World Mental Health Day 2021: ವಿಶ್ವ ಮಾನಸಿಕ ಆರೋಗ್ಯ ದಿನದಂದು ನೀವು ತಿಳಿದಿರಲೇಬೇಕಾದ ಮುಖ್ಯ ಅಂಶಗಳು ಇಲ್ಲಿದೆ

Mental Health Day: ಪ್ರತಿ ವರ್ಷ ವಿಶ್ವ ಆರೋಗ್ಯ ಸಂಸ್ಥೆ ಅಕ್ಟೋಬರ್ 10ನೇ ತಾರೀಖನ್ನು ವಿಶ್ವ ಮಾನಸಿಕ ಆರೋಗ್ಯ ದಿನವನ್ನಾಗಿ ಆಚರಿಸುತ್ತದೆ. ಆ ಮೂಲಕ ಒಟ್ಟಾರೆ ಮಾನಸಿಕ ಆರೋಗ್ಯದ ಕುರಿತಾಗಿ ವಿಶ್ವದಾದ್ಯಂತ ಅರಿವು ಮೂಡಿಸಲಾಗುತ್ತಿದೆ.

World Mental Health Day 2021: ವಿಶ್ವ ಮಾನಸಿಕ ಆರೋಗ್ಯ ದಿನದಂದು ನೀವು ತಿಳಿದಿರಲೇಬೇಕಾದ ಮುಖ್ಯ ಅಂಶಗಳು ಇಲ್ಲಿದೆ
World Mental Health Day 2021 (Photo: Mental Health Foundation)
Follow us
TV9 Web
| Updated By: shruti hegde

Updated on: Oct 10, 2021 | 9:03 AM

ವಿಶ್ವ ಆರೋಗ್ಯ ಸಂಸ್ಥೆಯು ಹೇಳುವಂತೆ ಜಾಗತಿಕವಾಗಿ 280 ಮಂದಿ ಖಿನ್ನತೆಯಿಂದ ಬಳಲುತ್ತಿದ್ದಾರೆ. ಅಲ್ಲದೆ, 5 ಜನರಲ್ಲಿ ಒಬ್ಬರು ಮಕ್ಕಳು ಮತ್ತು ಯುವಜನರು ಒಂದಿಲ್ಲೊಂದು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನ್ಯೂರಾಲಜಿಕಲ್ ಹಾಗೂ ಮಾನಸಿಕ ಸಮಸ್ಯೆಗಳು ಜಾಗತಿಕವಾಗಿ ಇರುವ ಆರೋಗ್ಯ ಸಮಸ್ಯೆಗಳ ಪೈಕಿ ಶೇಕಡಾ 10ರಷ್ಟು ಆವರಿಸಿಕೊಂಡಿದೆ. ಭಾರತವನ್ನು ಪರಿಗಣಿಸಿದರೆ, ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿ 1990- 2017 ರ ಪ್ರಕಾರ 197.3 ಮಿಲಿಯನ್ ಜನರು ವಿವಿಧ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಂದರೆ, ಅದು 7ರಲ್ಲಿ 1 ಭಾರತೀಯ ವ್ಯಕ್ತಿ ಎಂದು ಆಗುತ್ತದೆ. ಭಾರತದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಉಂಟಾಗುವ ರೋಗಗಳ ಪ್ರಮಾಣ 1990 ರಲ್ಲಿ 2.5 ಶೇಕಡಾ ಇದ್ದರೆ, 2017 ರಲ್ಲಿ 4.7 ಶೇಕಡಾ ಆಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಗಣತಿಯ ಪ್ರಕಾರ ಕೂಡ ಭಾರತದಲ್ಲಿ 12 ರಲ್ಲಿ ಒಬ್ಬ ವ್ಯಕ್ತಿ ಖಿನ್ನತೆಯ ಗುಣಲಕ್ಷಣಗಳಿಂದ ಬಳಲುತ್ತಿದ್ದಾನೆ. ಪ್ರತಿ ವರ್ಷ ವಿಶ್ವ ಆರೋಗ್ಯ ಸಂಸ್ಥೆ ಅಕ್ಟೋಬರ್ 10ನೇ ತಾರೀಖನ್ನು ವಿಶ್ವ ಮಾನಸಿಕ ಆರೋಗ್ಯ ದಿನವನ್ನಾಗಿ ಆಚರಿಸುತ್ತದೆ. ಆ ಮೂಲಕ ಒಟ್ಟಾರೆ ಮಾನಸಿಕ ಆರೋಗ್ಯದ ಕುರಿತಾಗಿ ವಿಶ್ವದಾದ್ಯಂತ ಅರಿವು ಮೂಡಿಸಲಾಗುತ್ತಿದೆ.

World Mental Health Day 2021: ಈ ಬಾರಿಯ ವಿಶ್ವ ಮಾನಸಿಕ ಆರೋಗ್ಯ ದಿನದ ಥೀಮ್ ಏನು? ಪ್ರತಿ ವರ್ಷದ ಮಾನಸಿಕ ಆರೋಗ್ಯ ದಿನದ ಆಚರಣೆಗೆ ಪ್ರತ್ಯೇಕ ಉದ್ದೇಶ ಇರುತ್ತದೆ. ಈ ಬಾರಿಯ ಥೀಮ್, ಅಸಮತೋಲಿತ ವಿಶ್ವದಲ್ಲಿ ಮಾನಸಿಕ ಆರೋಗ್ಯ (Mental Health In An Unequal World) ಎಂಬುದು ಆಗಿದೆ. ಜಗತ್ತಿನಲ್ಲಿ ಇರುವ ಮತ್ತು ಇಲ್ಲದಿರುವ ನಡುವೆ ಅಂತರ ಹೆಚ್ಚಾಗುತ್ತಾ ಇದೆ ಈ ಮಧ್ಯೆ, ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ತೋರುವುದು ಈ ವರ್ಷದ ಉದ್ದೇಶವಾಗಿದೆ.

ಕನಿಷ್ಠ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಲ್ಲಿ ಮಾನಸಿಕ ಆರೋಗ್ಯ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ. ಹಾಗೂ ಶ್ರೀಮಂತ ಆದಾಯ ಹೊಂದಿರುವ ದೇಶಗಳಲ್ಲಿ ಕೂಡ ಇದು ಸಾಧ್ಯ ಆಗಿದೆ ಎಂದೇನು ಅಲ್ಲ. ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿರುವ ಹಲವರು ಅವರಿಗೆ ಅನುಗುಣವಾಗ ಚಿಕಿತ್ಸೆ ಪಡೆಯುವುದಿಲ್ಲ ಎಂದು ಈ ಬಾರಿಯ ಥೀಮ್ ಆಯ್ಕೆ ಮಾಡಲು ಸಹಾಯ ಮಾಡಿರುವ ವರ್ಲ್ಡ್ ಫೆಡರೇಷನ್ ಫಾರ್ ಮೆಂಟಲ್ ಹೆಲ್ತ್ ಹೇಳಿದೆ.

World Mental Health Day: ಪ್ರಾಮುಖ್ಯತೆ ಏನು? ವಿಶ್ವ ಆರೋಗ್ಯ ಸಂಸ್ಥೆಯು ಹೇಳುವಂತೆ, ಕೊರೊನಾ ಸಾಂಕ್ರಾಮಿಕ ರೋಗವು ಜನರ ಮಾನಸಿಕ ಆರೋಗ್ಯದ ಮೇಲೆಯೂ ಅಗಾಧ ಪರಿಣಾಮ ಬೀರಿದೆ. ಹಾಗಾಗಿ ಈ ಬಾರಿಯ ಮಾನಸಿಕ ಆರೋಗ್ಯ ದಿನ ಮತ್ತಷ್ಟು ಮುಖ್ಯವಾಗುತ್ತದೆ. ಆರೋಗ್ಯ ಮತ್ತು ಇತರ ಮುಂಚೂಣಿಯ ಕಾರ್ಯಕರ್ತರು, ವಿದ್ಯಾರ್ಥಿಗಳು, ಒಬ್ಬಂಟಿಯಾಗಿ ಬದುಕುತ್ತಿರುವವರು ಹಾಗೂ ಈ ಮೊದಲೇ ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿರುವವರು ಮುಖ್ಯವಾಗಿ ಮಾನಸಿಕ ಆರೋಗ್ಯ ಸಮಸ್ಯೆಗೆ ತುತ್ತಾಗಿರಬಹುದು. ಹಾಗೂ ಮಾನಸಿಕ ಚಿಕಿತ್ಸೆಗೆ ಕೂಡ ಕೊವಿಡ್19 ಪರಿಸ್ಥಿತಿ ಅಡ್ಡಿಯಾಗಿದೆ.

ಈ ವಿಶ್ವ ಮಾನಸಿಕ ಆರೋಗ್ಯ ದಿನವು ಈ ಎಲ್ಲವನ್ನು ಮತ್ತೆ ನೆನಪಿಸಿಕೊಂಡು, ಜನರನ್ನು ಎಚ್ಚರಿಸಿಕೊಂಡು, ಒಟ್ಟಾಗಿ ಮಾನಸಿಕ ಆರೋಗ್ಯದ ಕಾಳಜಿಯ ಕಡೆಗೆ ನಡೆಯುವ ಅವಕಾಶ ನೀಡುತ್ತಿದೆ. ಹಾಗೂ ಆ ಮೂಲಕ, ಉತ್ತಮ ಮಾನಸಿಕ ಸ್ಥಿತಿಗತಿಗಳನ್ನು ಹೊಂದಲು, ಸಂಭ್ರಮಿಸಲು ಅವಕಾಶ ಲಭಿಸುತ್ತದೆ.

ಇದನ್ನೂ ಓದಿ: Mental Health: ನೀವು ಮಾನಸಿಕ ಒತ್ತಡದಿಂದ ಬಳಲುತ್ತಿದ್ದೀರಾ? ಸಮಸ್ಯೆಗೆ ಪರಿಹಾರಗಳು ಇಲ್ಲಿವೆ

ಇದನ್ನೂ ಓದಿ: Mental Health: 14ನೇ ವಯಸ್ಸಿನೊಳಗೇ ಶುರುವಾಗುತ್ತವೆ ಶೇಕಡಾ 50ರಷ್ಟು ಮಾನಸಿಕ ಸಮಸ್ಯೆಗಳು; ಮಕ್ಕಳಿಗೆ ಉತ್ತಮ ಬಾಲ್ಯ ರೂಪಿಸಲು ಸಲಹೆ