World No Tobacco Day 2022: ಧೂಮಪಾನಿಗಳಿಗೆ ಟೈಪ್​ 2 ಮಧುಮೇಹದ ಅಪಾಯ

| Updated By: ನಯನಾ ರಾಜೀವ್

Updated on: May 30, 2022 | 10:53 AM

Type 2 Diabetes: ದೇಶದಲ್ಲಿ ಸುಮಾರು 77ಮಿಲಿಯನ್​ಗೂ ಅಧಿಕ ಮಂದಿ ಮಧುಮೇಹ(Diabetes)ದಿಂದ ಬಳಲುತ್ತಿದ್ದಾರೆ. ಟೈಪ್ 2 ಮಧುಮೇಹ ವಯಸ್ಸು, ಲಿಂಗಬೇಧವಿಲ್ಲದೆ ಬರುವ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಯಾಗಿದೆ.

World No Tobacco Day 2022: ಧೂಮಪಾನಿಗಳಿಗೆ ಟೈಪ್​ 2 ಮಧುಮೇಹದ ಅಪಾಯ
ಮಧುಮೇಹ
Follow us on

ದೇಶದಲ್ಲಿ ಸುಮಾರು 77ಮಿಲಿಯನ್​ಗೂ ಅಧಿಕ ಮಂದಿ ಮಧುಮೇಹ(Diabetes)ದಿಂದ ಬಳಲುತ್ತಿದ್ದಾರೆ. ಟೈಪ್ 2 ಮಧುಮೇಹ ವಯಸ್ಸು, ಲಿಂಗಬೇಧವಿಲ್ಲದೆ ಬರುವ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಯಾಗಿದೆ.

ಧೂಮಪಾನಿಗಳಲ್ಲಿ ಟೈಪ್ 2 ಮಧುಮೇಹ ಹೆಚ್ಚಾಗಿ ಕಾಣಿಸಿಕೊಳ್ಳಲಿದೆ. ಟೈಪ್ 1 ಮಧುಮೇಹದಿಂದ ಬಳಲುತ್ತಿರುವವರಿಗೆ ಇನ್ಸುಲಿನ್ ಅಗತ್ಯವಿರುವುದಿಲ್ಲ, ಟೈಪ್ 2 ಮಧುಮೇಹದಿಂದ ಬಳಲುತ್ತಿರುವವರಿಗೆ ಇನ್ಸುಲಿನ್ ಅಗತ್ಯವಿರಲಿದೆ. ಧೂಮಪಾನ ಮಾಡುವವರಲ್ಲಿ ಶೇ. 30 ರಿಂದ 40ರಷ್ಟು ಮಂದಿ ಟೈಪ್ 2 ಮಧುಮೇಹದಿಂದ ಬಳಲುತ್ತಿದ್ದಾರೆ.

ಮಧುಮೇಹವಷ್ಟೇ ಅಲ್ಲದೆ ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ, ರಕ್ತನಾಳ ಸಮಸ್ಯೆ, ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ವಿಶ್ವ ತಂಬಾಕು ರಹಿತ ದಿನವನ್ನು ಮೇ 31ರಂದು ಅಚರಿಸಲಾಗುತ್ತದೆ.

ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಕೆಲವು ನೈಸರ್ಗಿಕ ವಿಧಾನಗಳಿವೆ. ತಜ್ಞರ ಪ್ರಕಾರ, ತುಳಸಿ, ಆಲಿವ್ ಮತ್ತು ಮಧುನಾಶಿನಿ ಮುಂತಾದ ಸಸ್ಯಗಳ ಹಸಿರು ಎಲೆಗಳು ಮಧುಮೇಹದ ಸಮಸ್ಯೆಯಲ್ಲಿ ನಿಮಗೆ ಪ್ರಯೋಜನವನ್ನು ನೀಡುತ್ತವೆ.

ಮಧುಮೇಹ ದೇಹವನ್ನು ಒಮ್ಮೆ ಒಗ್ಗಿಕೊಂಡರೆ, ಅದು ಜೀವನಪೂರ್ತಿಯಾಗಿ ಇರುವುದು. ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಹಲವಾರು ರೀತಿಯಿಂದ ಪ್ರಯತ್ನಿಸಬೇಕು. ಹಾಗಾಗಿ ನಮ್ಮ ಜೀವನಶೈಲಿ, ಆಹಾರ ಕ್ರಮ, ವ್ಯಾಯಾಮ ಇತ್ಯಾದಿಗಳ ಕಡೆಗೆ ಗಮನಹರಿಸಬೇಕು.

ಟೈಪ್ 2 ಮಧುಮೇಹ ಇರುವವರು ತಿನ್ನಬಹುದಾದ ಆಹಾರಗಳು
ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೂ ಆಗ ಪೋಷಕಾಂಶಗಳಿಂದ ಕೂಡಿರುವಂತಹ ಆಹಾರ ಸೇವನೆ ಮಾಡುವುದು ಮುಖ್ಯ.

ಕೊಬ್ಬು ಮತ್ತು ನಾರಿನಾಂಶವು ಇರುವಂತಹ ಆಹಾರ ಸೇವನೆ ಮಾಡಿದರೆ ಒಳ್ಳೆಯದು. ಇದರಿಂದ ದೀರ್ಘಕಾಲ ತನಕ ಹೊಟ್ಟೆ ತುಂಬಿರುವಂತೆ ಆಗುವುದು ಮತ್ತು ಪದೇ ಪದೇ ಅನಾರೋಗ್ಯಕಾರಿ ಆಹಾರ ಸೇವನೆ ಕಡಿಮೆ ಆಗುವುದು.

ಆರೋಗ್ಯಕಾರಿ ಆಹಾರ ಸೇವನೆ ಮಾಡಿದರೆ, ಅದರಿಂದ ಮಧುಮೇಹದ ಲಕ್ಷಣಗಳನ್ನು ಕಡಿಮೆ ಮಾಡಬಹುದು ಮತ್ತು ದೇಹವು ಪರಿಣಾಮಕಾರಿ ರೀತಿಯಲ್ಲಿ ಕೆಲಸ ಮಾಡಲು ಇದು ಸಹಕಾರಿ. ಮಧುಮೇಹಿಗಳು ಕೇವಲ ಒಂದು ಆಹಾರವನ್ನು ಮಾತ್ರ ಸೇವನೆ ಮಾಡಬಾರದು.

ಅಪಾಯ ಯಾರಿಗೆ ಹೆಚ್ಚು?
ಅಧ್ಯಯನಗಳ ಪ್ರಕಾರ ಮಹಿಳೆಯರಿಗೆ ಪುರುಷರಿಗೆ ಈ ಮಧುಮೇಹದ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಏಕೆಂದರೆ ಪುರುಷರಲ್ಲಿ ಟೆಸ್ಟೋಸ್ಟಿರೋನೆ ಹಾಗೂ ಆಂಡ್ರೊಜೆನ್ ಹಾರ್ಮೋನ್‌ ಹದಿ ವಯಸ್ಸಿನಲ್ಲಿ ತುಂಬಾನೇ ಪ್ರಮುಖ ಪಾತ್ರವಹಿಸುತ್ತದೆ. ಟೆಸ್ಟೋಸ್ಟಿರೋನೆ ಪುರುಷರಲ್ಲಿ ಸ್ನಾಯುಗಳು ಬೆಳೆಯಲಾರಂಭಿಸುತ್ತದೆ, ಗಡ್ಡ-ಮೀಸೆ ಬರಲಾರಂಭಿಸುತ್ತದೆ.

ಈ ಹಾರ್ಮೋನ್‌ಗಳು ಪುರುಷರ ಬದುಕಿನಲ್ಲಿ ತುಂಬಾನೇ ಪ್ರಮುಖ ಪಾತ್ರವಹಿಸುತ್ತದೆ, ಈ ಹಾರ್ಮೋನ್‌ ವೀರ್ಯ ಉತ್ಪತ್ತಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಈ ಹಾರ್ಮೋನ್‌ ಪುರುಷರ ಒಳಾಂಗದಲ್ಲಿ ಕೊಬ್ಬು ಶೇಖರವಾಗುವಂತೆ ಮಾಡುವುದು.

ಈ ಕೊಬ್ಬು ಪುರುಷ ಅಂಗದ ಸುತ್ತ ಸಂಗ್ರಹವಾಗಿ ಚಯಪಚಯದಲ್ಲಿ ತೊಂದರೆ ಉಂಟು ಮಾಡುತ್ತದೆ. ಈ ಕೊಬ್ಬು ಪುರುಷರಲ್ಲಿ ಟೈಪ್‌ 2 ಮಧುಮೇಹಕ್ಕೆ ಪ್ರಮುಖ ಕಾರಣವಾಗಿದೆ ಎಂದು ಅನೇಕ ಅಧ್ಯಯನಗಳು ಇವೆ.

ಮಧುಮೇಹ ಬಾರದಂತೆ ತಡೆಗಟ್ಟುವುದು ಹೇಗೆ?
-ನಾರಿನಂಶವಿರುವ ಆಹಾರ ಹೆಚ್ಚು ಸೇವಿಸಿ.

-ವಿಟಮಿನ್ ಡಿ ಸಾಕಷ್ಟು ಪಡೆಯಿರಿ

– ಸಂಸ್ಕರಿಸಿದ ಆಹಾರದಿಂದ ದೂರವಿರಿ

-ಕಾಫಿ, ಟೀ ಮಿತಿಯಲ್ಲಿ ಕುಡಿಯಿರಿ.

-ಸಕ್ಕರೆ ಕಡಿಮೆ ಬಳಸಿ, ಕಾರ್ಬ್ಸ್‌ ಆಹಾರ ಮಿತಿಯಲ್ಲಿ ಸೇವಿಸಿ.

-ಪ್ರತಿದಿನ ವ್ಯಾಯಾಮ ಮಾಡಿ

– ಸಾಕಷ್ಟು ನೀರು ಕುಡಿಯಿರಿ

-ಮೈ ತೂಕ ಹೆಚ್ಚಾದರೆ ಕಡಿಮೆ ಮಾಡಿ

-ಧೂಮಪಾನ ಚಟವಿದ್ದರೆ ಬಿಡಿ

– ತೂಕದ ಬಗ್ಗೆ ಗಮನವಿರಲಿ

– ಒಂದೇ ಕಡೆ ತುಂಬಾ ಹೊತ್ತು ಕೂರಬೇಡಿ

ಟೈಪ್-2 ಮಧುಮೇಹಿಗಳು ಯಾವ ಆಹಾರಗಳನ್ನು ತಿನ್ನಬಾರದು?
ಮಧುಮೇಹಿಗಳು ಕೆಲವು ಆಹಾರಗಳನ್ನು ಕಡೆಗಣಿಸಬೇಕು. ಮುಖ್ಯವಾಗಿ ಗ್ಲೈಸೆಮಿಕ್ ಇಂಡೆಕ್ಸ್ ಅಧಿಕವಾಗಿ ಇರುವ ಆಹಾರವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಏರಿಕೆ ಮಾಡುವುದು. ಈ ಕೆಳಗಿನ ಆಹಾರಗಳನ್ನು ಕಡೆಗಣಿಸಬೇಕು.

-ಸಿಹಿಯುಕ್ತ ಪಾನೀಯಗಳು- ಪ್ಯಾಕ್ ಮಾಡಲ್ಪಟ್ಟ ಜ್ಯುಸ್, ತಂಪು ಪಾನೀಯಗಳು ಮತ್ತು ಶಕ್ತಿ ಪೇಯಗಳು

-ಸಿಹಿಕಾರಕಗಳು- ಬಿಳಿ ಸಕ್ಕರೆ, ಕಂದು ಸಕ್ಕರೆ, ಜೇನುತುಪ್ಪ ಮತ್ತು ಮಪ್ಲೆ ಸಕ್ಕರೆ

-ಸಂಸ್ಕರಿಸಿದ ಆಹಾರಗಳು- ಚಿಪ್ಸ್, ಮೈಕ್ರೋವೇವ್ ಪಾಪ್ ಕಾರ್ನ್, ಸಂಸ್ಕರಿಸಿದ ಮಾಂಸ.

-ಕೊಬ್ಬಿರುವ ಮಾಂಸ-ಕುರಿ ಮಾಂಸ, ಕೋಳಿ ಚರ್ಮ ಮತ್ತು ಕಡು ಬಣ್ಣದ ಕೋಳಿಯನ್ನು ಕಡೆಗಣಿಸಬೇಕು.

-ಸಂಪೂರ್ಣ ಕೊಬ್ಬಿರುವ ಹಾಲಿನ ಉತ್ಪನ್ನಗಳು-ಹಾಲು, ಬೆಣ್ಣೆ ಮತ್ತು ಚೀಸ್

-ಸಿಹಿ-ಕ್ಯಾಂಡಿ, ಕುಕ್ಕೀಸ್, ಐಸ್ ಕ್ರೀಮ್ ಮತ್ತು ಸಿಹಿ ತಿಂಡಿಗಳು

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ