World Spine Day 2024: ಇಂದು ವಿಶ್ವ ಬೆನ್ನುಹುರಿ ದಿನ; ಬೆನ್ನುಮೂಳೆಯನ್ನು ಆರೋಗ್ಯಕರವಾಗಿಡಲು ಇಲ್ಲಿದೆ ಸಲಹೆಗಳು

| Updated By: ಅಕ್ಷತಾ ವರ್ಕಾಡಿ

Updated on: Oct 16, 2024 | 10:19 AM

ದೇಹಕ್ಕೆ ಮುಖ್ಯ ಆಧಾರ ನಮ್ಮ ಬೆನ್ನುಮೂಳೆ. ಇದರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ 16 ರಂದು ವಿಶ್ವ ಬೆನ್ನುಮೂಳೆಯ ದಿನವನ್ನು ಆಚರಣೆ ಮಾಡಲಾಗುತ್ತದೆ. ಬೆನ್ನುಮೂಳೆಗೆ ಸಂಬಂಧಿತ ಅಸ್ವಸ್ಥತೆಗಳು ಸಾಮಾನ್ಯವಾಗಿ ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡುಬರುತ್ತದೆಯಾದರೂ, ಈಗಿನ ಜಡ ಜೀವನಶೈಲಿ, ಕಳಪೆ ಆಹಾರ ಪದ್ಧತಿ, ಡೆಸ್ಕ್ ಕೆಲಸಗಳು, ಮೊಬೈಲ್ ಫೋನ್ ಗಳ ದೀರ್ಘಕಾಲದ ಬಳಕೆ ಹಾಗೂ ಇನ್ನಿತರ ವಿವಿಧ ಅಂಶಗಳಿಂದಾಗಿ ವಯಸ್ಕರ ಮೇಲೂ ಹೆಚ್ಚು ಪರಿಣಾಮ ಬೀರುತ್ತಿವೆ. ಹಾಗಾ್ದಾರೆ ಬೆನ್ನುಮೂಳೆಯನ್ನು ಬಲವಾಗಿ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಯಾವ ರೀತಿಯ ಸಲಹೆಯನ್ನು ಅನುಸರಿಸಬೇಕು? ವಿಶ್ವ ಬೆನ್ನುಮೂಳೆಯ ದಿನದ ಇತಿಹಾಸ ಮತ್ತು ಪ್ರಾಮುಖ್ಯತೆಯೇನು? ಎಂಬುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

World Spine Day 2024: ಇಂದು ವಿಶ್ವ ಬೆನ್ನುಹುರಿ ದಿನ; ಬೆನ್ನುಮೂಳೆಯನ್ನು ಆರೋಗ್ಯಕರವಾಗಿಡಲು ಇಲ್ಲಿದೆ ಸಲಹೆಗಳು
Follow us on

ನಾವು ಆರೋಗ್ಯವಾಗಿರಲು ದೇಹದ ಎಲ್ಲಾ ಭಾಗಗಳು ಸರಿಯಾಗಿ ಇರುವುದು ಅವಶ್ಯಕ. ಆದರೆ ದೇಹಕ್ಕೆ ಮುಖ್ಯ ಆಧಾರ ನಮ್ಮ ಬೆನ್ನುಮೂಳೆ. ಇದರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ 16 ರಂದು ವಿಶ್ವ ಬೆನ್ನುಮೂಳೆಯ ದಿನವನ್ನು ಆಚರಣೆ ಮಾಡಲಾಗುತ್ತದೆ. ಬೆನ್ನುಮೂಳೆಗೆ ಸಂಬಂಧಿತ ಅಸ್ವಸ್ಥತೆಗಳು ಸಾಮಾನ್ಯವಾಗಿ ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡುಬರುತ್ತದೆಯಾದರೂ, ಈಗಿನ ಜಡ ಜೀವನಶೈಲಿ, ಕಳಪೆ ಆಹಾರ ಪದ್ಧತಿ, ಡೆಸ್ಕ್ ಕೆಲಸಗಳು, ಮೊಬೈಲ್ ಫೋನ್ ಗಳ ದೀರ್ಘಕಾಲದ ಬಳಕೆ ಹಾಗೂ ಇನ್ನಿತರ ವಿವಿಧ ಅಂಶಗಳಿಂದಾಗಿ ವಯಸ್ಕರ ಮೇಲೂ ಹೆಚ್ಚು ಪರಿಣಾಮ ಬೀರುತ್ತಿವೆ. ಹಾಗಾ್ದಾರೆ ಬೆನ್ನುಮೂಳೆಯನ್ನು ಬಲವಾಗಿ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಯಾವ ರೀತಿಯ ಸಲಹೆಯನ್ನು ಅನುಸರಿಸಬೇಕು? ವಿಶ್ವ ಬೆನ್ನುಮೂಳೆಯ ದಿನದ ಇತಿಹಾಸ ಮತ್ತು ಪ್ರಾಮುಖ್ಯತೆಯೇನು? ಎಂಬುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಶ್ವ ಬೆನ್ನುಮೂಳೆಯ ದಿನದ ಇತಿಹಾಸ:

ವರ್ಲ್ಡ್ ಫೆಡರೇಶನ್ ಆಫ್ ಚಿರೋಪ್ರಾಕ್ಟಿಕ್ ಎಂಬ ಸಂಸ್ಥೆ 16 ಅಕ್ಟೋಬರ್ 2008 ರಂದು ವಿಶ್ವ ಬೆನ್ನುಮೂಳೆಯ ದಿನವನ್ನು ಪ್ರಾರಂಭಿಸಿದ್ದು, ಈಗ ಈ ದಿನ ಪ್ರಪಂಚದಾದ್ಯಂತ ಬೆನ್ನುಹುರಿ ನೋವು ಮತ್ತು ಅಂಗವೈಕಲ್ಯದ ಕುರಿತು ಮಾಹಿತಿ ನೀಡುವುದರ ಜೊತೆಗೆ ಬೆನ್ನುಮೂಳೆಯ ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚಿಸುತ್ತದೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ವ್ಯಕ್ತಿಗಳನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.

ನಿಮ್ಮ ಬೆನ್ನುಮೂಳೆಯನ್ನು ಆರೋಗ್ಯಕರವಾಗಿಡಲು ಇಲ್ಲಿದೆ ಸರಳ ಸಲಹೆಗಳು:

ಸರಿಯಾದ ಭಂಗಿಯನ್ನು ಕಾಪಾಡಿಕೊಳ್ಳಿ:

ದಿನವಿಡೀ ಸರಿಯಾದ ಭಂಗಿಯನ್ನು ಕಾಪಾಡಿಕೊಳ್ಳುವುದು ಅನೇಕ ರೀತಿಯ ಬೆನ್ನುಮೂಳೆಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಕುಳಿತುಕೊಳ್ಳುವಾಗ, ನಿಂತಿರುವಾಗ ಅಥವಾ ಮಲಗಿರುವಾಗ, ನಿಮ್ಮ ಬೆನ್ನುಮೂಳೆ ಸರಿಯಾದ ಭಂಗಿಯಲ್ಲಿ ಇದೆಯೇ ಎಂಬುದನ್ನು ನೋಡಿಕೊಳ್ಳುವುದು ಮುಖ್ಯ. ಬೆನ್ನುಮೂಳೆಗೆ ನೋವು ತರಿಸುವ ಕುರ್ಚಿಗಳನ್ನು ಬಳಸಬೇಡಿ, ನಿಮ್ಮ ಕಂಪ್ಯೂಟರ್ ಪರದೆಯನ್ನು ಕಣ್ಣಿನ ಮಟ್ಟದಲ್ಲಿ ಇರಿಸಿಕೊಳ್ಳಿ, ದೀರ್ಘಕಾಲದ ವರೆಗೆ ಮೊಬೈಲ್ ನೋಡುತ್ತಾ ಸ್ಕ್ರಾಲ್ ಮಾಡುವುದನ್ನು ತಪ್ಪಿಸಿ.

ವಾರಕ್ಕೆ ಕನಿಷ್ಠ 3- 4 ಬಾರಿ ವ್ಯಾಯಾಮ ಮಾಡಿ:

ಬೆನ್ನುಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಯಮಿತ ದೈಹಿಕ ಚಟುವಟಿಕೆ ಮುಖ್ಯವಾಗುತ್ತದೆ. ಕುತ್ತಿಗೆ, ಬೆನ್ನು ಮತ್ತು ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮಗಳಿಗೆ ಸ್ವಲ್ಪ ಸಮಯವನ್ನು ಮೀಸಲಿಡಿ. ಜಿಮ್ ಗೆ ನಿಯಮಿತವಾಗಿ ಭೇಟಿ ನೀಡುವುದು, ವಾಕಿಂಗ್, ಬೈಕಿಂಗ್ ಅಥವಾ ಈಜು ನಿಮ್ಮ ಬೆನ್ನುಮೂಳೆಯನ್ನು ಆರೋಗ್ಯಕರವಾಗಿಡಲು ಉತ್ತಮ ಮಾರ್ಗಗಳಾಗಿವೆ. ಯೋಗ ಅಥವಾ ಪಿಲೇಟ್ಸ್ ನಂತಹ ಸ್ಟ್ರೆಚಿಂಗ್ ವ್ಯಾಯಾಮಗಳನ್ನು ಕೂಡ ಮಾಡಬಹುದು.

ಇದನ್ನೂ ಓದಿ: ಗರ್ಭಧಾರಣೆ, ಶಿಶು ನಷ್ಟ ಸ್ಮರಣೆ ದಿನವನ್ನು ಆಚರಿಸುವ ಉದ್ದೇಶವೇನು?

ಆರೋಗ್ಯಕರ ಆಹಾರವನ್ನು ಸೇವಿಸಿ ಮತ್ತು ಸಾಕಷ್ಟು ನೀರು ಕುಡಿಯಿರಿ:

ನಿಮ್ಮ ಬೆನ್ನು ಮೂಳೆಯನ್ನು ಆರೋಗ್ಯಕರವಾಗಿಡಲು ನಿಮ್ಮ ಆಹಾರಕ್ರಮ ಸರಿಯಾಗಿರುವುದು ಮುಖ್ಯ. ವಿಟಮಿನ್ ಡಿ, ಮೆಗ್ನೀಸಿಯಮ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ; ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ನಿಮ್ಮ ಮೂಳೆಗಳನ್ನು ಬಲಪಡಿಸುತ್ತದೆ, ಜೊತೆಗೆ ಡಿಸ್ಕ್ಗಳ ಆರೋಗ್ಯಕ್ಕೆ ನೀರಿನ ಅವಶ್ಯಕತೆ ಅತ್ಯಗತ್ಯ. ಹಾಗಾಗಿ ಸಾಕಷ್ಟು ನೀರು ಕುಡಿಯಿರಿ.

ಸರಿಯಾಗಿರುವ ಪಾದರಕ್ಷೆಗಳನ್ನು ಧರಿಸಿ:

ನಿಮ್ಮ ಪಾದಕ್ಕೆ ಸರಿಯಾಗಿ ಹೊಂದಿಕೊಳ್ಳುವ, ಉತ್ತಮ ಗುಣಮಟ್ಟದ ಪಾದರಕ್ಷೆಗಳು ನಿಮ್ಮ ಇಡೀ ದೇಹವನ್ನು ಆರೋಗ್ಯವಾಗಿರಿಸುತ್ತದೆ. ಹಾಗಾಗಿ ಇದರ ಆಯ್ಕೆ ಸರಿಯಾಗಿರಲಿ. ಬೇಕಾದಲ್ಲಿ ತಜ್ಞರ ಸಲಹೆಯನುಸಾರ ಪಾದರಕ್ಷೆಗಳನ್ನು ಬಳಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ