ಹೈದರಾಬಾದ್: ಸಿಕಂದರಾಬಾದ್ನ ಯಶೋದಾ ಆಸ್ಪತ್ರೆಯ ವೈದ್ಯರು ಏಕಕಾಲದಲ್ಲಿ ಎರಡು ಶ್ವಾಸಕೋಶಗಳ ಶಸ್ತ್ರಚಿಕಿತ್ಸೆ (Double Lung Transplant) ಯಶಸ್ವಿಯಾಗಿ ನಡೆಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಮಹಬೂಬಾಬಾದ್ ಜಿಲ್ಲೆಯ ಮುರ್ರಾಯಗುಡೆಮ್‌ನ ರೋಹಿತ್ (23) ಕಳೆದ ತಿಂಗಳು ವೈಯಕ್ತಿಕ ಕಾರಣಗಳಿಂದ ನೊಂದು ಪ್ಯಾರಾಕ್ವಾಟ್ ಹರ್ಬಲ್ ಔಷಧ ಅಂದರೆ ಅಪಾಯಕಾರಿ ಕೀಟನಾಶಕ ಸೇವಿಸಿದ್ದರು. ಪರಿಣಾಮ ರೋಹಿತ್ ನ ಶ್ವಾಸಕೋಶ, ಕಿಡ್ನಿ, ಲಿವರ್ ಗೆ ತೀವ್ರ ಹಾನಿಗೊಳಗಾಗಿ ಚಿಂತಾಜನಕ ಸ್ಥಿತಿಯಲ್ಲಿ ಯಶೋದಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಾರಂಭದಲ್ಲಿ ಮೆಕ್ಯಾನಿಕಲ್ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚುವರಿ ಕಾರ್ಪೋರಲ್ ಸಪೋರ್ಟ್ (ECMO) ನಲ್ಲಿ ಚಿಕಿತ್ಸೆಯನ್ನು ಮಾಡಲಾಗಿದೆ. ಆದರೆ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣದ ಕಾರಣ ವೈದ್ಯರು ಶ್ವಾಸಕೋಶ ಕಸಿ ಮಾಡಲು ಮುಂದಾಗಿದ್ದಾರೆ. ರೋಗಿಯ ಕುಟುಂಬ ಸದಸ್ಯರ ಒಪ್ಪಿಗೆ ಪಡೆದು “ಜೀವನ್ ದಾನ್” ಅಂಗಾಂಗ ದಾನ ವಿಭಾಗದಿಂದ ಬ್ರೈನ್ ಡೆಡ್ ಆಗಿ ಸತ್ತ ವ್ಯಕ್ತಿಯಿಂದ ಸಂಗ್ರಹಿಸಿದ ಶ್ವಾಸಕೋಶವನ್ನು ರೋಹಿತ್ ಕಸಿ ಮಾಡಲಾಗಿದೆ. ಈ ಮೂಲಕ ಯಶೋದಾ ಆಸ್ಪತ್ರೆಯ ವೈದ್ಯರ ತಂಡ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಇಲ್ಲಿಯವರೆಗೆ ವಿಶ್ವದಲ್ಲಿ ಕೇವಲ 4 ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಭಾರತದಲ್ಲಿ ನಡೆದ ಮೊದಲ ಶ್ವಾಸಕೋಶ ಕಸಿ ಇದಾಗಿದೆ. ಭಾರತೀಯ ವೈದ್ಯಕೀಯ-ಅಂಗಾಂಗ ಕಸಿ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದ್ದು ಹೆಮ್ಮೆಯ ವಿಷಯ ಎಂದು ಯಶೋದಾ ಆಸ್ಪತ್ರೆಗಳ ನಿರ್ದೇಶಕ ಡಾ.ಪಾವಸ್ ಗೊರುಕಂಟಿ ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಸ್ಮಾರ್ಟ್ಫೋನ್ ಮೂಲಕ ಕ್ಯಾನ್ಸರ್ ಪತ್ತೆ; ಹೈದರಾಬಾದ್ ಸಂಶೋಧಕರ ಹೊಸ ಆವಿಷ್ಕಾರ
ಸಿಕಂದರಾಬಾದ್ ಯಶೋದಾ ಆಸ್ಪತ್ರೆ, ಹಿರಿಯ ಇಂಟರ್ವೆನ್ಷನಲ್ ಪಲ್ಮನಾಲಜಿ ತಜ್ಞ ಡಾ. ಹರಿಕಿಶನ್ ಗೋನುಗುಂಟ್ಲ, ಡಾ. ಕೆ.ಆರ್. ಬಾಲ ಸುಬ್ರಹ್ಮಣ್ಯಂ, ಡಾ. ಮಂಜುನಾಥ ಬಾಳೆ, ಡಾ.ಚೇತಾಸ್, ಡಾ. ಶ್ರೀಚರಣ್, ಡಾ. ವಿಮಿ ವರ್ಗೀಸ್ ಸೇರಿದಂತೆ ವೈದ್ಯಕೀಯ ತಂಡವು ಆರು ಗಂಟೆಗಳ ಕಾರ್ಯಾಚರಣೆಯ ನಂತರ ರೋಹಿತ್ ಗೆ “ಶ್ವಾಸಕೋಶ ಕಸಿ” ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಿದೆ. 24 ಗಂಟೆಗಳ ಕಸಿ ನಂತರ, ವೆಂಟಿಲೇಟರ್‌ನಲ್ಲಿ ಮತ್ತು ಎರಡು ವಾರಗಳ ಐಸಿಯುನಲ್ಲಿ, ನಂತರ ರೋಹಿತ್ ವೇಗವಾಗಿ ಚೇತರಿಸಿಕೊಂಡಿದ್ದರಿಂದ ಜರ್ನರ್ ವಾರ್ಡ್ಗೆ ಸ್ಥಳಾಂತರಿಸಲಾಯಿತು. 15 ದಿನಗಳ ನಂತರ ರೋಹಿತ್ ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ಯಶೋದಾ ವೈದ್ಯರು ತಿಳಿಸಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: