High Heels Side Effects: ನಿಮಗೆ ಹೈ ಹೀಲ್ಸ್ ಧರಿಸೋದು ಇಷ್ಟಾನಾ? ಆರೋಗ್ಯ ತೊಂದರೆಗಳಾಗಬಹುದು ಎಚ್ಚರ!

Health Care: ಹೈ ಹೀಲ್ಸ್​ ಧರಿಸುವುದೆಂದರೆ ಕೆಲವರಿಗೆ ಇಷ್ಟವಾಗಿರಬಹುದು. ಪ್ರತಿನಿತ್ಯ ಹೊರಗಡೆ ಹೊರಟಾಗಲೂ ಹೈ ಹೀಲ್ಸ್​ ಧರಿಸುವ ಅಭ್ಯಾಸ ಇರಬಹುದು. ಹಾಗಿರುವಾಗ ಆರೋಗ್ಯಕ್ಕೆ ಎಷ್ಟೆಲ್ಲಾ ತೊಂದರೆಗಳಿವೆ ಎಂಬುದನ್ನು ತಿಳಿಯಿರಿ.

High Heels Side Effects: ನಿಮಗೆ ಹೈ ಹೀಲ್ಸ್ ಧರಿಸೋದು ಇಷ್ಟಾನಾ? ಆರೋಗ್ಯ ತೊಂದರೆಗಳಾಗಬಹುದು ಎಚ್ಚರ!
ಸಂಗ್ರಹ ಚಿತ್ರ
Follow us
TV9 Web
| Updated By: shruti hegde

Updated on: Oct 10, 2021 | 1:56 PM

ಮಹಿಳೆಯರಿಗೆ ಹೈ ಹೀಲ್ಸ್ ಧರಿಸಿ ಓಡಾಡುವುದೆಂದರೆ ಇಷ್ಟ. ಅದರಲ್ಲಿಯೂ ಇತ್ತೀಚೆಗೆ ಹೈ ಹೀಲ್ಸ್ ಧರಿಸುವುದು ಸ್ಟೈಲ್ಆಗಿ ಬಿಟ್ಟಿದೆ. ಮೊದಲೆಲ್ಲಾ ಮಾಡೆಲ್​ಗಳು, ಸೆಲೆಬ್ರಿಟಿಗಳು ಮಅತ್ರ ಹೈ ಹೀಲ್ಸ್ ಧರಿಸುತ್ತಿದ್ದರು. ಆದರೆ ಈಗ ಜನಸಾಮಾನ್ಯರೂ ಸಹ ಇಷ್ಟಪಟ್ಟು ಹೈ ಹೀಲ್ಸ್ ಧರಿಸುತ್ತಾರೆ. ಪಾರ್ಟಿ, ಶಾಪಿಂಗ್ ಮತ್ತು ಆಫೀಸ್​ಗಳಲ್ಲಿ ಹೈ ಹೀಲ್ಸ್ ಧರಿಸಲು ಯುವತಿಯರು ಹೆಚ್ಚು ಇಷ್ಟ ಪಡುತ್ತಾರೆ. ಹೀಗಿರುವಾಗ ತುಂಬಾ ಹೊತ್ತು ಹೈ ಹೀಲ್ಸ್ ಧರಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಯಾವೆಲ್ಲಾ ತೊಂದರೆಗಳು ಕಾಣಿಸಿಕೊಳ್ಳಬಹುದು ಎಂಬುದು ಈ ಕೆಳಗಿನಂತಿದೆ. ಎಚ್ಚರವಿರಲಿ.

ಹೈ ಹೀಲ್ಸ್ ಧರಿಸಿ ನಿರಂತರ ಓಡಾಡುವುದರಿಂದ ಪಾದಗಳಿಗೆ ಒತ್ತಡ ಉಂಟಾಗುತ್ತದೆ. ಹಿಮ್ಮಡಿ ನೋವು, ಜತೆಗೆ ಕಾಲುಗಳ ನೋವು ಕಾಣಿಸಿಕೊಳ್ಳುತ್ತದೆ. ನಿಮ್ಮ ಮೃದುವಾದ ಪಾದಗಳು ಊದಿಕೊಳ್ಳುತ್ತವೆ ಇದು ಹೆಚ್ಚು ನೋವನ್ನು ಉಂಟು ಮಾಡುತ್ತದೆ. ಆರೋಗ್ಯಕ್ಕೆ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ತಿಳಿಯಿರಿ.

ಕಾಲುಗಳಲ್ಲಿ ನೋವು ಹೈ ಹೀಲ್ಸ್ಅನ್ನು ಗಂಟೆಗಳ ಕಾಲ ಧರಿಸುವುದರಿಂದ ಸೊಂಟ, ಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ಕಾರಣದಿಂದ ಸ್ನಾಯುಗಳಲ್ಲಿ ಒತ್ತಡ ಉಂಟಾಗುತ್ತದೆ. ಮೊಣಕಾಲುಗಳು ಮತ್ತು ಸೊಂಟದ ನೋವು ಅತಿರೇಕಕ್ಕೂ ಹೋಗಬಹುದು. ಹಾಗಾಗಿ ಆದಷ್ಟು ಹೈ ಹೀಲ್ಸ್ ಧರಿಸುವುದನ್ನು ತಪ್ಪಿಸಿ.

ಮಂಡಿ ನೋವು ಎತ್ತರದ ಹಿಮ್ಮಡಿಯ ಪಾದರಕ್ಷೆಗಳನ್ನು ಧರಿಸುವುದರಿಂದ ಬೆನ್ನು ಮೂಳೆಯ ಮೇಲೆ ಒತ್ತಡ ಉಂಟಾಗುತ್ತದೆ. ಅದು ಮಂಡಿಗಳ ನೋವನ್ನೂ ಉಂಟು ಮಾಡಬಹುದು. ಜತೆಗೆ ಸ್ನಾಯುಗಳ ಸೆಳೆತ, ರಕ್ತದ ಒತ್ತಡಂದತಹ ಸಮಸ್ಯೆಯನ್ನು ಉಂಟು ಮಾಡಬಹುದು.

ಉಗುರು ಬೆಚ್ಚಗಿನ ನೀರಿಲ್ಲಿ ಕೆಲಹೊತ್ತು ಪಾದಗಳನ್ನು ಒಟ್ಟುಕೊಳ್ಳಿ. ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ. ಇದು ನಿಮ್ಮ ಪಾದದ ಉರಿಯನ್ನು ಮತ್ತು ಪಾದದ ಊತವನ್ನು ಕಡಿಮೆ ಮಾಡುತ್ತದೆ. ಇದರಿಂದ ನಿಮ್ಮ ಕಾಲಿನ ಉಗುರು ಸ್ವಚ್ಛವಾಗಲು ಜತೆಗೆ ಉಗುರುಗಳು ಹೊಳಪು ಪಡೆಯಲು ಸಹಾಯಕವಾಗಿದೆ.

ಇದನ್ನೂ ಓದಿ:

Health Tips: ಮಧುಮೇಹಿಗಳು ಸೇವಿಸಬಹುದಾದ ಹಣ್ಣುಗಳಿವು

Health Tips: ಬೆಳಿಗ್ಗೆ ವಾಕಿಂಗ್ ಮಾಡುವಾಗ ಮೊಬೈಲ್ ಬಳಸುವ ಅಭ್ಯಾಸ ಇದೆಯೇ? ಅಡ್ಡಪರಿಣಾಮಗಳ ಬಗ್ಗೆ ತಿಳಿಯಿರಿ

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ