ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರಿಶಿಣ ಮತ್ತು ಕರಿಮೆಣಸು ನೀರನ್ನು ಕುಡಿಯಿರಿ; ನಿಮ್ಮಲ್ಲಿನ ಈ ಸಮಸ್ಯೆಗಳು ದೂರವಾಗುತ್ತವೆ

Health Tips: ಆಯುರ್ವೇದದಲ್ಲಿ ಅರಿಶಿಣವನ್ನು ಔಷಧಿಯಾಗಿ ಬಳಸುತ್ತಾರೆ. ಇದನ್ನು ಮಸಾಲೆಯಾಗಿಯೂ ಬಳಸಲಾಗುತ್ತದೆ. ಇದು ಪ್ರತಿಯೊಂದು ಅಡುಗೆಮನೆಯಲ್ಲಿಯೂ ಕಂಡುಬರುತ್ತದೆ. ಅರಿಶಿಣವು ಫೈಬರ್, ಕಬ್ಬಿಣ, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರಿಶಿಣ ಮತ್ತು ಕರಿಮೆಣಸು ನೀರನ್ನು ಕುಡಿಯಿರಿ; ನಿಮ್ಮಲ್ಲಿನ  ಈ ಸಮಸ್ಯೆಗಳು ದೂರವಾಗುತ್ತವೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on:Feb 21, 2022 | 10:28 AM

ಆರೋಗ್ಯವಾಗಿರಲು, ತಪ್ಪು ಆಹಾರದಿಂದ ದೂರವಿರುವುದು ಮತ್ತು ಪೌಷ್ಟಿಕಾಂಶಯುತ ಆಹಾರ ತಿನ್ನುವುದು ಅವಶ್ಯಕ. ಪೌಷ್ಟಿಕಾಂಶಗಳನ್ನು ಸೇವಿಸಲು ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳುವುದು ಸಹ ಮುಖ್ಯವಾಗಿದೆ. ಇವುಗಳಲ್ಲಿ ಒಂದಾದ ಅರಿಶಿಣ( turmeric) ಮತ್ತು ಕರಿಮೆಣಸು( black pepper) ತಿಂದರೆ ಅನೇಕ ರೋಗಗಳು ನಮ್ಮಿಂದ ದೂರವಿರುತ್ತವೆ. ಅರಿಶಿಣವನ್ನು ಚಿನ್ನದ ಮಸಾಲೆ ಎಂದೂ ಕರೆಯುತ್ತಾರೆ. ಆಯುರ್ವೇದದಲ್ಲಿ(Ayurveda) ಅರಿಶಿಣವನ್ನು ಔಷಧಿಯಾಗಿ ಬಳಸುತ್ತಾರೆ. ಇದನ್ನು ಮಸಾಲೆಯಾಗಿಯೂ ಬಳಸಲಾಗುತ್ತದೆ. ಇದು ಪ್ರತಿಯೊಂದು ಅಡುಗೆಮನೆಯಲ್ಲಿಯೂ ಕಂಡುಬರುತ್ತದೆ. ಅರಿಶಿಣವು ಫೈಬರ್, ಕಬ್ಬಿಣ, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ.

ಇದರ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಚಯಾಪಚಯ ಕ್ರಿಯೆಯೂ ಉತ್ತಮವಾಗಿರುತ್ತದೆ. ಮತ್ತೊಂದೆಡೆ, ನಾವು ಕರಿಮೆಣಸಿನ ಗುಣಲಕ್ಷಣಗಳ ಬಗ್ಗೆ ಮಾತನಾಡುವುದಾದರೆ ನಂಜುನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳು ಅದರಲ್ಲಿ ಹೇರಳವಾಗಿ ಲಭ್ಯವಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಎರಡೂ ಮಸಾಲೆಗಳನ್ನು ನೀರಿನಲ್ಲಿ ಬೆರೆಸಿ ಸೇವಿಸುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಈ ಎರಡರಿಂದ ದೇಹದ ಯಾವ ಸಮಸ್ಯೆಗಳನ್ನು ಹೋಗಲಾಡಿಸಬಹುದು ಎಂಬುವುದರ ಮಾಹಿತಿ ಇಲ್ಲಿದೆ ನೋಡಿ.

ನೋವು ಪರಿಹಾರ

ಅರಿಶಿಣವು ನೋವು ಪರಿಹಾರ ಮಾಡುವ ಗುಣಗಳನ್ನು ಹೊಂದಿದೆ. ಇದು ದೇಹದಲ್ಲಿನ ನೋವಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಸೋಂಕಿನ ವಿರುದ್ಧ ಹೋರಾಡಲು ಇದು ಪರಿಣಾಮಕಾರಿಯಾಗಿದೆ. ಮತ್ತೊಂದೆಡೆ, ಕರಿಮೆಣಸು ನೋವಿನಿಂದ ಪರಿಹಾರವನ್ನು ಪಡೆಯಲು ಸಹ ಸಹಾಯ ಮಾಡುತ್ತದೆ. ಈ ಎರಡರಿಂದ ತಯಾರಿಸಿದ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದೇಹದಲ್ಲಿನ ಪ್ರತಿಕ್ರಿಯಾತ್ಮಕ ಪ್ರಕ್ರಿಯೆಯು ವೇಗಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ದೇಹವು ಸೋಂಕಿನ ವಿರುದ್ಧ ಹೋರಾಡುವ ಶಕ್ತಿಯನ್ನು ಸಹ ಪಡೆಯುತ್ತದೆ. ಅಷ್ಟೇ ಅಲ್ಲ, ಅರಿಶಿಣ ಮತ್ತು ಕರಿಮೆಣಸಿನಿಂದಲೂ ನರಕ್ಕೆ ಸಂಬಂಧಿಸಿದ ನೋವನ್ನು ನಿವಾರಿಸಬಹುದು.

ಊತವನ್ನು ಕಡಿಮೆ ಮಾಡಿ

ಅರಿಶಿಣ ಮತ್ತು ಕರಿಮೆಣಸನ್ನು ಆಯುರ್ವೇದ ಔಷಧಿ ಎಂದು ಪರಿಗಣಿಸಲಾಗಿದೆ. ಅರಿಶಿಣವನ್ನು ನಿಯಮಿತವಾಗಿ ಮತ್ತು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ, ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಬಹುದು. ಸಂಧಿವಾತದಂತಹ ಸಮಸ್ಯೆಯಿಂದ ಮುಕ್ತಿ ಪಡೆಯುವ ಸಂದರ್ಭದಲ್ಲಿ ಅರಿಶಿಣ ಸೇವಿಸುವುದು ಸೂಕ್ತ ಎಂದು ಹೇಳಲಾಗುತ್ತದೆ. ಕರಿಮೆಣಸು ಸಹ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ತಜ್ಞರ ಪ್ರಕಾರ, ಪ್ರತಿದಿನ ಬೆಳಿಗ್ಗೆ ಕರಿಮೆಣಸು ಮತ್ತು ಅರಿಶಿಣ ನೀರನ್ನು ಕುಡಿಯಿರಿ ಮತ್ತು ಆರೋಗ್ಯವಾಗಿರಿ.

ಮಧುಮೇಹ

ಇಂದಿನ ದಿನಗಳಲ್ಲಿ ಹೆಚ್ಚಿನವರು ಮಧುಮೇಹದಿಂದ ಬಳಲುತ್ತಿದ್ದಾರೆ. ವೈದ್ಯರ ಸಲಹೆ ಮತ್ತು ಔಷಧಿಗಳ ಹೊರತಾಗಿ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಮನೆಮದ್ದುಗಳ ಸಹಾಯವನ್ನು ಸಹ ತೆಗೆದುಕೊಳ್ಳಬಹುದು. ಅರಿಶಿಣ ಮತ್ತು ಕರಿಮೆಣಸಿನಿಂದ ಮಾಡಿದ ನೀರು ಅತ್ಯುತ್ತಮ ದೇಸಿ ಪಾಕವಿಧಾನವಾಗಿದೆ. ಮಧುಮೇಹ ರೋಗಿಗಳು ದಿನಕ್ಕೆ ಒಮ್ಮೆ ಸೀಮಿತ ಪ್ರಮಾಣದಲ್ಲಿ ಅರಿಶಿಣ ಮತ್ತು ಕರಿಮೆಣಸಿನ ನೀರನ್ನು ಕುಡಿಯಬೇಕು ಎಂದು ತಜ್ಞರು ತಿಳಿಸುತ್ತಾರೆ.

ಬೊಜ್ಜು

ಆರೋಗ್ಯ ಸಂಬಂಧಿ ಸಮಸ್ಯೆಗಳ ಹೊರತಾಗಿ, ಸ್ಥೂಲಕಾಯತೆಯು ತಪ್ಪು ಆಹಾರದಿಂದ ಜನರನ್ನು ತೊಂದರೆಗೊಳಿಸುತ್ತದೆ. ಸ್ಥೂಲಕಾಯತೆಯನ್ನು ನಿಯಂತ್ರಿಸಲು ಅಥವಾ ಕಡಿಮೆ ಮಾಡಲು ಅರಿಶಿಣದ ಬಳಕೆಯನ್ನು ತಜ್ಞರು ಶಿಫಾರಸು ಮಾಡುತ್ತಾರೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಇರುವ ಹೆಚ್ಚುವರಿ ಕೊಬ್ಬನ್ನು ಸುಡುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಅರಿಶಿಣವು ಈ ಕೊಬ್ಬನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ.

ಇದನ್ನೂ ಓದಿ:

ಆಹಾರ ಆಚಾರ ವಿಚಾರ: ಕೆಲ ಪ್ರಾಚೀನ ಆರೋಗ್ಯ ಸಲಹೆಗಳ ಬಗ್ಗೆ ಆಲೋಚಿಸೋಣ, ಆಚರಿಸೋಣ

ಈ ಆಹಾರಗಳನ್ನು ತಿನ್ನುವುದರಿಂದ ಗ್ಯಾಸ್ಟ್ರಿಕ್​ಗೆ ಕಾರಣವಾಗುತ್ತದೆ

Published On - 9:54 am, Mon, 21 February 22