ತನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು ಮತ್ತು ಮಾಡಬಾರದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ

World Liver Day 2023: ಆರೋಗ್ಯಕರ ಯಕೃತ್ತನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು ಮತ್ತು ಮಾಡಬಾರದು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 19, 2023 | 3:11 PM

ದೇಹದ ಒಟ್ಟಾರೆ ಆರೋಗ್ಯದಲ್ಲಿ ಪಿತ್ತಜನಕಾಂಗದ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಯಕೃತ್ತಿಗೆ (Liver) ಸಂಬಂಧಿಸಿದ ರೋಗಗಳು ಮತ್ತು ಪರಿಸ್ಥಿತಿಗಳ ಬಗ್ಗೆ ಜನರಿಗೆ ಹೆಚ್ಚು ಅರಿವು ಮೂಡಿಸಲು ಪ್ರತಿವರ್ಷ ಏಪ್ರಿಲ್ 19 ಅನ್ನು ವಿಶ್ವ ಯಕೃತ್ತಿನ ದಿನವಾಗಿ ಆಚರಿಸಲಾಗುತ್ತದೆ. ಜೀರ್ಣಕ್ರಿಯೆ ಸೇರಿದಂತೆ ನಮ್ಮನ್ನು ಆರೋಗ್ಯವಾಗಿಡಲು ಪಿತ್ತಜನಕಾಂಗ ಮುಖ್ಯ. ನಾವು ತಿನ್ನುವ ಆಹಾರದಿಂದ ಹಿಡಿದು ಕುಡಿಯುವ ಎಲ್ಲವೂ ಯಕೃತ್ತಿನ ಮೂಲಕ ಹಾದು ಹೋಗುತ್ತದೆ. ಆಹಾರವನ್ನು ಕಲುಷಿತದಿಂದ ಬೇರ್ಪಡಿಸಿ, ಪೌಷ್ಠಿಕಾಂಶಯುಕ್ತ ಆಹಾರವನ್ನು ನಮ್ಮ ದೇಹಕ್ಕೆ ನೀಡುವ ಕ್ರಿಯೆ ಪಿತ್ತಜನಕಾಂಗ ನಡೆಸುತ್ತದೆ. ಸಾಮಾನ್ಯವಾಗಿ, ಹೆಪಟೈಟಿಸ್ ಬಿ, ಸಿ, ಮತ್ತು ಆಲ್ಕೋಹಾಲ್ ಅಥವಾ ಮಾದಕವಸ್ತುಗಳ ದುರುಪಯೋಗದಿಂದಾಗಿ ಯಕೃತ್ತು ನಕಾರಾತ್ಮಕವಾಗಿ ಪರಿಣಾಮ ಬೀರುತ್ತದೆ.

ವಿಶ್ವ ಯಕೃತ್ತಿನ ದಿನವಾದ ಇಂದು ಆರೋಗ್ಯಕರ ಪಿತ್ತಜನಕಾಂಗವನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು; ಯಾವುದರಿಂದ ದೂರವಿರಬೇಕು.. ಎಂಬುದರ ಕುರಿತ ಮಾಹಿತಿ ಇಲ್ಲಿದೆ.

-ಲಿವರ್ ಉತ್ತಮವಾಗಿಡಲು ಇವು ಸಹಕಾರಿ: ಕೇಲ್, ಪಾಲಕ್, ಬ್ರೊಕೋಲಿ ಮುಂತಾದ ಹಸಿರು ತರಕಾರಿಗಳನ್ನು ಉತ್ತಮ ಪ್ರಮಾಣದಲ್ಲಿ ಸೇವಿಸಿ. ಈ ತರಕಾರಿಗಳು ದೇಹದಲ್ಲಿ ನೈಸರ್ಗಿಕ ಶುದ್ಧೀಕರಣ ಪ್ರಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

-ವಾಲ್ನಟ್ಸ್, ಆವಕಾಡೋಸ್, ಆಲಿವ್ ಆಯಿಲ್​ನಲ್ಲಿ ಕಂಡುಬರುವ ‘ಗುಡ್ ಫ್ಯಾಟ್​’ಗೆ ನಿಮ್ಮ ಆಹಾರ ಶೈಲಿ ಬದಲಾಯಿಸಿಕೊಳ್ಳಿ.

-ಆರೋಗ್ಯಕರ ಪಿತ್ತಜನಕಾಂಗವನ್ನು ಕಾಪಾಡಿಕೊಳ್ಳಲು ಹೆಚ್ಚು ನೀರನ್ನು ಕುಡಿಯಿರಿ. ಇದು ದೇಹದಿಂದ ಕಲ್ಮಶವನ್ನು ಹೊರಹಾಕಲು ಯಕೃತ್ತಿಗೆ ಮತ್ತಷ್ಟು ಶಕ್ತಿ ನೀಡುತ್ತದೆ.

-ನಿಮ್ಮ ಆಹಾರದಲ್ಲಿ ಹಣ್ಣುಗಳ ಪ್ರಮಾಣವನ್ನು ಹೆಚ್ಚಿಸಿ. ಇದಲ್ಲದೆ, ನೀವು ಕೆಲವು ವಿಟಮಿನ್-ಸಮೃದ್ಧ ಹಣ್ಣುಗಳನ್ನು ವಾರದಲ್ಲಿ ಒಮ್ಮೆಯಾದರೂ ತಿನ್ನುತ್ತಿರಾ ಎಂದು ಖಚಿತಪಡಿಸಿಕೊಳ್ಳಿ.

-ಬಹುತೇಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂದರೆ ಉತ್ತಮ ವ್ಯಾಯಾಮ, ನಡಿಗೆ, ಯೋಗ ಮೊದಲಾದವುಗಳು. ಇದನ್ನು ಪ್ರತಿ ದಿನ ಮಾಡಿ ಇವು ಯಕೃತ್ತಿನ ಆರೋಗ್ಯಕ್ಕೂ ಅನ್ವಯಿಸುತ್ತದೆ.

ಇದನ್ನೂ ಓದಿ: World Liver Day 2023: ಮಧುಮೇಹವು ಯಕೃತ್ತಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಅದರ ನಿರ್ವಹಣೆ ಹೇಗೆ?

ಯಕೃತ್ತಿನ ಆರೋಗ್ಯಕ್ಕಾಗಿ ಇವುಗಳಿಂದ ದೂರವಿರಿ:

-ಸಂಸ್ಕರಿತ ಆಹಾರಗಳು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವುದರಿಂದ ಕೊಬ್ಬಿನ ಹೆಚ್ಚಳಕ್ಕೆ ಕಾರಣವಾಗಬಹುದು. ಅಲ್ಲದೇ ಅವುಗಳು ದೇಹದಲ್ಲಿನ ಸಕ್ಕರೆ ಮಟ್ಟವನ್ನು ಸಹ ಹೆಚ್ಚಿಸುತ್ತವೆ. ಹೀಗಾಗಿ ಸಂಸ್ಕರಿಸಿದ ಆಹಾರಗಳಿಂದ ಸಾಧ್ಯವಾದಷ್ಟು ದೂರವಿರಿ.

-ಕೆಟ್ಟ ಕೊಬ್ಬುಗಳು ಎಂದು ಕರೆಯಲ್ಪಡುವ ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಫ್ಯಾಟ್​ಗಳನ್ನು ತಪ್ಪಿಸಿ. ಇದರಲ್ಲಿ ಕರಿದ ತಿಂಡಿಗಳೂ ಸೇರಿವೆ.

-ಯಕೃತ್ತಿನ ಆರೋಗ್ಯಕ್ಕೆ ಆಲ್ಕೊಹಾಲ್ ಸೇವನೆ ಬಹಳ ಕೆಟ್ಟದ್ದು. ಮದ್ಯಪಾನದಿಂದ ಯಕೃತ್ತಿಗೆ ದೇಹದಲ್ಲಿನ ಕಲ್ಮಶವನ್ನು ಹೊರಹಾಕಲು ಕಷ್ಟವಾಗುತ್ತದೆ. ಇದರಿಂದ ಬೇರೆ ಬೇರೆ ಕಾಯಿಲೆಗಳಿಗೆ ತುತ್ತಾಗಬಹುದು.

-ಅತಿ ಕೆಂಪಾದ ಮಾಂಸಹಾರ ಸೇವನೆ ಯಕೃತ್ತಿನ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತವೆ ವರದಿಗಳು. ಹಾಗಾಗಿ ಆದಷ್ಟು ಕಲರ್ ಬೆರೆಸಿರುವ ಆಹಾರ ತಿನ್ನಬೇಡಿ.

-ಚಾಕೊಲೇಟ್‌ಗಳು, ಮಿಠಾಯಿಗಳು ಮತ್ತು ತಂಪು ಪಾನೀಯಗಳಂತಹ ಹೆಚ್ಚಿನ ಸಕ್ಕರೆ ಅಂಶವಿರುವ ಆಹಾರವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.

-ಬೆಳ್ಳುಳ್ಳಿ, ಸೊಪ್ಪು ತರಕಾರಿಗಳು, ಸೇಬು ಹಣ್ಣು, ದ್ರಾಕ್ಷಿಹಣ್ಣು ಮತ್ತು ಕ್ಯಾರೆಡ್​ಗಳನ್ನು ಹೆಚ್ಚು ಸೇವಿಸಬೇಕು. ನಿಂಬೆ ರಸ, ಗ್ರೀನ್​ ಟೀ ಹೆಚ್ಚು ಕುಡಿಯಬೇಕು. ಆಹಾರದಲ್ಲಿ ಅರಿಶಿಣ ಬಳಸಿ ಆಹಾರ ಸೇವಿಸಬೇಕು.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ